ಅಮೇರಿಕಾವು ಅಫ್ಘಾನಿಸ್ತಾನದೊಂದಿಗೆ ಯುದ್ಧ ಮಾಡಲು ಓಸಾಮಾ ಬಿನ್ ಲಾಡೆನ್‍ನನ್ನು ಉಪಯೋಗಿಸಿತು ! – ತಾಲಿಬಾನ್

ಅಮೇರಿಕಾವು ಅಫ್ಘಾನಿಸ್ತಾನದಲ್ಲಿ ಏನು ಮಾಡಿತೊ, ಅದನ್ನು ಬೆಂಬಲಿಸಲು ಸಾಧ್ಯವಿಲ್ಲ. ಜೊತೆಗೆ ತಾಲಿಬಾನವೂ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಕೂಡ ಬೆಂಬಲಿಸಲು ಸಾಧ್ಯವಿಲ್ಲ. ಆದ್ದರಿಂದ ತನಗೆ ಸಹಾನುಭೂತಿ ಸಿಗಬೇಕೆಂದು ತಾಲಿಬಾನ್ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆ, ಇದು ಜಗತ್ತಿಗೆ ತಿಳಿದಿದೆ ! – ಸಂಪಾದಕರು 

ಕಾಬುಲ್ – ಅಮೇರಿಕಾದ ಮೇಲೆ ಸಪ್ಟೆಂಬರ್ 11, 2001 ರಲ್ಲಾಗಿದ್ದ ಭಯೋತ್ಪಾದಕ ದಾಳಿಗೆ ಓಸಾಮಾ ಬಿನ್ ಲಾಡೆನ್‍ನು ಮುಖ್ಯ ಸೂತ್ರದಾರನಾಗಿದ್ದನು ಎಂದು ಹೇಳಲಾಗುತ್ತಿದೆ; ಆದರೆ ಈ ಬಗ್ಗೆ ಯಾವುದೇ ರೀತಿಯ ಸಾಕ್ಷಗಳು ಇಲ್ಲ. ಅಮೇರಿಕಾವು ಅಫ್ಘಾನಿಸ್ತಾನದೊಂದಿಗೆ ಯುದ್ಧ ಮಾಡಲು ಆತನನ್ನು ಉಪಯೋಗಿಸಿತ್ತು, ಎಂದು ತಾಲಿಬಾನ್‍ನ ವಕ್ತಾರ ಜಬಿಉಲ್ಲಾಹ ಮುಜಾಹಿದ್‍ನು ಒಂದು ಸಂದರ್ಶನದಲ್ಲಿ ಹೇಳಿದ್ದಾನೆ. ‘ನಾವು, ಅಫ್ಘಾನಿಸ್ತಾನದ ಭೂಮಿಯಲ್ಲಿ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ಸಿಗುವುದಿಲ್ಲ’ ಎಂದು ಸಹ ಅವನು ಸ್ಪಷ್ಟಪಡಿಸಿದ್ದಾನೆ. (ಒಂದು ಭಯೋತ್ಪಾದಕ ಸಂಘಟನೆಯು ಈ ರೀತಿಯ ಆಶ್ವಾಸನೆ ನೀಡುತ್ತದೆ ಎಂಬುದು ಹಾಸ್ಯಾಸ್ಪದವಾಗಿದೆ ! – ಸಂಪಾದಕ)

ಮಹಿಳೆಯರು ಹೆದರಬಾರದು !

ನಾವು ಮಹಿಳೆಯರನ್ನು ಗೌರವಿಸುತ್ತೇವೆ. ಅವರು ನಮ್ಮ ಸಹೋದರಿಯರಾಗಿದ್ದಾರೆ. ಅವರು ಹೆದರಬೇಕಾದ ಅವಶ್ಯಕತೆ ಇಲ್ಲ. ತಾಲಿಬಾನಿಗಳು ದೇಶಕ್ಕಾಗಿ ಹೋರಾಡಿದ್ದಾರೆ. ಮಹಿಳೆಯರು ನಮ್ಮನ್ನು ಗೌರವಿಸಬೇಕು. ಅವರು ಹೆದರಬಾರದು, ಎಂದೂ ಕೂಡ ಜಬಿಉಲ್ಲಾಹನು ಹೇಳಿದನು.

ದೇಶವಾಸಿಗಳು ದೇಶವನ್ನು ಬಿಟ್ಟು ಹೋಗಬೇಕು, ಎಂದು ನಾವು ಬಯಸುವುದಿಲ್ಲ !

ದೇಶವಾಸಿಗಳು ದೇಶವನ್ನು ಬಿಟ್ಟು ಹೋಗಬೇಕು, ಎಂದು ನಾವು ಬಯಸುವುದಿಲ್ಲ. ಅವರು ಈ ಹಿಂದೆ ಏನು ಮಾಡಿದರೋ(ಅಮೇರಿಕಾಗೆ ಸಹಾಯ ಮಾಡಿದರು), ಅದಕ್ಕಾಗಿ ನಾವು ಅವರನ್ನು ಕ್ಷಮಿಸಿದ್ದೇವೆ. ನಮಗೆ ಯುವ ಹಾಗೂ ಶಿಕ್ಷಿತ ಜನರು ರಾಷ್ಷ್ರಕ್ಕಾಗಿ ಬೇಕಾಗಿದ್ದಾರೆ; ಆದರೆ ಅವರಿಗೆ ದೇಶ ದೇಶ ಬಿಟ್ಟು ಹೋಗಲಿಕ್ಕಿದ್ದರೆ ಅದು ಅವರ ಸಮಸ್ಯೆಯಾಗಿದೆ ಎಂದೂ ಹೇಳಿದನು.