ಸಮಯನಿರ್ದೇಶಕ ‘ಎಎಮ್ ಮತ್ತು ‘ಪಿಎಮ್ ಇವು ಭಾರತದಲ್ಲೇ ಉಗಮ !

‘ಎಎಮ್ (AM) ಎಂದರೆ ‘ಆಂಟಿ ಮೆರಿಡಿಯನ್ ಮತ್ತು ‘ಪಿಎಮ್ (PM) ಎಂದರೆ ‘ಪೋಸ್ಟ್ ಮೆರಿಡಿಯನ್ ಎಂದು ಬಾಲ್ಯದಿಂದಲೂ ನಮಗೆ ಕಲಿಸಲಾಗುತ್ತಿದೆ. ‘ಆಂಟಿ ಎಂದರೆ ಮೊದಲು; ಆದರೆ ಯಾರ ಮೊದಲು ? ‘ಪೋಸ್ಟ್ ಎಂದರೆ ನಂತರ; ಆದರೆ ಯಾರ ನಂತರ ? ಎಂಬುದನ್ನು ಎಂದಿಗೂ ಸ್ಪಷ್ಟಪಡಿಸಲಾಗಿಲ್ಲ; ಏಕೆಂದರೆ ಅದು ಕದ್ದ ಪದಗಳ ಸಂಕ್ಷಿಪ್ತ ರೂಪವಾಗಿತ್ತು. ನಮ್ಮ ಪ್ರಾಚೀನ ಸಂಸ್ಕೃತ ಭಾಷೆ ಈ ಸಂದೇಹವನ್ನು ಹೋಗಲಾಡಿಸಿದೆ. ‘ಎಎಮ್ ಮತ್ತು ‘ಪಿಎಮ್ ಇವು ಭಾರತದಲ್ಲಿ ಉಗಮವಾಗಿವೆ ಎಂಬುದು ಸ್ಪಷ್ಟವಾಯಿತು.

‘ಎಎಮ್ = ಆರೋಹಣಮ್ ಮಾರ್ತಣ್ಡಸ್ಯ

‘ಪಿಎಮ್ = ಪತನಮ್ ಮಾರ್ತಣ್ಡಸ್ಯ

ಆಕಾಶದ ಎಲ್ಲಾ ಲೆಕ್ಕಾಚಾರಗಳ ಮೂಲವಾದ ಸೂರ್ಯನನ್ನು ಗೌಣವನ್ನಾಗಿಸಲಾಯಿತು. ಆಂಗ್ಲ ಭಾಷೆಯ ಈ ಪದಗಳು ಸಂಸ್ಕೃತದ ನಿಜವಾದ ‘ಅರ್ಥವನ್ನು ವಿವರಿಸುವುದಿಲ್ಲ. ‘ಆರೋಹಣಮ್ ಮಾರ್ತಣ್ಡಸ್ಯ ಎಂದರೆ ಸೂರ್ಯನ ಆರೋಹಣ ಅಂದರೆ ಉದಯ ಮತ್ತು ‘ಪತನಮ್ ಮಾರ್ತಣ್ಡಸ್ಯ ಎಂದರೆ ಸೂರ್ಯನ ಅಸ್ತಂಗತ. ಸೂರ್ಯನು ಹಗಲಿನಲ್ಲಿ ಮಧ್ಯಾಹ್ನ ೧೨ ಗಂಟೆಯ ಮೊದಲು ಬೆಳಗುತ್ತಾನೆ, ಅಂದರೆ ಆರೋಹಣಂ ಮಾರ್ತಣ್ಡಸ್ಯ (ಎಎಮ್) ಮತ್ತು ಮಧ್ಯಾಹ್ನ ೧೨ ರ ನಂತರ ಸೂರ್ಯ ಮುಳುಗಲು ಪ್ರಾರಂಭಿಸುತ್ತಾನೆ, ಅಂದರೆ ಪತನಮ್ ಮಾರ್ತಣ್ಡಸ್ಯ (ಪಿಎಮ್), ಎಂಬುದನ್ನು ಗಮನದಲ್ಲಿಡಬೇಕು (ಆಧಾರ : ‘ಮೈಟೆಂಪಲ್ ಜಾಲತಾಣ)

(ಪಾಶ್ಚಾತ್ಯ ಅಂಧಾನುಕರಣೆಯಲ್ಲಿ ಮೈಮರೆತ ಮತ್ತು ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆದವರು ವಿಜ್ಞಾನವು ಪಾಶ್ಚಿಮಾತ್ಯರ ಕೊಡುಗೆಯಾಗಿದೆ ಎಂದು ಭಾವಿಸುತ್ತಾರೆ; ಆದರೆ ‘ಎಎಮ್ ಮತ್ತು ‘ಪಿಎಮ್ ಇವುಗಳ ಉಗಮವು ಅವರಿಂದಲ್ಲ ಬದಲಾಗಿ ಸಂಸ್ಕೃತ ಭಾಷೆಯು ನೀಡಿದೆ. ಇದು ಸಂಸ್ಕೃತ ಭಾಷೆಯ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ. – ಸಂಪಾದಕರು)