ಸಂಗೀತ ಮತ್ತು ವಾದ್ಯಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಸಂಗೀತ ಮತ್ತು ನೃತ್ಯ ಇವುಗಳ ಪ್ರಯೋಗದ ಸೂಕ್ಷ್ಮದಲ್ಲಿನ ವಾರ್ತೆ (ಸೂಕ್ಷ್ಮ-ವಾರ್ತೆ) !
ಈ ಜಗತ್ತಿನಲ್ಲಿ ಕೆಲವು ವಿಷಯಗಳು ಕಣ್ಣಿಗೆ ಕಾಣಿಸುತ್ತವೆ ಮತ್ತು ಕೆಲವು ವಿಷಯಗಳು ಕಣ್ಣಿಗೆ ಕಾಣಿಸುವುದಿಲ್ಲ. ‘ಯಾವ ವಿಷಯಗಳು ಕಣ್ಣುಗಳಿಗೆ ಕಾಣಿಸುವುದಿಲ್ಲವೋ, ಅವು ಅಸ್ತಿತ್ವದಲ್ಲಿಲ್ಲ, ಎಂದರ್ಥವಾಗುವುದಿಲ್ಲ, ಉದಾ: ಗಾಳಿ ಕಣ್ಣಿಗೆ ಕಾಣಿಸುವುದಿಲ್ಲ, ಅಂದರೆ ‘ಗಾಳಿಯಿಲ್ಲ ಎಂದರ್ಥವಾಗುವುದಿಲ್ಲ. ಸಾಧನೆಯಿಂದ ಜೀವದ ಸಾತ್ತ್ವಿಕತೆ ಹೆಚ್ಚಾಗತೊಡಗುತ್ತದೆ. ಸಾಧನೆ ಹೆಚ್ಚಾದಂತೆ ಸ್ಥೂಲ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯಾಚೆಗಿನ ‘ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯತೊಡಗುತ್ತವೆ ಮತ್ತು ಯಾವುದಾದರೊಂದು ವಿಷಯದಲ್ಲಿನ ಒಳ್ಳೆಯ ಮತ್ತು ಕೆಟ್ಟ ಸ್ಪಂದನಗಳ ಅರಿವಾಗುತ್ತದೆ. ಸದ್ಯ ಸಮಾಜವು ಸಾತ್ತ್ವಿಕತೆಯಿಂದ ದೂರ ಹೋಗುತ್ತಿದೆ ಮತ್ತು ಸಮಾಜದಲ್ಲಿ ರಜ-ತಮಾತ್ಮಕ ನಡೆ-ನುಡಿಗಳು ದೃಢವಾಗುತ್ತಿವೆ. ಸಂಗೀತ ಮತ್ತು ನೃತ್ಯ ಈ ಕ್ಷೇತ್ರಗಳೂ ಇದಕ್ಕೆ ಹೊರತಾಗಿಲ್ಲ. ಇದನ್ನು ಸಮಾಜಕ್ಕೆ ತೋರಿಸಿಕೊಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ನಾವು ಸಂಗೀತ ಮತ್ತು ನೃತ್ಯಗಳ ಮೇಲೆ ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡಿದೆವು. ಯಾವುದು ನಮಗೆ ಸೂಕ್ಷ್ಮದಲ್ಲಿ ಅರಿವಾಯಿತೋ, ಅದನ್ನು ಸಮಾಜಕ್ಕೆ ಹೇಳಲು ಮತ್ತು ‘ಯೋಗ್ಯ ಹೇಗಿರಬೇಕು, ಎನ್ನುವುದನ್ನು ಸಮಾಜಕ್ಕೆ ತಿಳಿಸಲು, ಅದನ್ನು ವೈಜ್ಞಾನಿಕ ಉಪಕರಣದ ಮೂಲಕವೂ ಸಿದ್ಧಪಡಿಸಿ ತೋರಿಸಲಾಗಿದೆ. ಇಲ್ಲಿ ಕೇವಲ ‘ಅಯೋಗ್ಯ ವಿಷಯಗಳಿಂದ ಹೇಗೆ ಪರಿಣಾಮವಾಗುತ್ತದೆ?, ಎಂಬುದನ್ನು ತೋರಿಸಿಕೊಡಲು, ಅಂದರೆ ಸೂಕ್ಷ್ಮದಲ್ಲಿನ ಕೆಲವು ವಾರ್ತೆಗಳನ್ನು (ಸೂಕ್ಷ್ಮ-ವಾರ್ತೆಗಳನ್ನು) ನೀಡುತ್ತಿದ್ದೇವೆ.
