ಸನಾತನದ ೮೬ ನೇ ಸಂತರಾದ ಪೂ. ಶಾಲಿನಿ ಮಾಯೀಣಕರ (೯೨ ವರ್ಷ) ಇವರ ದೇಹತ್ಯಾಗ

ಪೂ. ಶಾಲಿನಿ ಮಾಯೀಣಕರ

ನಮ್ರತೆ, ನಿರಪೇಕ್ಷ ಪ್ರೀತಿ ಇವುಗಳಂತಹ ದೈವೀ ಗುಣಗಳಿರುವ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಅಪಾರ ಭಾವವಿರುವ, ಹಾಗೆಯೇ ಸದ್ಯ ಸನಾತನದ ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದ ಸನಾತನದ ೮೬ ನೇ ಸಂತರಾದ ಪೂ. ಶಾಲಿನಿ ಮಾಯೀಣಕರ (೯೨ ವರ್ಷ) ಇವರು ಮೇ ೧೧ ರಂದು ರಾತ್ರಿ ೧.೩೮ ಗಂಟೆಗೆ ದೇಹತ್ಯಾಗ ಮಾಡಿದರು. ಮೇ ೧೨ ರಂದು ಅವರ ಪಾರ್ಥಿವದ ಮೇಲೆ ಭಾವಪೂರ್ಣ ವಾತಾವರಣದಲ್ಲಿ ಅಂತಿಮ ಸಂಸ್ಕಾರವನ್ನು ಮಾಡ ಲಾಯಿತು. ಪೂ. ಮಾಯೀಣಕರ ಅಜ್ಜಿಯವರ ಮೊಮ್ಮಗಳಾದ ಶೇ. ೬೬ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಸೋನಲ ಜೋಶಿ ಇವರು ಸನಾತನದ ರಾಮನಾಥಿ ಆಶ್ರಮದಲ್ಲಿ ಪೂರ್ಣವೇಳೆ ಸಾಧನೆಯನ್ನು ಮಾಡುತ್ತಾರೆ ಮತ್ತು ಪುತ್ರಿಯರಾದ ಸೌ. ಅನುರಾಧಾ ಪುರೋಹಿತ, ಸೌ. ಮೇಧಾ ಜೋಶಿ ಮತ್ತು ಸೌ. ಸುಧಾ ಜೋಶಿ ಇವರೂ ಸಾಧನೆಯನ್ನು ಮಾಡುತ್ತಿದ್ದಾರೆ.