ಕೊರೊನಾದಿಂದ ತೀರಿಕೊಂಡ ಹಿಂದೂ ವೃದ್ಧೆಯೊಬ್ಬರ ಶವವನ್ನು ಹೂಳಬೇಕೆಂದು ಮತಾಂತರಗೊಂಡ ಕ್ರೈಸ್ತ ಮಗನ ಬೇಡಿಕೆಯನ್ನು ತಿರಸ್ಕರಿಸಿ ಅಂತ್ಯಕ್ರಿಯೆ ನಡೆಸಿದ ಮೊಮ್ಮಗಳು !

ಹಿಂದೂ ಸಂಸ್ಕೃತಿಯನುಸಾರ ಕೃತಿ ಮಾಡುವ ಇಂತಹ ಯುವತಿಯರ ಆದರ್ಶವನ್ನು ಹಿಂದೂಗಳು ಪಡೆದುಕೊಳ್ಳಬೇಕು !

ಗ್ವಾಲಿಯರ್ (ಮಧ್ಯಪ್ರದೇಶ) – ಇಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧ ಮಹಿಳೆಯೊಬ್ಬಳ ಅಂತ್ಯಕ್ರಿಯೆ ಮಾಡಲು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮಗನು ನಿರಾಕರಿಸಿದನೆಂದು ವೃದ್ಧೆಯ ಮೊಮ್ಮಗಳು ಜಾರ್ಖಂಡ್‍ನಿಂದ ೧೧೦೦ ಕಿ.ಮೀ ದೂರದಿಂದ ಬಂದು ಶವದ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ವೃದ್ಧೆಯ ಹೆಸರು ಸರೋಜ ದೇವಿ ಎಂದಾಗಿದೆ. ಅವರ ಮಗ ಧರ್ಮ ಪ್ರತಾಪ ಸಿಂಹ ಮತಾಂತರಗೊಂಡು ತನ್ನ ಹೆಸರನ್ನು ಡೇವಿಡ್ ಎಂದು ಇಟ್ಟುಕೊಂಡಿದ್ದಾನೆ. ‘ಕ್ರೈಸ್ತ ಧರ್ಮದ ಪ್ರಕಾರ ಸರೋಜ ದೇವಿಯನ್ನು ಹೂಳಬೇಕು’ ಎಂದು ಡೇವಿಡ್ ಹೇಳಿದನು. ಅದಕ್ಕೆ ಅವರ ಮೊಮ್ಮಗಳು ಶ್ವೇತಾ ಸುಮನ್ ವಿರೋಧಿಸಿದಳು. ‘ಅಜ್ಜಿ ಮತಾಂತರಗೊಳ್ಳದ ಕಾರಣ, ಅವರ ಶವವನ್ನು ಸನಾತನ ಧರ್ಮದ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುವುದು’, ಎಂದು ಆಕೆ ಹೇಳಿದಳು. ಚಿಕ್ಕಪ್ಪ ಡೇವಿಡ್ ಅವರು ಇಂತಹ ಬೇಡಿಕೆಯ ಹಿಂದೆ ಯಾರು ಕೈವಾಡವಿದೆ ಎಂದು ಕಂಡುಹಿಡಿಯಲು ಶ್ವೇತಾಳು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಆಕೆಯು ಜಿಲ್ಲಾಧಿಕಾರಿಯ ಬಳಿಯೂ ವಿನಂತಿಯನ್ನು ಸಹ ಮಾಡಿದ್ದಾಳೆ.