‘ಸಚಿವ ಸ್ಥಾನ ಅಲ್ಲ, ಕೇವಲ ಮಕ್ಕಳನ್ನು ಹೆರುವುದೇ ಮಹಿಳೆಯರ ಕೆಲಸ !’ – ತಾಲಿಬಾನ್

* ಭಾರತದಲ್ಲಿನ ಮಹಿಳಾ ಸಂಘಟನೆ, ಮಾನವ ಹಕ್ಕುಗಳ ಸಂಘಟನೆ ಮುಂತಾದವರು ತಾಲಿಬಾನರ ವಿರುದ್ಧ ಏಕೆ ಮಾತನಾಡುವುದಿಲ್ಲ ಅಥವಾ ಅವರಿಗೆ ತಾಲಿಬಾನ್ ಮಾಡುತ್ತಿರುವುದು ಯೋಗ್ಯ ಎಂದು ಅನಿಸುತ್ತಿದೆಯೇ ? – ಸಂಪಾದಕರು 

* ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದೇವಿಯ ಸ್ಥಾನ ಕೊಟ್ಟಿದೆ ಮತ್ತು ತಾಲಿಬಾನ್ ಹೇಳುತ್ತಿರುವ ಶರಿಯತ ಕಾನೂನಿನಲ್ಲಿ ಮಹಿಳೆ ಕೇವಲ ಭೋಗದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರ ಎಂದು ತಿಳಿಯಲಾಗಿದೆ, ಎಂಬುದನ್ನು ಗಮನದಲ್ಲಿಡಿ ! ಈ ವಿಷಯದಲ್ಲಿ ಒಬ್ಬಾನೊಬ್ಬ ಪ್ರಗತಿ(ಅಧೋಗತಿ)ಪರನು, ಜಾತ್ಯತೀತನು ಹಾಗೆಯೇ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಇವರಂತಹ ನಾಯಕರು ಸಹ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು 

ಕಾಬುಲ(ಅಫ್ಘಾನಿಸ್ತಾನ) – ಓರ್ವ ಮಹಿಳೆ ಶಾಸಕಿಯಾಗಲು ಸಾಧ್ಯವಿಲ್ಲ. ಮಹಿಳೆಯನ್ನು ಶಾಸಕಿಯನ್ನಾಗಿ ಮಾಡುವುದು ಎಂದರೆ ಒಬ್ಬ ವ್ಯಕ್ತಿಗೆ ಹೊರಲು ಅಸಾಧ್ಯವಾದ ಜವಾಬ್ದಾರಿ ನೀಡುವುದಾಗಿದೆ. ಮಂತ್ರಿಮಂಡಲದಲ್ಲಿ ಮಹಿಳೆಯರ ಸಮಾವೇಶ ಇರುವುದು ಅವಶ್ಯಕ ಇಲ್ಲ. ಮಹಿಳೆಯರು ಕೇವಲ ಮಕ್ಕಳನ್ನು ಹೆರಬೇಕು, ಎಂಬುದಾಗಿ ತಾಲಿಬಾನ್ ವಕ್ತಾರನು ಇಲ್ಲಿಯ `ಟೊಲೋ ನ್ಯೂಸ್’ ಈ ವಾರ್ತಾವಾಹಿನಿಗೆ ಕೊಟ್ಟಿರುವ ಸಂದರ್ಶನದಲ್ಲಿ ಹೇಳಿದ್ದಾನೆ. ಈ ಮೊದಲು ತಾಲಿಬಾನವು ಮಹಿಳೆಯರಿಗೆ ಸಮಾನ ಅಧಿಕಾರ ಕೊಡುವ ಆಶ್ವಾಸನೆಯನ್ನು ನೀಡಿತ್ತು. ಈ ವಕ್ತಾರನು ‘ಪ್ರಸ್ತುತ ನಡೆಯುತ್ತಿರುವ ಆಂದೋಲನದಲ್ಲಿನ ಮಹಿಳೆಯರು ಇಡೀ ಅಫ್ಘಾನಿಸ್ತಾನದ ಮಹಿಳೆಯರನ್ನು ಪ್ರತಿನಿಧಿಸುತ್ತಿಲ್ಲ’ ಎಂದು ಹೇಳಿದ್ದಾನೆ.

ಕಳೆದ ಕೆಲವು ದಿನಗಳಿಂದ ಕಾಬೂಲ ಸಹಿತ ಇತರ ಕೆಲವು ನಗರಗಳಲ್ಲಿ ತಾಲಿಬಾನ್ ಸರಕಾರದ ವಿರುದ್ಧ ಆಂದೋಲನಗಳು ನಡೆಯುತ್ತಿವೆ. ಈ ಆಂದೋಲನದಲ್ಲಿ ಮಹಿಳೆಯರೂ ಭಾಗವಹಿಸಿದ್ದು ಗಮನಾರ್ಹವಾಗಿದೆ. ಮಹಿಳೆಯರಿಂದಲೇ ಸಮಾನ ಅಧಿಕಾರ, ಶಿಕ್ಷಣ, ಕೆಲಸ ಈ ಅಧಿಕಾರಗಳಿಗಾಗಿ ಆಂದೋಲನಗಳು ನಡೆಯುತ್ತಿವೆ.