‘ಲವ್ ಜಿಹಾದ್‌ನ ದೀರ್ಘಕಾಲೀನ ಮಾರಣಾಂತಿಕ ಪರಿಣಾಮಗಳು ?’ ಈ ಕುರಿತು ವಿಶೇಷ ಸಂದರ್ಶನ !

‘ಲವ್ ಜಿಹಾದ್’ ಅಸ್ತಿತ್ವದಲ್ಲಿಲ್ಲ, ಹಾಗಾದರೆ ‘ಲವ್ ಜಿಹಾದ್’ ವಿರುದ್ಧದ ಕಾನೂನಿನಗೇಕೆ ವಿರೋಧ ? – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷದ್

ವಿವಿಧ ರೀತಿಯ ‘ಜಿಹಾದ್’ನಂತೆಯೇ ‘ಲವ್ ಜಿಹಾದ್’ ಸಹ ಹಿಂದೂ ಸಮಾಜದ ವಿರುದ್ಧ ಜಿಹಾದಿಗಳು ಘೋಷಿಸಿದ ‘ಯುದ್ಧ’ವೇ ಆಗಿದೆ. ಸಾಮಾನ್ಯ ಮನೆಯ ಹಿಂದೂ ಯುವತಿಯರಿಂದ ಹಿಡಿದು ಕ್ರೀಡೆ, ಚಿತ್ರರಂಗ ಮುಂತಾದ ವಿವಿಧ ಕ್ಷೇತ್ರಗಳ ಅನೇಕ ಹಿಂದೂ ಯುವತಿಯರು ಹಾಗೂ ಮಹಿಳೆಯರು ಇಲ್ಲಿಯವರೆಗೆ ‘ಲವ್ ಜಿಹಾದ್’ಗೆ ಬಲಿಯಾಗಿದ್ದಾರೆ ಮತ್ತು ಮೋಸ ಹೋಗಿದ್ದಾರೆ. ಅದೇರೀತಿ ಭೀಕರ ಶೋಷಣೆಯಾಗುತ್ತಿದೆ, ಇದರ ಅನೇಕ ಉದಾಹರಣೆಗಳು ವಿವಿಧ ಮಾಧ್ಯಮಗಳಿಂದ ಬಹಿರಂಗಗೊಂಡಿದೆ. ‘ಲವ್ ಜಿಹಾದ್’ನಿಂದಾಗಿ ಕೇವಲ ಭಾರತ ಮಾತ್ರವಲ್ಲ ಭಾರತದ ಹೊರಗಿನ ಹಿಂದೂಗಳು ಸೇರಿದಂತೆ ಸಿಕ್ಖ್ ಯುವತಿಯರನ್ನು ಮತಾಂತರ ಮಾಡಲಾಗಿದೆ ಮತ್ತು ಇದು ಹಿಂದೂ ಕುಟುಂಬ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪ್ರಸ್ತುತ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸರಕಾರಗಳು ‘ಲವ್ ಜಿಹಾದ್’ ವಿರುದ್ಧ ಕಾನೂನುಗಳನ್ನು ರೂಪಿಸಿವೆ. ಅದೇರೀತಿ ಗುಜರಾತ ಸರಕಾರವೂ ಈ ಕಾನೂನು ಜಾರಿಗೊಳಿಸುವ ಮಾರ್ಗದಲ್ಲಿದೆ. ‘ಲವ್ ಜಿಹಾದ್’ ಅಸ್ತಿತ್ವದಲ್ಲಿಲ್ಲ’, ಎಂದು ಹೇಳುವವರು ‘ಲವ್ ಜಿಹಾದ್’ ವಿರುದ್ಧದ ಕಾನೂನಿಗೆ ಏಕೆ ವಿರೋಧಿಸುತ್ತಿದ್ದಾರೆ ?, ಎಂದು ಖಂಡತುಂಡು ಪ್ರಶ್ನೆಯನ್ನು ಕೇಳುತ್ತಾ ಕೇಂದ್ರ ಸರಕಾರವೂ ‘ಲವ್ ಜಿಹಾದ್’ ವಿರುದ್ಧದ ಕಾನೂನನ್ನು ತಂದು ಅದನ್ನು ಯೋಗ್ಯಾವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಹಿಂದೂ ಸಮಾಜದ ವತಿಯಿಂದ ನಾವು ಒತ್ತಾಯಿಸುತ್ತೇವೆ, ಎಂದು ‘ಹಿಂದೂ ವಿಧಿಜ್ಞ ಪರಿಷದ್’ನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಹೇಳಿದ್ದಾರೆ. ಅವರು ‘ಲವ್ ಜಿಹಾದ್’ನ ದೀರ್ಘಕಾಲೀನ ಮಾರಣಾಂತಿಕ ಪರಿಣಾಮ ?’ ಈ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಶನವನ್ನು ವಿದೇಶದ ಹಿರಿಯ ಪತ್ರಕರ್ತೆ ಮೀನಾ ದಾಸ ನಾರಾಯಣ ಅವರು ತಮ್ಮ ಪ್ರಸಿದ್ಧ ಯೂಟ್ಯೂಬ್ ಚಾನೆಲ್ ‘ಕ್ಯಾಂಡಿಡ್ ಮೀನಾ’ದಲ್ಲಿ ತೆಗೆದುಕೊಂಡರು. ಈ ಸಮಯದಲ್ಲಿ ಮೀನಾ ದಾಸ ನಾರಾಯಣ ಅವರು ಕೇಳಿದ ಪ್ರಶ್ನೆಗಳಿಗೆ ನ್ಯಾಯವಾದಿ ಇಚಲಕರಂಜಿಕರ್ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ‘ಲವ್ ಜಿಹಾದ್’ ಮೂಲಕ ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಮತಾಂತರಿಸುವುದು, ‘ಲವ್ ಜಿಹಾದ್’ಗೆ ಯುವತಿಯರು ಬಲಿಯಾಗದಂತೆ ಪೋಷಕರ ಜವಾಬ್ದಾರಿ ಮತ್ತು ಧರ್ಮಶಿಕ್ಷಣದ ಅವಶ್ಯಕತೆ, ಚಲನಚಿತ್ರಗಳ ಮೂಲಕ ‘ಲವ್ ಜಿಹಾದ್’ಗೆ ನೀಡಿದ ಪ್ರೋತ್ಸಾಹ, ಮತಾಂತರನಿಷೇಧ ಕಾನೂನಿನ ಆವಶ್ಯಕತೆ ಇತ್ಯಾದಿಗಳ ಬಗ್ಗೆ ವೀಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ವೀರೇಂದ್ರ ಇಚಲಕರಂಜೀಕರ್ ಇವರು ಮುಂದೆ ಮಾತನಾಡುತ್ತಾ ‘ಲವ್ ಜಿಹಾದ್’ನ ಅಪಾಯಗಳ ಬಗ್ಗೆ ಹಿಂದೂ ಸಹೋದರರು ಮಾತನಾಡುವಾಗ ‘ಮದುವೆಯಾಗುವ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕರು ಯಾರೊಂದಿಗೆ ಮದುವೆಯಾಗಬೇಕು ಅದು ಅವರ ಸಾಂವಿಧಾನಿಕ ಹಕ್ಕು’ ಎಂದು ಮುಸಲ್ಮಾನರು ಮತ್ತು ಜಾತ್ಯತೀತರು ಯುಕ್ತಿವಾದವನ್ನು ಮಂಡಿಸುತ್ತಾರೆ; ಆದರೆ ಯಾವಾಗ ‘ಸಮಾನ ನಾಗರಿಕ ಕಾನೂನು’, ‘ಗೋಹತ್ಯೆ ತಡೆಗಟ್ಟುವಿಕೆ’, ಇಂತಹ ವಿಷಯ ಬರುವುದೋ ಆಗ ಈ ಮುಸಲ್ಮಾನರು ಮತ್ತು ಜಾತ್ಯತೀತವಾದಿಗಳು ಸಂವಿಧಾನದ ಮಾತುಗಳನ್ನಾಡದೇ ಹಿಂದೂಗಳು ಅಲ್ಪಸಂಖ್ಯಾತರ ಭಾವನೆಗಳನ್ನು ಅರಿತುಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ. ಒಟ್ಟಾರೆಯಾಗಿ ಹಿಂದೂಗಳ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ವಿಷಯವನ್ನು ಅನುಕೂಲಕರವಾಗಿ ಬದಲಾಯಿಸಲಾಗುತ್ತದೆ. ಶರಿಯಾ (ಇಸ್ಲಾಮಿಕ್) ಕಾನೂನಿನ ಪ್ರಕಾರ, ಮುಸ್ಲಿಂ ಕುಟುಂಬದಲ್ಲಿ ಮದುವೆಯ ನಂತರ ಮತಾಂತರಗೊಳ್ಳುವ ಹಿಂದೂ ಮಹಿಳೆಯರಿಗೆ ಯಾವುದೇ ಆಸ್ತಿ ಅಥವಾ ಇತರ ಹಕ್ಕುಗಳು ದೊರೆಯುವುದಿಲ್ಲ; ಆದರೆ, ಹಿಂದೂ ಕಾನೂನಿನಲ್ಲಿ ವಿವಾಹದ ನಂತರ ಹಿಂದೂ ಮಹಿಳೆಯರಿಗೆ ಅನೇಕ ಹಕ್ಕುಗಳಿವೆ. ಹಿಂದೂ ಯುವತಿಯರು ಈ ರೀತಿಯ ವಿವಿಧ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಧರ್ಮಶಿಕ್ಷಣವನ್ನು ತೆಗೆದುಕೊಳ್ಳುವ ಮೂಲಕ ಧರ್ಮಾಚರಣೆಯನ್ನು ಮಾಡಬೇಕು ಎಂದು ನ್ಯಾಯವಾದಿ ಇಚಲಕರಂಜಿಕರ ಇವರು ಹೇಳಿದರು.