‘ಆಗಸ್ಟ್ 14 ಈ ದಿನವನ್ನು `ವಿಭಜನಾ ವೇದನಾ ಸ್ಮೃತಿದಿನ’ ಎಂದು ಘೋಷಿಸಿ ಭಾರತವು ಧಾರ್ಮಿಕ ದ್ವೇಷವನ್ನು ಹರಡುತ್ತಿದೆ !'(ಅಂತೆ) – ಪಾಕ್ ಆರೋಪ

ಆಗಸ್ಟ್ 14 ಇದು ಪಾಕ್ ಸ್ವಾತಂತ್ರ್ಯ ದಿನವಾಗಿದೆ. ಹಾಗಾಗಿ ಪಾಕ್‍ಗೆ ಹೊಟ್ಟೆ ಉರಿಯುವುದು ಸಹಜ; ಏಕೆಂದರೆ ಈ ಸ್ವಾತಂತ್ರ್ಯವನ್ನು 10 ಲಕ್ಷ ಹಿಂದೂಗಳ ಹತ್ಯೆ ಮತ್ತು ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿ ಅವರು ಗಳಿಸಿದ್ದಾರೆ ಮತ್ತು ಅದನ್ನೇ ಭಾರತವು ತೋರಿಸಲು ಪ್ರಯತ್ನಿಸುತ್ತಿದೆ. – ಸಂಪಾದಕರು

ಪ್ರಧಾನಮಂತ್ರಿ ನರೇಂದ್ರ ಮೋದಿ

ಇಸ್ಲಾಮಾಬಾದ್ (ಪಾಕಿಸ್ತಾನ) – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 14 ಈ ದಿನವನ್ನು ‘ವಿಭಜನೆ ವೇದನಾ ಸ್ಮೃತಿ ದಿನ’ ಎಂದು ಗುರುತಿಸಲಾಗುವುದು, ಎಂದು ಘೋಷಿಸಿದ್ದಾರೆ. ಈ ಬಗ್ಗೆ ಪಾಕ್, ಪ್ರತಿಕ್ರಿಯೆ ನೀಡುವಾಗ ‘ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಸರಕಾರ ಇವು ಚುನಾವಣೆಯಲ್ಲಿ ಲಾಭಗಳಿಸಲು ಧಾರ್ಮಿಕ ದ್ವೇಷವನ್ನು ಹರಡುತ್ತಿವೆ.’ ಎಂದು ಹೇಳಿದೆ. (ಹಿಂದೂಗಳ ಹತ್ಯೆ ಮಾಡುವುದು, ಹಿಂದೂ ಹೆಣ್ಣು ಮಕ್ಕಳ ಅಪಹರಣ ಮಾಡುವುದು ಅವರನ್ನು ಬಲವಂತವಾಗಿ ಮತಾಂತರ ಮಾಡುವುದು ಇತ್ಯಾದಿ ವಿಷಯಗಳಿಂದ ಯಾರು ಧಾರ್ಮಿಕ ದ್ವೇಷ ಹರಡುತ್ತಿದ್ದಾರೆಂಬುದು ಇಡೀ ಜಗತ್ತಿಗೆ ತಿಳಿದಿದೆ ! – ಸಂಪಾದಕರು)

ಪಾಕ್‍ನ ವಿದೇಶಾಂಗ ಸಚಿವಾಲಯವು ಟ್ವೀಟ್ ಮಾಡುತ್ತಾ, ಹಿಂದುತ್ವ ವಿಚಾರಧಾರೆಯ ಅನುಯಾಯಿಗಳು ದ್ವೇಷ ಮತ್ತು ಹಿಂಸಾಚಾರ ಇವುಗಳ ಸಮರ್ಥಕರಾಗಿದ್ದಾರೆ. ಇತಿಹಾಸವನ್ನು ತಿರುಚಿ ಧಾರ್ಮಿಕ ದ್ವೇಷ ಹರಡುವುದು ಸಂಘ ಮತ್ತು ಬಿಜೆಪಿಯ ವೈಶಿಷ್ಟ್ಯವಾಗಿದೆ. ಹಳೆ ಗಾಯಗಳನ್ನು ಮಾಯುವ ಬದಲು ಚುನಾವಣೆಯಲ್ಲಿ ಲಾಭಗಳಿಸಲು ಅವರು ಯಾವ ಮಟ್ಟಕ್ಕೂ ಇಳಿಯಬಹುದು. ಭಾರತದ ಸದ್ ಭಾವನೆಯಿರುವ ಜನರು ಈ ರಾಜಕೀಯ ಪ್ರಯತ್ನವನ್ನು ಸಂಪೂರ್ಣವಾಗಿ ನಿರಾಕರಿಸುವವರು ಎಂದು ನಮಗೆ ವಿಶ್ವಾಸವಿದೆ ಎಂದಿದೆ.