ಆರೋಗ್ಯಕ್ಕೆ ಹಾನಿಕರ ‘ಜಂಕ ಫುಡ್’ಗೆ ಬಲಿಯಾಗದೇ ಸ್ವದೇಶಿ ಹಾಗೂ ತಾಜಾ ಆಹಾರವನ್ನು ಗ್ರಹಣ ಸೇವಿಸಿ ಆರೋಗ್ಯದಿಂದಿರಿ ! – ವೈದ್ಯ ಸುವಿನಯ ದಾಮಲೆ, ರಾಷ್ಟ್ರೀಯ ಗುರು, ಆಯುಷ ಸಚಿವಾಲಯ
‘ಜಂಕ ಫುಡ್’ಗೆ ಆಯುರ್ವೇದದಲ್ಲಿ ‘ವಿರುದ್ಧಅನ್ನ’ ಎಂದು ಹೇಳಲಾಗಿದೆ. ಪಾನಕ, ಎಳನೀರು ಇವುಗಳಂತಹ ಭಾರತೀಯ ಪೇಯಗಳನ್ನು ಕುಡಿಯುವ ಬದಲು ಆರೋಗ್ಯಕ್ಕೆ ಹಾನಿಕರವಾಗಿರುವ ಕೋಲ್ಡಡ್ರಿಂಕ್ಸ್‌ಗೆ ನಾವು ಬಲಿಯಾಗುತ್ತಿದ್ದೇವೆ. ಮ್ಯಾಗಿ, ಬಿಸ್ಕತ್ತು ಸೇರಿದಂತೆ ಹಲವಾರು ಸೀಲ್ಡ್ ಪ್ಯಾಕೇಟ್‌ನಲ್ಲಿ ಬರುವ ಆಹಾರಗಳ ಹೊದಿಕೆಯ ಮೇಲೆ ಪ್ರೋಟೀನ್, ಕ್ಯಾಲೋರಿಗಳು ಮುಂತಾದ ಅನೇಕ ಒಳ್ಳೆಯ ವಿಷಯಗಳಿವೆ ಎಂದು ವಿದೇಶಿ ಮತ್ತು ದೇಶೀಯ ಸಂಸ್ಥೆಗಳು ಹೇಳಿಕೊಳ್ಳುತ್ತವೆ. ಆದರೆ ಇದು ನಿಜವಲ್ಲ. ‘ಜಂಕ್ ಫುಡ್’ನ ಜಾಹಿರಾತನ್ನು ವಿವಿಧ ಆಕರ್ಷಕ ರೀತಿಯಲ್ಲಿ ಮಾಡಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಸರಕಾರವು ಇದನ್ನು ತಕ್ಷಣ ನಿಷೇಧಿಸಬೇಕು. ಭಾರತೀಯರು ‘ಜಂಕ್ ಫುಡ್’ ಅನ್ನು ದೇಶೀಯವಾಗಲಿ ಅಥವಾ ವಿದೇಶಿಯಾಗಲಿ ಅದನ್ನು ತ್ಯಜಿಸಬೇಕು. ಆಯುರ್ವೇದದಲ್ಲಿ ಹೇಳಿದಂತೆ, ಗಾಳಿ, ಸೂರ್ಯನ ಪ್ರಕಾಶ ಮತ್ತು ಚಂದ್ರನ ಪ್ರಕಾಶ ಸ್ಪರ್ಶ ಅಥವಾ ಸಂಪರ್ಕಕ್ಕೆ ಬಂದಿರುವಂತಹ ಆಹಾರವನ್ನೇ ಸೇವಿಸಬೇಕು. ಆರೋಗ್ಯಕ್ಕೆ ಹಾನಿಕರವಾದ ‘ಜಂಕ್ ಫುಡ್’ಗೆ ಮಾರು ಹೋಗದೆ ದೇಶಿಯ ಮತ್ತು ತಾಜಾ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವಾಗಿರಲು ‘ಆಯುಷ ಸಚಿವಾಲಯ’ದ ರಾಷ್ಟ್ರೀಯ ಗುರು ವೈದ್ಯ ಸುವಿನಯ ದಾಮಲೆಯವರು ಕರೆ ನೀಡಿದ್ದಾರೆ. ಅವರು ‘ರಾಷ್ಟ್ರೀಯ ವೈದ್ಯರ ದಿನಾಚರಣೆ’ಯಂದು ‘ಆರೋಗ್ಯ ಸಹಾಯ ಸಮಿತಿ’ಯ ವತಿಯಿಂದ ಆಯೋಜಿಸಲಾದ ‘ವಿದೇಶಿ ಜಂಕ್ ಫುಡ್ : ಪೋಷಣೆಯೋ ಅಥವಾ ಆರ್ಥಿಕ ಶೋಷಣೆಯೋ ?’ ಈ ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ Hindujagruti.org ನಲ್ಲಿ ಅದೇರೀತಿ ಯುಟ್ಯುಬ್ ಮತ್ತು ಟ್ವಿಟರ್ ಮೂಲಕ ೩,೦೩೩ ಜನರು ವೀಕ್ಷಿಸಿದ್ದಾರೆ.