ಪಾಶ್ಚಾತ್ಯ ಸಂಗೀತದಿಂದ ಶರೀರವು ಅದುರುತ್ತದೆ, ಭಾರತೀಯ ಸಂಗೀತದಲ್ಲಿ ಮನಸ್ಸಿನ ಸ್ಥಿತಿಯನ್ನು ತಿಳಿದುಕೊಳ್ಳುವ ಕ್ಷಮತೆಯಿದೆ. ಪಾಶ್ಚಾತ್ಯ ಸಂಗೀತ ಜೀವವನ್ನು ಬಹಿರ್ಮುಖ ಮತ್ತು ಆಕ್ರಮಣಕಾರಿಯನ್ನಾಗಿಸುತ್ತದೆ, ಭಾರತೀಯ ಸಂಗೀತವು ಕೇಳುವವರ ಅಂತರಂಗವನ್ನು ತಲುಪಿ ಅವನನ್ನು ಸಂಯಮಿ ಮತ್ತು ಶಾಂತಗೊಳಿಸುತ್ತದೆ. ‘ಪಾಶ್ಚಾತ್ಯ ವಾದ್ಯಗಳ ಧ್ವನಿಯಿಂದ ವಾತಾವರಣದಲ್ಲಿ ರಜ-ತಮ ಹೆಚ್ಚಾಗುತ್ತದೆ ಮತ್ತು ಅದರಿಂದ ಕೆಟ್ಟ ಶಕ್ತಿಗಳೂ ಆಕರ್ಷಿಸಲ್ಪಡುತ್ತವೆ, ಎಂಬುದು ಗಮನಕ್ಕೆ ಬಂದಿದೆ. ಅದಕ್ಕೆ ಸಂಬಂಧಿಸಿದಂತೆ ೯.೯.೨೦೧೭ ರಂದು ಗೋವಾದ ಸನಾತನದ ರಾಮನಾಥಿ, ಆಶ್ರಮದಲ್ಲಿ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವ ಸಾಧಕರಿಗೆ ಪಾಶ್ಚಿಮಾತ್ಯ ಪದ್ಧತಿಯ ವಾದ್ಯಗಳನ್ನು ಕೇಳಿಸಿದಾಗ ಆಗುವ ಕೆಟ್ಟ ಪರಿಣಾಮಗಳ ಅಭ್ಯಾಸವನ್ನು ಮಾಡಲಾಯಿತು. ಆ ಸಮಯದಲ್ಲಿ ಗಮನಕ್ಕೆ ಬಂದ ಮುಖ್ಯ ವಿಷಯಗಳನ್ನು ಮುಂದೆ ನೀಡಲಾಗಿದೆ.
೧. ಆಧ್ಯಾತ್ಮಿಕ ತೊಂದರೆಯಿರುವ ಸಾಧಕರು ಈ ಮೊದಲು ಯಾವತ್ತೂ ಮಾಡದೇ ಇರುವ ಸಾಲಸಾ, ಬಾಲ್, ಬ್ರೇಕ್ ಡ್ಯಾನ್ಸ್ ಇತ್ಯಾದಿ ನೃತ್ಯಗಳನ್ನು ಸತತವಾಗಿ ಕೆಲವು ಗಂಟೆಗಳ ಕಾಲ ಮಾಡುವುದು
೧ ಅ. ಶಾಸ್ತ್ರೀಯ ನೃತ್ಯವನ್ನು ಕಲಿತಿರುವ ಸಾಧಕಿಯರು ನಿರಂತರವಾಗಿ ೭-೮ ಗಂಟೆಗಳ ಕಾಲ ಅವರಿಗೆ ಗೊತ್ತಿಲ್ಲದಿರುವ ಪಾಶ್ಚಾತ್ಯ ನೃತ್ಯಗಳನ್ನು ಮಾಡುವುದು : ಈ ಪ್ರಯೋಗದಲ್ಲಿ ಭಾಗವಹಿಸಿದ ಕೆಲವು ಸಾಧಕಿಯರು ಭರತನಾಟ್ಯಮ್ ಮತ್ತು ಕಥಕ್ ಈ ಭಾರತೀಯ ಶಾಸ್ತ್ರೀಯ ನೃತ್ಯಗಳನ್ನು ಕಲಿತಿದ್ದಾರೆ. ಅವರು ಕೆಲವು ಸಾಧಕರೊಂದಿಗೆ ಪಾಶ್ಚಾತ್ಯ ವಾದ್ಯಗಳ ತಾಳಕ್ಕೆ ನಿರಂತರವಾಗಿ ೭-೮ ಗಂಟೆಗಳ ಕಾಲ ಸಾಲಸಾ, ಬಾಲ್, ಬ್ರೇಕ್ ಇತ್ಯಾದಿ ಪಾಶ್ಚಾತ್ಯ ನೃತ್ಯಗಳನ್ನು ಮಾಡಿದರು. ಪ್ರತ್ಯಕ್ಷದಲ್ಲಿ ಇಂತಹ ನೃತ್ಯಗಳನ್ನು ಈ ಸಾಧಕರಲ್ಲಿ ಯಾರೂ ಈ ಮೊದಲು ಮಾಡಿರಲಿಲ್ಲ.
