ಪಂಜಶಿರದಲ್ಲಿ ತಾಲಿಬಾನಿ ೪೦ ಉಗ್ರರು ಹತ

ಕಾಬುಲ(ಅಫಘಾನಿಸ್ತಾನ) – ಅಪಘಾನಿಸ್ತಾನದ ಪಂಜಶಿರ ಪ್ರಾಂತದ ಮೇಲೆ ನಿಯಂತ್ರಣ ಪಡೆಯಲಾಗದ ತಾಲಿಬಾನಿಗಳು ಅಲ್ಲಿ ಮತ್ತೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಅವರ ೪೦ ಉಗ್ರರು ಹತರಾಗಿದ್ದಾರೆ. ಪಂಜಶಿರದ ಮೇಲೆ ನಿಯಂತ್ರಣವಿರುವ ನಾರ್ದನ್ ಅಲಾಯೆನ್ಸ್ ಇವರ ಗುಂಡಿನ ದಾಳಿಯ ಚಕಮಕಿಯಲ್ಲಿ ಮೃತರಾದ ೪೦ ಕ್ಕೂ ಹೆಚ್ಚು ತಾಲಿಬಾನಿ ಉಗ್ರರ ಮೃತದೇಹಗಳು ಶೋತುಲ ಭಾಗದಲ್ಲಿ ಬಿದ್ದಿವೆ. ಅವುಗಳನ್ನು ಹಿಂತಿರುಗಿಸುವ ಪ್ರಯತ್ನ ನಾರ್ದನ್ ಅಲಾಯೆನ್ಸ್ ನಿಂದಾಗುತ್ತಿದೆ. ಆದರೆ ಸ್ವಂತದ ಸಹಚರರ ಮೃತದೇಹಗಳನ್ನು ಬಿಟ್ಟು ತಾಲಿಬಾನಿಗಳು ಪಲಾಯನ ಮಾಡಿದ್ದಾರೆ.