ಸಂಪೂರ್ಣ ಭಾರತ ಮುಂದೆ ಕಾಶ್ಮೀರದಂತೆ ಇಸ್ಲಾಂಮಯವಾಗಬಹುದು 

೧೪ ಸಪ್ಟೆಂಬರ್ ೨೦೨೧ ರಂದು ಇರುವ ‘ಕಾಶ್ಮೀರಿ ಹಿಂದೂ ಬಲಿದಾನ ದಿನ ನಿಮಿತ್ತ

೧. ಕಾಶ್ಮೀರದ ಹಿಂದೂಗಳು ಉರ್ದು ಭಾಷೆಯಲ್ಲಿ ಮಾತನಾಡುವುದು

ಇಡೀ ಭಾರತದಲ್ಲಿ ಅತ್ಯಂತ ಭವ್ಯ ಪರಂಪರೆಯಿರುವ ಕೆಲವೇ ರಾಜ್ಯಗಳಲ್ಲಿ ಜಮ್ಮೂ-ಕಾಶ್ಮೀರವೂ ಒಂದಾಗಿದೆ. (ಕೇಂದ್ರಾಡಳಿತ ಪ್ರದೇಶವಾಗುವ ಮೊದಲು) ಈ ರಾಜ್ಯದ ಆಡಳಿತವು ಬೇಸಿಗೆಯಲ್ಲಿ ಕಾಶ್ಮೀರದಿಂದ ಮತ್ತು ಚಳಿಗಾಲದಲ್ಲಿ ಜಮ್ಮೂವಿನಿಂದ ನಡೆಯುತ್ತದೆ. ಜಮ್ಮೂ ಪ್ರದೇಶದಲ್ಲಿ ಯಾವ ರೀತಿ ಪಂಡಿತರಿದ್ದಾರೆಯೋ, ಹಾಗೆಯೇ ಡೊಗ್ರಾ ವರ್ಗದ ಹಿಂದೂಗಳು ಶೇ. ೬೪ ರಷ್ಟಿದ್ದಾರೆ. ಕಾಶ್ಮೀರದಲ್ಲಿ ಶೇ. ೯೬ ರಷ್ಟು ಮುಸಲ್ಮಾನರಿದ್ದಾರೆ. ಜಮ್ಮೂ-ಕಾಶ್ಮೀರದಲ್ಲಿ ‘ಉರ್ದುವೇ ರಾಜ್ಯಾಡಳಿತದ ಅಥವಾ ಅಧಿಕೃತ ಭಾಷೆಯಾಗಿದೆ. ಜಮ್ಮೂವಿನಲ್ಲಿ ಹಿಂದೂ ಮತ್ತು ಪಂಜಾಬಿ ಜನರ ಆಡುಭಾಷೆ ಡೋಗ್ರಾ ಆಗಿದ್ದರೂ ಎಲ್ಲರಿಗೂ ಉರ್ದು ಭಾಷೆ ಚಿರಪರಿಚಿತವಾಗಿದೆ. ಆದುದರಿಂದ ಅವರು ಪರಸ್ಪರರಲ್ಲಿ ಉರ್ದುವಿನಲ್ಲಿಯೇ ಮಾತನಾಡುತ್ತಾರೆ, ಇದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ. ಮೊದಲು ಕೇವಲ ಭಾರತೀಯ ಭಾಷೆಗಳನ್ನು ಮಾತನಾಡುತ್ತಿದ್ದ ಕಾಶ್ಮೀರವು ಮೊಘಲರ ಆಕ್ರಮಣದ ಬಳಿಕ ತನ್ನ ಸಂಸ್ಕೃತಿ ಮತ್ತು ಭಾಷೆಯನ್ನು ಕಳೆದುಕೊಂಡಿತು. ಜನರಲ್ಲಿ ಇಸ್ಲಾಂ ಮತ್ತು ಉರ್ದು ಪ್ರಾಮುಖ್ಯತೆಯನ್ನು ಪಡೆದಿವೆ.

೨. ಕಾಶ್ಮೀರಿ ಪಂಡಿತರು ಮಾತೃಭೂಮಿಗೆ ಮರಳುವ ಆಸೆಯಲ್ಲಿದ್ದಾರೆ

ಇಸ್ಲಾಂನ ಆಕ್ರಮಣದ ಬಳಿಕ ಕಾಶ್ಮೀರಿನ ನಿವಾಸಿಗಳಾಗಿರುವ ‘ಪಂಡಿತರು (ಬ್ರಾಹ್ಮಣರು) ಜಮ್ಮೂವಿನಲ್ಲಿಯಷ್ಟೇ ಅಲ್ಲ, ಭಾರತದ ವಿವಿಧ ಸ್ಥಳಗಳಿಗೆ ಹೋಗಿ ಅಲ್ಲಿ ವಾಸಿಸುತ್ತಿದ್ದಾರೆ. ಎಲ್ಲಿ ವಾಸಿಸುತ್ತಿದ್ದರೂ ಅವರು ಮಾತೃಭೂಮಿಯನ್ನು ಮರೆತಿಲ್ಲ. ‘ಸಾಮಾನ್ಯರಂತೆ ಬಡತನದಿಂದ ವಾಸಿಸ ಬೇಕಾದರೂ ನಡೆದಿತು, ಆದರೆ ಮರಳಿ ಕಾಶ್ಮೀರಕ್ಕೆ ಹೋಗಿ, ಅಲ್ಲಿಯೇ ವಾಸಿಸಬೇಕು ಎನ್ನುವ ಕನಸನ್ನು ಕಟ್ಟಿಕೊಂಡಿದ್ದಾರೆ. (ಸದ್ಯದ ಕೇಂದ್ರ ಸರಕಾರ ಕಲಂ ೩೭೦ ಮತ್ತು ೩೫ ಅ ಗಳನ್ನು ರದ್ದುಪಡಿಸಿದೆ. ಇದರಿಂದ ಸರಕಾರ ಕಾಶ್ಮೀರಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುತ್ತಿರುವ ನಿರ್ಣಯಗಳಿಂದ ಕಾಶ್ಮೀರಿ ಹಿಂದೂಗಳ ಆಸೆ ಚಿಗುರೊಡೆದಿದೆ – ಸಂಕಲನಕಾರರು) ಕಾಶ್ಮೀರದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಮತಾಂಧರ ದೌರ್ಜನ್ಯಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಅಲ್ಲದೇ ಅವರಿಗೆ ತಮ್ಮ ಸ್ವಂತ ಮನೆ-ಆಸ್ತಿಯನ್ನು ಬಿಟ್ಟು ಹೋಗ ಬೇಕಾಗುತ್ತಿದೆ.