೧ ಆ. ಸಾಧಕನು ಹಾಡು ಕೇಳುವ ಮೊದಲೇ ‘ಮೈಕಲ್ ಜಾಕ್ಸನ್‌ನ ಹಾಡು ಹಾಕುವರು, ಎನ್ನುತ್ತಾ ಅದರಂತೆ ನೃತ್ಯವನ್ನು ಮಾಡುವುದು : ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವ ಒಬ್ಬ ಸಾಧಕನು ಹಾಡನ್ನು ಕೇಳುವ ಮೊದಲೇ ‘ಬಹುತೇಕ ಮೈಕಲ್ ಜಾಕ್ಸನ್‌ನ ಹಾಡು ಹಾಕುವರು, ಎಂದು ಇಬ್ಬರು-ಮೂವರು ಸಾಧಕರಿಗೆ ಹೇಳಿದ್ದನು. ಇದರಿಂದ ಆ ಸಾಧಕನಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗೆ ಈಗ ‘ಮೈಕಲ್ ಜಾಕ್ಸನ್‌ನ ಹಾಡು ಹಾಕುವರು, ಎಂಬುದು ಸೂಕ್ಷ್ಮದಿಂದ ಮೊದಲೇ ತಿಳಿದಿತ್ತು. ಆ ಸಾಧಕನು ಮೈಕಲ್ ಜಾಕ್ಸನ್‌ನ ನೃತ್ಯಗಳಿರುವ ಯಾವುದೇ ಚಲನಚಿತ್ರವನ್ನು (ವಿಡಿಯೋ) ಯಾವತ್ತೂ ನೋಡಿರಲಿಲ್ಲ. ಆದಾಗ್ಯೂ ಮೈಕಲ್ ಜಾಕ್ಸನ್ ಯಾವ ರೀತಿ ನೃತ್ಯವನ್ನು ಮಾಡುತ್ತಿದ್ದನು ಅದೇ ರೀತಿಯಲ್ಲಿ ನಿಪುಣನಂತೆ ನೃತ್ಯ ಮಾಡಿದನು.
೨. ಇಬ್ಬರು ಸಾಧಕಿಯರು ಕಣ್ಣು ಮುಚ್ಚಿಕೊಂಡು ಕುಶಲ ನೃತ್ಯಗಾರರಂತೆ ನೃತ್ಯ ಮಾಡುವುದು
ತೊಂದರೆಯಿರುವ ಇಬ್ಬರು ಸಾಧಕಿಯರು ಕುಶಲ ನೃತ್ಯಗಾರರಂತೆ ಕಣ್ಣುಗಳನ್ನು ಮುಚ್ಚಿಕೊಂಡು ನೃತ್ಯವನ್ನು ಮಾಡತೊಡಗಿದರು. ಇಬ್ಬರೂ ಒಟ್ಟಿಗೆ ನೃತ್ಯ ಮಾಡುವುದು ಇಬ್ಬರಲ್ಲಿರುವ ಕೆಟ್ಟ ಶಕ್ತಿಗಳ ಸಮನ್ವಯ ಮತ್ತು ಸಂಘಟನೆಯನ್ನು ತೋರಿಸುತ್ತದೆ.
