ಆಕಾಶದಾದ್ಯಂತ ಹಾರಾಡಿತು ಶ್ರೀರಾಮನ ವಿಜಯಪತಾಕೆ |
ಪ್ರತಿಧ್ವನಿಸಿತು ಹಿಂದೂ ರಾಷ್ಟ್ರದ ಆಹ್ವಾನದ ಕರೆ ||
ರಾಮನಾಥಿ (ಗೋವಾ), – ಅಕ್ಷಯ ತದಿಗೆಯು ಅವಿನಾಶೀ ತತ್ತ್ವದ ಪ್ರತೀಕವಾಗಿದೆ. ಈ ಶುಭದಿನದಂದು (೧೪.೫.೨೦೨೧ ರಂದು) ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ರಾಮನಾಥಿ (ಗೋವಾ) ಆಶ್ರಮ ದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತದಿಂದ ಧರ್ಮಧ್ವಜವನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಚೈತನ್ಯಮಯ ವಾತಾವರಣದಲ್ಲಿ ಶಾಸ್ತ್ರೋಕ್ತವಾಗಿ ಧರ್ಮಧ್ವಜದ ಪೂಜೆಯನ್ನು ಮಾಡಲಾಯಿತು. ನಂತರ ಶಂಖ ಹಾಗೂ ಗಂಟೆಯನಾದ ಘೋಷ ಸಹಿತ ಧ್ವಜಾರೋಹಣವನ್ನು ಮಾಡಲಾಯಿತು. ಈ ವಿಧಿಯ ಪೌರೋಹಿತ್ಯವನ್ನು ಸನಾತನದ ಪುರೋಹಿತರಾದ ಶ್ರೀ. ಅಮರ ಜೋಶಿ ಮತ್ತು ಶ್ರೀ. ಚೈತನ್ಯ ದೀಕ್ಷಿತ ಇವರು ನಿರ್ವಹಿಸಿದ್ದರು.
ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಈ ಧರ್ಮಧ್ವಜದ ಒಂದು ಬದಿಯಲ್ಲಿ ಪ್ರಭು ಶ್ರೀರಾಮನ ಚಿತ್ರ, ಮತ್ತೊಂದು ಬದಿಯಲ್ಲಿ ಪರಾತ್ಪರ ಗುರು ಡಾ. ಆಠವಲೆ ಇವರ ಪ್ರಭು ಶ್ರೀರಾಮನ ಸ್ವರೂಪದಲ್ಲಿರುವ ಚಿತ್ರವನ್ನು ಹಾಕುವಂತೆ ಆಜ್ಞೆ ನೀಡಿದ್ದರು. ಅದಕ್ಕನುಸಾರ ಈ ಬಟ್ಟೆಯ ಧ್ವಜವನ್ನು ತಯಾರಿಸಲಾಯಿತು. ‘ಈ ಧರ್ಮಧ್ವಜವು ಹಿಂದೂ ರಾಷ್ಟ್ರವು ಸಮೀಪಿಸುತ್ತಿರುವುದರ ಪ್ರತೀಕವಾಗಿದೆ. ಈ ಧರ್ಮಧ್ವಜದ ಸ್ಥಾಪನೆಯಿಂದ ಎಲ್ಲ ಕಡೆಗಳಲ್ಲಿ ಹಿಂದೂ ಧರ್ಮದ ಕೀರ್ತಿ ಹೆಚ್ಚಾಗಲಿದೆ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಗೆ ವೇಗವು ಸಿಗಲಿದೆ, ಎಂದು ಸಪ್ತರ್ಷಿಗಳು ಆಶೀರ್ವಚನವನ್ನು ನೀಡಿದ್ದರು.