ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಡಾ. ಜಯಂತ ಆಠವಲೆಯವರ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಇಂದೂರಿನ (ಮಧ್ಯಪ್ರದೇಶ) ಭಕ್ತವಾತ್ಸಲ್ಯಾಶ್ರಮದಲ್ಲಿ ಜುಲೈ ೨೨ ಮತ್ತು ೨೩ ರಂದು ಕೊರೊನಾದ ಎಲ್ಲ ನಿಯಮಗಳನ್ನು ಪಾಲಿಸಿ ಗುರುಪೂರ್ಣಿಮಾ ಉತ್ಸವವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು. ಜುಲೈ ೨೨ ರಂದು ಡಾ. ಬಾಂಡೆ ಇವರ ಹಸ್ತದಿಂದ ಉಜ್ಜೈನಿಯ ಶ್ರೀ. ವಿಠ್ಠಲ ಪಾಗೆ ಇವರು ಬರೆದ ‘ನಾಥ ಮಾಝಾ ಭಕ್ತರಾಜ ಈ ಗ್ರಂಥದ ನಾಲ್ಕನೇಯ ಆವೃತ್ತಿಯ ಹಾಗೂ ಡಾ. (ಸೌ.) ಕುಂದಾ ಆಠವಲೆಯವರು ಪ.ಪೂ. ಭಕ್ತರಾಜ ಮಹಾರಾಜರ ವಿಷಯದಲ್ಲಿ ಮತ್ತು ಪ.ಪೂ. ರಾಮಾನಂದ ಮಹಾರಾಜರ ವಿಷಯದಲ್ಲಿ ಬರೆದ ಗ್ರಂಥಗಳ ೧ ರಿಂದ ೪ ಖಂಡಗಳನ್ನು ಪ್ರಕಾಶನಗೊಳಿಸಲಾಯಿತು.
ಈ ಕಾರ್ಯಕ್ರಮವನ್ನು ‘ಆನ್‌ಲೈನ್ ಮೂಲಕ ಪ್ರಕ್ಷೇಪಣೆ ಮಾಡಲಾಯಿತು. ಗ್ರಂಥ ಪ್ರಕಾಶನ ಕಾರ್ಯಕ್ರಮದ ಬಳಿಕ ೧೯೯೫ ನೇ ಇಸವಿಯಲ್ಲಿ ಫೆಬ್ರುವರಿ ೮ ಮತ್ತು ೯ ರಂದು ಜರುಗಿದ ಪ.ಪೂ. ಭಕ್ತರಾಜ ಮಹಾರಾಜರ ಅಮೃತ ಮಹೋತ್ಸವ ಕಾರ್ಯಕ್ರಮದ ಧ್ವನಿಚಿತ್ರ ಮುದ್ರಿಕೆಯನ್ನು ಪ್ರಸಾರ ಮಾಡಲಾಯಿತು.
ಭಾವಪೂರ್ಣ ನೆರವೇರಿದ ವ್ಯಾಸಪೂಜೆ
ಜುಲೈ ೨೩ ರಂದು ಬೆಳಗ್ಗೆ ೮ ಗಂಟೆಗೆ ಭಾವಪೂರ್ಣ ವಾತಾವರಣದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ವ್ಯಾಸ ಪೂಜೆಯನ್ನು ನಡೆಸಲಾಯಿತು. ತದನಂತರ ಸ್ತವನ ಮಂಜಿರಿ ಮತ್ತು ರಾಮಾನಂದ ಬಾವನಿ ಪಠಣದ ಬಳಿಕ ಶ್ರೀಗಳ ಪಾದುಕೆಗಳ ಮೇಲೆ ಅಭಿಷೇಕ, ಪೂಜೆ ಮತ್ತು ಆರತಿಯನ್ನು ಮಾಡಲಾಯಿತು.
ಗುರುಗಳ ಚರಿತ್ರೆಯ ನಾಲ್ಕನೇಯ ಆವೃತ್ತಿಯೊಂದಿಗೆ ನನ್ನ ಗ್ರಂಥಗಳ ಪ್ರಕಾಶನ ಆಗುವುದು ನನ್ನ ಜೀವನದ ಪರಮಭಾಗ್ಯದ ದಿನ ! – ಡಾ. (ಸೌ.) ಕುಂದಾ ಆಠವಲೆಇಂದು ನನ್ನ ಗುರುಗಳ ಚರಿತ್ರೆಯ ಗ್ರಂಥದ ನಾಲ್ಕನೇಯ ಆವೃತ್ತಿ ಪ್ರಕಾಶನಗೊಳ್ಳುತ್ತಿರುವಾಗ, ನನ್ನ ಗ್ರಂಥ ಪ್ರಕಾಶನಗೊಳ್ಳುತ್ತಿರುವುದು ನನ್ನ ಜೀವನದ ಪರಮಭಾಗ್ಯದ ದಿನವಾಗಿದೆ. ಪ.ಪೂ. ಭಕ್ತರಾಜರ ಕುರಿತು ನಾವು ಅನುಭವಿಸಿದ ದಿನಗಳು ಇತಿಹಾಸವಾಗಿದೆ. ಮುಂದಿನ ಪೀಳಿಗೆಯವರಿಗೆ ‘ಗುರುಗಳು ಹೇಗಿರುತ್ತಾರೆ, ಅವರ ಜೀವನ ಹೇಗಿರುತ್ತದೆ, ಎಂದು ತಿಳಿಯಬೇಕು ಎಂದು ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ನನಗೆ ಅದನ್ನು ಬರೆಯುವಂತೆ ತಿಳಿಸಿದ್ದರಿಂದ ನಾನು ಈ ಗ್ರಂಥವನ್ನು ಬರೆದಿದ್ದೇನೆ. |