೩. ಬೆಂಗಳೂರಿನಲ್ಲಿರುವ ಕಾಶ್ಮೀರಿ ಪಂಡಿತರು ತಮ್ಮ ಪರಂಪರೆಯ ರಕ್ಷಣೆಗಾಗಿ ಮಾಡುತ್ತಿರುವ ಪ್ರಯತ್ನ

ಬೆಂಗಳೂರಿನಲ್ಲಿ ವಾಸಿಸುತ್ತಿರುವವ ಕಾಶ್ಮೀರಿ ಪಂಡಿತರು ಒಂದೆಡೆ ಸೇರಿ ‘ಕಾಶ್ಮೀರಿ ಹಿಂದೂ ಕಲ್ಚರಲ್ ವೆಲ್‌ಫೇರ್ ಟ್ರಸ್ಟ್ನ ಹೆಸರಿನಲ್ಲಿ ಒಂದು ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಪಂಡಿತರನ್ನು ಸಂಘಟಿಸಿ ಜನಕಲ್ಯಾಣ ಕಾರ್ಯಗಳನ್ನು ಮಾಡುವುದು, ‘ಪಂಡಿತರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅವರ ಪರಂಪರೆಯ ಸ್ಮರಣೆಯನ್ನು ಮುನ್ನಡೆಸಬೇಕು, ಎಂದು ಸಂಘಟನೆ ಪ್ರಯತ್ನಿಸುತ್ತಿದೆ. ಸದ್ಯದ ವಿದ್ಯಾರ್ಥಿ ಮಿತ್ರ ಮತ್ತು ಸಂಶೋಧಕರಾದ ಟಿ.ಎಸ್. ದಕ್ಷಿಣಾಮೂರ್ತಿ ಇವರೊಂದಿಗೆ ಸಂಘದ ಅಧ್ಯಕ್ಷರಾದ ಆರ್.ಕೆ. ಮಟ್ಟೂ ಇವರ ಮನೆಗೆ ಹೋಗಿ ಸಂದರ್ಶನವನ್ನು ನಡೆಸಿ ಪಂಡಿತರ ಸಾಮಾಜಿಕ ರಚನೆಯ ವಿಷಯದಲ್ಲಿನ ಸ್ವಲ್ಪ ಮಾಹಿತಿ, ಹಾಗೆಯೇ ಇತರೆ ವಿಷಯಗಳನ್ನು ಸಂಗ್ರಹಿಸಿ ಚಿಕ್ಕ ಲೇಖನದ ಮೂಲಕ ಓದುಗರ ಎದುರಿಗೆ ಮಂಡಿಸುತ್ತಿದ್ದೇವೆ. ಮಟ್ಟೂರವರು ಸಂಪಾದಿಸಿ ಪ್ರಕಟಿಸುತ್ತಿರುವ ಒಂದು ಮಾಸಿಕದಲ್ಲಿ ಅವರು ‘ಏನೇ ಆದರೂ, ಕಾಶ್ಮೀರಿ ಪಂಡಿತರು ತಮ್ಮ ಮೂಲ ಮನೆಗೇ ಹೋಗುವವರೇ ಇದ್ದಾರೆ. ಇತರ ಸ್ಥಳಗಳಲ್ಲಿ ಅವರು ನಿರ್ಮಾಣ ಮಾಡಿರುವ ಸಂಕುಲದ ಕಡೆಗೆ ಹೋಗುವುದಿಲ್ಲ. ಎಲ್ಲಿಯವರೆಗೆ ಅವರು ತಮ್ಮ ಮೂಲ (ಒತ್ತಾಯದಿಂದ ಸ್ಥಳಾಂತರಗೊಳ್ಳುವ ಪೂರ್ವದಲ್ಲಿನ) ಸ್ಥಾನಕ್ಕೆ ಮರಳುವುದಿಲ್ಲವೋ, ಅಲ್ಲಿಯವರೆಗೆ ಅವರ ಮರಳಿ ಬರುವಿಕೆಗೆ ಯಾವುದೇ ಅರ್ಥವಿಲ್ಲ ಎಂದು ಬರೆದಿದ್ದಾರೆ.

ಹಿಂದೂಗಳನ್ನು ಕಾಶ್ಮೀರದಿಂದ ಬಲವಂತವಾಗಿ ಹೊರದಬ್ಬಲಾಗಿದೆ. ಅವರು ಮತಾಂಧ ಜಿಹಾದಿಗಳು ಸಾವಿರಾರು ಹಿಂದೂಗಳ ಹತ್ಯೆಯನ್ನು ಮಾಡಿರುವುದನ್ನು ಕಣ್ಣಾರೆ ಕಂಡಿದ್ದಾರೆ, ಇವರು ಹತ್ಯೆಯಾಗಿರುವ ಆ ಹಿಂದೂಗಳ ವಂಶಜರಾಗಿದ್ದಾರೆ. ೧೯೯೦ ನೇ ಇಸವಿಯಲ್ಲಿ ಜಿಹಾದಿಗಳು ನೂರಾರು ಪಂಡಿತರನ್ನು ಗುಂಡಿಕ್ಕಿ ಸಾಮೂಹಿಕ ಹತ್ಯೆ ಮಾಡಿದರು. ೧೯ ಜನವರಿ ೧೯೯೦ ರಂದು ಇಂದಿಗೂ ಕಾಶ್ಮೀರಿ ಪಂಡಿತರು ‘ಸಾಮೂಹಿಕ ಹತ್ಯೆಯ ದಿನ ಎಂದು ಆಚರಿಸುತ್ತಾರೆ. ಆ ಭಯಂಕರ ರಾತ್ರಿ ಸಾವಿರಾರು ಪಂಡಿತರು ತಮ್ಮ ಎಲ್ಲ ವಸ್ತುಗಳನ್ನು, ಸಾಮಗ್ರಿಗಳನ್ನು ಇದ್ದ ಸ್ಥಿತಿಯಲ್ಲಿಯೇ ಬಿಟ್ಟು ಕಾಶ್ಮೀರ ಕಣಿವೆಯಿಂದ ಪಲಾಯನ ಮಾಡಿದರು. ಆ ಸಮಯದಲ್ಲಿ ಹತ್ಯೆಗೀಡಾದ ಪಂಡಿತರ ಮನೆಯ ಮೇಲೆ ಹದ್ದುಗಳು ಮಾಂಸಕ್ಕಾಗಿ ಸುತ್ತುತ್ತಿದ್ದವು. ಪಂಡಿತರಂತೂ ಮಾತೃಭೂಮಿಯನ್ನು ನೆನಪಿಸಿಕೊಂಡು ಒಮ್ಮೆಯಾದರೂ ಕಣ್ಣೀರು ಹಾಕುತ್ತಾರೆ.

