ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸ್ಮೃತಿಕಾರ ಮತ್ತು ಗೋತ್ರಪ್ರವರ್ತಕ ಪರಾಶರ ಋಷಿಗಳ ತಪೋಭೂಮಿ ಮತ್ತು ‘ಪರಾಶರ ತಾಲ ಇವುಗಳ ದರ್ಶನವನ್ನು ಪಡೆಯುವುದು !

ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದೈವೀ ಪ್ರವಾಸದ ಮಾಹಿತಿ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಕೆಳಗೆ ಈ ದೈವೀ ಪ್ರವಾಸದ ಮಾಹಿತಿಯನ್ನು ನೀಡಲಾಗಿದೆ.

ದೇವಭೂಮಿ ಹಿಮಾಚಲ

ಹಿಮಾಚಲ ಪ್ರದೇಶವನ್ನು ‘ದೇವಭೂಮಿ ಹಿಮಾಚಲ ಎಂದು ಹೇಳಲಾಗುತ್ತದೆ. ಹಿಮಾಚಲ ಪ್ರದೇಶವು ಯುಗಯುಗಾಂತರಗಳಿಂದ ದೇವತೆಗಳ ಮತ್ತು ಋಷಿಮುನಿಗಳ ವಾಸಸ್ಥಾನವಾಗಿದೆ. ವಸಿಷ್ಠ, ಪರಾಶರ, ವ್ಯಾಸ, ಜಮದಗ್ನಿ, ಭೃಗು, ಮನು, ವಿಶ್ವಾಮಿತ್ರ, ಅತ್ರಿ ಮುಂತಾದ ಅನೇಕ ಋಷಿಗಳ ತಪಶ್ಚರ್ಯದ ಸ್ಥಾನ ಹಾಗೆಯೇ ಶಿವ-ಪಾರ್ವತಿಯರಿಗೆ ಸಂಬಂಧಿಸಿದ ಅನೇಕ ದಿವ್ಯ ಸ್ಥಾನಗಳು ಇಲ್ಲಿವೆ. ಕೆಲವು ಸ್ಥಾನಗಳು ಮನುಷ್ಯರು ಹೋಗಬಹುದಾದಂತಹ ಕಕ್ಷೆಯಲ್ಲಿದ್ದರೆ ಕೆಲವು ಸ್ಥಾನಗಳು ಗುಪ್ತವಾಗಿವೆ. ‘ಪರಾಶರ ತಾಲ!ವು ಇಂತಹ ದಿವ್ಯ ಸ್ಥಾನಗಳಲ್ಲಿನ ಒಂದು ತಪೋಭೂಮಿಯಾಗಿದೆ. ಋಷಿ ಪರಾಶರರು ವಸಿಷ್ಠ ಋಷಿಗಳ ಮೊಮ್ಮಗ ಹಾಗೂ ಮಹರ್ಷಿ ವ್ಯಾಸರ ತಂದೆಯಾಗಿದ್ದರು. ದ್ವಾಪರ ಯುಗದಲ್ಲಿ ಈ ಸ್ಥಳಕ್ಕೆ ಪಾಂಡವರು ಕೂಡ ಬಂದಿದ್ದರು ಎನ್ನುವ ಉಲ್ಲೇಖವಿದೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಇಂತಹ ಚೈತನ್ಯಮಯ ಸ್ಥಾನಕ್ಕೆ ಹೋಗಿ ಎಲ್ಲ ಸಾಧಕರ ಆರೋಗ್ಯಕ್ಕಾಗಿ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪರಾಶರ ಋಷಿಗಳಲ್ಲಿ ಪ್ರಾರ್ಥನೆಯನ್ನು ಮಾಡಿದರು.

ಶ್ರೀ. ವಿನಾಯಕ ಶಾನಭಾಗ

‘ಪರಾಶರ ತಾಲ !ದ ಕುರಿತಾದ ವೈಶಿಷ್ಟ್ಯಪೂರ್ಣ ಮಾಹಿತಿ

‘ಪರಾಶರ ತಾಲ ಈ ಸ್ಥಾನವು ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯ ಪರಾಶರ ಅರಣ್ಯದಲ್ಲಿದೆ. ಈ ಸ್ಥಾನವು ಸಮುದ್ರ ಮಟ್ಟದಿಂದ ೯ ಸಾವಿರ ಅಡಿ ಎತ್ತರದಲ್ಲಿದೆ. ‘ಪರಾಶರ ತಾಲವು ಒಂದು ರಹಸ್ಯವೇ ಆಗಿದೆ. ಇಲ್ಲಿ ಒಂದು ಸರೋವರವಿದೆ ಹಾಗೂ ಅದರ ಮಧ್ಯಭಾಗದಲ್ಲಿ ಒಂದು ಚಿಕ್ಕ ದ್ವೀಪವಿದೆ. ಈ ದ್ವೀಪವು ತೇಲಾಡುತ್ತಿರುತ್ತದೆ. ಸರೋವರ ದಲ್ಲಿ ಈ ದ್ವೀಪವು ತನ್ನ ಸ್ಥಾನವನ್ನು ಬದಲಾಯಿಸುತ್ತಿರುತ್ತದೆ. ಈ ಹಿಂದೆ ಈ ಸರೋವರದ ಆಳವನ್ನು ಅಳೆಯುವ ವಿಫಲ ಪ್ರಯತ್ನ ನಡೆದಿತ್ತು; ಆದರೆ ಅದನ್ನು ಅಳೆಯಲು ಯಾರಿಗೂ ಸಾಧ್ಯವಾಗಲಿಲ್ಲ. ಈ ಪ್ರದೇಶದಲ್ಲಿ ವರ್ಷದಲ್ಲಿ ೪ ತಿಂಗಳು ಎಲ್ಲೆಡೆ ಹಿಮವಿರುವುದರಿಂದ ಈ ಸರೋವರದ ನೀರು ಹೆಪ್ಪುಗಟ್ಟುತ್ತದೆ.

೬ ವರ್ಷದ ದೈವೀ ಬಾಲಕನು ಒಂದೇ ರಾತ್ರಿಯಲ್ಲಿ ಮರದಿಂದ ಕಟ್ಟಿದ ಶ್ರೀವಿಷ್ಣು, ಶಿವ ಮತ್ತು ಪರಾಶರ ಋಷಿಗಳ ದೇವಸ್ಥಾನ

ಸರೋವರದ ಪಕ್ಕದಲ್ಲಿ ೧೩ ನೇ ಶತಮಾನದಲ್ಲಿ ಕಟ್ಟಲಾದ ಒಂದು ದೊಡ್ಡ ದೇವಸ್ಥಾನವಿದೆ. ‘ಈ ಸಂಪೂರ್ಣ ದೇವಸ್ಥಾನವನ್ನು ಒಂದು ದೇವದಾರ ವೃಕ್ಷದ ಮರದಿಂದ ಓರ್ವ ೬ ವರ್ಷಗಳ ದೈವೀ ಬಾಲಕನು ಒಂದೇ ರಾತ್ರಿಯಲ್ಲಿ ಕಟ್ಟಿದನು, ಎಂದು ಅಲ್ಲಿನ ಪುರೋಹಿತರು ಹೇಳಿದರು. ಈ ದೇವಸ್ಥಾನದಲ್ಲಿ ಬಹಳ ಹಿಂದೆ ಸ್ಥಾಪಿಸಲಾದ ಶ್ರೀ ವಿಷ್ಣುವಿನ ಮೂರ್ತಿ ಮತ್ತು ಶಿವಲಿಂಗವಿದೆ. ಕೆಲವು ವರ್ಷಗಳ ಹಿಂದೆ ಸ್ಥಳೀಯರು ಈ ದೇವಸ್ಥಾನದಲ್ಲಿ ಪರಾಶರ ಋಷಿಗಳ ಒಂದು ಸುಂದರವಾದ ಮೂರ್ತಿಯನ್ನು ಸ್ಥಾಪಿಸಿದ್ದಾರೆ.

ಪರಾಶರ ಋಷಿಗಳ ಮಹಾತ್ಮೆ !