೩. ಪಾಶ್ಚಾತ್ಯ ಪದ್ಧತಿಯ ವಾದ್ಯಗಳನ್ನು ಕೇಳುವಾಗ ಸಾಧಕರ ಮನಸ್ಸಿನಲ್ಲಿ ಬಂದ ಅಹಂಯುಕ್ತ ಮತ್ತು ಇತರ ವಿಚಾರಗಳಿಂದ ‘ಪಾಶ್ಚಾತ್ಯ ವಾದ್ಯಗಳಿಂದ ಭಾವನೆಗಳು ಹೆಚ್ಚಾಗುತ್ತವೆ, ಎಂಬುದು ಗಮನಕ್ಕೆ ಬರುವುದು
೩ ಅ. ಇಲೆಕ್ಟ್ರಿಕ್ ಗಿಟಾರ ಕೇಳುವಾಗ ತೊಂದರೆದಾಯಕ ದೃಶ್ಯ ಕಾಣಿಸುವುದು : ಇಲೆಕ್ಟ್ರಿಕ್ ಗಿಟಾರ ಕೇಳುವಾಗ ಓರ್ವ ಸಾಧಕಿ ಕೈಗಳ ವಿವಿಧ ಮುದ್ರೆಗಳನ್ನು ಮಾಡುತ್ತಿದ್ದಳು, ಆದರೆ ನಂತರ ಅವಳಿಗೆ ಈ ಕೃತಿಗಳ ಬಗ್ಗೆ ಏನೂ ನೆನಪಾಗಲಿಲ್ಲ. ಅವಳಿಗೆ ಕೇವಲ ‘ಅವಳು ಕೇವಲ ಒಂದು ಮರಳುಗಾಡಿನಲ್ಲಿದ್ದು ಅಲ್ಲಿ ಅವಳು ತೊಂದರೆದಾಯಕ ಜನರ ಮಧ್ಯದಲ್ಲಿ ಇರುವ, ಒಂದು ದೃಶ್ಯ ನೆನಪಾಗುತ್ತಿತ್ತು. ಇದರಿಂದ ಅವಳ ತೊಂದರೆ ಹೆಚ್ಚಾಗಿತ್ತು ಎಂಬುದು ಅರಿವಾಯಿತು.
೩ ಆ. ವಾದ್ಯಗಳನ್ನು ಕೇಳುವಾಗ ಅಹಂಯುಕ್ತ ಮತ್ತು ಇತರ ವಿಚಾರಗಳು ಮನಸ್ಸಿನಲ್ಲಿ ಬರುವುದು : ಇಲೆಕ್ಟ್ರಿಕ್ ಗಿಟಾರ, ಡ್ರಮ್ ಇತ್ಯಾದಿ ವಾದ್ಯಗಳನ್ನು ಕೇಳುವಾಗ ಇನ್ನಿತರ ಇಬ್ಬರು ಸಾಧಕರ ಮನಸ್ಸಿನಲ್ಲಿ ‘ನಾನು ಶ್ರೇಷ್ಠನಾಗಿದ್ದೇನೆ, ‘ಇತರರೊಂದಿಗೆ ಜಗಳವಾಡಬೇಕು, ಅವರನ್ನು ಅಪಮಾನಿಸಬೇಕು, ಅವರಿಗೆ ಅಪಾಯ ಮಾಡ ಬೇಕು, ಇಂತಹ ಅನೇಕ ವಿಚಾರಗಳು ಬರುತ್ತಿದ್ದವು. ಆ ದಿನ ಪ್ರಯೋಗದಲ್ಲಿ ಭಾಗವಹಿಸಿದ್ದ ತೊಂದರೆಯಿರುವ ಇತರ ಸಾಧಕರಲ್ಲಿಯೂ ಯಾವುದೇ ಕಾರಣವಿಲ್ಲದೇ ಕ್ಷುಲ್ಲಕ ಕಾರಣಗಳಿಂದ ವಾದವಿವಾದಗಳಾದವು. ಪ್ರಯೋಗದ ಬಳಿಕ ಮೂರು ದಿನಗಳವರೆಗೆ ಓರ್ವ ಸಾಧಕಿಯ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದವು. ಇದರಿಂದ ಈ ವಾದ್ಯಗಳಿಂದ ಮನಸ್ಸಿನ ಮೇಲೆ ಆಗುವ ದುಷ್ಟಪರಿಣಾಮಗಳು ಸ್ವಲ್ಪ ಸಮಯ ತನಕ ಉಳಿಯುತ್ತವೆ ಎಂಬುದು ಗಮನಕ್ಕೆ ಬರುತ್ತದೆ.