೪. ಕಾಶ್ಮೀರಿ ಪಂಡಿತರ ಜನಜೀವನ ಮತ್ತು ಅವರ ಪದ್ದತಿ, ಪರಂಪರೆ 

ಅ. ಕಾಶ್ಮೀರಿ ಪಂಡಿತರ ಉಪನಾಮ ಮತ್ತು ಭಾಷೆ : ‘ಪಂಡಿತರೆಂದರೆ ವಿದ್ವಾಂಸರು, ಜ್ಞಾನಿಗಳು ಎಂಬ ಅರ್ಥ. ‘ಭಟ್ಟ ಎಂದು ಇಂದಿಗೂ ಒಂದು ಹೆಸರಿರುವ ಈ ವರ್ಗದ ಜನರು ಸಾರಸ್ವತ ಬ್ರಾಹ್ಮಣರು. ಇವರ ಉಪನಾಮ ಅಥವಾ ವಂಶಾವಳಿ ಅನೇಕವಿವೆ. ಇದರಲ್ಲಿ ಕೌಲ, ಧರ, ಪೊತೆದಾರ, ಪಂಡಿತ, ರೈನ, ಶಿವಪುರಿ, ಹಿಂದೂ, ನೆಹರೂ, ಮಟ್ಟೂ, ಜಲಪುರಿ, ಕಚ್ರು ಮುಂತಾದವುಗಳಿವೆ. ಬಹುತೇಕ ನಗರವಾಸಿಗಳಾಗಿರುವವರ ಮಾತೃ ಭಾಷೆ ಕಾಶ್ಮೀರಿ ಆಗಿದೆ. ಸಂಸ್ಕೃತ ವಿದ್ವಾಂಸರು ದೇವನಾಗರಿ ಲಿಪಿಯನ್ನು ಉಪಯೋಗಿಸುತ್ತಿದ್ದರೂ, ಮತಾಂಧರ ಪ್ರಭಾವದಿಂದ ಕಾಶ್ಮೀರಿ ಭಾಷೆ ಉರ್ದು (ಪರ್ಸೊ ಅರೇಬಿಕ್) ಲಿಪಿಯಲ್ಲಿಯೂ ಬರೆಯಲಾಗುತ್ತದೆ. ಅಕ್ಕಿ ಅವರ ಮುಖ್ಯ ಆಹಾರವಾಗಿದೆ. ಸಗೋತ್ರ ಪದ್ಧತಿಯನ್ನು ಅನುಸರಿಸುವಲ್ಲಿ ‘ಗೋರ ವರ್ಗದ ಜನರು ಪ್ರಾಮುಖ್ಯತೆಯಿಂದ ಸಂಸ್ಕೃತ ವಿದ್ವಾಂಸರು ಮತ್ತು ಪೌರೋಹಿತ್ಯವನ್ನು ಮಾಡುವವರಾಗಿದ್ದಾರೆ. ‘ಕರ್ಕುನ್ ವರ್ಗದವರು ಸರಕಾರೀ ಹುದ್ದೆಗಳನ್ನು ಅಲಂಕರಿಸಿ ಲೌಕಿಕ ಕರ್ತವ್ಯಗಳನ್ನು ಪಾಲಿಸುತ್ತಾರೆ. ಬುಹೂರ, ಪೂರ್ಜಿ ಇವರು ಅದರಲ್ಲಿನ ಕೆಳಮಟ್ಟದ ವರ್ಗದವರಾಗಿದ್ದಾರೆ.

