ಇದನ್ನೆ ಕಳ್ಳನಿಗೊಂದು ಪಿಳ್ಳೆನೆವ ಅನ್ನುವುದು !- ಸಂಪಾದಕರು
ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತ ಸರಕಾರದಿಂದ ಇಸ್ಲಾಮಿಕ್ ಸ್ಟೇಟ್‍ನ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಗುಲ್ಮಾರ್ಗ್, ರಾಯಪುರ, ಜೋಧಪುರ, ಚಕರಾತಾ, ಅನುಪಗಡ ಮತ್ತು ಬಿಕನೇರನಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಾಶ್ಮೀರದಲ್ಲಿನ ಸ್ವಾತಂತ್ರ್ಯ ಚಳುವಳಿಯನ್ನು ಅಪಖ್ಯಾತಿಗೊಳಿಸುವ ಪ್ರಯತ್ನಿಸುವುದೇ ಈ ಕೇಂದ್ರಗಳ ಉದ್ದೇಶವಾಗಿದೆ. ಕಾಶ್ಮೀರದಲ್ಲಿನ ಆಂದೋಲನದ ಸಂಬಂಧವನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಜೋಡಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನವು ಆರೋಪಿಸಿದೆ. ಈ ನಿಟ್ಟಿನಲ್ಲಿ, ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಹೇಳಿದರು. ಷಾ ಮಹಮೂದ್ ಖುರೇಶಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯಿದ್ ಯೂಸುಫ್ ಮತ್ತು ಮಾನವ ಹಕ್ಕುಗಳ ಸಚಿವ ಶಿರಿನ್ ಮಂಜಾರಿ ಇವರು ಪತ್ರಿಕಾಗೋಷ್ಠಿಯಲ್ಲಿ ಭಾರತದ ಮೇಲೆ ಈ ಆರೋಪವನ್ನು ಮಾಡಿದರು.
Pakistan accuses India of “hosting and running terror camps of ISIS” to “malign the freedom struggle of Kashmiris”.https://t.co/T8iSff82NQ
— News18.com (@news18dotcom) September 13, 2021