‘ಇಸ್ಲಾಮಿಕ್ ಸ್ಟೇಟ್ ಖುರಾಸಾನ’ನಿಂದ ಭಾರತದ ಮೇಲೆ ಆಕ್ರಮಣವಾಗುವ ಸಾಧ್ಯತೆ

ಇಸ್ಲಾಮಿಕ್ ಸ್ಟೇಟ್ ಖುರಾಸಾನ ಪಾಕ್‍ನ ಸಹಾಯದಿಂದ ಭಾರತದ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಯಿರುವುದರಿಂದ ಅಂತಹ ಆಕ್ರಮಣಗಳನ್ನು ತಡೆಯಲು ಪಾಕ್ ಅನ್ನೇ ನಾಶ ಮಾಡಿ ! – ಸಂಪಾದಕರು 

ನವ ದೆಹಲಿ – ‘ಇಸ್ಲಾಮಿಕ್ ಸ್ಟೇಟ್ ಖುರಾಸಾನ’ನಿಂದ (ಖುರಾಸಾನ’ ಅಂದರೆ ಉತ್ತರ ಪೂರ್ವ ಇರಾನ, ಅಫಘಾನಿಸ್ತಾನ, ಪಾಕಿಸ್ತಾನ, ತುರ್ಕಮೆನಿಸ್ತಾನ ಹಾಗೂ ಉಜಬೆಕಿಸ್ತಾನ ಈ ದೇಶಗಳ ಭೂಪ್ರದೇಶ) ಭಾರತದ ಮೇಲೆ ಭಯೋತ್ಪಾದಕರು ಆಕ್ರಮಣ ನಡೆಸುವ ಸಾಧ್ಯತೆಯಿದೆ, ಎಂಬ ಮಾಹಿತಿ ಗುಪ್ತಚರ ವೀಭಾಗಕ್ಕೆ ಸಿಕ್ಕಿದೆ. ಈ ಸಂಘಟನೆಗಳ ಭಯೋತ್ಪಾದಕರು ಭಾರತದಲ್ಲಿನ ದೇವಾಲಯಗಳು, ರಾಜಕೀಯ ಮುಖಂಡರು ಹಾಗೂ ಜನಸಂದಣಿಯಿರುವ ಸ್ಥಳ ಹಾಗೂ ವಿದೇಶೀಯರನ್ನು ಗುರಿ ಮಾಡುವ ಸಾಧ್ಯತೆಯಿದೆ.

ಅಸ್ಲಮ ಫಾರೂಕೀ ಇವನು ಇಸ್ಲಾಮಿಕ್ ಸ್ಟೇಟ್ ಖುರಾಸಾನದ ಮುಖಂಡನಾಗಿದ್ದಾನೆ. ಫಾರೂಕೀ ಪಾಕ್‍ನ ಖೈಬರಪಖ್ತಾನಖ್ವಾ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಅವನು ‘ಲಷ್ಕರ-ಎ-ತೊಯಬಾ’ದವನಾಗಿದ್ದಾನೆ. ಫಾರೂಕಿ ಇಲ್ಲಿಯವರೆಗೂ ಅಫಘಾನಿಸ್ತಾನದಲ್ಲಿನ ಬಗರಾಮ ಸೆರೆಮನೆಯಲ್ಲಿದ್ದನು. ತಾಲಿಬಾನಿಗಳು ಕಾಬುಲ ಅನ್ನು ವಶಪಡಿಸಿಕೊಂಡ ಬಳಿಕ ಅವನನ್ನು ಬಿಡುಗಡೆ ಮಾಡಲಾಯಿತು. ಸೆರೆಮನೆಯಿಂದ ಹೊರಗೆ ಬಂದ ತಕ್ಷಣ ಅವನು ಕಾಬುಲ ವಿಮಾನ ನಿಲ್ದಾಣದ ಮೇಲೆ ಆತ್ಮಘಾತಕ ಬಾಂಬ್‍ಸ್ಫೋಟ ನಡೆಸಿದ್ದನು.