ಆ. ಧಾರ್ಮಿಕ ಪದ್ಧತಿ ಮತ್ತು ಪರಂಪರೆ : ತಲೆಯ ಮೇಲೆ ಜಟೆ, ಶಿಖೆ, ಮೈಮೇಲೆ ಜನಿವಾರ ಇವು ಬ್ರಾಹ್ಮಣರ ಲಕ್ಷಣಗಳಾಗಿವೆ. ಎಲ್ಲರೂ ಶಿವನ ಆರಾಧನೆಯನ್ನು ಮಾಡುವವರಾಗಿದ್ದಾರೆ. ಶೈವ, ಶಕ್ತಿ (ದುರ್ಗಾ) ಇವರು ಅವರ ಮುಖ್ಯ ಆರಾಧ್ಯ ದೇವರಾಗಿದ್ದಾರೆ. ಅವರು ವಿಭೂತಿ, ರುದ್ರಾಕ್ಷಿಯನ್ನು ಧರಿಸದಿದ್ದರೂ, ದೇವರ ಪೂಜೆಯಲ್ಲಿ ಬಿಲ್ವಪತ್ರೆಗೆ ಅಧಿಕ ಮಹತ್ವವನ್ನು ನೀಡುತ್ತಾರೆ. ಅವರ ಹಬ್ಬಗಳಲ್ಲಿ ನವರಾತ್ರಿಗೆ ಹೆಚ್ಚು ಮಹತ್ವವಿದೆ. ಆ ದಿನಗಳಲ್ಲಿ ಅವರು ಶಿವ, ಶಕ್ತಿ ಇವರಿಬ್ಬರ ಪೂಜೆಯನ್ನು ಮಾಡಿದ ಬಳಿಕವೇ ಉತ್ಸವ ಮತ್ತು ಸಾಮೂಹಿಕ ಭೋಜನವನ್ನು ಮಾಡುತ್ತಾರೆ. ಅವರಿಗೆ ಇಷ್ಟಲಿಂಗವನ್ನು ಧರಿಸುವುದು ಒಪ್ಪಿಗೆಯಿಲ್ಲ. ಮಂದಿರದಲ್ಲಿ ಶಿವಲಿಂಗದ ಅಥವಾ ಮನೆಯಲ್ಲಿಯೂ ಶಿವಲಿಂಗದ ಪೂಜೆಯನ್ನು ಮಾಡುತ್ತಾರೆ.

ಇ. ಕಾಶ್ಮೀರಿ ಹಿಂದೂಗಳ ಪಂಥ : ಅವರ ಧಾರ್ಮಿಕ ಪಂಥವನ್ನು ‘ಕಾಶ್ಮೀರ ಶೈವ ಎಂದೇ ಬಿಂಬಿಸಲಾಗಿದೆ. ಅದನ್ನು ಆಡುಭಾಷೆಯಲ್ಲಿ ‘ತ್ರಿಕ್ ದರ್ಶನ ಎಂದೂ ಹೇಳಲಾಗಿದೆ. ‘ಪ್ರತ್ಯಭಿಜ್ಞಾದರ್ಶನ ಎನ್ನುವ ಹೆಸರೂ ಇದೆ. ನರ-ಶಕ್ತಿ-ಶಿವ ಇವೇ ತ್ರಿಕ್‌ವಾಗಿವೆ. ನಮ್ಮಲ್ಲಿರುವ ಶಕ್ತಿ ಅಥವಾ ತೇಜಕ್ಕೆ ವ್ಯಕ್ತಿಯು ಸಾಧನೆಯ ಮೂಲಕ ಧ್ಯಾನ, ತಪ, ಶ್ರದ್ಧಾಚರಣೆಯಿಂದ ಶೋಧಿಸಿದ ನಂತರ ಅಥವಾ ಅನುಭವಿಸಿದಾಗ ಅವನೇ ಶಿವನಾಗುತ್ತಾನೆ. ಅಹಂಭಾವ ಸೋಹಂ ಆಗುತ್ತದೆ. ಶಂಕರನ ಈ ಅದ್ವೈತದ ಪ್ರಕಾರ ದೇಹವೆಂದರೆ ಮಾಯೆ.

