ಮನುಷ್ಯನು ಮೂಲದಲ್ಲಿಯೇ ಮತ್ತು ಸ್ವಭಾವದಿಂದಲೂ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡತೆಯ ಮೇಲೆ ರಾಜದಂಡದ ಅಂಕುಶ ಇಲ್ಲದಿದ್ದರೆ, ಅವನು ಯಾವುದೇ ಬಂಧನಗಳು ಇಲ್ಲದವನಾಗಲು ಸಮಯ ತಾಗುವುದಿಲ್ಲ. ಇಂತಹ ಮನುಷ್ಯನನ್ನು ನಿಯಂತ್ರಿಸುವುದು ಧರ್ಮದ ಹಾಗೂ ದಂಡದ ಕರ್ತವ್ಯವಾಗಿದೆ. ಒಂದು ವೇಳೆ ರಾಜದಂಡವು ತನ್ನ ಈ ಕಾರ್ಯವನ್ನು ಮಾಡದಿದ್ದರೆ ಸಮಾಜದಲ್ಲಿ ‘ಮತ್ಸ್ಯ ನ್ಯಾಯ (ದೊಡ್ಡ ಮೀನು ಸಣ್ಣ ಮೀನನ್ನು ನುಂಗುತ್ತದೆ)ವು ಹೆಚ್ಚಾಗುತ್ತದೆ. – ಗುರುದೇವ ಡಾ. ಕಾಟೇಸ್ವಾಮೀಜಿ (ಸಾಪ್ತಾಹಿಕ ಸನಾತನ ಚಿಂತನ, ೬.೧.೨೦೧೧)