‘ಕನ್ಯಾದಾನವಲ್ಲ ಕನ್ಯಾಮಾನ ಎಂದು ಹೇಳಿ (ಅಂತೆ )!’

‘ಮಾನ್ಯವರ’ದ ಬಟ್ಟೆಗಳ ಜಾಹೀರಾತಿನಲ್ಲಿ ‘ಕನ್ಯಾದಾನ’ ವನ್ನು ಉಗ್ರ ಬಲಪಂಥೀಯ ಎಂದು ನಿರ್ಧರಿಸುವ ಪ್ರಯತ್ನ !

* ಹಿಂದೂಗಳ ಧರ್ಮಶಾಸ್ತ್ರ, ಹಾಗೆಯೇ ರೂಢಿ ಮತ್ತು ಪರಂಪರೆಗಳ ಮೇಲೆ ಆಘಾತಮಾಡಿ ಹಿಂದೂಗಳ ಬುದ್ಧಿಭ್ರಷ್ಟಗೊಳಿಸಲು ಪ್ರಯತ್ನಿಸುವ ನೋಡುವ ಸಂಸ್ಥೆಗಳನ್ನು ಹಿಂದೂಗಳು ಬಹಿಷ್ಕರಿಸುವುದು ಅವಶ್ಯಕವಾಗಿದೆ ! – ಸಂಪಾದಕರು 

*  ಹಿಂದೂ ಸಂಪ್ರದಾಯಗಳನ್ನು ಟೀಕಿಸಿದರೆ ಸಹಜ ಮತ್ತು ವ್ಯಾಪಕ ಪ್ರಸಿದ್ಧಿ ದೊರೆಯುತ್ತದೆ ಎಂಬುದು ಹಿಂದೂ ದ್ವೇಷಿಗಳಿಗೆ ತಿಳಿದಿದೆ. ಆದುದರಿಂದಲೇ ಹಿಂದೂಗಳ ಧಾರ್ಮಿಕ ಭಾವನೆಯನ್ನು ಆಗಾಗ ತುಳಿಯಲಾಗುತ್ತದೆ. ಹಿಂದೂಗಳ ಶ್ರದ್ಧೆಯ ಮೇಲೆ ಮತ್ತು ಆ ಮೂಲಕ ಹಿಂದೂಗಳ ಮನಸ್ಸಿನ ಮೇಲೆ ಆಘಾತ ಮಾಡುವವರ ವಿರುದ್ಧ ಸರಕಾರವು ಈಗ ರಾಷ್ಟ್ರೀಯ ಮಟ್ಟದಲ್ಲಿ ಕಠೋರ ಕಾನೂನನ್ನು ತರಬೇಕು ಎಂದು ದುಃಖಿತ ಹಿಂದುಗಳಿಗೆ ಅನಿಸುತ್ತದೆ! – ಸಂಪಾದಕರು 

* ಹಿಂದೂಗಳೇ, ನಿಮ್ಮ ಧಾರ್ಮಿಕ ಭಾವನೆಗೆ ನೋವಾದಲ್ಲಿ ಅಳುತ್ತ ಕುಳಿತುಕೊಳ್ಳುವ ಬದಲು ಅಂತರ್ಮುಖರಾಗಿರಿ ಮತ್ತು ಯಾರಿಗೂ ತಮ್ಮನ್ನು ನೋಯಿಸದಂತಹ ಸ್ಥಿತಿಯನ್ನು ನಿರ್ಮಿಸಿ ! – ಸಂಪಾದಕರು 

* ‘ಕನ್ಯಾದಾನ’ವನ್ನು ವಿರೋಧಿಸುವ ಸಂಸ್ಥೆಯು ತನ್ನ ಹೆಸರನ್ನು ಏಕೆ ಬದಲಾಯಿಸುತ್ತಿಲ್ಲ? ಹಿಂದೂಗಳ ಸಹಾಯದಿಂದಲೇ ಅವರ ಉದ್ಯೋಗವು ಎತ್ತರಕ್ಕೇರಿದೆ ಎಂಬುದನ್ನು ಆ ಸಂಸ್ಥೆಯು ಮರೆಯಬಾರದು ! ಆದುದರಿಂದ ಹಿಂದೂಗಳ ಭಾವನೆಯನ್ನು ನೋಯಿಸಿದ್ದಕ್ಕೆ ಸಂಸ್ಥೆಯು ಹಿಂದೂಗಳಲ್ಲಿ ಬಹಿರಂಗವಾಗಿ ಕ್ಷಮಾಯಾಚನೆ ಮಾಡಬೇಕು ! – ಸಂಪಾದಕರು 