೩ ಇ. ಕ್ಲ್ಯಾರಿನೆಟ್ ಮತ್ತು ಗಿಟಾರ ಕೇಳುವಾಗ ಸಾಧಕರ ಆಧ್ಯಾತ್ಮಿಕ ತೊಂದರೆಗಳಲ್ಲಿ ಹೆಚ್ಚಳವಾಗುವುದು : ಕ್ಲ್ಯಾರಿನೆಟ್ ಮತ್ತು ಗಿಟಾರ ಕೇಳುವಾಗ ಒಬ್ಬ ಸಾಧಕನ ಆಧ್ಯಾತ್ಮಿಕ ತೊಂದರೆಗಳು ಹೆಚ್ಚಾಗಿದ್ದವು. ಅವನು ಇತರ ಸಾಧಕರನ್ನೂ ಬಾಲ್ ಡಾನ್ಸ್ ಮಾಡಲು ಕರೆಯುತ್ತಿದ್ದನು.
೩ ಈ. ಸಾಧಕರು ವಿವಿಧ ಪದಾರ್ಥಗಳು, ಬಟ್ಟೆ ಮುಂತಾದ ಮಾಯೆಯಲ್ಲಿನ ವಿಷಯಗಳ ಬಗ್ಗೆ ಮಾತನಾಡುವುದು : ಕ್ಲ್ಯಾರಿನೆಟ್‌ನಂತಹ ವಾದ್ಯಗಳನ್ನು ಔತಣಕೂಟಗಳಲ್ಲಿ ಬಾರಿಸಲಾಗುತ್ತದೆ. ಇಂತಹ ಔತಣಕೂಟಗಳಲ್ಲಿ ಭಾಗವಹಿಸಿದ ಬಹುತೇಕ ಜನರು ತಿನ್ನುವುದು-ಕುಡಿಯುವುದು, ಬಟ್ಟೆ, ಅಲಂಕಾರ ಇತ್ಯಾದಿ ಮಾಯೆಯ ವಿಷಯಗಳ ಬಗ್ಗೆಯೇ ಮಾತನಾಡುತ್ತಾರೆ ಮತ್ತು ಅದರಲ್ಲಿಯೇ ಸುಖ ಪಡುತ್ತಾರೆ. ಈ ಪ್ರಯೋಗದಲ್ಲಿ ಭಾಗವಹಿಸಿದ್ದ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವ ಸಾಧಕರೂ ಹಾಗೆಯೇ ವರ್ತಿಸುತ್ತಿದ್ದರು. ಪ್ರಯೋಗದಲ್ಲಿನ ಸಾಧಕರು ತಿನ್ನುವ ಪದಾರ್ಥಗಳು, ಬಟ್ಟೆ ಇತ್ಯಾದಿ ಮಾಯೆಯ ವಿಷಯಗಳ ಬಗ್ಗೆಯೇ ಬಹಳಷ್ಟು ಸಮಯದವರೆಗೆ ಚರ್ಚೆಯನ್ನು ಮಾಡುತ್ತಿದ್ದರು. ಕೆಲವು ಸಾಧಕಿಯರು ‘ಇಷ್ಟದ ಪದಾರ್ಥಗಳನ್ನು ತಿನ್ನುತ್ತಿರುವ, ಅಭಿನಯವನ್ನು ಸಹ ಮಾಡಿ ತೋರಿಸಿದರು.