ಇ. ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆ : ಅವರಲ್ಲಿ ಏಕಪತ್ನಿ ವ್ಯವಸ್ಥೆಯಿದೆ. ಅವರಲ್ಲಿ ಸಗೋತ್ರ ವಿವಾಹಕ್ಕೆ ಪ್ರಾಧಾನ್ಯತೆಯಿದೆ. ಸಮಾನ ಧರ್ಮದವರೊಂದಿಗೆ ಒಟ್ಟಿಗೆ ಭೋಜನ ಮಾಡುತ್ತಾರೆ; ಆದರೆ ಮುಸಲ್ಮಾನ, ಕ್ರೈಸ್ತರು ಇವರೊಂದಿಗೆ ಭೋಜನವನ್ನು ಮಾಡುವುದಿಲ್ಲ.

೫. ಋಷಿಗಳು, ಸಂತರು ಮತ್ತು ದೇವಭಕ್ತರಿಗಾಗಿ ಪವಿತ್ರವಾಗಿರುವ ಕಾಶ್ಮೀರ

ಒಟ್ಟಾರೆ ಕಾಶ್ಮೀರದಲ್ಲಿರುವ ಶೈವರು ಭಾರತೀಯ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಹಿಂದಿನ ಕಾಲದ ಪಂಡಿತರು ಬರೆದಿರುವ ದಾರ್ಶನಿಕ ಗ್ರಂಥಗಳು, ಕಾವ್ಯ ಇಂದಿಗೂ ಜಗದ್ವಿಖ್ಯಾತವಾಗಿವೆ. ಹತ್ತನೇ ಶತಮಾನದಲ್ಲಿ ಪಂಡಿತ ಕಲ್ಹಣ ಇವರು ತಮ್ಮ ‘ರಾಜತರಂಗಿಣಿಯಲ್ಲಿ ಹೇಳಿದಂತೆ ಸಂಪೂರ್ಣ ಕಾಶ್ಮೀರವನ್ನು ಹಿಂದೂ ಸಂತರು, ಋಷಿಗಳು ಮತ್ತು ದೇವಭಕ್ತರು ಪವಿತ್ರವೆಂದು ನಂಬಿದ್ದಾರೆ.

೬. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯಗಳನ್ನು ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ

೧೪-೧೫ ನೇ ಶತಮಾನದ ವರೆಗೆ ಕಾಶ್ಮೀರದಲ್ಲಿ ಸುರಕ್ಷಿತವಿದ್ದ ಪಂಡಿತರನ್ನು ಬಲವಂತವಾಗಿ ಹೊರಗೆ ದೂಡಲಾಯಿತು. ಪಂಡಿತರ ಜಟೆ, ಶಿಖೆ, ಜನಿವಾರ ಕತ್ತರಿಸಿ ಅವರಲ್ಲಿ ಅನೇಕರನ್ನು ಇಸ್ಲಾಮೀಕರಣ ಮಾಡಲಾಯಿತು. ರಾಹುಲ ಪಂಡಿತರು ಅದರ ಪ್ರತ್ಯಕ್ಷ ಅನುಭವವನ್ನು ‘ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್ ಈ ಆತ್ಮಕಥೆಯಲ್ಲಿ ಬರೆದಿದ್ದಾರೆ. ಅದರಲ್ಲಿ ಸ್ವಾತಂತ್ರ್ಯ ಪೂರ್ವ, ಹಾಗೆಯೇ ನಂತರದ ಕಾಶ್ಮೀರದಲ್ಲಿ ಜರುಗಿರುವ ಪಂಡಿತರ ನರಸಂಹಾರದ ‘ಮರೆಮಾಚಲಾಗಿರುವ ಕಥೆಯನ್ನು ಮಂಡಿಸಿದ್ದಾರೆ. ಆರ್.ಎಲ್. ಭಟ್‌ರ ಸಾಹಿತ್ಯದಲ್ಲಿ ಅಲ್ಲಿಯ ದೇವಸ್ಥಾನಗಳ ವಿನಾಶದ ಒಂದು ಸಂಕ್ಷಿಪ್ತ ಚಿತ್ರಣವನ್ನೇ ಕಣ್ಣೆದುರಿಗೆ ಮಂಡಿಸಲಾಗಿದೆ.