‘ಪರಾಶರ ಋಷಿಗಳು ಸ್ಮೃತಿಕಾರ ಮತ್ತು ಗೋತ್ರಪ್ರವರ್ತಕ ಋಷಿಗಳಾಗಿದ್ದರು. ‘ಶಾಕ್ತಿ ಋಷಿಗಳು ಇವರ ತಂದೆಯಾಗಿದ್ದರು ಮತ್ತು ವಸಿಷ್ಠ ಋಷಿಗಳು ಅವರ ಅಜ್ಜನಾಗಿದ್ದರು. ಪರಾಶರ ಋಷಿಗಳ ಸುಪುತ್ರ ಅಂದರೆ ಮಹರ್ಷಿ ವ್ಯಾಸರು ವೇದ, ಉಪನಿಷತ್ತುಗಳು, ಪುರಾಣ ಮತ್ತು ಮಹಾಭಾರತ ಇತ್ಯಾದಿಗಳನ್ನು ಬರೆದರು ಮತ್ತು ವೇದಗಳನ್ನು ವಿಂಗಡಿಸಿದರು. ಪರಾಶರ ಋಷಿಗಳು ಸದ್ಯದ ಯುಗದ ಸಪ್ತರ್ಷಿಗಳ ಪೈಕಿ ಒಬ್ಬರಾಗಿದ್ದಾರೆ. ಅವರು ಜ್ಯೋತಿಷ್ಯ, ಕೃಷಿ ಮತ್ತು ಆಯುರ್ವೇದ ಇವುಗಳ ಕುರಿತು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಅದರಲ್ಲಿ ‘ಬೃಹತ್ಪರಾಶರ ಹೋರಾಶಾಸ್ತ್ರ ಇದು ಬಹಳ ಪ್ರಸಿದ್ಧವಾಗಿದೆ. ಜ್ಯೋತಿಷ್ಯಶಾಸ್ತ್ರದ ಅಭ್ಯಾಸ ಮಾಡುವವರಿಗೆ ಈ ಗ್ರಂಥವು ಮೂಲಗ್ರಂಥವೆಂದು ಪರಿಗಣಿಸಲಾಗುತ್ತದೆ. ಇಂದು ರೂಢಿಯಲ್ಲಿರುವ ಜಾತಕದ ಪದ್ಧತಿಯನ್ನು ಪರಾಶರ ಋಷಿಗಳೇ ರಚಿಸಿದ್ದಾರೆ. ಸನಾತನ ಸಂಸ್ಥೆಯ ವತಿಯಿಂದ ಪರಾಶರ ಋಷಿಗಳ ಚರಣಗಳಲ್ಲಿ ಕೃತಜ್ಞತಾಪೂರ್ವಕ ವಂದನೆಗಳು !  – ಶ್ರೀ. ವಿನಾಯಕ ಶಾನಭಾಗ (೨೦.೬.೨೦೨೧)

ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಇದುವರೆಗೆ ಅಂದಾಜು ೮ ಲಕ್ಷಕ್ಕಿಂತ ಹೆಚ್ಚು ಕಿ.ಮೀ. ಪ್ರಯಾಣ ಮಾಡಿ ಇಂತಹ ಪ್ರಾಚೀನ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇದರಿಂದ ನಮಗೆ ಇತಿಹಾಸದಲ್ಲಿ ಹುದುಗಿರುವ ದೈವೀ ಸ್ಮೃತಿಗಳನ್ನು ಛಾಯಾಚಿತ್ರಮಯ ದರ್ಶನ ಮಾಡಿಸುತ್ತಿದ್ದಾರೆ ! ಅದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.

 

ಪರಾಶರ ಋಷಿಗಳ ದೇವಸ್ಥಾನದಲ್ಲಿ ಕೂರಿಸಿದಲಾದ ಸುಂದರ ಮೂರ್ತಿ

 

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಹಿಂಬದಿಯಲ್ಲಿ ದೈವೀ ಸರೋವರದ ಸಮೀಪ ೬ ವರ್ಷದ ಬಾಲಕನು ಕಟ್ಟಿದ ದೇವಸ್ಥಾನ

 

ದೈವೀಕವಾದ ಪರಾಶರ ಸರೋವರದಲ್ಲಿರುವ ಸಣ್ಣ ದ್ವೀಪ ಮತ್ತು ಪಕ್ಕದಲ್ಲಿ ಮರದಿಂದ ಕಟ್ಟಿದ ಶ್ರೀವಿಷ್ಣು, ಶಿವ ಮತ್ತು ಪರಾಶರ ಋಷಿಗಳ ದೇವಸ್ಥಾನ