ಕಾಶ್ಮೀರದಲ್ಲಿ ಶಾಲೆಯೊಳಗೆ ನುಗ್ಗಿ ಉಗ್ರಗಾಮಿಗಳಿಂದ ಇಬ್ಬರು ಸಿಕ್ಖ್ ಶಿಕ್ಷಕರ ಹತ್ಯೆ

ಎರಡು ದಿನಗಳ ಹಿಂದೆ ಇಬ್ಬರು ಹಿಂದೂಗಳ ಕೊಲೆ !

* ಕಾಶ್ಮೀರದಲ್ಲಿ ಮತ್ತೊಮ್ಮೆ ವರ್ಷ ೧೯೮೯ರಂತೆ ಹಿಂದೂ ಹಾಗೂ ಮುಸಲ್ಮಾನರನ್ನು ಗುರಿ ಮಾಡಲಾಗುತ್ತಿದೆ. ‘ಪ್ರತೀದಿನ ೧-೨ ಉಗ್ರಗಾಮಿಗಳು ಕೊಲ್ಲಲ್ಪಡುವುದರಿಂದ ಕಾಶ್ಮೀರದಲ್ಲಿ ಭಯೋತ್ಪಾದನೆಯು ಮುಗಿಯುವ ಸ್ಥಿತಿಯಲ್ಲಿದೆ’, ಎಂದು ಹೇಳಿ ಜನತೆಯನ್ನು ಮೂರ್ಖರನ್ನಾಗಿಸಲಾಗುತ್ತಿದೆ, ಎಂಬುದೇ ಇದರಿಂದ ಗಮನಕ್ಕೆ ಬರುತ್ತದೆ !

* ಎಲ್ಲಿಯವರೆಗೂ ಪಾಕಿಸ್ತಾನವನ್ನು ಸಂಪೂರ್ಣವಾಗಿ ನಾಶ ಮಾಡುವುದಿಲ್ಲವೋ, ಅಲ್ಲಿಯವರೆಗೂ ಕಾಶ್ಮೀರದಲ್ಲಿ ಭಯೋತ್ಪಾದನೆಯು ನಾಶವಾಗುವುದಿಲ್ಲ ಹಾಗೂ ಅಲ್ಲಿ ಹಿಂದೂ ಹಾಗೂ ಸಿಕ್ಖರು ಎಂದಿಗೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ, ಎಂಬುದು ವಸ್ತುಸ್ಥಿತಿಯಾಗಿದೆ, ಇದನ್ನು ಗಮನದಲ್ಲಿಟ್ಟುಕೊಳ್ಳೋಣ !

* ಹಿಂದೂ ಹಾಗೂ ಸಿಕ್ಖರನ್ನು ಜಿಹಾದಿ ಉಗ್ರಗಾಮಿಗಳು ಗುರಿ ಪಡಿಸುತ್ತಿದ್ದಾರೆ, ಎಂಬ ವಿಷಯದ ಬಗ್ಗೆ ಭಾರತದಲ್ಲಿನ ಪಾಕಪ್ರೇಮಿ ಹಾಗೂ ಜಾತ್ಯಾತೀತವಾದಿಗಳು ಏಕೆ ಮಾತನಾಡುವುದಿಲ್ಲ? ಉತ್ತರಪ್ರದೇಶದಲ್ಲಿ ಕಥಿತ ರೈತರ ಕೊಲೆಯ ಬಗ್ಗೆ ಬೊಬ್ಬೆಯಿಡುವವರು ಈ ವಿಷಯದಲ್ಲಿ ಮಾತ್ರ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ? 

ದೀಪಕ ಚಂದರ(ಎಡಭಾಗದಲ್ಲಿ) ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಸತಿಂದರ ಕೌರ (ಬಲಭಾಗದಲ್ಲಿ)ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಭಯೋತ್ಪಾದಕರು

ಶ್ರೀನಗರ – ಜಿಹಾದಿ ಉಗ್ರಗಾಮಿಗಳಿಂದ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿನ ಸಂಗಾಮ ಈದಗಾಹ ಪರಿಸರದಲ್ಲಿ ಒಂದು ಶಾಲೆಗೆ ನುಗ್ಗಿ ಶಿಕ್ಷಕಿ ಸತಿಂದರ ಕೌರ ಹಾಗೂ ದೀಪಕ ಚಂದರವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸತಿಂದರ ಕೌರ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ್ದರು. ಕಳೆದ ಕೆಲವು ದಿನಗಳಿಂದ ಉಗ್ರಗಾಮಿಗಳು ಆ ಇಬ್ಬರು ಶಿಕ್ಷಕರ ಮೇಲೆ ಕಣ್ಣಿಟ್ಟಿದ್ದರು, ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಜಿಹಾದಿ ಉಗ್ರಗಾಮಿಗಳು ಇಬ್ಬರು ಹಿಂದೂಗಳ ಕೊಲೆ ಮಾಡಿದ್ದರು. ಆ ಘಟನೆ ಇನ್ನೂ ಹಸಿಯಾಗಿರುವಾಗಲೇ ಮೇಲಿನ ಘಟನೆ ನಡೆದಿದೆ.

ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಗೆ ಅನುಸಾರವಾಗಿ ೨-೩ ಸಶಸ್ತ್ರ ಉಗ್ರಗಾಮಿಗಳು ಶಾಲೆಗೆ ನುಗ್ಗಿದರು ಹಾಗೂ ಅವರು ಸತಿಂದರ ಕೌರ ಹಾಗೂ ಶಿಕ್ಷಕ ದೀಪಕ ಚಂದರವರ ತಲೆಗೆ ನೇರವಾಗಿ ಗುಂಡಿಟ್ಟರು, ಅದೇ ರೀತಿ ಹುಚ್ಚು ಹುಚ್ಚಾಗಿ ಗುಂಡು ಹಾರಿಸಿದರು. ಆಗ ಅಲ್ಲಿದ್ದವರೆಲ್ಲರೂ ತಮ್ಮ ಪ್ರಾಣ ಕಾಪಾಡಿಕೊಳ್ಳಲು ಕೆಳಗೆ ಮಲಗಿಕೊಂಡರು. ಗುಂಡು ಹಾರಾಟ ನಡೆಸಿ ಮೂವರು ಉಗ್ರಗಾಮಿಗಳು ಪರಾರಿಯಾದರು. ಆ ಘಟನೆಯ ಬಳಿಕ ಸಂಪೂರ್ಣ ಪರಿಸರದಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಉಗ್ರಗಾಮಿಗಳನ್ನು ಹುಡುಕಲು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

‘ಮುಸಲ್ಮಾನರ ತೇಜೋವಧೆ ಮಾಡಲಾಗುತ್ತಿದೆ !’ – ಜಮ್ಮೂ-ಕಾಶ್ಮೀರದ ಪೊಲೀಸ್ ಮಹಾಸಂಚಾಲಕ ದಿಲಬಾಗ ಸಿಂಹ (ಅಂತೆ)

* ‘ಜಿಹಾದಿ ಉಗ್ರಗಾಮಿಗಳಿಗೆ ಮತವಿರುತ್ತದೆ’, ಎಂಬುದನ್ನು ಕಾಶ್ಮೀರದಲ್ಲಿ ಕಳೆದ ೩೩ ವರ್ಷಗಳಿಂದ ಹಿಂದೂ ಹಾಗೂ ಸಿಕ್ಖರು ನೋಡುತ್ತಿದ್ದಾರೆ. ಆದ್ದರಿಂದ ಯಾರ ಪ್ರತಿಮೆ ಹೇಗಿದೆ?, ಎಂಬುದು ಜಗತ್ತಿಗೆ ತಿಳಿದಿದೆ. ಅಂತಹ ಪ್ರತಿಮೆಯಿಂದ ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆಯು ಇನ್ನೂ ಸಂಪೂರ್ಣವಾಗಿ ಕೊನೆಗೊಂಡಿಲ್ಲ, ಎಂಬುದು ಸತ್ಯವಾಗಿದೆ ! – ಸಂಪಾದಕರು 

* ‘ಮುಸಲ್ಮಾನರ ಪ್ರತಿಮೆಯ ಬಗ್ಗೆ ಹೆಚ್ಚು ಕಾಳಜಿಯಿರುವ ಪೊಲೀಸರಿಗೆ ಉಗ್ರಗಾಮಿಗಳು ಕೊಂದಿರುವ ಹಿಂದೂ ಹಾಗೂ ಸಿಕ್ಖರ ವಿಷಯದಲ್ಲಿ ಏನೂ ಅನಿಸುವುದಿಲ್ಲ’, ಎಂದು ತಿಳಿದುಕೊಳ್ಳಬೇಕೇ? – ಸಂಪಾದಕರು 

ಪೊಲೀಸ್ ಮಹಾಸಂಚಾಲಕ ದಿಲಬಾಗ ಸಿಂಹ

ಜಮ್ಮೂ– ಕಾಶ್ಮೀರದ ಪೊಲೀಸ್ ಮಹಾಸಂಚಾಲಕರಾದ ದಿಲಬಾಗ ಸಿಂಹರವರು ನುಡಿದರು, ಈ ರೀತಿಯ ದಾಳಿಯಿಂದ ಮುಸಲ್ಮಾನರ ತೇಜೋವಧೆಯಾಗುತ್ತಿದೆ. (ಜಮ್ಮೂ-ಕಾಶ್ಮೀರದಲ್ಲಿ ಮುಸಲ್ಮಾನರ ವಕ್ತಾರರಂತೆ ಮಾತನಾಡುವ ಪೊಲೀಸರು ! ಇಂತಹ ಪೊಲೀಸರು ಹಿಂದೂಗಳನ್ನು ಎಂದಿಗೂ ರಕ್ಷಿಸುವುದು ಸಾಧ್ಯವಿಲ್ಲ, ಅದಕ್ಕಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !) ಜನರಿಗೆ ಕಾಶ್ಮೀರದಲ್ಲಿನ ಜನರು ಪ್ರೀತಿಯಿಂದ ಹಾಗೂ ಬಂಧುಭಾವನೆಯಿಂದ ಇರುವುದಿಲ್ಲ ಎಂಬುದನ್ನು ತೋರಿಸಲಾಗುತ್ತಿದೆ.