೭. ಹಿಂದೂ ಧರ್ಮದ ಬೌದ್ಧಿಕ ಮತ್ತು ಧಾರ್ಮಿಕ ಕೇಂದ್ರವಾಗಿರುವ ಕಾಶ್ಮೀರ ಮಸೀದಿ ಮತ್ತು ದರ್ಗಾಗಳಿಂದ ತುಂಬಿಹೋಗಿದೆ

ಮಹಮ್ಮದ ಗಝನಿಯು ನಡೆಸಿದ ಆಕ್ರಮಣದಿಂದ ಕಾಶ್ಮೀರ ಮತ್ತು ಭಾರತಾದ್ಯಂತದ ದೇವಸ್ಥಾನಗಳು ಮಸೀದಿಗಳಾದವು. ಕಾಶ್ಮೀರದಲ್ಲಿನ ೧೦ ಜಿಲ್ಲೆಗಳಲ್ಲಿ ೧ ಸಾವಿರ ೪೦೦ ದೇವಸ್ಥಾನಗಳಿದ್ದವು, ಅದರಲ್ಲಿನ ಶೇ. ೭೫ ರಷ್ಟು ದೇವಸ್ಥಾನಗಳ ಬಹಳಷ್ಟು ಭಾಗಗಳು ನಾಶವಾಗಿವೆ. ಮೊದಲು ಕಾಶ್ಮೀರದಲ್ಲಿ ನಾಗೂಬಲ ಸಂಕೀರ್ಣ, ಗೋತಮನಾಗ, ಮಾರ್ತಂಡ ಸಂಕೀರ್ಣ, ಬಿಜ ಬಿಹಾರ, ಸೀತಾಕೋಟ, ಪುಕುಲ, ಅಭಿನವಗುಪ್ತ ಹುಗಾ, ಶೀತರನಾಥ, ವಿಚಾರ ನಾಗ, ಶಾರಿಕಾ (ಕಾಶ್ಮೀರದ ಅಧಿದೇವತೆ), ಸರಸ್ವತಿ ಶಾರದಾ, ನೃಸಿಂಹಾಶ್ರಮ, ಋಕಾಶ್ರಮ, ಅಧಿಷ್ಠಾನ ಮಠ ಇತ್ಯಾದಿ ಮುಖ್ಯ ಮಂದಿರಗಳು, ಆಶ್ರಮಗಳು ಮತ್ತು ಪವಿತ್ರಕ್ಷೇತ್ರಗಳಿದ್ದವು. ಈಗ ಎಷ್ಟೋ ಮಂದಿರಗಳು ಭಗ್ನಗೊಂಡಿವೆ. ಶ್ರೀನಗರದ ಹತ್ತಿರವಿರುವ ೧ ಸಾವಿರ ಅಡಿಗಿಂತ ಅಧಿಕ ಎತ್ತರದ ಗುಡ್ಡದ ಮೇಲಿರುವ ಶಂಕರಾಚಾರ್ಯ ಮಂದಿರವೂ ಭಗ್ನಗೊಂಡಿದೆ. ಹಿಂದೂ ಧರ್ಮದ ಬೌದ್ಧಿಕ, ಧಾರ್ಮಿಕ ಕೇಂದ್ರವಾಗಿರುವ ಕಾಶ್ಮೀರ ಇಂದು ಮಸೀದಿ ಮತ್ತು ದರ್ಗಾಗಳಿಂದ ತುಂಬಿದೆ.

೮. ಕಾಶ್ಮೀರಿ ಪಂಡಿತರ ಮೇಲಾದ ಅತ್ಯಾಚಾರಗಳ ಬಗ್ಗೆ ತುಟಿ ಬಿಚ್ಚದಿರಲು ಅವರು ಬ್ರಾಹ್ಮಣರಾಗಿರುವುದೇ ಕಾರಣ

ಕಾಶ್ಮೀರಿ ಪಂಡಿತರು ಅನುಭವಿಸಿರುವ ನೋವು ಬಹಳಷ್ಟು ಜನರಿಗೆ ತಿಳಿದಿಲ್ಲ. ನನಗೂ ಅದರ ಮಾಹಿತಿಯಿರಲಿಲ್ಲ. ಇತರ ಜನರಂತೆಯೇ ಅಲ್ಪಸ್ವಲ್ಪ ಅರಿವು ನನಗಿತ್ತು. ಭಾರತದ ಮೇಲೆ ಮೊದಲಿನಿಂದಲೂ ಪರಕೀಯರು ಆಕ್ರಮಣ ಮಾಡಿದ್ದಾರೆ; ಆದರೆ ಕಾಶ್ಮೀರದಲ್ಲಿನ ಪಂಡಿತರ ಮೇಲಾಗಿರುವ ಅತ್ಯಾಚಾರಗಳಿಗೆ ಹೇಳುವಷ್ಟು ಪ್ರತಿರೋಧ ವ್ಯಕ್ತವಾಗಿಲ್ಲ. ಇದಕ್ಕೆ ಕಾರಣವೆಂದರೆ ಅಲ್ಲಿ ಮರಣ ಹೊಂದಿರುವವರು ‘ಬ್ರಾಹ್ಮಣರು. ಬ್ರಾಹ್ಮಣರೆಂದರೆ ಇಂದು ಬಹುಜನರಿಗೆ ತಿರಸ್ಕಾರದ ವಿಷಯವಾಗಿದೆ ಮತ್ತು ಅವರು ತಿರಸ್ಕೃತರಾಗಿದ್ದಾರೆ. ಅವರ ಮೇಲೆ (ಕಾಶ್ಮೀರಿ ಪಂಡಿತರ ಮೇಲೆ) ಆಗಿರುವ ಅನ್ಯಾಯ ಜನರ ಮನಸ್ಸಿನ ಮೇಲೆ ಬಿಂಬಿತವಾಗಲಿಲ್ಲ. ಒಂದು ವೇಳೆ ಕೆಳ ವರ್ಗದವರ ಮೇಲೆ ಈ ಅನ್ಯಾಯವಾಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿತ್ತು; ಕೆಲವು ಸ್ಥಳಗಳಲ್ಲಿ ಗಲಭೆಗಳೂ ನಡೆಯುತ್ತಿದ್ದವು; ಕೆಲವರಿಗೆ ಪಂಡಿತರ ಮೇಲೆ ಅತ್ಯಾಚಾರವಾಗಿದ್ದರಿಂದ ಮತ್ತು ‘ಹತ್ಯೆಯಾಗಿದ್ದರಿಂದ ಸಮಾಧಾನವೂ ಅನಿಸಿದ್ದರೆ, ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ. ಕಾಶ್ಮೀರ ಭಾರತದಲ್ಲಿ ಬಂದ ಬಳಿಕ ಮುಸಲ್ಮಾನೇತರರ ಮೇಲೆ ಬಹಳ ಆಕ್ರಮಣಗಳಾಗಿವೆ, ಇದು ಮಹತ್ವದ್ದಾಗಿದೆ.

೯. ‘ವಿವಾಹ ಕಾಯಿದೆ ಎಲ್ಲರಿಗೂ ಸಮಾನವಾಗಿರಬೇಕು !

ಅಲ್ಪಸಂಖ್ಯಾತರ ಶೇಕಡಾವಾರು (ಜನಸಂಖ್ಯೆ) ಹಿಂದೂಗಳ ಸಂಖ್ಯೆಗಿಂತ ತುಂಬಾ ಅಧಿಕವಾಗಿದೆ. ಮುಸಲ್ಮಾನರು ಸಹಜವಾಗಿ ೪ ವಿವಾಹಗಳನ್ನು ಮಾಡಿಕೊಂಡು ಅನೇಕ ಮಕ್ಕಳನ್ನು ಹುಟ್ಟಿಸಿ, ಪತ್ನಿಗೆ ತಲಾಕ್ ನೀಡಿ ಪುನಃ ೪ ಜನರೊಂದಿಗೆ ವಿವಾಹ ಮಾಡಿಕೊಂಡು ಮಕ್ಕಳನ್ನು ಹುಟ್ಟಿಸಬಹುದು. ಆದುದರಿಂದ ಈ ಕಾಯಿದೆಯನ್ನು ರದ್ದುಗೊಳಿಸಿ ‘ವಿವಾಹ ಕಾಯಿದೆಯನ್ನು ಎಲ್ಲರಿಗೂ ಸಮಾನ ಮಾಡಬೇಕು. ಇಲ್ಲವಾದರೆ ಮುಂದೆ ಸಂಪೂರ್ಣ ಭಾರತ ಕಾಶ್ಮೀರದಂತೆ ಇಸ್ಲಾಂ ಮಯವಾಗಬಹುದು.

– ಡಾ. ಎಮ್. ಚಿದಾನಂದಮೂರ್ತಿ, ಲೇಖಕರು, ಹಿರಿಯ ಸಂಶೋಧಕರು.