ಕೊರೊನಾದ ಮೂರನೇ ಅಲೆಯ ಪ್ರಭಾವವು ಅರಿವಿಗೆ ಬರಲಾರದು !

ಐಐಟಿ ಕಾನ್ಪುರದ ಹಿರಿಯ ವಿಜ್ಞಾನಿ ಪ್ರಾ. ಮಣಿಂದ್ರ ಅಗ್ರವಾಲ್ ಅವರ ಹೇಳಿಕೆ

ಉತ್ತರಪ್ರದೇಶ, ಬಿಹಾರ, ದೆಹಲಿ ಮತ್ತು ಮಧ್ಯಪ್ರದೇಶ ಇವೆಲ್ಲ ಅಕ್ಟೋಬರ್ ತನಕ ಕೊರೊನಾ ಮುಕ್ತವಾಗಲಿವೆ !

ಐಐಟಿ ಕಾನ್ಪುರದ ಹಿರಿಯ ವಿಜ್ಞಾನಿ ಪ್ರಾ. ಮಣಿಂದ್ರ ಅಗ್ರವಾಲ್

ಕಾನ್ಪುರ (ಉತ್ತರಪ್ರದೇಶ) – ಈಗ ಕೊರೊನಾದ ಮೂರನೇ ಅಲೆಯ ಸಾಧ್ಯತೆಯು ಅತ್ಯಲ್ಪವಾಗಿದೆ. ದೊಡ್ಡ ಪ್ರಮಾಣದಲ್ಲಿ ಲಸಿಕೆಕರಣವಾಗಿರುವುದರಿಂದ ಮೂರನೆ ಅಲೆಯ ಪ್ರಭಾವವು ಅಷ್ಟೇನೂ ಅರಿವಿಗೆ ಬರುವುದಿಲ್ಲ ಎಂದು ಐಐಟಿ ಕಾನ್ಪುರದ ಹಿರಿಯ ವಿಜ್ಞಾನಿ ಪ್ರಾ. ಮಣಿಂದ್ರ ಅಗ್ರವಾಲ್ ಇವರು ಇದನ್ನು ಗಣಿತದ ಮಾದರಿಯ ಆಧಾರದಲ್ಲಿ ದಾವೆ ಮಾಡಿದ್ದಾರೆ.

1. ಪದ್ಮಶ್ರೀ ಪ್ರಶಸ್ತಿ ವಿಜೇತ ಪ್ರಾ. ಅಗ್ರವಾಲ್ ಅವರು, ಇನ್ನು ಕೊರೊನಾ ಸೋಂಕಿನ ವೇಗ ಕಡಿಮೆ ಆಗುವುದು. ಹಾಗೆಯೇ, ಅಕ್ಟೊಬರ್ ತಿಂಗಳ ತನಕ ಉತ್ತರಪ್ರದೇಶ, ಬಿಹಾರ, ದೆಹಲಿ ಮತ್ತು ಮಧ್ಯಪ್ರದೇಶದ ರಾಜ್ಯಗಳು ಕೊರೊನಾ ಸೋಂಕಿನಿಂದ ಮುಕ್ತವಾಗಲಿವೆ.

2. ಪ್ರಾ. ಅಗ್ರವಾಲ್ ಇವರು, ಅಕ್ಟೋಬರ್ ವೇಳೆಗೆ, ದೇಶದಲ್ಲಿ ಕೊರೊನಾದ ಸಕ್ರಿಯ ರೋಗಿಗಳ ಸಂಖ್ಯೆ ಸುಮಾರು 15,000 ರಷ್ಟು ಇರಲಿದೆ. ಏಕೆಂದರೆ ಅಸ್ಸಾಂ, ಅರುಣಾಚಲ ಪ್ರದೇಶ, ಪುರ್ವೋತ್ತರದ ರಾಜ್ಯಗಳಾದ ತೆಲಂಗಾಣಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಸೋಂಕು ಇರಲಿದೆ ಎಂದು ಹೇಳಿದರು.

3. ಪ್ರಾ. ಮಣಿಂದ್ರ ಅಗ್ರವಾಲ್ ಇವರು ಕೊರೊನಾದ ಎರಡನೇ ಅಲೆಯ ಬಗ್ಗೆ ನೀಡಿದ ಅವರ ಹೇಳಿಕೆಯು ಹೆಚ್ಚುಕಮ್ಮಿ ಸಂಪೂರ್ಣ ನಿಖರವಾಗಿತ್ತು. ಪ್ರಾ. ಅಗ್ರವಾಲ್ ಅವರ ಹೇಳಿಕೆಗನುಸಾರ, ಸಂಚಾರ ನಿಷೇಧ ಮತ್ತು ವ್ಯಾಕ್ಸಿನೇಷನ್‍ನಿಂದ ತುಂಬಾ ಲಾಭವಾಗಿದೆ.

ಕೊರೊನಾದ ಮೂರನೆಯ ಅಲೆಯು ಇತರ 2 ಅಲೆಗಳಿಗಿಂತ ಸೌಮ್ಯವಾಗಿರಲಿದೆ ! – ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ತಜ್ಞರ ಸಮಿತಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ತಜ್ಞರ ಸಮಿತಿಯು ಕೊರೊನಾದ ಮೂರನೆಯ ಅಲೆಯಿಂದ ಮಕ್ಕಳಿಗೆ ಹೆಚ್ಚಿನ ಅಪಾಯವಿದೆ ಎಂದು ಹೇಳಿದೆ. ಅಲ್ಲದೆ, ಕೊರೊನಾದ ಮೂರನೇ ಅಲೆಯು ಅಕ್ಟೋಬರ್ ನಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು. ಈ ಅಲೆಯಲ್ಲಿ ಚಿಕ್ಕ ಮಕ್ಕಳಿಗೆ ಹೆಚ್ಚಿನ ಅಪಾಯವಿದೆ. ಎಷ್ಟು ಜಾಗರೂಕತೆ ವಹಿಸಿದರೂ ಕೊರೊನಾದ ಮೂರನೆಯ ಅಲೆಯು ಅಕ್ಟೋಬರ್ ಕೊನೆಯ ತನಕ ಗರಿಷ್ಠ ಪ್ರಮಾಣ ತಲುಪುವ ಸಾಧ್ಯತೆಯಿದೆ; ಆದರೆ ಕೊರೊನಾದ ಮೂರನೇ ಅಲೆಯು ಇತರ ಎರಡು ಅಲೆಗಳಿಗಿಂತ ಸೌಮ್ಯವಾಗಿರಲಿದೆ ಎಂದು ಸಮಿತಿ ಹೇಳಿದೆ.