* ಭವಿಷ್ಯದಲ್ಲಿ ಇಂತಹ ಸ್ಥಿತಿ ಬರದಿರಲು ಸರಕಾರವು ಸಮಾಜಕ್ಕೆ ಸಾಧನೆಯನ್ನು ಕಲಿಸಿ ಅವರಲ್ಲಿ ಸಂಯಮ ಮತ್ತು ನೈತಿಕತೆಯನ್ನು ನಿರ್ಮಿಸಬೇಕಿದೆ ! – ಸಂಪಾದಕರು * ಸದ್ಯ ದೇಶದಲ್ಲಿ ನಾಲ್ಕು ಪುರುಷಾರ್ಥಗಳ ಪೈಕಿ ಕೇವಲ ‘ಅರ್ಥ’ಮತ್ತು ‘ಕಾಮ’ ಇವುಗಳ ಪ್ರಾಬಲ್ಯವು ಹೆಚ್ಚಿರುವುದರಿಂದ ‘ಧರ್ಮ’ ಮತ್ತು ‘ಮೋಕ್ಷ’ದ ಬಗ್ಗೆ ಯಾರೂ ವಿಚಾರ ಮಾಡುವುದಿಲ್ಲ, ಇದಕ್ಕಾಗಿ ಎಲ್ಲ ಪಕ್ಷಗಳ ರಾಜಕಾರಣಿಗಳು ಜವಾಬ್ದಾರರಾಗಿದ್ದಾರೆ ! – ಸಂಪಾದಕರು |
ಭೋಪಾಲ (ಮಧ್ಯಪ್ರದೇಶ) – ಭಾರತವು ಹಿಂದಿನ ವಿಚಾರ ಸರಣಿಯ ಸಮಾಜವಾಗಿದೆ. ಭಾರತದಲ್ಲಿ ಸಾಮಾಜಿಕ ವಿಚಾರ ಸರಣಿಯಲ್ಲಿ ಇಂದಿಗೂ ಯಾವುದೇ ಧರ್ಮದ ಅವಿವಾಹಿತ ತರುಣಿಯು ಕೇವಲ ಮೋಜಿಗಾಗಿ ಯುವಕರೊಂದಿಗೆ ಶಾರೀರಿಕ ಸಂಬಂಧವನ್ನು ಇಡುವಷ್ಟು ಮುಂದುವರಿಕೆ ಆಗಿಲ್ಲ. ವಿವಾಹದ ಅಥವಾ ಭವಿಷ್ಯದ ಸಂದರ್ಭದಲ್ಲಿ ಏನಾದರೂ ಆಶ್ವಾಸನೆಯನ್ನು ನೀಡಿದ್ದಲ್ಲಿ ಮಾತ್ರ ಇಂತಹ ಘಟನೆಗಳು ನಡೆಯಬಹುದು ಎಂದು ಭೋಪಾಲದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸುಬೋಧ ಅಭ್ಯಂಕರ ಇವರು ಒಂದು ಅರ್ಜಿಯ ಆಲಿಕೆಯ ಸಮಯದಲ್ಲಿ ಹೇಳಿದ್ದಾರೆ. ಈ ಸಮಯದಲ್ಲಿ ನ್ಯಾಯಾಲಯವು ಬಲಾತ್ಕಾರದ ಪ್ರಕರಣದಲ್ಲಿ ಆರೋಪಿಯ ಜಾಮೀನಿನ ಅರ್ಜಿಯನ್ನು ತಿರಸ್ಕರಿಸಿತು.
Unmarried Indian girls don’t indulge in carnal activities unless promised marriage: MP HC https://t.co/tpFyhZEruf
— Republic (@republic) August 15, 2021
1. ನ್ಯಾಯಾಧೀಶರಾದ ಸುಬೋಧ ಅಭ್ಯಂಕರ ಇವರು ಮುಂದುವರಿದು ‘ಶಾರೀರಿಕ ಸಂಬಂಧವನ್ನಿರಿಸುವ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಯುವಕನೂ ಅದರ ಪರಿಣಾಮ ಏನಾಗಬಹುದು ಎಂಬುದರ ಅರಿವನ್ನು ಇಟ್ಟುಕೊಂಡು ಅನಿರೀಕ್ಷಿತ ಪ್ರಸಂಗಗಳು ಎದುರಾದರೆ ಅವುಗಳನ್ನು ಎದುರಿಸಲು ಸಕ್ಷಮವಾಗಿರುವುದು ಅವಶ್ಯಕವಾಗಿದೆ. ಇಂತಹ ಪ್ರಕರಣಗಳಲ್ಲಿ ಯಾವಾಗಲೂ ಯುವತಿಯರಿಗೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ; ಏಕೆಂದರೆ ಗರ್ಭಿಣಿಯಾಗುವ ಮತ್ತು ಈ ಸಂಬಂಧದ ಬಗ್ಗೆ ತಿಳಿದರೆ ಸಮಾಜದಿಂದ ಕಟು ಶಬ್ದಗಳಿಂದ ಟೀಕೆಗೊಳಗಾಗುವ ಭಯವು ಆಕೆಗೆ ಇರುತ್ತದೆ; ಆದರೆ ಯುವಕರು ಮುಂದೆ ಆಗುವ ಪರಿಣಾಮಗಳ ವಿಚಾರ ಮಾಡಿ ಅವುಗಳನ್ನು ಎದುರಿಸಲು ಸಿದ್ದರಿರಬೇಕಿದೆ. ಕೇವಲ ಒಪ್ಪಿಗೆ ಮೇರೆಗೆ ಶಾರೀರಿಕ ಸಂಬಂಧವನ್ನು ಇಟ್ಟು ನಂತರ ಆಕೆಯನ್ನು ನೀವು ಬಿಟ್ಟು ಬಿಡಲಾಗದು’ ಎಂದು ಹೇಳಿದ್ದಾರೆ.
