
ಹಿಂದೂಗಳೇ, ಸಾಧನೆಯನ್ನು ಪ್ರಾರಂಭಿಸಿ !
ನಮಗೆ ಭಗವಂತನ ಸಹಾಯ ಏಕೆ ಸಿಗುವುದಿಲ್ಲ ?, ಈ ಕುರಿತು ಹಿಂದೂಗಳು ವಿಚಾರ ಮಾಡಬೇಕು ಮತ್ತು ಸಹಾಯ ಸಿಗುವಂತಾಗಲು ಸಾಧನೆಯನ್ನು ಪ್ರಾರಂಭಿಸಬೇಕು !
ವೈಯಕ್ತಿಕ ಸ್ವಾತಂತ್ರ್ಯವನ್ನು ಸಮರ್ಥಿಸುವವರ ಅಜ್ಞಾನ !
ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ಇಚ್ಛೆಯಂತೆ ವರ್ತಿಸುವವರು, ಚಿಕಿತ್ಸೆ, ನ್ಯಾಯಾಂಗ ಇತ್ಯಾದಿ ಯಾವುದೇ ಕ್ಷೇತ್ರದಲ್ಲಿ ತಮ್ಮ ಇಚ್ಛೆಯಂತೆ ವರ್ತಿಸುವುದಿಲ್ಲ. ಆದರೆ ಕೇವಲ ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿಯೇ ತಮ್ಮ ಮನಸ್ಸಿನಂತೆ ವರ್ತಿಸುತ್ತಾರೆ.
ನಿಜವಾದ ಸುಖ
ನಿಜವಾದ ಸುಖವು ಸಾಧನೆಯಿಂದ ಮಾತ್ರ ದೊರೆಯುತ್ತದೆ, ಭ್ರಷ್ಟಾಚಾರದಿಂದ ಸಂಪಾದಿಸಿದ ಹಣದಿಂದಲ್ಲ !
ಸಾಧನೆ ಮಾಡುವ ಅತ್ಯಾವಶ್ಯಕತೆ !
ಸಂಕಟಕಾಲದಲ್ಲಿ ಸಹಾಯಕ್ಕೆ ಬರಲೆಂದು ನಾವು ಬ್ಯಾಂಕ್‌ಗಳಲ್ಲಿ ಹಣವನ್ನಿಡುತ್ತೇವೆ. ಅದೇ ರೀತಿ ಸಂಕಟಕಾಲದಲ್ಲಿ ಸಹಾಯಕ್ಕೆ ಬರಲೆಂದು ಸಾಧನಾರೂಪಿ ಸಂಪತ್ತು ನಮ್ಮ ಬಳಿ ಇರುವುದು ಆವಶ್ಯಕವಾಗಿದೆ.
– (ಪರಾತ್ಪರ ಗುರು) ಡಾ. ಜಯಂತ ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !