ಭಾರತದಲ್ಲಿರುವ ತಾಲಿಬಾನಿ ಪ್ರೇಮಿಗಳು ಈ ವಿಷಯವಾಗಿ ಮಾತನಾಡುವರೇನು ಅಥವಾ ಅವರಿಗೆ ತಾಲಿಬಾನಿಗಳ ಈ ಕೃತ್ಯ ಒಪ್ಪಿಗೆ ಇದೆಯೇ ?
ನವದೆಹಲಿ – ತಾಲಿಬಾನರಿಗೆ ಮಹಿಳೆಯರು ಮನೆಯಿಂದ ಹೊರಗೆ ಬರುವುದೇ ಒಪ್ಪಿಗೆ ಇಲ್ಲದ ಕಾರಣ ಮಹಿಳೆಯರು ಯಾವುದೇ ಕೆಲಸ ಮಾಡುವುದು ಅವರಿಗೆ ಸಹನೆಯಾಗುವುದಿಲ್ಲ. ಮಹಿಳೆಯರು ಎಂದರೆ ತಾಲಿಬಾನಿಗಳಿಗೆ ಕೇವಲ ಭೋಗದ ವಸ್ತುವಾಗಿದ್ದಾರೆ. ಅವರು ಯಾವುದೇ ಮನೆಯಲ್ಲಿರುವ ಮಹಿಳೆಯರನ್ನು ತಮ್ಮ ಭೋಗಕ್ಕಾಗಿ ಹೊತ್ತೊಯ್ಯುತ್ತಾರೆ. ಕಡೆಗೆ ಅವರು ಮಹಿಳೆಯರ ಶವದ ಮೇಲೆ ಸಹ ಅತ್ಯಾಚಾರ ಮಾಡುತ್ತಾರೆ. ಸ್ತ್ರೀ ಬದುಕಿದ್ದಾಳೆಯೋ ಅಥವಾ ಸತ್ತಿದ್ದಾಳೆಯೋ ಇದರಿಂದ ಅವರಿಗೆ ಏನೂ ವ್ಯತ್ಯಾಸ ಅನಿಸುವುದಿಲ್ಲ, ಎಂದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿರುವ ಮುಸ್ಕಾನ್ ಎಂಬ ಮಹಿಳಾ ಪೊಲೀಸ ಅಧಿಕಾರಿ ಈ ಮಾಹಿತಿಯನ್ನು ನೀಡಿದ್ದಾರೆ. ‘ತಾಲಿಬಾನಿಗಳು ಬೆದರಿಕೆ ನೀಡಿದ್ದರಿಂದ ನಾನು ಕೆಲಸ ಬಿಟ್ಟು ಭಾರತಕ್ಕೆ ಬಂದಿರುವೆ’, ಎಂದು ಮುಸ್ಕಾನ್ ಹೇಳಿದ್ದಾರೆ.
“#Taliban members rape dead bodies too. They don’t care whether the person is dead or alive… Can you imagine this?”, reveals a woman who fled #Afghanistan#afghanistanwomenhttps://t.co/ZkrIlqvEC5
— Zee News English (@ZeeNewsEnglish) August 23, 2021
ಅಫ್ಘಾನಿಸ್ತಾನದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮುಸ್ಕಾನ್ ಇವರು ಭಾರತಕ್ಕೆ ಬಂದ ನಂತರ, ‘ಅಫ್ಘಾನಿಸ್ತಾನದ ಪೊಲೀಸ್ ಪಡೆಯಲ್ಲಿ ನಾನು ಕೆಲಸ ಮಾಡುತ್ತಿದ್ದೆ; ಆದರೆ ತಾಲಿಬಾನಿಗಳು ಅಧಿಕಾರ ಪಡೆದ ನಂತರ ಅವರು ನಮ್ಮ ಮನೆಗೆ ಬಂದು ‘ನಾನು ಪೊಲೀಸ್ ಕೆಲಸವನ್ನು ನಿಲ್ಲಿಸದಿದ್ದರೆ ನನ್ನ ಜೊತೆ ನನ್ನ ಕುಟುಂಬವನ್ನು ಕೊಲ್ಲುವೆವು’, ಎಂದು ಬೆದರಿಕೆ ಒಡ್ಡಿದರು ಎಂದು ಹೇಳಿದರು.