ಬ್ರಿಟನ್‍ನಲ್ಲಿ ಕಳೆದ 10 ವರ್ಷಗಳಲ್ಲಿ ಶೇ. 20 ರಷ್ಟು ಜನರಿಂದ ಮಾಂಸಾಹಾರ ಸೇವನೆಯ ಪ್ರಮಾಣ ಇಳಿಕೆ

ಸಸ್ಯಾಹಾರಿ ಜನರಲ್ಲಿ ಶೇ. 3 ರಷ್ಟು ಹೆಚ್ಚಳ !

ಸಸ್ಯಹಾರದ ಮಹತ್ವ ನಿಧಾನವಾಗಿದ್ದರೂ ಸಹ ವಿದೇಶಿಯರಿಗೆ ತಿಳಿಯಲಾರಂಭಿಸಿದೆ, ಇದೇನೂ ಕಡಿಮೆಯಲ್ಲ !- ಸಂಪಾದಕರು 

ಲಂಡನ (ಬ್ರಿಟನ್) – ಕಳೆದ 10 ವರ್ಷಗಳಲ್ಲಿ ಬ್ರಿಟನ್‍ನಲ್ಲಿ ಶೇ. 20 ರಷ್ಟು ಜನರು ಮಾಂಸಾಹಾರ ಸೇವಿಸುವ ಪ್ರಮಾಣ ಅತ್ಯಂತ ಕಡಿಮೆಯಾಗಿದೆ, ಎಂದು ಆಕ್ಸಫರ್ಡ್ ವಿಶ್ವವಿದ್ಯಾಲಯದ ಒಂದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ, ಕ್ಯಾನ್ಸರ್, ಮಧುಮೇಹ(ಟೈಪ್-2) ಹಾಗೂ ಹೃದಯಕ್ಕೆ ಸಂಬಂಧಿಸಿದ ಹೆಚ್ಚುತ್ತಿರುವ ರೋಗ, ಮುಂತಾದ ವ್ಯಾಧಿಗಳೇ ಈ ಪ್ರಮಾಣಕ್ಕೆ ಮೂಲಕಾರಣಗಳಾಗಿವೆ ಎಂದು ದೃಢಪಟ್ಟಿದೆ.

ಈ ಸಂಶೋಧನೆಯಲ್ಲಿ, ಮುಂದಿನಂತೆ ಹೇಳಲಾಗಿದೆ

1. ಜನರು ಉತ್ತಮ ಆರೋಗ್ಯಕ್ಕಾಗಿ ಮಾಂಸಾಹಾರ ಸೇವನೆಯನ್ನು ಕಡಿಮೆ ಮಾಡಿದ್ದಾರೆ ಅಥವಾ ಅದರ ಪ್ರಮಾಣ ಕಡಿಮೆಯಾಗಿದೆ. ‘ರೆಡ ಮೀಟ್’ನ(ಕುರಿ, ಮೇಕೆ, ಹಂದಿ ಇತ್ಯಾದಿ ಸ್ತನಧಾರಿ ಪ್ರಾಣಿಗಳ ಮಾಂಸ) ಮಾರಾಟದಲ್ಲಿ ವಿಪರೀತ ಇಳಿಕೆಯಾಗಿದೆ; ಆದರೆ ಚಿಕನ್ ಮತ್ತು ಮೀನು ತಿನ್ನುನ ಜನರ ಸಂಖ್ಯೆ ಏರಿಕೆಯಾಗುತ್ತಿದೆ.

2. 2008-09 ರಲ್ಲಿ ಬ್ರಿಟನ್‍ನಲ್ಲಿ ಪ್ರತಿಯೊಬ್ಬ ವ್ಯಕ್ತಿ ಪ್ರತಿದಿನ 103 ಗ್ರಾಂ ‘ರೆಡ್ ಮೀಟ್’ ಉಪಯೋಗಿಸುತ್ತಿದ್ದರು. 2018-19 ರಲ್ಲಿ ಈ ಪ್ರಮಾಣವು ಪ್ರತಿ ವ್ಯಕ್ತಿಗೆ 23 ಗ್ರಾಂ.ನಷ್ಟು ದಾಖಲಾಗಿದೆ

3. ಕಳೆದ ಒಂದು ದಶಕದಲ್ಲಿ ಬ್ರಿಟನ್‍ನಲ್ಲಿ ಸಸ್ಯಹಾರಿ ಜನರ ಸಂಖ್ಯೆ ಶೇ. 2 ರಿಂದ 5 ಕ್ಕೆ ಏರಿಕೆಯಾಯಿತು. 1999 ರ ನಂತರ ಹುಟ್ಟಿದ ಜನರಲ್ಲಿ ಮಾಂಸಾಹಾರ ತಿನ್ನುವ ಪ್ರಮಾಣ ಏರಿಕೆಯಾಗಿದ್ದು ಸಹ ಕಂಡುಬಂದಿದೆ.