೭೯ ನೇ ವಯಸ್ಸಿನಲ್ಲಿಯೂ ಚರ್ಮದ ಮೇಲೆ ವಿಶೇಷ ಸುಕ್ಕುಗಳು ಇಲ್ಲದಿರುವುದು, ಇದು ಪರಾತ್ಪರ ಗುರು ಡಾ. ಆಠವಲೆಯವರ ದೈವೀ ವೈಶಿಷ್ಟ್ಯವಾಗಿದೆ !

ಪರಾತ್ಪರ ಗುರು ಡಾ. ಆಠವಲೆ

ಇದು ಪರಾತ್ಪರ ಗುರು ಡಾ. ಆಠವಲೆಯವರ ೭೯ ನೇ ವಯಸ್ಸಿನ ಛಾಯಾಚಿತ್ರವಾಗಿದೆ. ಆದರೂ ಅದರಲ್ಲಿ ‘ಚರ್ಮದ ಮೇಲಿನ ಸುಕ್ಕು, ಗಲ್ಲದ ಚರ್ಮವು ಕೆಳಗೆ ಜೋತು ಬೀಳುವುದು, ಮುಖದ ಮೇಲೆ ದೀರ್ಘಕಾಲದ ಅನಾರೋಗ್ಯದ ಅಥವಾ ಆಯಾಸದ ಲಕ್ಷಣಗಳು, ವಯಸ್ಸಾದ ವ್ಯಕ್ತಿಗಳಲ್ಲಿ ಕಾಣಿಸುವ ಒಂದು ರೀತಿಯ ನಿಸ್ತೇಜತನ’, ಇಂತಹ ಸಾಮಾನ್ಯ ವಯಸ್ಸಾದವರ ಲಕ್ಷಣಗಳು ಕಾಣಿಸುವುದಿಲ್ಲ. ತದ್ವಿರುದ್ಧ ಈ ವಯಸ್ಸಿನಲ್ಲಿಯೂ ಅವರ ಚರ್ಮವು ತುಂಬಾ ನುಣುಪಾಗಿದೆ. ಪ್ರಾಣಶಕ್ತಿಯು ಬಹಳ ಕಡಿಮೆ ಇದ್ದರೂ ಅವರ ಮುಖವು ತುಂಬ ತೇಜಸ್ವಿಯಾಗಿದೆ.


ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲು ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಗಳನ್ನು ಆಯ್ಕೆ ಮಾಡುವ ಸೇವೆಯನ್ನು ಮಾಡುತ್ತಿರುವಾಗ ಭಗವಂತನು ಬಹಿರಂಗಪಡಿಸಿದ ಸುಂದರ ಲೀಲೆ !

‘ಪರಾತ್ಪರ ಗುರು ಡಾ. ಆಠವಲೆಯವರ ವಿವಿಧ ವಿಷಯಗಳ ಕುರಿತಾದ ಮಾರ್ಗದರ್ಶನಗಳು ದೈನಿಕ ‘ಸನಾತನ ಪ್ರಭಾತ’ದಲ್ಲಿ ಮುದ್ರಿತವಾಗುತ್ತವೆ. ಸಾಧಕರಿಗೆ ಅವರ ಬಗ್ಗೆ ಬಂದ ಅನುಭೂತಿಗಳೂ ಮುದ್ರಿತವಾಗುತ್ತವೆ. ಈ ಲೇಖನಗಳಲ್ಲಿ ಮುದ್ರಿಸುವ ಅವರ ಛಾಯಾಚಿತ್ರಗಳು ಸಾಧಕರಿಗೆ ಬಹಳ ಇಷ್ಟವಾಗುತ್ತವೆ. ಕಳೆದ ೨ ವರ್ಷಗಳಲ್ಲಿ ಪರಾತ್ಪರ ಗುರು ಡಾಕ್ಟರರು ನಮ್ಮಿಂದ ಅವರ ವಿವಿಧ ಛಾಯಾಚಿತ್ರಗಳ ಅಧ್ಯಯನವನ್ನು ಮಾಡಿಸಿಕೊಂಡರು. ಈ ಅವಧಿಯಲ್ಲಿ ಛಾಯಾಚಿತ್ರಗಳ ಅಧ್ಯಯನದ ಮಾಧ್ಯಮದಿಂದ ಭಗವಂತನು ಬೆಳಕಿಗೆ ತಂದ ಪರಾತ್ಪರ ಗುರು ಡಾಕ್ಟರರ ಅವತಾರತ್ವದ ಕುರಿತಾದ ದೈವೀ ಲೀಲೆಯು ನಮಗೆ ಅನುಭವಿಸಲು ಸಿಕ್ಕಿತು.

