‘ಸನಾತನ ಪಂಚಾಂಗ’ವನ್ನು ‘ಸನಾತನ ಶಾಪ್’ನ ಮೂಲಕ ವಿದೇಶಕ್ಕೆ ಕಳುಹಿಸಲು ಸಾಧ್ಯವಾಗದಿರುವುದರಿಂದ ಇಂಗ್ಲೆಂಡಿನ ಓರ್ವ ಜಿಜ್ಞಾಸು ಅದನ್ನು ಅಲ್ಲಿ ಮುದ್ರಿಸಿಕೊಳ್ಳುವ ಸಿದ್ಧತೆಯನ್ನು ತೋರಿಸುವುದು

ಸನಾತನ ಸಂಸ್ಥೆಯ ಅಮೂಲ್ಯ ಚೈತನ್ಯಮಯ ಸಾಹಿತ್ಯಗಳ ಬಗ್ಗೆ ವಿದೇಶಗಳಲ್ಲಿನ ಜಿಜ್ಞಾಸುಗಳಿಗಿರುವ ಮೌಲ್ಯ !

ಕು. ಶಶಿಕಲಾ ಆಚಾರ್ಯ

‘ಇಂಗ್ಲೆಂಡಿನ ಓರ್ವ ಜಿಜ್ಞಾಸುವಿಗೆ ‘ಸನಾತನ ಪಂಚಾಂಗ’ ಬೇಕಿತ್ತು. ಆಗ ನಾನು ಅವರಿಗೆ ‘ಸನಾತನ ಶಾಪ್ ಮೂಲಕ ವಿದೇಶಗಳಿಗೆ ಪ್ರಸಾರಸಾಹಿತ್ಯಗಳನ್ನು ಕಳುಹಿಸುವುದಿಲ್ಲ. ಅದು ಕೇವಲ ಭಾರತಕ್ಕಷ್ಟೇ ಸೀಮಿತವಾಗಿದೆ’, ಎಂದು ಹೇಳಿದೆನು. ನಂತರ ಪುನಃ ಅವರ ಗಣಕೀಯಪತ್ರ ಬಂದಿತು. ಅದರಲ್ಲಿ ಅವರು, ‘ನನ್ನ ತಂದೆಯವರು ೮೭ ವರ್ಷದವರಾಗಿದ್ದಾರೆ. ಅವರಿಗೆ ಸನಾತನ ಪಂಚಾಂಗವು ಯಾವುದೇ ಸ್ಥಿತಿಯಲ್ಲಿ ಬೇಕಾಗಿದೆ, ನೀವು ನನಗೆ ಪಂಚಾಂಗದ ಪಿ.ಡಿ.ಎಫ್. ಕಳುಹಿಸಬಹುದೇ ? ಅದರಿಂದ ನಾನು ಅದನ್ನು ಇಲ್ಲಿಯೇ ಮುದ್ರಿಸಿಕೊಳ್ಳುವೆನು’, ಎಂದು ಬರೆದಿದ್ದರು.

ಅವರು ಬರೆದ ಬರವಣಿಗೆಯನ್ನು ಓದಿ ನನ್ನ ಭಾವಜಾಗೃತಿಯಾಯಿತು ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ತಯಾರಿಸಿದ ಪ್ರತಿಯೊಂದು ವಸ್ತುವಿನಲ್ಲಿನ ಚೈತನ್ಯದ ವಿಶಾಲತೆ ನನ್ನ ಗಮನಕ್ಕೆ ಬಂದಿತು. ಈ ಎಲ್ಲ ಚೈತನ್ಯಮಯ ವಸ್ತುಗಳು ಅಮೂಲ್ಯವಾಗಿವೆ. ಭಾರತದಲ್ಲಿನ ಸಾಧಕರು ಮತ್ತು ಜಿಜ್ಞಾಸುಗಳಿಗೆ ಸಾತ್ತ್ವಿಕ ಉತ್ಪಾದನೆಗಳು ಸಹಜವಾಗಿ ಪ್ರಾಪ್ತವಾಗುತ್ತವೆ. ಅದಕ್ಕಾಗಿ ಪರಾತ್ಪರ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಕು. ಶಶಿಕಲಾ ಆಚಾರ್ಯ, ಸನಾತನ ಆಶ್ರಮ, ದೇವದ, ಪನವೇಲ, ಮಹಾರಾಷ್ಟ್ರ (೧೯.೧.೨೦೨೧)