ಮುಂಬೈ – ಹಿಂದೂ ಸಂಸ್ಕೃತಿಯಲ್ಲಿ ಕನ್ಯಾದಾನವನ್ನು ಎಲ್ಲಕ್ಕಿಂತ ದೊಡ್ಡ ಪುಣ್ಯವೆಂದು ತಿಳಿಯಲಾಗುತ್ತದೆ. ಬಟ್ಟೆಗಳಿಗಾಗಿ ಪ್ರಸಿದ್ಧವಾಗಿರುವ ಬ್ರಾಂಡ್ (ಪ್ರಸಿದ್ಧ ಸಂಸ್ಥೆ) ಎಂದು ತಿಳಿಯಲಾಗುವ ‘ಮಾನ್ಯವರ’ನ ಒಂದು ಜಾಹೀರಾತು ಪ್ರಸಾರಿತವಾಗಿದೆ. ಈ ಜಾಹೀರಾತಿನ ಮಾಧ್ಯಮದಿಂದ ಹಿಂದೂಗಳ ಕನ್ಯಾದಾನ ವಿಧಿಯನ್ನು ಉಗ್ರ ಬಲಪಂಥೀಯವೆಂದೂ ನಿರ್ಧರಿಸಲಾಗಿದ್ದು ಅದರ ಬದಲು ಕನ್ಯಾಮಾನ ಎಂಬ ಶಬ್ದವನ್ನು ಸೂಚಿಸಲಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ನೋವುಂಟಾಗಿದ್ದು ಸಾಮಾಜಿಕ ಮಾಧ್ಯಮಗಳಿಂದ ಇದರ ವಿರುದ್ಧ ದೊಡ್ಡಪ್ರಮಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಆಲಿಯಾ ಭಟ್ ಮತ್ತು ಮಾನ್ಯವರ ಸಂಸ್ಥೆಯ ಮೇಲೆ ಬಹಿಷ್ಕಾರ ಹಾಕಿ ಎಂದು ಬೇಡಿಕೆಯನ್ನು ಇಡಲಾಗುತ್ತಿದೆ.

ಈ ಜಾಹೀರಾತಿನಲ್ಲಿ ನಟಿ ಆಲಿಯಾ ಭಟ್ ನವವಧುವಿನ ಸ್ವರೂಪದಲ್ಲಿ ಮಂಟಪದಲ್ಲಿ ಕುಳಿತಿದ್ದು ಆಕೆಯು ತನ್ನ ಹಿಂದಿನ ಜೀವನದಲ್ಲಿನ ಪ್ರಸಂಗಗಳನ್ನು ಹೇಳುತ್ತಿರುವುದಾಗಿ ತೋರಿಸಲಾಗಿದೆ. ಈ ಪ್ರಸಂಗದಲ್ಲಿ ಆಕೆಯ ಕುಟುಂಬದವರು ಆಕೆಗೆ ‘ನೀನು ಪರರ ಧನ ವಾಗಿರುವೆ, ನಿನಗೆ ಗಂಡನ ಮನೆಗೆ ಹೋಗಬೇಕಿದೆ’ ಎಂದು ಅರಿವು ಮಾಡಿಕೊಡುತ್ತಿರುವುದರ ಬಗ್ಗೆ ಆಕೆ ಹೇಳುತ್ತಿದ್ದಾಳೆ. ಅದಕ್ಕೆ ಆಕೆಯು ‘ನನ್ನ ಕನ್ಯಾದಾನ ಏಕೆ ಮಾಡಲಾಗುತ್ತದೆ ? ನಾನು ದಾನಮಾಡುವ ವಸ್ತುವೇ ?’ ಎಂದು ಪ್ರಶ್ನಿಸುತ್ತಾಳೆ. ಇದಕ್ಕೆ ಮುಂದುವರೆದು ಆಕೆಯು ‘ಈಗ ಹೊಸ ಸಂಕಲ್ಪನೆಯನ್ನು ರೂಢಿಯಲ್ಲಿ ತರೋಣ. ಕನ್ಯಾದಾನ ವಲ್ಲ ಕನ್ಯಾಮಾನ !’ ಎಂದು ಹೇಳುತ್ತಾಳೆ.

ಈ ಜಾಹೀರಾತಿನಲ್ಲಿ ಕನ್ಯಾದಾನದ ರೂಢಿಯನ್ನು ಉಗ್ರ ಬಲಪಂಥೀಯವೆಂದೂ ನಿರ್ಧರಿಸಲಾಗುತ್ತಿದ್ದು ಅದರ ಬದಲಿಗೆ ‘ಕನ್ಯಾಮಾನ’ ಎಂಬ ಶಬ್ದವನ್ನು ಸೂಚಿಸಲಾಗಿದೆ. ಇದರಿಂದ ಆಗಾಗ ಹಿಂದೂಗಳ ರೂಢಿ ಮತ್ತು ಪರಂಪರೆಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಭಾವನೆಯು ಹಿಂದೂಗಳಿಂದ ವ್ಯಕ್ತವಾಗುತ್ತಿದೆ. ಅನೇಕರು ಈ ಜಾಹೀರಾತನ್ನು ‘ಫೇಕ್ ಫೆಮಿನಿಸಂ’ (ನಕಲಿ ಸ್ತ್ರೀ-ಪುರುಷ ಸಮಾನತೆ) ಎಂದು ಹೇಳಿದ್ದಾರೆ. ಅವರು ‘ಅನೇಕ ಸಂಸ್ಥೆಗಳು ಹಿಂದೂ ಧರ್ಮದ ಮಹಾನ್ ಪರಂಪರೆಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ಇತರ ಧರ್ಮದಲ್ಲಿರುವ ದಬ್ಬಾಳಿಕೆಯ ಪದ್ಧತಿಗಳ ಕಡೆಗೆ ದುರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಮಾನ್ಯವರವೂ ”ಕನ್ಯಾ ಮಾನ’ ಇದು ವಿವಾಹ ವಿಧಿಗೆ ಹೊಸ ರೂಪವನ್ನು ನೀಡುತ್ತದೆ ಮತ್ತು ವಧುವನ್ನು ಬಿಟ್ಟುಬಿಡುವ ಬದಲು ಆಕೆಯ ಆದರ ಮಾಡುವ ಕಲ್ಪನೆಯ ಮೇಲೆ ಪ್ರಕಾಶ ಬೀರುತ್ತದೆ’ ಎಂದು ಹೇಳಿದೆ. (ಹಿಂದೂಗಳ ಧಾರ್ಮಿಕ ವಿಧಿಗಳ ಕಣದಷ್ಟು ಅಧ್ಯಯನವಿಲ್ಲದ ‘ಮಾನ್ಯವರ’ ಸಂಸ್ಥೆಯನ್ನು ನಿಷೇಧಿಸಬೇಕು ! – ಸಂಪಾದಕರು)

ಕನ್ಯಾದಾನ ಅಂದರೆ ಏನು?

ಕನ್ಯಾದಾನ ಅಂದರೆ ಕನ್ಯೆಯ ದಾನ ಎಂದಾಗಿದೆ. ವಿವಾಹದ ಸಮಯದಲ್ಲಿ ಪ್ರತಿಯೊಬ್ಬ ತಂದೆಯು ತನ್ನ ಮಗಳ ಕೈಯನ್ನು ವರನ ಕೈಯಲ್ಲಿ ಒಪ್ಪಿಸುತ್ತಾನೆ. ಅನಂತರ ಹುಡುಗಿಯ ಎಲ್ಲ ಜವಾಬ್ದಾರಿಯನ್ನು ವರನು ನೋಡಿಕೊಳ್ಳಬೇಕಾಗುತ್ತದೆ. ವೇದ ಮತ್ತು ಪುರಾಣಗಳಂತೆಯೇ ವರನಿಗೆ ಭಗವಾನ್ ಶ್ರೀ ವಿಷ್ಣುವಿನ ದರ್ಜೆಯನ್ನು ನೀಡಲಾಗಿದೆ. ಸನಾತನ ಸಂಸ್ಕೃತಿಯಂತೆ ಕನ್ಯಾದಾನದ ಸೌಭಾಗ್ಯ ದೊರೆಯುವ ಹುಡುಗಿಯ ತಂದೆ-ತಾಯಿಯನ್ನು ಭಾಗ್ಯವಂತರು ಎಂದು ತಿಳಿಯಲಾಗುತ್ತದೆ.