ಗೂಗಲ್ ನಿಂದ ಮಹಾರಾಣಾ ಪ್ರತಾಪ ಅವರ ಇತಿಹಾಸವನ್ನು ವಿಕೃತಗೊಳಿಸಿದ ಪ್ರಕರಣ.ದೈನಿಕ ಸನಾತನ ಪ್ರಭಾತದಲ್ಲಿ ನೀಡಿದ್ದ ಕರೆಯ ಪರಿಣಾಮ. |
ಇತಿಹಾಸದ ವಿಕೃತಿಕರಣದ ವಿರುದ್ಧ ಸಂಯಮದಿಂದ ವಿರೋಧಿಸಿ ಅದರಲ್ಲಿ ಯಶಸ್ಸನ್ನು ಪಡೆದ ಇತಿಹಾಸ ಪ್ರೇಮಿ, ರಾಷ್ಟ್ರ ಪ್ರೇಮಿ, ಮತ್ತು ಧರ್ಮಪ್ರೇಮಿಗಳು ಇವರಿಗೆಲ್ಲ ಅಭಿನಂದನೆ! ಈ ರೀತಿಯಾಗಿ ಜಾಗರೂಕತೆಯನ್ನು ತೋರಿಸಿದ್ದಲ್ಲಿ ರಾಷ್ಟ್ರ ಹಾನಿ ಮತ್ತು ಧರ್ಮಹಾನಿಯನ್ನು ತಡೆಗಟ್ಟಬಹುದು!
ಮುಂಬೈ (ಮಹಾರಾಷ್ಟ್ರ ) – ಇತಿಹಾಸಪ್ರೇಮಿಗಳು, ರಾಷ್ಟ್ರಪ್ರೇಮಿಗಳು, ಮತ್ತು ಧರ್ಮಪ್ರೇಮಿಗಳು ಇವರೆಲ್ಲ ವ್ಯಕ್ತಪಡಿಸಿದ ಅಭಿಪ್ರಾಯಗಳ ನಂತರ ಗೂಗಲ್ ನಿಂದ ಮಹಾರಾಣಾ ಪ್ರತಾಪರ ವಿಷಯದಲ್ಲಿ ನೀಡಿದ್ದ ಸುಳ್ಳು ಇತಿಹಾಸದ ಸಂದರ್ಭಗಳನ್ನು ತೆಗೆಯಲಾಗಿದೆ.
ಗೂಗಲ್ ನಲ್ಲಿ ಪರಾಜಿತ ಕಾ ಅರ್ಥ ಎಂದು ಹುಡುಕಿದರೆ ಹರಾಯ ಹೂವ ಎಂದು ಅರ್ಥ ತೋರಿಸುತ್ತಿತ್ತು. ಅದರ ಜೊತೆಗೆ ಬ್ರಾಕೆಟ್‍ನಲ್ಲಿ ಕೊನೆಯಲ್ಲಿ ಅಕ್ಬರನು ಹಲ್ದಿಘಾಟಿ ಯುದ್ಧದಲ್ಲಿ ರಾಣಪ್ರತಾಪ ಅವರನ್ನು ಪರಾಜಿತಗೊಳಿಸಿದನು, ಎಂಬ ತಪ್ಪು ಮತ್ತು ನೋವಾಗುವಂತಹ ಸಂದರ್ಭವನ್ನು ನೀಡಿತ್ತು. ಇದನ್ನು ಕೆಲವು ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿ ನಾಗರಿಕರು ದೈನಿಕ ಸನಾತನ ಪ್ರಭಾತಗೆ ತಿಳಿಸಿದರು ಈ ವಿಷಯವು 29 ಜುಲೈ 2021 ದರ ದೈಹಿಕ ಸನಾತನ ಪ್ರಭಾತದಲ್ಲಿ ಪ್ರಸಿದ್ಧವಾಯಿತು. ಈ ಸಮಾಚಾರದಿಂದ ಇತಿಹಾಸಪ್ರೇಮಿ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳು ಗೂಗಲ್ ನಲ್ಲಿರುವ ಈ ತಪ್ಪನ್ನು ತೆಗೆದುಹಾಕಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ತಪ್ಪು ಮಾಹಿತಿಯನ್ನು ತೆಗೆದು ಹಾಕುವ ಬಗ್ಗೆ ಅಭಿಪ್ರಾಯವನ್ನು ನಮೂದಿಸಲು ಕರೆ ನೀಡಲಾಗಿತ್ತು. ಅದಕ್ಕನುಸಾರವಾಗಿ ಅನೇಕ ಇತಿಹಾಸಪ್ರೇಮಿಗಳು, ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿಗಳು ಗೂಗಲ್‍ನ ತಪ್ಪುಗಳನ್ನು ಅರಿವು ಮಾಡಿಸಿ ಸರಿಯಾದ ಇತಿಹಾಸವನ್ನು ನಮೂದಿಸಿದರು. ಆದಕಾರಣ ಗೂಗಲ್ ಈ ತಪ್ಪು ಮಾಹಿತಿಯನ್ನು ತೆಗೆದಿದೆ.
ವಿಶೇಷವೆಂದರೆ ಗೂಗಲ್ ನಲ್ಲಿ ಇತರ ಯಾವುದೇ ಶಬ್ದಗಳ ಅರ್ಥವನ್ನು ಹುಡುಕಿದರು ಅದರ ಸಂದರ್ಭ ಕೊಡಲಾಗುವುದಿಲ್ಲ. ಕೇವಲ ಪರಾಜಿತ ಎಂಬ ಶಬ್ದದ ಅರ್ಥ ಹುಡುಕಿದರೆ ತಪ್ಪು ಮಾಹಿತಿ ಗೂಗಲ್ ನಿಂದ ಕೊಡಲಾಗುತ್ತಿತ್ತು. ಇದರಿಂದ ಹಿಂದೂದ್ವೇಷಿಗಳು ಪ್ರಯತ್ನಪೂರ್ವಕ ಹಿಂದೂಗಳ ಸಂದರ್ಭದಲ್ಲಿ ಸುಳ್ಳು ಇತಿಹಾಸವನ್ನು ಪ್ರಸಾರ ಮಾಡಿ ಹಿಂದೂಗಳನ್ನು ಅವಮಾನಿಸುವ ಷಡ್ಯಂತ್ರವನ್ನು ರಚಿಸಿದ್ದಾರೆ ಎಂಬುದು ಸ್ಪಷ್ಟವಾಗಿತ್ತು.