ಭಾರತೀಯ ಸೈನಿಕರು 1971 ರ ಯುದ್ಧದಲ್ಲಿ ಪಡೆದಿದ್ದ ವಿಜಯವು ಜಗತ್ತಿನ ಇತಿಹಾಸದಲ್ಲಿ ನೋಂದಣಿ !

‘ಸ್ವರ್ಣಿಮ್ ವಿಜಯ ವರ್ಷ’ ಸಮಾರಂಭದಲ್ಲಿ ಗಣ್ಯರು

ಪುಣೆ1971 ರಲ್ಲಿ ನಡೆದಿರುವ ಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮದಿಂದಾಗಿ ಶತ್ರುಗಳನ್ನು ಸದೆಬಡಿದರು. ಈ ನಿರ್ಣಾಯಕ ಯುದ್ಧದಲ್ಲಿ ಪಾಕಿಸ್ತಾನದ 93 ಸಾವಿರ ಸೈನಿಕರು ಶರಣಾಗಿದ್ದರು. ಇದು ಜಗತ್ತಿನ ಇತಿಹಾಸದಲ್ಲಿ ನೋಂದಾಯಿಸಲ್ಪಟ್ಟಿದೆ, ಎಂದು ದಕ್ಷಿಣ ಕಮಾಂಡ್ ಪ್ರಮುಖ ಲೆಫ್ಟಿನೆಂಟ್ ಜನರಲ್ ಜೆ ಎಸ್ ನೈನ್ ಇವರು ಹೇಳಿದರು. 1971 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ವಿಜಯಕ್ಕೆ ಮತ್ತು ಬಾಂಗ್ಲಾದೇಶ ನಿರ್ಮಾಣಕ್ಕೆ 50 ವರ್ಷ ಪೂರ್ಣವಾಯಿತು. ಈ ವರ್ಷವನ್ನು ‘ಸ್ವರ್ಣಿಮ್ ವಿಜಯ ವರ್ಷ’ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ‘ವಿಜಯ ಮಶಾಲ್’ ದಕ್ಷಿಣ ಕಮಾಂಡ್ ಕ್ಷೇತ್ರದಿಂದ ಹೊರಡಿಸಲಾಯಿತು. ವಿಜಯ ಮಾಶಲವನ್ನು ಲೆಫ್ಟಿನೆಂಟ್ ಜನರಲ್ ಜೆ.ಸ್. ನೈನ್ ಇವರು ಪುಣೆಯಲ್ಲಿ ಅಕ್ಟೋಬರ್ 1 ರಂದು ಸ್ವಾಗತಿಸಿದರು. ‘ವಿಜಯ ಮಶಾಲ್’ ಸ್ವಾಗತಕ್ಕಾಗಿ ಆಯೋಜಿಸಲಾದ ಸಮಾರಂಭದಲ್ಲಿ ಮಾಜಿ ಸೈನಿಕರು ಹಾಗೂ ಬಾಂಗ್ಲಾದೇಶದ ಉಪ ಉಚ್ಚಾಯುಕ್ತ ರೆಹಮಾನ್ ಉಪಸ್ಥಿತ ಇದ್ದರು. ಪುಣೆಯಲ್ಲಿ ‘ವಿಜಯ ಮಶಾಲ್’ನ ಮುಕ್ಕಾಂ ಹೂಡಿ ಅಕ್ಟೋಬರ್ 31 ರಂದು ಈ ಮಶಾಲ್ ನಾಶಿಕ್‍ಗೆ ತೆರಳಲಿದೆ.