ಧಗಧಗಿಸುತ್ತಿರುವ ಬಂಗಾಲ !

ಬಂಗಾಲದ ಚುನಾವಣೆಯ ಫಲಿತಾಂಶದ ನಂತರ ಅಲ್ಲಿ ಅರಾಜಕತೆಯು ಅಟ್ಟಹಾಸ ಮೆರೆಯುತ್ತಿದೆ. ತೃಣಮೂಲ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಅಧಿಕಾರವನ್ನು ಸ್ಥಾಪಿಸಲು ಯಶಸ್ಸು ದೊರಕಿದ್ದರೂ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (ಬಾನೊ) ಇವರು ನಂದಿಗ್ರಾಮದಲ್ಲಿ ಸೋಲುಂಡಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಬಾನೋ ಇವರ ಪಕ್ಷದ ಗೂಂಡಾ ಕಾರ್ಯಕರ್ತರು ಕಡಿಮೆಪಕ್ಷ ಭಾಜಪದ ೯ ಕಾರ್ಯಕರ್ತರ ಹತ್ಯೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲಿನ ಅನೇಕ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿರುವ ಘಟನೆಗಳ ಕುರಿತು ಭಾಜಪದ ಹಿರಿಯ ನಾಯಕರು ಬಹಿರಂಗ ಪಡಿಸುತ್ತಿದ್ದಾರೆ. ಬಂಗಾಲದ ಮತಾಂಧರು ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಿರುವ ವಾರ್ತೆಗಳನ್ನೂ ಈ ನಾಯಕರು ಪ್ರಸ್ತುತಪಡಿಸಿದ್ದಾರೆ. ಇನ್ನೊಂದೆಡೆ ತಥಾಕಥಿತ ಜಾತ್ಯತೀತವಾದದ ಡಂಗುರ ಸಾರುವ ಪ್ರಸಾರಮಾಧ್ಯಮ ಗಳು ಈ ಹತ್ಯೆಗಳ ಹಿಂದೆ ರಾಜಕಾರಣವಿದ್ದು ಇದಕ್ಕೆ ಕೋಮುಬಣ್ಣ ಬಳಿಯುವ ಪ್ರಯತ್ನವನ್ನು ನಡೆಸಲಾಗುತ್ತಿದೆ ಎಂದು ಹೇಳುತ್ತಿವೆ. ತೃಣಮೂಲ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂಬಂತಹ ವಾರ್ತೆಗಳಿವೆ ಎಂದು ಈ ಪ್ರಸಾರಮಾಧ್ಯಮಗಳು ಮರೆಯದೇ ನಮೂದಿಸುತ್ತಿವೆ.

ಬಂಗಾಲದಲ್ಲಿನ ಹಿಂಸೆಯ ಕೋಮುವಾದದ ಬಣ್ಣ !

