ಲೋಕಮಾನ್ಯ ತಿಲಕ ಮತ್ತು ಗಾಂಧಿಯ ವಿರುದ್ಧ ಉಪಯೋಗಿಸಿದ್ದ ಬ್ರಿಟೀಷರ ‘ದೇಶದ್ರೋಹಿ ಕಾನೂನು’ ಈಗ ಅಗತ್ಯವೇ ? – ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ಸಧ್ಯ ರಾಷ್ಟ್ರಘಾತಕ ಶಕ್ತಿಗಳ ಪ್ರಭಾವವು ಹೆಚ್ಚಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅನೇಕ ಬಾರಿ ದೇಶವಿರೋಧಿ ಹೇಳಿಕೆಗಳನ್ನು ನೀಡಲಾಗುತ್ತಿದೆ. ಹೀಗಿದ್ದರೂ, ಅದರ ದುರುಪಯೋಗವೂ ಆಗುತ್ತಿದೆ. ಇದನ್ನು ಗಮನಕ್ಕೆ ತೆಗೆದುಕೊಂಡು ಸರಕಾರವು ಈ ಕಾನೂನಿನಲ್ಲಿನ ಕುಂದುಕೊರತೆಗಳನ್ನು ದೂರ ಮಾಡಿ ಅದನ್ನು ಹೆಚ್ಚೆಚ್ಚು ಪರಿಪೂರ್ಣ ಮಾಡಬೇಕು, ಎಂದು ಜನರ ಅಪೇಕ್ಷೆಯಾಗಿದೆ !

ದೇಶದ್ರೋಹಿ ಕಾನೂನು ಎಂದರೇನು ?

ಭಾರತೀಯ ದಂಡ ಸಂಹಿತೆ ಸೆಕ್ಷನ್ ೧೨೪-ಅ ರಲ್ಲಿ ದೇಶದ್ರೋಹಿ ಕಾನೂನನ್ನು ವ್ಯಾಖ್ಯಾನಿಸಿದೆ. ಈ ಕಾನೂನಿನ ಪ್ರಕಾರ ಓರ್ವ ವ್ಯಕ್ತಿಯು ಸರಕಾರದ ವಿರುದ್ಧ ಏನೇ ಬರೆದರೆ ಅಥವಾ ಮಾತನಾಡಿದರೆ ಅಥವಾ ಇಂತಹ ಅಂಶಗಳಿಗೆ ಯಾರಾದರು ಬೆಂಬಲ ನೀಡಿದರೆ ಸಂಬಂಧಪಟ್ಟವರಿಗೆ ಜೀವಾವಧಿ ಶಿಕ್ಷೆ ಅಥವಾ ೩ ವರ್ಷದ ಶಿಕ್ಷೆಯ ಪ್ರಬಂಧ (ಏರ್ಪಾಡು) ಮಾಡಲಾಗಿದೆ.

ನವ ದೆಹಲಿ – ‘ದೇಶದ್ರೋಹ ಕಾನೂನು’ ಇದು ಬ್ರಿಟಿಷರ ಕಾನೂನು ಆಗಿದೆ. ಬ್ರಿಟಿಷರು ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಅದನ್ನು ಉಪಯೋಗಿಸಿದ್ದರು ಅದನ್ನು ಮ. ಗಾಂಧಿ ಮತ್ತು ಲೋಕಮಾನ್ಯ ತಿಲಕ ಇವರ ವಿರುದ್ಧ ಉಪಯೋಗಿಸಲಾಗಿತ್ತು. ೭೫ ವರ್ಷಗಳ ನಂತರವೂ ಕೂಡ ಈ ದೇಶದ್ರೋಹ ಕಾನೂನಿನ ಅವಶ್ಯಕತೆ ಇದೆಯೇ ? ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ಪ್ರಶ್ನಿಸಿದೆ. ಈ ಅರ್ಜಿಯನ್ನು ಮಾಜಿ ಮೇಜರ ಜನರಲ ಎಸ್.ಜಿ. ವೊಂಮಬಟಕೆರೆ ಇವರು ಸಲ್ಲಿಸಿದ್ದಾರೆ. ಇದರಲ್ಲಿ ಅವರು ದೇಶದ್ರೋಹಿ ಚಟುವಟಿಕೆಗಳಿಗಾಗಿ ಅಸ್ತಿತ್ವದಲ್ಲಿರುವ ಭಾ.ದಂ,ಸಂ.ಯ ಸೆಕ್ಷನ್ ೧೨೪-ಅ ಗೆ ಸವಾಲು ಹಾಕಿದ್ದಾರೆ.

ಈ ಅರ್ಜಿಯಲ್ಲಿ ವೊಂಮಬಟಕೆರೆ ಇವರು, ಈ ಕಾನೂನು ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡಚಣೆಯನ್ನು ಉಂಟು ಮಾಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಜನರ ಮೂಲಭೂತ ಅಧಿಕಾರವಾಗಿದೆ. ಈ ಕಾನೂನು ಸಂಪೂರ್ಣವಾಗಿ ಸಂವಿಧಾನದ ವಿರುದ್ಧವಾಗಿದ್ದು ಅದನ್ನು ರದ್ದು ಪಡಿಸಬೇಕು ಎಂದು ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಇವರು ಮಂಡಿಸಿದ ಅಂಶಗಳು

. ಸರಕಾರವು ಅನೇಕ ಕಾನೂನುಗಳನ್ನು ರದ್ದು ಪಡಿಸುತ್ತಿದೆ, ಹಾಗಾದರೇ ಈ ದೇಶದ್ರೋಹದ ಕಾನೂನಿನ ಬಗ್ಗೆ ಏಕೆ ವಿಚಾರ ಮಾಡುತ್ತಿಲ್ಲ ?

೨. ಈ ಸೆಕ್ಷನ್ ಅಂದರೆ ಬಡಗಿಗೆ ಮರವನ್ನು ಕತ್ತರಿಸಲು ಗರಗಸ ನೀಡಿದಾಗ ಆತ ಪೂರ್ಣ ಕಾಡನ್ನು ಕತ್ತರಿಸಿದಂತೆ ಆಗಿದೆ.

೩. ಸೆಕ್ಷನ ೧೨೪-ಅ ಯಿಂದ ಪೊಲೀಸರಿಗೆ ಇಷ್ಟು ಅಧಿಕಾರ ಸಿಕ್ಕಿದೆ ಎಂದರೆ, ಅವರು ಜೂಜಾಡುವವರ ಮೇಲೆಯೂ ದೇಶದ್ರೋಹದ ಅಪರಾಧವನ್ನು ದಾಖಲಿಸಬಹುದು.

೪. ಒಂದುವೇಳೆ ಸರಕಾರವು ಅಥವಾ ಪಕ್ಷವು ಯಾವುದೇ ಮಾತನ್ನು ಕೇಳಲು ಬಯಸದಿದ್ದಲ್ಲಿ, ಅವು ಸಂಬಂಧಪಟ್ಟವರ ವಿರುದ್ಧ ಈ ಕಾನೂನನ್ನು ಉಪಯೋಗಿಸುವರು. ಇಷ್ಟು ಕೆಟ್ಟ ಸ್ಥಿತಿ ಉದ್ಭವಿಸಿದೆ.

ಸೆಕ್ಷನ್ ರದ್ದು ಪಡಿಸುವ ಅಗತ್ಯವಿಲ್ಲ !

ಕೇಂದ್ರ ಸರಕಾರದ ವತಿಯಿಂದ ಆಟರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಇವರು ನ್ಯಾಯಾಲಯದಲ್ಲಿ, ಈ ಕಾನೂನನ್ನು ಸಂರ್ಪೂವಾಗಿ ರದ್ದು ಪಡಿಸುವ ಅವಶ್ಯಕತೆಯಿಲ್ಲ; ಆದರೆ ಮಾರ್ಗದರ್ಶಕ ಅಂಶಗಳನ್ನು ನಿರ್ಧರಿಸಲಾಗಬೇಕು. ಹೀಗೆ ಮಾಡುವುದರಿಂದ ಕಾನೂನಿನ ಉದ್ದೇಶವು ಸಫಲವಾಗಬಹುದು.

ಕಳೆದ ೧೦ ವರ್ಷಗಳಲ್ಲಿ ೧೧ ಸಾವಿರ ಜನರ ವಿರುದ್ಧ ದೇಶದ್ರೋಹದ ಅಪರಾಧ ದಾಖಲು !

ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸಂಶೋಧನೆ ಮಾಡುವ ಸಂಸ್ಥೆ ‘ಆರ್ಟಿಕಲ್-೧೪ ಡಾಟ್ ಕಾಮ್’ನ ಈ ವರ್ಷದ ಫೆಬ್ರವರಿ ತಿಂಗಳ ವರದಿಯಲ್ಲಿ, ೨೦೧೦ ರಿಂದ ೨೦೨೦ ಈ ೧೦ ವರ್ಷಗಳಲ್ಲಿ ದೇಶದಲ್ಲಿ ೧೧ ಸಾವಿರ ಜನರ ಮೇಲೆ ೮೧೬ ದೇಶದ್ರೋಹದ ಅಪರಾಧಗಳು ದಾಖಲಾಗಿದೆ. ಅದರಲ್ಲಿ ಶೇ. ೬೫ ರಷ್ಟು ಅಪರಾಧಗಳನ್ನು ೨೦೧೪ ರ ನಂತರ ದಾಖಲಿಸಲಾಗಿದೆ ಎಂದು ಹೇಳಿದೆ.