ಒಂದೆಡೆ ಕೇರಳದ ಕಮ್ಯುನಿಸ್ಟ್ ಪಕ್ಷವು ಗೋಹತ್ಯೆ ನಿಷೇಧವನ್ನು ವಿರೋಧಿಸುತ್ತದೆ ಮತ್ತು ಗೋಮಾಂಸದ ಸಮಾರಂಭವನ್ನು ಆಯೋಜಿಸುತ್ತದೆ. ಮತ್ತೊಂದೆಡೆ, ಅದೇ ಪಕ್ಷದ ಸರಕಾರದಿಂದ ಸರಕಾರಿ ಹಂತದಲ್ಲಿ ಸಗಣಿ ಗೋಮೂತ್ರದ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳನ್ನು ನಡೆಸುವ ಮೂಲಕ ಹಣವನ್ನು ಗಳಿಸಲಾಗುತ್ತದೆ ! ಹೀಗಿದ್ದರೆ, ಸರಕಾರವು ರಾಜ್ಯದಲ್ಲಿ ಗೋಹತ್ಯೆಯನ್ನು ಏಕೆ ನಿಷೇಧಿಸುವುದಿಲ್ಲ ?
ತಿರುವನಂತಪುರಂ (ಕೇರಳ) – ಕೇರಳ ಸರ್ಕಾರಿ ಸ್ವಾಮ್ಯದ ಆಯುರ್ವೇದ ಔಷಧ ಉತ್ಪಾದನಾ ಸಂಸ್ಥೆ ‘ಔಷಧಿ’ ಇದು ಹಸುವಿನ ಸಗಣಿ, ಮೂತ್ರ, ಹಾಲು, ತುಪ್ಪ ಮತ್ತು ಮೊಸರಿನಿಂದ ತಯಾರಿಸಿದ ‘ಪಂಚಗವ್ಯ ಘೃತಮ್’ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ‘ಔಷಧಿ’ ಸಂಸ್ಥೆಯ ಪ್ರಕಾರ, ಅವರ ಔಷಧವು ಮಾನಸಿಕ ಅಸ್ವಸ್ಥತೆ, ಕಾಮಾಲೆ, ಜ್ವರ, ಮೂರ್ಛೆಹೋಗುವುದು, ಸ್ಮರಣೆಶಕ್ತಿ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ ಎಂದು ಹೇಳಿದೆ.
೧. ‘ಔಷಧಿ’ ಸಂಸ್ಥೆಯು ತನ್ನ ಪರಿಚಯವನ್ನು ಭಾರತೀಯ ಸಾರ್ವಜನಿಕ ವಲಯದಲ್ಲಿ ‘ಆಯುರ್ವೇದ ಔಷಧಿಗಳ ಅತಿದೊಡ್ಡ ಉತ್ಪಾದಕ’ಗಳಲ್ಲಿ ಒಂದಾಗಿದೆ ಎಂದು ಹೇಳಿಕೊಳ್ಳುತ್ತದೆ. ಕೇರಳ ಸರಕಾರಕ್ಕೆ ಸತತವಾಗಿ ಲಾಭ ಗಳಿಸಿಕೊಡುವ ಮತ್ತು ಲಾಭಾಂಶವನ್ನು ನೀಡಿದ ಸಾರ್ವಜನಿಕ ವಲಯದ ಕೆಲವೇ ಸಂಸ್ಥೆಗಳಲ್ಲಿ ಇದು ಒಂದಾಗಿದೆ.
೨. ಈ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ಜಾಲತಾಣದಿಂದ ಅದೇರೀತಿ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಜನರು ಈಗಲಾದರೂ ಹಸುವನ್ನು ಅವಮಾನಿಸುವುದನ್ನು ನಿಲ್ಲಿಸುವರೇನು ? ಎಂದು ಕಮ್ಯುನಿಸ್ಟರಲ್ಲಿ ವಿಚಾರಿಸುತ್ತಿದ್ದಾರೆ.