ಮೇ ೨ ರಂದು ಹೊರ ಬಂದ ಫಲಿತಾಂಶದ ನಂತರ ಆರಂಭವಾದ ಹತ್ಯಾಸರಣಿಗಳು ನಿಲ್ಲದೇ ಇರುವಾಗ, ಇದರ ಹಿಂದೆ ರಾಜಕೀಯದೊಂದಿಗೆ ಕೋಮುವಾದದ ಬಣ್ಣ ಇರುವ ಬಗ್ಗೆಯೂ ಸ್ಪಷ್ಟವಾಗಿದೆ, ಎಂದು ನಾವು ಗಮನದಲ್ಲಿಡಬೇಕು. ಮುಸಲ್ಮಾನರ ಓಲೈಕೆಯನ್ನು ಮಾಡುತ್ತಾ ಮತ್ತು ರಾಜ್ಯದಲ್ಲಿ ‘ಎನ್.ಆರ್.ಸಿ.ಯನ್ನು ಎಂದಿಗೂ ನಡೆಸಲಾಗುವುದಿಲ್ಲ, ಎಂಬ ರಾಷ್ಟ್ರದ್ರೋಹಿ ಆಶ್ವಾಸನೆಯನ್ನು ನೀಡುತ್ತಾ  ಬಂಗಾಲದಲ್ಲಿನ ಬಾಂಗ್ಲಾದೇಶಿ ನುಸುಳುಕೋರರು ಹಾಗೂ ತೃಣಮೂಲದ ಮತದಾರರನ್ನು ಉದ್ರೇಕಿಸಲು ಪ್ರಯತ್ನಿಸಲಾಯಿತು. ಎಲ್ಲ ಮುಸಲ್ಮಾನರು ತೃಣಮೂಲ ಪಕ್ಷಕ್ಕೆ ಮತವನ್ನು ನೀಡಬೇಕು ಎಂದು ಸ್ವತಃ ಮಮತಾ ಇವರೇ ಕರೆ ನೀಡಿದ್ದರು. ಆದುದರಿಂದಲೇ ತೃಣಮೂಲಕ್ಕೆ ಅಧಿಕಾರವನ್ನು ಸ್ಥಾಪಿಸಲು ಸಾಧ್ಯವಾಯಿತು, ಇದು ಜಗತ್ತಿಗೆ ತಿಳಿದ ವಿಷಯವಾಗಿದೆ. ಇನ್ನೊಂದೆಡೆ ಭಾಜಪವು ಚುನಾವಣೆಯ ನಂತರ ಅಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್‌ನ ಸಭೆಯಲ್ಲಿಯೇ ನಾವು ಬಾಂಗ್ಲಾದೇಶದಿಂದ ಪಲಾಯನಗೈದು ಬಂದ ಹಿಂದೂ ಕುಟುಂಬಗಳಿಗೆ ‘ಸಿಎಎಯ ಅಂತರ್ಗತ ಭಾರತೀಯ ಪೌರತ್ವವನ್ನು ನೀಡುವ ನಿರ್ಣಯವನ್ನು ನೀಡುವೆವು, ಹಾಗೆಯೇ ಇಂತಹ ಕುಟುಂಬಗಳಿಗೆ ಪ್ರತಿವರ್ಷ ೧೦ ಸಾವಿರ ರೂಪಾಯಿಗಳ ಸಹಾಯ ನಿಧಿಯನ್ನು ನೀಡಲಾಗುವುದು, ಎಂದು ಘೋಷಿಸಲಾಗಿತ್ತು. ಈ ಮಾಧ್ಯಮದಿಂದ ಹಿಂದೂ ಮತ್ತು ಮುಸಲ್ಮಾನರ ಮತಗಳ ಪರಮಾವಧಿಯ ಧ್ರುವೀಕರಣವಾಯಿತು, ಇದು ನಿಜ; ಆದರೆ ಈಗ ಬಂದ ಫಲಿತಾಂಶದಿಂದ ಮತಾಂಧರ ರಾಜಕೀಯ ಒಗ್ಗಟ್ಟಿನೆದುರು ಹಿಂದೂಗಳ ರಾಜಕೀಯ ಒಗ್ಗಟ್ಟು ಸಂಪೂರ್ಣವಾಗಿ ವಿಫಲಗೊಂಡಿತು, ಎಂಬುದನ್ನು ನಾವು ಸ್ವೀಕರಿಸಲೇಬೇಕು. ಈ ವೈಚಾರಿಕ ಧ್ರುವೀಕರಣಕ್ಕೆ ಫಲಿತಾಂಶದ ನಂತರ ಮಾರ್ಗವು ಮುಕ್ತವಾಗುತ್ತಾ ರಾಜ್ಯದಲ್ಲಿ ಹಿಂಸಾಚಾರವು ನಡೆಯುತ್ತಿದೆ. ಈ ಹಿಂಸೆಯು ಹಿಂದೂದ್ವೇಷದ ಅಂದರೆ ರಾಷ್ಟ್ರದ್ವೇಷದ ವಿಚಾರಧಾರೆಯನ್ನು ಅನುಸರಿಸಿರುವುದರಿಂದ ರಾಷ್ಟ್ರವಿಘಾತಕ ಮತ್ತು ಧಾರ್ಮಿಕವೂ ಆಗಿದೆ ಎಂದೆನ್ನಲು ನಿಶ್ಚಿತವಾಗಿಯೂ ಆಸ್ಪದವಿರುತ್ತದೆ.

