ಮಡಿಕೇರಿಯಲ್ಲಿ ಸೈನಿಕ ಮತ್ತು ಅವರ ಕುಟುಂಬದ ಮೇಲೆ ಮತಾಂಧರು ದಾಳಿ ಮಾಡಿದ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಿ

ಶ್ರೀ. ಮೋಹನ ಗೌಡ

ಇತ್ತೀಚೆಗೆ ಮಡಿಕೇರಿಯಲ್ಲಿ ಓರ್ವ ಸೈನಿಕ ಮತ್ತು ಅವರ ಕುಟುಂಬದ ಮೇಲೆ ಕೆಲವು ಮತಾಂಧರು ಮಾರಣಾಂತಿಕ ದಾಳಿ ಮಾಡಿರುವುದು ಅತ್ಯಂತ ಗಂಭೀರವಾದ ಘಟನೆಯಾಗಿದ್ದು. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಈ ಪ್ರಕರಣದ ಬಗ್ಗೆ ಪೊಲೀಸರು ಸೂಕ್ತ ತನಿಖೆ ಮಾಡಿ ತಪ್ಪಿತಸ್ತರಿಗೆ ಸೂಕ್ತ ಶಿಕ್ಷೆಯನ್ನು ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.