ವಡಾಳಾ ಮಹಾದೇವ (ನಗರ ಜಿಲ್ಲೆ) ಇಲ್ಲಿಯ ಮಹಾಯೋಗಿ ಪ.ಪೂ. ಗುರುದೇವ ಡಾ. ಕಾಟೆಸ್ವಾಮಿ ಇವರ ಉತ್ತರಾಧಿಕಾರಿ ಪ.ಪೂ. ಭಾಸ್ಕರಕಾಕಾ ಇವರಿಂದ ದೇಹತ್ಯಾಗ !

ಪ.ಪೂ. ಭಾಸ್ಕರಕಾಕಾ

ನಗರ – ವಡಾಳಾ ಮಹಾದೇವ ಇಲ್ಲಿನ ಮಹಾಯೋಗಿ ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿಯವರ ಶಿಷ್ಯ ಹಾಗೂ ಉತ್ತರಾಧಿಕಾರಿ ಪ.ಪೂ. ಭಾಸ್ಕರ ಕಾಕಾ ಇವರು ಮೇ ೧೪ ರಂದು ಬೆಳಗ್ಗೆ ೬.೩೦ ಕ್ಕೆ ಶ್ರೀರಾಮಪುರದಲ್ಲಿನ ಗುರುದೇವ ಡಾ. ಕಾಟೆಸ್ವಾಮಿ ಆಶ್ರಮದಲ್ಲಿ ದೇಹತ್ಯಾಗ ಮಾಡಿದರು. ಅವರಿಗೆ ೬೧ ವರ್ಷ ವಯಸ್ಸಾಗಿತ್ತು. ಮೇ ೧೫ ರಂದು ಬೆಳಿಗ್ಗೆ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಅವರು ೨೭ ವರ್ಷಗಳ ಕಾಲ ಅಖಂಡವಾಗಿ ಹಾಗೂ ತಳಮಳದಿಂದ ಪ.ಪೂ. ಗುರುದೇವ ಕಾಟೆಸ್ವಾಮಿಯವರ ಸೇವೆಯನ್ನು ಮಾಡಿದರು. ಪ.ಪೂ. ಗುರುದೇವ ಡಾ. ಕಾಟೆಸ್ವಾಮಿಯವರು ದೇಹತ್ಯಾಗ ಮಾಡಿದ ನಂತರ ಆಶ್ರಮದ ಎಲ್ಲ ಜವಾಬ್ದಾರಿ ಅವರ ಮೇಲೆ ಇತ್ತು. ಇತ್ತೀಚಿನ ಕೆಲವು ದಿನಗಳಲ್ಲಿ ಅವರು ಶಿರ್ಡಿಯಲ್ಲಿನ ಆಸ್ಪತ್ರೆಯಲ್ಲಿ ಇದ್ದರು. ಇವರಿಗೆ ತಾಯಿ ಪ.ಪೂ. ಜಾನಕಿದೇವಿ ಮತ್ತು ಕಿರಿಯ ಸಹೋದರ ಇದ್ದಾರೆ. ಪ.ಪೂ. ಜಾನಕಿದೇವಿ ಇವರು ಉಚ್ಚ ಮಟ್ಟದ ಸಂತರಾಗಿದ್ದಾರೆ.

ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ ಇವರ ಉತ್ತರಾಧಿಕಾರಿ ಪ.ಪೂ. ಭಾಸ್ಕರಕಾಕಾ (ಮಧ್ಯದಲ್ಲಿ ಕುಳಿತವರು) ಇವರನ್ನು ಪರಾತ್ಪರ ಗುರು ಡಾ. ಆಠವಲೆ ಇವರು ಸಂತರೆಂದು ಸನ್ಮಾನ ಮಾಡಿದ ಮೇಲೆ ಪ.ಪೂ. ಭಾಸ್ಕರಕಾಕಾ ಇವರಿಗೆ ಭಾವಜಾಗೃತಿಯಾದ ಕ್ಷಣ ! ಅವರ ಬಲಬದಿಯಲ್ಲಿ ಪ.ಪೂ. ರಾಮಾನಂದನಾಥ (ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿಯವರ ಇನ್ನೊಬ್ಬ ಶಿಷ್ಯರು) (೨೦೦೭ ನೇ ಇಸವಿ)

ಪ.ಪೂ. ಭಾಸ್ಕರಕಾಕಾ ಹಾಗೂ ಸನಾತನ ಸಂಸ್ಥೆ

ವಡಾಳಾ ಮಹಾದೇವದಲ್ಲಿನ ಜ್ಞಾನಯೋಗಿ ಪ.ಪೂ. ಡಾ. ಗುರುದೇವ ಕಾಟೆಸ್ವಾಮಿಯವರ ಶಿಷ್ಯ ಹಾಗೂ ಉತ್ತರಾಧಿಕಾರಿ ಪ.ಪೂ. ಭಾಸ್ಕರ ಕಾಕಾ ಇವರು ಕೆಲವು ದಿನ ಸನಾತನದ ರಾಮನಾಥಿ ಹಾಗೂ ದೇವದನ ಆಶ್ರಮದಲ್ಲಿ ವಾಸಿಸಿದ್ದರು. ಅವರು ಸಾಪ್ತಾಹಿಕ ‘ಸನಾತನ ಚಿಂತನ ಹಾಗೂ ಮಾಸಿಕ ‘ಘನಗರ್ಜಿತನಲ್ಲಿ ಪ್ರಕಟಿಸಿದ ಗುರುದೇವ ಡಾ. ಕಾಟೆಸ್ವಾಮೀಜಿ ಯವರ ಲೇಖನಗಳನ್ನು ‘ಸನಾತನ ಪ್ರಭಾತ ನಿಯತಕಾಲಿಕೆಯಲ್ಲಿ ಪ್ರಕಟಿಸಲು ಅನುವು ಮಾಡಿ ಕೊಟ್ಟಿದ್ದರು. ಸನಾತನದ ಆಶ್ರಮದಲ್ಲಿ ಅವರು ವಾಸವಿರುವಾಗ ಸಾಧಕರ ತೊಂದರೆಗಳು ದೂರವಾಗಲು ಅನೇಕ ಸಲ ಹವನಗಳನ್ನು ಮಾಡಿದ್ದರು. ಸನಾತನದ ಸಾಧಕರು ಅವರ ಆಶ್ರಮದಲ್ಲಿ ಜಪ ಇತ್ಯಾದಿ ಉಪಾಯಕ್ಕಾಗಿ ಹೋದಾಗ ಅವರು ತಮ್ಮ ಅಮೂಲ್ಯ ಜ್ಞಾನವನ್ನು ಸಾಧಕರಿಗೆ ನೀಡಿದ್ದರು.