ಬಂಗಾಲ ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ಈ ಬಾರಿ ಒಟ್ಟು ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಒಟ್ಟು ೪೪ ಜನ ಮುಸಲ್ಮಾನರಿದ್ದು ಅವರಲ್ಲಿ ೪೩ ಮಂದಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ತೃಣಮೂಲದ ಉಳಿದ ಹೆಚ್ಚಿನ ಶಾಸಕರು ಹಿಂದೂಗಳಿದ್ದರೂ ಅವರ ವಿಚಾರಸರಣಿ ಹೇಗಿದೆಯೆಂದು ಅವರ ಸರ್ವಸ್ವವಾದ ಮಮತಾಬಾನೋ ಇವರಿಂದ ಗಮನಕ್ಕೆ ಬರುತ್ತದೆ, ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಆವಶ್ಯಕತೆ ಇಲ್ಲ. ಮಮತಾ ಬ್ಯಾನರ್ಜಿ ಇವರು ತಮ್ಮ ಪಕ್ಷಕ್ಕೆ ದೊರಕಿದ ವಿಜಯದ ಕುರಿತು ಜನತೆಗೆ ಆಭಾರ ವ್ಯಕ್ತಪಡಿಸುವಾಗ ‘ನನ್ನ ಅಲ್ಪಸಂಖ್ಯಾತ ಸಹೋದರರಿಗೂ ನಾನು ಆಭಾರಿಯಾಗಿದ್ದೇನೆ, ಎಂದು ಮರೆಯದೇ ಹೇಳಿದರು. ಇದರಿಂದ ಕಳೆದ ೧೦ ವರ್ಷ ಮುಸಲ್ಮಾನರ ಓಲೈಕೆ ಮಾಡುತ್ತಾ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಮುಂಬರುವ ೫ ವರ್ಷಗಳಲ್ಲಿ ಬಂಗಾಲವನ್ನು ಯಾವ ದಿಶೆಗೆ ಕೊಂಡೊಯ್ಯಲಿದೆ ಎಂಬ ಕುರಿತು ವಿಚಾರ ಮಾಡದಿದ್ದರೆ ಒಳ್ಳೆಯದು. ಹಿಂದೂಗಳ ದುರ್ಗಾಪೂಜೆಗೆ ನಿಷೇಧ ತರುವುದು, ಮೌಲ್ವಿಗಳಿಗೆ ಸೌಲಭ್ಯಗಳ ಅನುಕೂಲತೆ ಮಾಡಿಕೊಡುವುದು ಮುಂತಾದ ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳುವ ತೃಣಮೂಲ ಸರಕಾರವು ಮುಂದಿನ ಕಾಲದಲ್ಲಿ ರಾಷ್ಟ್ರದ ಐಕ್ಯತೆ-ಅಖಂಡತೆಗೆ ಗಂಡಾಂತರವನ್ನು ತರಬಹುದು, ಎಂಬ ಸಾಧ್ಯತೆಯನ್ನು ಈಗ ಅಲ್ಲಗಳೆಯಲಾಗುವುದಿಲ್ಲ. ಮಮತಾ ಬ್ಯಾನರ್ಜಿ ಇವರು ಎನ್.ಆರ್.ಸಿ. ಜಾರಿಗೆ ತರುವುದಿಲ್ಲವೆಂದು ಹೇಳಿದ ಮಾತಿನಂತೆ ಅದನ್ನು ಆರಂಭಿಸಿದ್ದಾರೆ. ಅದಕ್ಕೂ ಮುಂದೆ ಹೋಗಿ ಉತ್ತರ ಬಂಗಾಲದಲ್ಲಿರುವ ‘ಸಿಲಿಗುಡಿ ಕಾರಿಡೊರ್ನ ವಿಷಯದಲ್ಲಿಯೂ ಮುಂಬರುವ ಕಾಲದಲ್ಲಿ ತಲೆಯನ್ನು ಎತ್ತಬಹುದು, ಎಂದು ಗಮನದಲ್ಲಿಡಬೇಕಾಗುತ್ತದೆ.

ಸಿಲಿಗುಡಿ ಕಾರಿಡೊರ್ !