ಕು. ಸಾಯಲಿ ಡಿಂಗರೆ

೧. ಪರಾತ್ಪರ ಗುರು ಡಾ. ಆಠವಲೆಯವರು ೨೦೧೯ ನೇ ಇಸವಿಯಿಂದ ವಿವಿಧ ಮಾಧ್ಯಮಗಳಿಂದ ‘ನನ್ನ ಈಗಿನ ವಯಸ್ಸು ಕಾಣುವಂತಹ’, ಛಾಯಾಚಿತ್ರವನ್ನು ದೈನಿಕದಲ್ಲಿ ಪ್ರಕಟಿಸಿ’, ಎಂದು ಸಂದೇಶ ನೀಡುವುದು

ಸುಮಾರು ೨೦೧೯ ನೇ ಇಸವಿಯಿಂದ ಅವರು ಅನೇಕ ಬಾರಿ ‘ನನ್ನ ಈಗಿನ ವಯಸ್ಸು ಕಾಣುವಂತಹ’, ಛಾಯಾಚಿತ್ರವನ್ನು ದೈನಿಕದಲ್ಲಿ ಪ್ರಕಟಿಸಿ’, ಎಂಬ ಸಂದೇಶವನ್ನು ನಮಗೆ ಕಳುಹಿಸುತ್ತಿದ್ದಾರೆ. ‘ಇಂತಹ ಛಾಯಾಚಿತ್ರದಲ್ಲಿ ನಾನು ಯುವಕನಾಗಿ ಕಾಣಿಸುತ್ತೇನೆ. ಈಗ ನನಗೆ ವಯಸ್ಸಾಗಿದೆ. ಆದುದರಿಂದ ನಿಯಮಿತ ಮುದ್ರಿಸಲು ಆ ಛಾಯಾಚಿತ್ರವನ್ನು ತೆಗೆದುಕೊಳ್ಳಬಾರದು’, ಎಂದು ಅವರು ಹೇಳಿದರು. ಕೆಲವೊಮ್ಮೆ ಅವುಗಳಲ್ಲಿನ ಕಡಿಮೆ ವಯಸ್ಸಿರುವ; ಆದರೆ ವಯಸ್ಸಾದ ಸಾಧಕನ ದೈನಿಕದಲ್ಲಿನ ಛಾಯಾಚಿತ್ರವನ್ನು ತೋರಿಸಿ ‘ಅವರಿಗಿಂತ ನನಗೆ ವಯಸ್ಸಾಗಿದೆ; ಆದರೆ ಛಾಯಾಚಿತ್ರದಲ್ಲಿ ಹಾಗೆ ಕಾಣಿಸುವುದಿಲ್ಲ. ಆದುದರಿಂದ ನನ್ನ ಈಗಿನ ವಯಸ್ಸಿನ ಛಾಯಾಚಿತ್ರಗಳನ್ನು ಮುದ್ರಿಸಬೇಕು’, ಎಂಬ ಸಂದೇಶವನ್ನು ಅವರು ಕಳುಹಿಸುತ್ತಿದ್ದರು. ಅವರ ಸಂದೇಶವು ಬಂದ ನಂತರ ಪ್ರತಿಬಾರಿ ನಾವು ಆ ಕಾಲಾವಧಿಯಲ್ಲಿ ತೆಗೆದ ಛಾಯಾಚಿತ್ರಗಳ ಅಧ್ಯಯನ ಮಾಡಿ ಅವುಗಳಲ್ಲಿನ ಛಾಯಾಚಿತ್ರಗಳನ್ನು ಆಯ್ದುಕೊಂಡೆವು. ಅನಂತರ ನಾವು ಅವರ ಆಗಿನ ವಯಸ್ಸಿನ ಛಾಯಾಚಿತ್ರವನ್ನು ಮುದ್ರಿಸಲು ಆರಂಭಿಸಿದೆವು. ಹೀಗೆ ೨-೩ ಬಾರಿಯಾಯಿತು. ವಿವಿಧ ಪ್ರಸಂಗಗಳ ನಿಮಿತ್ತ ತೆಗೆದ ಪರಾತ್ಪರ ಗುರುಡಾಕ್ಟರರ ಅನೇಕ ಛಾಯಾಚಿತ್ರಗಳಿವೆ. ಹೀಗಿದ್ದರೂ, ‘ಕಳೆದ ಕೆಲವು ವರ್ಷಗಳಲ್ಲಿನ ಛಾಯಾಚಿತ್ರಗಳಲ್ಲಿ ದೈನಿಕದಲ್ಲಿನ ರಾಷ್ಟ್ರ ಮತ್ತು ಧರ್ಮ ಇವುಗಳ ಕುರಿತಾದ ಬರವಣಿಗೆಯೊಂದಿಗೆ ಮುದ್ರಿಸು ವಂತಹ ಛಾಯಾಚಿತ್ರಗಳಿಲ್ಲ’, ಎಂದು ತಿಳಿಸಿದಾಗ ಪರಾತ್ಪರ ಗುರು ಡಾಕ್ಟರರೇ ಮುಂದಾಳತ್ವ ವಹಿಸಿ ಆಗಸ್ಟ್ ೨೦೨೦ ರಲ್ಲಿ ತಮ್ಮ ಕೆಲವು ಛಾಯಾಚಿತ್ರಗಳನ್ನು ತೆಗೆಸಿಕೊಂಡರು. ಮೇ ೨೦೨೧ ರಲ್ಲಿ ನಾವು ಅವುಗಳಲ್ಲಿನ ಒಂದು ಛಾಯಾಚಿತ್ರವನ್ನು ಮುದ್ರಿಸುತ್ತಿದ್ದೆವು, ಆದರೂ ಪರಾತ್ಪರ ಗುರು ಡಾಕ್ಟರರು ಪುನಃ ‘ಈಗಿನ ವಯಸ್ಸು ಕಾಣಿಸುವ ಛಾಯಾಚಿತ್ರಗಳನ್ನು ಮುದ್ರಿಸಬೇಕು’, ಎಂಬ ಸಂದೇಶ ವನ್ನು ಕಳುಹಿಸಿದರು.

ಸಾಧಕರಿಗೆ ವಿವಿಧ ಛಾಯಾಚಿತ್ರಗಳು ನೋಡಲು ಸಿಗಬೇಕೆಂದು ನಾವು ಪರಾತ್ಪರ ಗುರು ಡಾಕ್ಟರರ ಕಳೆದ ೧ – ೨ ವರ್ಷಗಳಲ್ಲಿ ತೆಗೆದ ‘ಒಂದು ಬದಿಗೆ ನೋಡಿ ಹಸನ್ಮುಖ’ ಮತ್ತು ‘ದೂರದೃಷ್ಟಿಯಿಂದ ನೋಡುವ’, ಈ ಎರಡು ಛಾಯಾಚಿತ್ರಗಳನ್ನೂ ಕೆಲವು ವಿಶೇಷ ಪ್ರಸಂಗಳಲ್ಲಿ ಮುದ್ರಿಸಿದೆವು. ಆ ಕುರಿತು ಪರಾತ್ಪರ ಗುರು ಡಾಕ್ಟರರು, “ಈಗ ವೃದ್ಧಾಪ್ಯದಲ್ಲಿ ಎದುರಿಗೆ ನೋಡುವ ಛಾಯಾಚಿತ್ರಗಳು ಚೆನ್ನಾಗಿ ಕಾಣಿಸುವುದಿಲ್ಲವೆಂದು ಇಂತಹ ಒಂದು ಬದಿಗೆ ನೋಡುವ ಛಾಯಾಚಿತ್ರಗಳನ್ನು ನಾವು ಮುದ್ರಿಸುತ್ತೇವೆಯೇ ?’ ಎಂದು ಕೇಳಿದರು. ಆದರೆ ವಾಸ್ತವದಲ್ಲಿ ಹಾಗಿರಲಿಲ್ಲ. ಅದಕ್ಕಿಂತಲೂ ವಿಶೇಷವೆಂದರೆ ‘ಪರಾತ್ಪರ ಗುರು ಡಾಕ್ಟರರ ವಯಸ್ಸು ಎಷ್ಟೇ ಆದರೂ, ಅವರು ಹೆಚ್ಚೆಚ್ಚು ಆಕರ್ಷಕವಾಗಿ ಕಾಣಿಸುತ್ತಿದ್ದಾರೆ’, ಎಂದು ಸಾಧಕರ ಹೊರತು ಇತರ ಯಾರು ಹೇಳಬಹುದು ? ಸ್ವಲ್ಪದರಲ್ಲಿ, ‘ಅವರಿಗೆ ವಯಸ್ಸಾಗಿದೆ’, ಎಂಬುದು ಛಾಯಾ ಚಿತ್ರದಲ್ಲಿ ಕಾಣಿಸಬೇಕು’, ಎಂದು ಈ ಎಲ್ಲ ಪ್ರಕ್ರಿಯೆಯಲ್ಲಿ ನಮ್ಮ ಗಮನಕ್ಕೆ ಬಂದಿತು.

೨. ಜೂನ್ ೨೦೨೧ ರಲ್ಲಿ ತೆಗೆದ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ನೋಡಿ ಅವರ ಚರ್ಮದ ಬಗೆಗಿನ ದೈವೀ ವೈಶಿಷ್ಟ್ಯ ಗಮನಕ್ಕೆ ಬರುವುದು

ಕು. ಪೂಜಾ ನಲಾವಡೆ

ಜೂನ್ ೨೦೨೧ ರಲ್ಲಿ ಒಂದು ಸಂಶೋಧನೆಗಾಗಿ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರಗಳನ್ನು ತೆಗೆದಿರುವುದಾಗಿ ನಮಗೆ ತಿಳಿಯಿತು. ಆ ಛಾಯಾಚಿತ್ರಗಳಲ್ಲಿಯಾದರೂ ‘ಅವರ ವಯಸ್ಸು ೭೯ ವರ್ಷಗಳಿದ್ದಂತೆ ಕಾಣಿಸಬಹುದು’, ಎಂದು ನಮಗನಿಸಿತು. ಪ್ರತ್ಯಕ್ಷದಲ್ಲಿ ಛಾಯಾಚಿತ್ರಗಳನ್ನು ನೋಡುವಾಗ, ಪರಾತ್ಪರ ಗುರು ಡಾಕ್ಟರರ ಯಾವುದೇ ಛಾಯಾಚಿತ್ರದಲ್ಲಿ ಸಾಮಾನ್ಯ ವಯಸ್ಸಾದ ವ್ಯಕ್ತಿಗಳಲ್ಲಿರುವಂತಹ ಲಕ್ಷಣಗಳು ಕಾಣಿಸುವುದಿಲ್ಲ’, ಎಂದು ಗಮನಕ್ಕೆ ಬಂದಿತು.