2. ಉಚ್ಚನ್ಯಾಯಾಲಯದಲ್ಲಿ ದಾಖಲಿಸಲಾದ ಈ ಪ್ರಕರಣದಲ್ಲಿ ಆರೋಪಿ ಯುವಕನು ವಿವಾಹದ ಆಮಿಷವೊಡ್ಡಿ ಯುವತಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಇಲ್ಲಿ ಬಲಾತ್ಕಾರ, ಅಪಹರಣ ಇತ್ಯಾದಿ ಕಲಂಗಳನ್ನು ಒಳಗೊಂಡು ಅಪರಾಧವನ್ನು ದಾಖಲಿಸಲಾಗಿದೆ; ಆದರೆ ಆರೋಪಿಯ ವಕೀಲರು ‘ಕಳೆದ 2 ವರ್ಷಗಳಿಂದ ಆರೋಪಿ ಮತ್ತು ಪೀಡಿತೆಯ ನಡುವೆ ಸಂಬಂಧವಿತ್ತು. ವಿವಾಹದ ಆಶ್ವಾಸನೆಯ ನಂತರ ಈ 21 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನ ಯುವತಿಯು ಸ್ವ ಇಚ್ಛೆಯಿಂದಲೇ ಶಾರೀರಿಕ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ಈ ಯುವತಿಯು ಈ ಪ್ರಕರಣವು 3 ವರ್ಷಗಳ ಹಿಂದೆಯೇ ಘಟಿಸಿದೆ ಎಂದು ಹೇಳುತ್ತಿದ್ದಾಳೆ’ ಎಂದು ಹೇಳಿದ್ದಾರೆ.
3. ಇವರಿಬ್ಬರ ಪಾಲಕರು ಇಬ್ಬರು ಬೇರೆ ಬೇರೆ ಧರ್ಮದವರಾಗಿದ್ದರಿಂದ ಇವರ ವಿವಾಹವನ್ನು ವಿರೋಧಿಸಿರುವ ಬಗ್ಗೆ ನ್ಯಾಯಾಲಯದಲ್ಲಿ ಹೇಳಿದ್ದಾರೆ. ‘ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಶಾರೀರಿಕ ಸಂಬಂಧವನ್ನು ಇಟ್ಟುಕೊಂಡಿದ್ದರಿಂದ ಇದನ್ನು ಬಲಾತ್ಕಾರ ಎಂದು ಹೇಳಲಾಗುವುದಿಲ್ಲ’ ಎಂಬ ಯುಕ್ತಿ ವಾದವನ್ನು ಮಂಡಿಸಲಾಯಿತು.
4. ಆರೋಪಿಯು ಯುವತಿಗೆ ‘ನನ್ನ ವಿವಾಹವು ಬೇರೆ ಕಡೆ ನಿಶ್ಚಯವಾಗಿರುವರಿಂದ ನಾನು ನಿನ್ನೊಂದಿಗೆ ವಿವಾಹವಾಗಲು ಸಾಧ್ಯವಿಲ್ಲ’ ಎಂದು ಹೇಳಿದ್ದಾನೆ. ಅನಂತರ ಯುವತಿಯು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.
5. ನ್ಯಾಯಾಲಯವು ‘ಈ ಯುವತಿಯು ಆತ್ಮಹತ್ಯೆಗೆ ಪ್ರಯತ್ನಿಸಿರುವುದರಿಂದ ಆಕೆಯು ಈ ಸಂಬಂಧದ ಬಗ್ಗೆ ಗಂಭೀರವಾಗಿದ್ದಳು ಮತ್ತು ಯಾವುದೇ ಮೋಜಿಗಾಗಿ ಶಾರೀರಿಕ ಸಂಬಂಧವನ್ನು ಇಡಲಿಲ್ಲ’ ಎಂಬ ನಿಷ್ಕರ್ಷವನ್ನು ತೆಗೆಯುತ್ತ ಆರೋಪಿಯ ಜಾಮೀನನ್ನು ತಿರಸ್ಕರಿಸಿತು. ನ್ಯಾಯಾಲಯವು ‘ಬಲಾತ್ಕಾರ ಪೀಡಿತೆಯು ಪ್ರತಿಬಾರಿಯೂ ಆತ್ಮಹತ್ಯೆಗೆ ಪ್ರಯತ್ನಿಸುವ ಆವಶ್ಯಕತೆ ಇಲ್ಲ’ ಎಂದೂ ಹೇಳಿದೆ.