ಅಷ್ಟೇ ಪ್ರಕೃತಿ, ಅಷ್ಟೇ ಸಾಧನಾಮಾರ್ಗಗಳು ಇಂತಹ ಸಾಧನೆಯನ್ನು ಸನಾತನ ಸಂಸ್ಥೆಯು ಮಾತ್ರ ಕಲಿಸುತ್ತದೆ. ಪ್ರತಿಯೊಬ್ಬರ ಸಾಧನಾಮಾರ್ಗ, ಉದಾ. ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ ಇತ್ಯಾದಿ ಮತ್ತು ಆಧ್ಯಾತ್ಮಿಕ ಮಟ್ಟ, ವಯಸ್ಸು, ದೈಹಿಕ ಸಾಮರ್ಥ್ಯ ಇತ್ಯಾದಿಗಳು ವಿಭಿನ್ನವಾಗಿವೆ. ಆದ್ದರಿಂದ, ಪ್ರತಿಯೊಬ್ಬರ ಪ್ರಕೃತಿಯನ್ನು ನೋಡಿ ಸನಾತನದಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಸಾಧನೆಯನ್ನು ಹೇಳಲಾಗುತ್ತದೆ. ವೈದ್ಯರು ಪ್ರತಿಯೊಬ್ಬ ರೋಗಿಗೆ ವಿವಿಧ ಔಷಧಿಗಳನ್ನು ನೀಡುತ್ತಾರೆ, ವಿದ್ಯಾರ್ಥಿಗಳು ವಿಭಿನ್ನ ಶಿಕ್ಷಣಗಳನ್ನು ಪಡೆಯುತ್ತಾರೆ, ಇದೂ ಹಾಗೆಯೇ ಇದೆ. ಸನಾತನ ಸಂಸ್ಥೆಯ ಮಹತ್ವ ಮಗು ಮತ್ತು ಇನ್ನು ಇತರರು ಹೇಗೆ ನಡೆಯಬೇಕು ? ಮಾತನಾಡಬೇಕು ? ಮತ್ತು ವರ್ತಿಸಬೇಕು ? ಎಂಬುದನ್ನು ಅವರ ತಂದೆ-ತಾಯಿಯರು ಅಥವಾ ಹಿತೈಷಿಗಳು ಅವರಿಗೆ ಕಲಿಸುತ್ತಾರೆ; ಆದರೆ ಅವರು ಅದನ್ನು ಹೇಗೆ ಕಾರ್ಯರೂಪಕ್ಕೆ ತರುವುದು ? ಎಂದು ಕಲಿಸುವುದಿಲ್ಲ. ಸನಾತನ ಸಂಸ್ಥೆಯು ಅದನ್ನೇ ಕಲಿಸುತ್ತದೆ.
ವೃದ್ಧಾಪ್ಯವೆಂದರೆ ಮತ್ತೊಂದು ಬಾಲ್ಯ – ಅಮ್ಮಾ !ವೃದ್ಧಾಪ್ಯದಲ್ಲಿ ದೇಹವು ಕ್ಷೀಣಿಸುತ್ತದೆ ಮತ್ತು ಯಾವುದೇ ಚಲನೆಯನ್ನು ಮಾಡುವಾಗ ನೋವು ಅನುಭವಿಸುತ್ತದೆ. ಆ ನೋವಿನಿಂದ, ಅಮ್ಮಾ ಎಂಬ ಪದವು ನನ್ನ ಬಾಯಿಯಿಂದ ತಾನಾಗಿಯೇ ಹೊರಬರುತ್ತದೆ ! ಸಣ್ಣ ಮಗುವಿನಂತೆ ವೃದ್ಧಾಪ್ಯದಲ್ಲಿಯೂ ತಾಯಿಯನ್ನು ನಿರಂತರವಾಗಿ ನೆನಪಿಸಿಕೊಳ್ಳುವುದು ಅಂದರೆ ಇನ್ನೊಂದು ಬಾಲ್ಯವನ್ನು ಅನುಭವಿಸುವುದು ! – (ಪರಾತ್ಪರ ಗುರು) ಡಾ. ಆಠವಲೆ |