ಪತಿ ಜೀವಂತವಾಗಿದ್ದರೂ, ೨೧ ಮಹಿಳೆಯರಿಂದ ವಿಧವೆಯರು ಎಂದು ಹೇಳಿಕೊಂಡು ಹಣ ಲೂಟಿ !
ಇಂತಹ ಭ್ರಷ್ಟರನ್ನು ಅಮಾನತುಗೊಳಿಸಿ ಜೀವಾವಧಿ ಶಿಕ್ಷೆ ನೀಡಬೇಕು !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಸರಕಾರವು ರಾಷ್ಟ್ರೀಯ ಕುಟುಂಬ ಲಾಭ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮುಖ್ಯಸ್ಥರು ೬೦ ವರ್ಷ ದಾಟುವ ಮುನ್ನ ಸತ್ತರೆ, ಅವರ ಪತ್ನಿಗೆ ಸರಕಾರದಿಂದ ೩೦,೦೦೦ ರೂಪಾಯಿ ಸಿಗಲಿದೆ. ಭ್ರಷ್ಟ ಅಧಿಕಾರಿಗಳು ಮತ್ತು ದಲ್ಲಾಳಿಗಳು ೨೧ ನಕಲಿ ಫಲಾನುಭವಿಗಳನ್ನು ತೋರಿಸುವ ಮೂಲಕ ಹಣವನ್ನು ದುರುಪಯೋಗಿಸಿದ್ದು ಬೆಳಕಿಗೆ ಬಂದಿದೆ. ಲಕ್ಷ್ಮಣಪುರಿಯ ಸರೋಜಿನಿ ನಗರ ತಾಲೂಕಿನ ಬಂಥರಾ ಮತ್ತು ಚಂದ್ರಾವಲ್ ಗ್ರಾಮಗಳಲ್ಲಿ ಒಟ್ಟು ೮೮ ಜನರು ೨೦೧೯-೨೦ ಹಾಗೂ ೨೦೨೦-೨೦೨೧ ರಲ್ಲಿ ಈ ಯೋಜನೆಯ ಲಾಭ ಪಡೆದಿದ್ದರು. ಪ್ರಾಥಮಿಕ ತನಿಖೆಯಲ್ಲಿ, ಈ ಫಲಾನುಭವಿಗಳಲ್ಲಿ ೨೧ ಮಹಿಳೆಯರು, ಅವರ ಗಂಡಂದಿರು ಜೀವಂತವಾಗಿದ್ದಾರೆ. ಅಲ್ಲದೆ, ಈ ಮಹಿಳೆಯರಿಗೆ ನಕಲಿ ರೀತಿಯಲ್ಲಿ ಲಾಭಗಳನ್ನು ನೀಡಲಾಗಿತ್ತು. ಈ ೩೦ ಸಾವಿರ ರೂಪಾಯಿಗಳಲ್ಲಿ ಫಲಾನುಭವಿ ಮಹಿಳೆಗೆ ಕೇವಲ ೧೦ ರಿಂದ ೧೫ ಸಾವಿರ ರೂಪಾಯಿಗಳು ದೊರೆತಿವೆ. ಉಳಿದ ಹಣವನ್ನು ದಲ್ಲಾಳಿಗಳು ಮತ್ತು ಅಧಿಕಾರಿಗಳು ಕಬಳಿಸಿದ್ದಾರೆ. ಈ ಹಿಂದೆಯೂ ಗೋರಖ್‍ಪುರ, ಬಲರಾಮಪುರ, ಚಿತ್ರಕೂಟ, ಕಾನಪೂರ ಸಹಿತ ಇತರ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯ ಹಗರಣಗಳು ವರದಿಯಾಗಿವೆ. ಅಲ್ಲಿ ಸ್ಥಳೀಯ ಆಡಳಿತವು ಇಲಾಖಾ ನೌಕರರನ್ನು ಅಮಾನತುಗೊಳಿಸಿತ್ತು. (ಇಂತಹ ಘಟನೆ ಮೊದಲು ಬಹಿರಂಗವಾದಾಗ ಆಗಲೇ ಕಠಿಣ ತನಿಖೆ ನಡೆಸಿದ್ದಲ್ಲಿ ಮತ್ತು ಹೊಣೆಗಾರರಿಗೆ ಶಿಕ್ಷೆಯಾಗಿದ್ದಲ್ಲಿ, ಇತರರಲ್ಲಿಯೂ ಭಯ ನಿರ್ಮಾಣವಾಗುತ್ತಿತ್ತು ! – ಸಂಪಾದಕರು)