‘ಚರ್ಮದ ಮೇಲಿನ ಸುಕ್ಕುಗಳು, ಗಲ್ಲದ ಚರ್ಮವು ಕೆಳಗೆ ಜೋತು ಬೀಳುವುದು, ಮುಖದ ಮೇಲೆ ದೀರ್ಘಕಾಲ ಅನಾರೋಗ್ಯದ ಅಥವಾ ಆಯಾಸದ ಲಕ್ಷಣಗಳು, ವಯಸ್ಸಾದ ವ್ಯಕ್ತಿಗಳಲ್ಲಿ ಕಾಣಿಸುವ ಒಂದು ರೀತಿಯ ನಿಸ್ತೇಜತನ’, ಹೀಗೆ ಯಾವುದೇ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ನೋಡಿ ಅರಿವಾಗುವುದಿಲ್ಲ. ತದ್ವಿರುದ್ಧ ಈ ವಯಸ್ಸಿನಲ್ಲಿಯೂ ಅವರ ಚರ್ಮವು ಅತೀವ ನುಣುಪಾಗಿದೆ. ಪ್ರಾಣಶಕ್ತಿಯು ಕಡಿಮೆ ಇದ್ದರೂ ಅವರ ಮುಖವು ತುಂಬಾ ಪ್ರಕಾಶಮಾನವಾಗಿದೆ. ಆ ಛಾಯಾಚಿತ್ರಗಳ ಕಡೆಗೆ ನೋಡಿ ‘ಮಗುವನ್ನೇ ನೋಡುತ್ತಿದ್ದೇವೆ’, ಎಂದೆನಿಸುತ್ತದೆ.

ಈ ಛಾಯಾಚಿತ್ರಗಳನ್ನು ನೋಡಿ ‘ದೇವರಿಗೆ ಪರಾತ್ಪರ ಗುರು ಡಾಕ್ಟರರ ಈ ಅವತಾರಿ ವೈಶಿಷ್ಟ್ಯಗಳನ್ನು ಬೆಳಕಿಗೆ ತರಬೇಕಿದೆ. ಅದಕ್ಕಾಗಿ ‘ಸದ್ಯದ ವಯಸ್ಸಿನ ಛಾಯಾಚಿತ್ರಗಳನ್ನು ಮುದ್ರಿಸುವುದು’, ಎಂಬ ಲೀಲೆಯನ್ನು ಭಗವಂತನು ನಡೆಸುತ್ತಿದ್ದಾನೆ’, ಎಂದು ನಮ್ಮ ಗಮನಕ್ಕೆ ಬಂದಿತು.

ಜೂನ್ ೨೦೨೧ ರಲ್ಲಿ ತೆಗೆದ ಛಾಯಾಚಿತ್ರವನ್ನು ನೋಡುವಾಗ ಪುನಃ ಅವರ ನಿರ್ಗುಣ-ಸಗುಣ ಸ್ಥಿತಿಯ ಅರಿವಾಗುತ್ತದೆ.

ಪರಾತ್ಪರ ಗುರು ಡಾಕ್ಟರರ ಒಂದು ಬದಿಯಿಂದ ತೆಗೆದ ಛಾಯಾಚಿತ್ರಗಳನ್ನು ಯಾವಾಗಲಾದರೂ ಭಿನ್ನತೆಯೆಂದು ಬಳಸಬಹುದು; ಆದರೆ ಯಾವಾಗಲೂ ‘ನನ್ನ ಸಾಧಕರ ಕಡೆಗೆ ನೋಡುವ ಛಾಯಾಚಿತ್ರವನ್ನು ತೆಗೆದುಕೊಳ್ಳಿರಿ’, ಎಂದು ಅವರು ಹೇಳಿದರು. ‘ದೈನಿಕದ ಮಾಧ್ಯಮದಿಂದಲೂ ಸಾಧಕರಿಗೆ ಪರಾತ್ಪರ ಗುರು ಡಾಕ್ಟರರನ್ನು ನೋಡಿದುದರ ಅನುಭೂತಿಯನ್ನು ಪಡೆಯು ವಂತಾಗಲಿ’, ಎಂಬ ಅವರ ತಳಮಳವಿರುತ್ತದೆ. ಯಾವಾಗಲೂ ಸಾಧಕರ ಬಗ್ಗೆ ವಿಚಾರ ಮಾಡುವ ಇಂತಹ ಈಶ್ವರಸ್ವರೂಪ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಕು. ಸಾಯಲಿ ಡಿಂಗರೆ ಮತ್ತು ಕು. ಪೂಜಾ ನಲಾವಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೭.೨೦೨೧)