‘ನೆಸ್ಲೆ’ ಈ ವಿದೇಶಿ ಕಂಪನಿಯ ವಾಸ್ತವತೆಯನ್ನು ಬಹಿರಂಗಪಡಿಸಿದ ಉತ್ತರಪ್ರದೇಶದ ‘ಮಾಜಿ ಸೈನಿಕರ ಕಲ್ಯಾಣ ಸಂಘಟನೆ’ಯ ಸಂಘಟನಾ ಸಚಿವರಾದ ಶ್ರೀ. ಇಂದ್ರಸೇನ್ ಸಿಂಹ ಇವರು, ಪ್ರತಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ನೋಡಿ ಅದರ ವರದಿಯನ್ನು ಬಹಿರಂಗಪಡಿಸಿದ ನಂತರವೇ ಅದರ ಮಾರಾಟಕ್ಕೆ ಅನುಮತಿಸಬೇಕು; ಆದರೆ ಹಾಗೆ ಆಗುತ್ತಿರುವುದು ಕಂಡು ಬರುತ್ತಿಲ್ಲ. ಅನೇಕ ಸಂಸ್ಥೆಗಳಿಗೆ ಅವರು ಪೂರೈಸುವ ‘ಪ್ಯಾಕೇಜ್ಡ್’ ಆಹಾರ ಮತ್ತು ನೀರಿನ ಬಗ್ಗೆ ಸರಿಯಾದ ಪರವಾನಗಿ ಇಲ್ಲದಿದ್ದರೂ ನಮ್ಮ ದೇಶದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುತ್ತಿದೆ. ‘ಎಫ್.ಎಸ್.ಎಸ್.ಎ.ಐ.’ ಮತ್ತು ‘ಎಫ್.ಡಿ.ಒ.’ ನಂತಹ ಸಂಸ್ಥೆಗಳು ಎಲ್ಲಿಯವರೆಗೆ ನಿಷ್ಪಕ್ಷಪಾತವಾಗಿ ಮತ್ತು ಭ್ರಷ್ಟಾಚಾರದಿಂದ ಮುಕ್ತರಾಗಿ ಕಾರ್ಯ ಮಾಡುವುದಿಲ್ಲವೋ ಅಲ್ಲಿಯವರೆಗೆ, ಭಾರತೀಯರಿಗೆ ಪೌಷ್ಠಿಕ ಆಹಾರವನ್ನು ಪಡೆಯುವುದು ಹೆಚ್ಚು ಕಮ್ಮಿ ಅಸಾಧ್ಯವೆನ್ನಬಹುದು ಎಂದರು.
ಈ ಸಮಯದಲ್ಲಿ, ಆಹಾರ ಮತ್ತು ಪೌಷ್ಠಿಕಾಂಶ ತಜ್ಞ ಶ್ರೀಮತಿ. ಶರಣ ಇವರು, ಜಂಕ್ ಎಂದರೆ ಕಸ ! ಯಾವುದೇ ಪೋಷಕಾಂಶಗಳನ್ನು ಹೊಂದಿರದ ಆಹಾರವನ್ನು ‘ಜಂಕ್ ಫುಡ್’ ಎಂದು ಕರೆಯಲಾಗುತ್ತದೆ. ‘ಜಂಕ್ ಫುಡ್’ ತಿನ್ನುವುದು ನಿಮ್ಮ ಹೊಟ್ಟೆಗೆ ಕಸ ತುಂಬಿಸಿದಂತೆ. ಅದರಿಂದ ದೇಹದ ಪೋಷಣೆಯಾಗುವುದಿಲ್ಲ ಬದಲಾಗಿ ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಇದರಲ್ಲಿ ಎಲ್ಲಾ ಬೇಕರಿಗಳು, ಏರ್‌ಟೈಟ್ ಪದಾರ್ಥ ಮತ್ತು ಪಾನೀಯಗಳನ್ನು ಒಳಗೊಂಡಿವೆ ಕೇವಲ ಸಣ್ಣ ಮಕ್ಕಳು ಮಾತ್ರವಲ್ಲದೆ ಪೋಷಕರು ಕೂಡ ಜಂಕ್ ಫುಡ್‌ಗೆ ಬಲಿಯಾಗುತ್ತಾರೆ. ಭಾರತೀಯ ಆಹಾರಶಾಸ್ತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಮಯದಲ್ಲಿ ‘ಆರೋಗ್ಯ ಸಹಾಯ ಸಮಿತಿ’ಯ ಸಮನ್ವಯಕರಾದ ಅಶ್ವಿನಿ ಕುಲಕರ್ಣಿಯವರು ಮಾತನಾಡಿ, ಆಡಳಿತದ ನಿಷ್ಕ್ರಿಯತೆಯಿಂದ, ದೇಶಾದ್ಯಂತ ಕಳಪೆ ಗುಣಮಟ್ಟದ ಆಹಾರವನ್ನು ಲಭ್ಯವಾಗುತ್ತಿರುವುದು ಕಂಡು ಬರುತ್ತಿದೆ. ಆಹಾರದಲ್ಲಿ ಕಲಬೆರಕೆ ಕಂಡುಬಂದರೆ ಎಲ್ಲಿ ದೂರು ನೀಡಬೇಕೆಂದು ಸಾಮಾನ್ಯ ನಾಗರಿಕರಿಗೆ ತಿಳಿದಿಲ್ಲ. ‘ಆಹಾರದ ಕಲಬೆರಕೆ’ ಕುರಿತು ಶಾಲಾ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕೆಂದು ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ, ದೇಶದ ಯಾವುದೇ ರಾಜ್ಯ ಆಯುಕ್ತರು ಹಾಲು ಮತ್ತು ಆಹಾರಗಳ ಕಲಬೆರಕೆ ಕುರಿತು ಕಾರ್ಯಾಗಾರಗಳನ್ನು ನಡೆಸಿಲ್ಲ. ಇದರ ವಿರುದ್ಧ ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.