೩ ಈ ೧. ಸಾಧಕರು ಮಾಯೆಯಲ್ಲಿನ ಕೃತಿಗಳನ್ನು ನಿರಂತರವಾಗಿ ೭-೮ ಗಂಟೆಗಳ ಕಾಲ ಮಾಡುವುದು ಅಸಾಧ್ಯವಾಗಿದೆ, ಹಾಗಾಗಿ ಅವರಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳು ಈ ಕೃತಿಗಳನ್ನು ಮಾಡಿರುವುದು ಸ್ಪಷ್ಟವಾಗುವುದು : ಸಮರ್ಥ ರಾಮದಾಸ ಸ್ವಾಮಿಯವರ ‘ಕುತ್ಸಿತ ಬುದ್ಧಿಯವನಿಗೇ ಕುಚೇಷ್ಟೆ ಮಾಡಲು ಇಷ್ಟವಾಗುತ್ತದೆ ಎನ್ನುವ ವಾಕ್ಯದಂತೆ ಸಜ್ಜನರ ವರ್ತನೆ ಯಾವತ್ತೂ ಹೀಗಿರುವುದಿಲ್ಲ. ಸಾಧಕರು ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಮನೆ-ಮಠವನ್ನು ಬಿಟ್ಟು ಪೂರ್ಣ ವೇಳೆ ಸಾಧನೆ ಮಾಡಲು ಆಶ್ರಮಕ್ಕೆ ಬಂದಿರುವಾಗ, ಅವರು ಹರಟೆ ಹೊಡೆಯುವುದು, ತಮಾಷೆ ಮಾಡುವುದು, ವಿವಿಧ ಆಟಗಳನ್ನು ಆಡುವುದು, ಚಲನಚಿತ್ರದ ಕಥೆಗಳನ್ನು ಹೇಳುವುದು ಇತ್ಯಾದಿ ಮಾಯೆಯ ಕೃತಿಗಳನ್ನು ನಿರಂತರವಾಗಿ ೭-೮ ಗಂಟೆಗಳ ಕಾಲ ಖಂಡಿತವಾಗಿಯೂ ಮಾಡುವುದಿಲ್ಲ ಮತ್ತು ಅವರಿಗೆ ಮಾಡಲೂ ಆಗುವುದಿಲ್ಲ. ಆದುದರಿಂದ ‘ಈ ಎಲ್ಲ ಕೃತಿಗಳನ್ನು ಅವರಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳೇ ಮಾಡುತ್ತಿದ್ದವು, ಎಂಬುದು ಗಮನಕ್ಕೆ ಬರುತ್ತದೆ.
೪. ನಿಷ್ಕರ್ಷ
ಪಾಶ್ಚಾತ್ಯ ವಾದ್ಯಗಳ ನಾದದ ಅಭ್ಯಾಸವನ್ನು ಮಾಡಲು ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಪಾಶ್ಚಾತ್ಯ ವಾದನ ಕೇಳುವ ಮೊದಲು ಮತ್ತು ಪಾಶ್ಚಾತ್ಯ ವಾದನ ಕೇಳಿದ ಬಳಿಕ ‘ಯು.ಎ.ಎಸ್. ಉಪಕರಣದ ಸಹಾಯದಿಂದ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವಲಯದ ಅಧ್ಯಯನವನ್ನು ಮಾಡಲಾಯಿತು. ಅದರಲ್ಲಿ ಪಾಶ್ಚಾತ್ಯ ವಾದ್ಯ ಸಂಗೀತವನ್ನು ಕೇಳಿದ ಬಳಿಕ ಈ ಸಾಧಕರ ನಕಾರಾತ್ಮಕತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಮತ್ತು ಸಕಾರಾತ್ಮಕತೆಯು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದು ತೀವ್ರತೆಯಿಂದ ಗಮನಕ್ಕೆ ಬಂದಿತು. ಇದರಿಂದ ಪಾಶ್ಚಾತ್ಯ ವಾದ್ಯಗಳ ನಾದಗಳಲ್ಲಿಯೇ ರಜ-ತಮಾತ್ಮಕ ಸ್ಪಂದನಗಳು ಹೆಚ್ಚಿದ್ದು ಕೇಳುವವರ ನಕಾರಾತ್ಮಕ ಊರ್ಜೆಯು ಹೆಚ್ಚಾಗುತ್ತದೆ ಎಂಬುದರ ಅಧ್ಯಯನವನ್ನು ಮಾಡಲು ಸಿಕ್ಕಿತು. ಅದರಂತೆಯೇ ಔತಣಕೂಟಗಳಲ್ಲಿನ ಮಂದಬೆಳಕಿನ ಮತ್ತು ಕಪ್ಪು ಬಣ್ಣದ ತುಂಡುಡುಗೆಗಳಿಂದ (ರಾಜಸಿಕ ಮತ್ತು ತಾಮಸಿಕ ಕೃತಿ ಯಿಂದ) ಅಲ್ಲಿ ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳು ಆಕರ್ಷಿತವಾಗುತ್ತದೆ, ಅದೇ ರೀತಿ ದೇವಸ್ಥಾನಗಳಲ್ಲಿನ ಸಾತ್ತ್ವಿಕತೆಯಿಂದ ಅಲ್ಲಿ ದೈವಿ ಶಕ್ತಿ ಆಕರ್ಷಿತವಾಗುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. – ಕು. ತೇಜಲ ಪಾತ್ರೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೮.೧೧.೨೦೧೭)
* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. * ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |