ಗುರುಪೂರ್ಣಿಮೆ ನಿಮಿತ್ತ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಂದ ಅರೆಯೂರು ಗ್ರಾಮದ ಶ್ರೀ ವೈದ್ಯನಾಥೇಶ್ವರನಿಗೆ ಅಭಿಷೇಕ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ತುಮಕೂರು – ಪರಾತ್ಪರ ಗುರು ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಜುಲೈ ೨೩ ರಂದು ಸಪ್ತರ್ಷಿಗಳ ಆಜ್ಞೆಯಂತೆ ಗುರುಪೂರ್ಣಿಮೆಯ ನಿಮಿತ್ತದಿಂದ ಅರೆಯೂರು ಗ್ರಾಮದ ಔಷಧಿಗಳ ದೇವತೆ ಶ್ರೀ ವೈದ್ಯನಾಥೇಶ್ವರನ ದರ್ಶನವನ್ನು ಪಡೆದುಕೊಂಡು ಅಭಿಷೇಕ ಪೂಜೆಯನ್ನು ಮಾಡಿದರು.

ಗುರುಪೂರ್ಣಿಮೆಯ ನಿಮಿತ್ತದಿಂದ ರಾಮನಾಥಿ (ಗೋವಾ) ಸನಾತನದ ಆಶ್ರಮದಲ್ಲಿ ಬೆಳಗ್ಗೆ ೧೧.೦೦ ರಿಂದ ೧೨.೦೦ ಗಂಟೆಯವರೆಗೆ ಪರಾತ್ಪರ ಗುರು ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಗುರುಗಳ ಪೂಜೆಯನ್ನು ಮಾಡಿದರು. ಇದೇ ಸಮಯದಲ್ಲಿಯೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅರೆಯೂರಿನಲ್ಲಿ ಶ್ರೀ ವೈದ್ಯನಾಥೇಶ್ವರನ ದರ್ಶನವನ್ನು ಪಡೆದುಕೊಂಡು ಅಭಿಷೇಕ ಪೂಜೆಯನ್ನು ಮಾಡಲು ಸಪ್ತರ್ಷಿಗಳು ಹೇಳಿದ್ದರು. ಅದರಂತೆ ವಿಧಿವತ್ತಾಗಿ ಪೂಜೆಯು ನೆರವೇರಿತು. ಈ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನದ ಸಾಧಕರ ಶಾರೀರಿಕ ಆರೋಗ್ಯ ಚೆನ್ನಾಗಿರಬೇಕು. ಹಾಗೆಯೇ ಶೀಘ್ರಾತಿಶೀಘ್ರ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಎಂದು ಪ್ರಾರ್ಥಿಸಿದರು.