ಸ್ಥಳೀಯರ ಭೂಮಿಯನ್ನು ಖರೀದಿಸಿ ವಾಸಿಸುತ್ತಿರುವ ಘಟನೆಗಳಲ್ಲಿ ಹೆಚ್ಚಳಜನಸಂಖ್ಯೆ ಹೆಚ್ಚಳದ ಹಿಂದೆ ದೊಡ್ಡ ಷಡ್ಯಂತ್ರ! |
* ದೇವಭೂಮಿ ಉತ್ತರಾಖಂಡದಲ್ಲಿ ಈ ರೀತಿಯಲ್ಲಿ ಮತಾಂಧರನ್ನು ಉದ್ದೇಶಪೂರ್ವಕವಾಗಿ ನೆಲೆ ನಿಲ್ಲಿಸುವ ಪ್ರಯತ್ನಗಳಾಗುತ್ತಿರುವಾಗ ರಾಜಕಾರಣಿಗಳು, ಸರಕಾರ ಮತ್ತು ಪೊಲೀಸರು ಏನು ಮಾಡುತ್ತಿದ್ದಾರೆ ? ಅವರಿಗೆ ಇದು ಮೊದಲೇ ಏಕೆ ಗಮನಕ್ಕೆ ಬರಲಿಲ್ಲ ? ಈಗ ಕಠೋರ ಕಾನೂನನ್ನು ತರುವುದರೊಂದಿಗೆ ಅವರನ್ನು ಹೊರದಬ್ಬಲು ಯಾವ ಪ್ರಯತ್ನಗಳನ್ನು ಮಾಡಲಾಗುವುದು ಎಂಬುದನ್ನು ಅವರು ಹೇಳಬೇಕಿದೆ ! – ಸಂಪಾದಕರು
* ಇದು ಮತಾಂಧರ ಭೂಮಿ ಜಿಹಾದಿನ ಷಡ್ಯಂತ್ರವಾಗಿದ್ದು ಈ ಮೂಲಕ ಭವಿಷ್ಯದಲ್ಲಿ ಹಿಂದೂಗಳ ತೀರ್ಥಕ್ಷೇತ್ರಗಳ ಮೇಲೆ ಆಕ್ರಮಣ ಮಾಡುವ ಉದ್ದೇಶವಿರುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ! ಹೀಗಾಗದಿರಲು ಹಿಂದೂ ಸಂಘಟನೆಯನ್ನು ಮಾಡಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು !- ಸಂಪಾದಕರು |
ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶ ನುಸುಳುಕೋರರನ್ನು ಆಯೋಜನಾಬದ್ಧವಾಗಿ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದ ಗುಪ್ತಚರ ವಿಭಾಗವು ಸರಕಾರಕ್ಕೆ ಈ ಬಗ್ಗೆ ನೀಡಿರುವ ಗೌಪ್ಯ ಮಾಹಿತಿಯ ಆಧಾರದಲ್ಲಿ ಈಗ ರಾಜ್ಯ ಸರಕಾರವು ಭೂಮಿಯ ಖರೀದಿ ಮತ್ತು ಮಾರಾಟದ ಬಗ್ಗೆ ಕಠೋರ ಕಾನೂನು ತರುವ ಸಿದ್ಧತೆಯಲ್ಲಿದೆ. ವಿಶೇಷವೆಂದರೆ ಇಲ್ಲಿ ಹಿಂದೂಗಳ ಪ್ರಸಿದ್ಧ ತೀರ್ಥಕ್ಷೇತ್ರಗಳಿವೆ, ಆ ಸ್ಥಳಗಳಿಗಾಗಿ ಈ ಕಾನೂನನ್ನು ತರುವ ವಿಚಾರವಿದೆ.
1. ಗುಪ್ತಚರ ವಿಭಾಗದ ಮಾಹಿತಿಯನುಸಾರ ಬದ್ರಿನಾಥ, ಹರಿದ್ವಾರ, ಋಷಿಕೇಶ ಇತ್ಯಾದಿ ಕಡೆಗಳಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆಯೂ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಹಾಗೆಯೇ ಗಂಗಾನದಿಯ ದಡದಲ್ಲಿಯೂ ಅವರ ಸಂಖ್ಯೆ ಹೆಚ್ಚುತ್ತಿದೆ.
2. ಹಿಂದುತ್ವನಿಷ್ಠ ಸಂಘಟನೆಗಳಿಗೆ ಇದರ ಹಿಂದೆ ಷಡ್ಯಂತ್ರವಿದೆ ಎಂಬ ಸಂಶಯವಿದೆ. ಇದು ಲ್ಯಾಂಡ್ ಜಿಹಾದ್ ನ ಪ್ರಕರಣವಾಗಿರಬಹುದು ಎಂದು ಹಿಂದೂಗಳಿಗೆ ಭಯವಿದೆ. ಆದ್ದರಿಂದ ಸರಕಾರವು ಈ ವಿಷಯದಲ್ಲಿ ಸತರ್ಕತೆಯಿಂದ ಗಮನ ನೀಡಬೇಕಿದೆ. ಲ್ಯಾಂಡ್ ಜಿಹಾದ್ ಅಂದರೆ ಮತಾಂಧರು ತಮ್ಮ ಪಂಥದ ಹೊರತು ಇತರರ ವಿಶೇಷವಾಗಿ ಹಿಂದೂಗಳ ಭೂಮಿಯನ್ನು ಕಬಳಿಸಲು ರಚಿಸಿದ ಷಡ್ಯಂತ್ರವಾಗಿದೆ.
3. ರಾಜ್ಯದಲ್ಲಿನ ಪರ್ವತ ಪ್ರದೇಶಗಳಲ್ಲಿನ ಹಿಂದೂಗಳು ತಮ್ಮ ಮನೆಯನ್ನು ಖಾಲಿ ಮಾಡುತ್ತಿದ್ದಾರೆ. ಈ ಜಾಗದಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರು ಸ್ಥಳೀಯರ ಭೂಮಿಯನ್ನು ಖರೀದಿ ಮಾಡುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಹೀಗೆಯೇ ನಡೆಯುತ್ತಿದೆ. ಬದ್ರಿನಾಥ, ಹರಿದ್ವಾರ ಮತ್ತು ಋಷಿಕೇಶಗಳಲ್ಲಿ ಇದೇ ರೀತಿಯಲ್ಲಿ ಅವರ ಸಂಖ್ಯೆಯೂ ಹೆಚ್ಚುತ್ತಿದೆ. ಅವರ ಜನಸಂಖ್ಯೆಯು ಈಗ ಶೇಕಡಾ 35 ರಷ್ಟು ಹೆಚ್ಚಾಗಿದೆ ಎಂಬ ಭಯವನ್ನು ವ್ಯಕ್ತಪಡಿಸಲಾಗಿದೆ.