ಕಾಂದಳಿ (ಪುಣೆ) – ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಸ್ಥಳವಿರುವ ಕಾಂದಳಿಯಲ್ಲಿ ೨೩ ಜುಲೈರಂದು ಕೊರೊನಾದ ಎಲ್ಲ ನಿಯಮಗಳನ್ನು ಪಾಲಿಸಿ ಭಾವಪೂರ್ಣ ವಾತಾವರಣದಲ್ಲಿ ಗುರುಪೂರ್ಣಿಮೆ ಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ.ಪೂ. ಬಾಬಾರವರ ಸುಪುತ್ರ ಪೂ. ನಂದು ಕಸರೇಕರ ಇವರ ಹಸ್ತದಿಂದ ಪ.ಪೂ. ಬಾಬಾರವರ ಸಮಾಧಿಯ ಮೇಲೆ ಅಭಿಷೇಕ ಮಾಡಲಾಯಿತು. ವ್ಯಾಸಪೂಜೆ ಮತ್ತು ಸತ್ಯನಾರಾಯಣ ಪೂಜೆಯನ್ನು ಕೂಡ ಮಾಡಲಾಯಿತು. ಈ ಸಮಯದಲ್ಲಿ ಸನಾತನದ ‘ಪ.ಪೂ. ಭಕ್ತರಾಜ ಮಹಾರಾಜರ ಚೈತನ್ಯಮಯ ವಾಣಿಯಿಂದ ಸಾಕಾರಗೊಂಡ ಭಜನೆಗಳು ಮತ್ತು ಅವುಗಳ ಭಾವಾರ್ಥ (ಭಾಗ ೧) ಈ ಚೈತನ್ಯದಾಯಕ ಗ್ರಂಥವನ್ನು ಪೂ. (ಶ್ರೀಮತಿ) ಜೀಜಿ (ಪ.ಪೂ. ಬಾಬಾರ ಪತ್ನಿ) ಇವರ ಶುಭ ಹಸ್ತದಿಂದ ಪ್ರಕಾಶನಗೊಳಿಸಲಾಯಿತು. ಪ.ಪೂ. ಬಾಬಾರವರ ಭಕ್ತ ದಿ. ಚಂದ್ರಕಾಂತ (ದಾದಾ) ದಳವಿ ಇವರು ಪ.ಪೂ. ಭಕ್ತರಾಜ ಮಹಾರಾಜರು ನಿರ್ದೇಶಿಸಿದ ಭಾವಾರ್ಥಗಳ ಲೇಖನ ಮಾಡಿದ್ದರು, ಇದಕ್ಕೆ ದಿ. ದಳವಿ ಇವರ ಪುತ್ರಿ ಹಾಗೂ ಪ.ಪೂ. ಬಾಬಾರ ಭಕ್ತೆ ಸೌ. ಉಲ್ಕಾ ಬಗವಾಡಕರ ಇವರು ಸಹಾಯ ಮಾಡಿದ್ದರು. ಈ ಪ್ರಸಂಗದಲ್ಲಿ ಮನೋಗತವನ್ನು ವ್ಯಕ್ತಪಡಿಸುವಾಗ ಸೌ. ಉಲ್ಕಾ ಬಗವಾಡಕರ ಇವರು ‘ಈ ಗ್ರಂಥವನ್ನು ಪ್ರಕಾಶನಗೊಳಿಸಲು ಡಾ. ಜಯಂತ ಆಠವಲೆ ಮತ್ತು ಅವರ ಪತ್ನಿ ಡಾ. (ಸೌ.) ಕುಂದಾ ಇವರ ಅಮೂಲ್ಯ ಸಹಕಾರ ಲಭಿಸಿತು. ಅದಕ್ಕಾಗಿ ನಾನು ಅವರಿಗೆ ಕೃತಜ್ಞಳಾಗಿದ್ದೇನೆ. ನನ್ನ ತಂದೆಯವರ (ದಿ. ದಾದಾ ದಳವಿಯವರ) ಗ್ರಂಥವನ್ನು ಗುರುಪೂರ್ಣಿಮೆಯ ದಿನದಂದು ಗುರುಗಳ ಸಮಾಧಿಸ್ಥಳದಲ್ಲಿ ಪ್ರಕಾಶನಗೊಳಿಸುವ ಭಾಗ್ಯ ದೊರಕಿದ್ದು ಸುವರ್ಣಕ್ಷಣವಾಗಿದೆ ಎಂದರು.