ಸಿಲಿಗುಡಿ ಕಾರಿಡೊರ್ ಇದು ೨೨ ಕಿಲೋಮೀಟರ್ ಉದ್ದ ಮತ್ತು ಕೇವಲ ೧೪ ಕಿಲೋಮೀಟರ್ ಅಗಲವಿರುವಂತಹ ಭಾರತೀಯ ಭೂಭಾಗವಾಗಿದೆ ! ಇಲ್ಲಿಂದ ನೇಪಾಳ, ಚೀನಾ, ಭೂತಾನ ಮತ್ತು ಬಾಂಗ್ಲಾದೇಶ ಇವುಗಳ ಸೀಮೆಗಳು ಕೂಗಳತೆಯ ಅಂತರ ದಲ್ಲಿವೆ. ಇದೇ ಭೂಭಾಗವು ಪೂರ್ವೋತ್ತರ ಭಾರತವನ್ನು ಭಾರತದ ಮುಖ್ಯ ಭೂಮಿಯೊಂದಿಗೆ ಜೋಡಿಸುತ್ತಿರುವುದರಿಂದ ಅದು ಯುದ್ಧಕ್ಕೆ ಸಂಬಂಧಿಸಿದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ಕಾರಿಡೊರ್ ಉತ್ತರ ಬಂಗಾಲದಲ್ಲಿದ್ದು ಅಲ್ಲಿಂದ ಕೇವಲ ೭೦-೧೦೦ ಕಿ.ಮೀ. ದೂರದಲ್ಲಿ ಬಿಹಾರದ ಸೀಮಾಂಚಲ ಎಂಬ ಮುಸಲ್ಮಾನ ಬಹುಸಂಖ್ಯಾತ ಕ್ಷೇತ್ರದ ಗಡಿಯಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಇಲ್ಲಿನ ಪೂರ್ಣಿಯಾ, ಅರರಿಯಾ, ಕಟಿಹಾರ ಮತ್ತು ಕಿಶನಗಂಜ್ ಜಿಲ್ಲೆಗಳಲ್ಲಿನ ೫ ವಿಧಾನಸಭೆ ಕ್ಷೇತ್ರಗಳಿಂದ ಎಮ್‌ಐಎಮ್ ಪಕ್ಷದ ೫ ಮತಾಂಧ ಅಭ್ಯರ್ಥಿಗಳು ಆರಿಸಿ ಬಂದರು. ಬಂಗಾಲದ ವಿಚಾರವನ್ನು ಮಾಡಿದರೆ ಈ ಕಾರಿಡೊರಗೆ ಅಂಟಿಕೊಂಡಿರುವ ಉತ್ತರ ದಿನಾಜಪೂರ ಜಿಲ್ಲೆಯಲ್ಲಿ ಮುಸಲ್ಮಾನರು ಬಹುಸಂಖ್ಯಾತರಿದ್ದು ಅಲ್ಲಿನ ಬಹುತಾಂಶ ವಿಧಾನಸಭೆ ಕ್ಷೇತ್ರಗಳಿಂದ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಆರಿಸಿ ಬಂದಿದ್ದಾರೆ. ಸಮೀಪದಲ್ಲಿರುವ ದಕ್ಷಿಣ ದಿನಾಜಪೂರ, ಮಾಲದಾ ಮತ್ತು ಮುರ್ಶಿದಾಬಾದ ಈ ಜಿಲ್ಲೆಗಳ ಸ್ಥಿತಿಯೂ ಅದೇ ರೀತಿಯಿದೆ. ಭೂತಾನ್‌ನ ಭೂಭಾಗವಾಗಿರುವ ಡೊಕಲಾಮ ಕ್ಷೇತ್ರವು ಈ ಕಾರಿಡೊರನ ಹತ್ತಿರವಿರುವುದ ರಿಂದಲೇ ಚೀನಾ ಎಂಬ ಡ್ರಗಾನ್ ಡೊಕಲಾಮ ಮೇಲೆ ನಿಯಂತ್ರಣ ಪಡೆಯಲು ಪ್ರಯತ್ನಿಸುತ್ತಿರುತ್ತದೆ. ಡೊಕಲಾಮನಲ್ಲಿ ಅವರು ಕಾಲು ಕೆದರಿ ಜಗಳ ಮಾಡುವ ಹಿಂದೆ ಇದೇ ಉದ್ದೇಶವಿದೆ. ನೇಪಾಳವೂ ಈಗ ಚೀನಾದ ಗೂಢಚಾರಿಕೆ ಮಾಡುತ್ತಿದೆ. ಇಸ್ಲಾಮಿ ಬಾಂಗ್ಲಾದೇಶ, ಚೀನಾ ಡ್ರಗಾನ್ ಮತ್ತು ಬಿಹಾರ-ಬಂಗಾಲನಲ್ಲಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಮುಂಬರುವ ಕಾಲದಲ್ಲಿ ಇಲ್ಲಿ ರಾಷ್ಟ್ರವಿಘಾತಕ ಕಾರ್ಯಾಚರಣೆಯಾಗುವ ಅಪಾಯವು ಉಂಟಾಗಲಿದೆ. ಈ ಕುರಿತು ೨೦೦೫ ರಲ್ಲಿ ‘ಬಾಂಗ್ಲಾ ಕ್ರಿಸೆಂಟ್ ಹೆಸರಿನ ಸಾಕ್ಷ್ಯಚಿತ್ರವು ಪ್ರಸಾರವಾಗಿತ್ತು. ಅದರ ನಿರ್ದೇಶಕರಾದ ಮಯಾಂಕ ಜೈನ ಇವರೂ ಮೇಲಿನ ಸಾಧ್ಯತೆ ಯನ್ನು ಅಲ್ಲಗಳೆಯಲಾಗದು ಮತ್ತು ಮುಂಬರುವ ಕಾಲದಲ್ಲಿ ಈ ಕ್ಷೇತ್ರದಲ್ಲಿ ಭಯಾನಕ ಉತ್ಕ್ರಾಂತಿಯು ಘಟಿಸಬಹುದು, ಎಂಬುದರ ಪೀಠಿಕೆಯನ್ನು ಕೆಲವು ದಿನಗಳ ಹಿಂದೆಯೇ ಮಂಡಿಸಿದ್ದರು. ಇಲ್ಲಿನ ಬಾಗಡೊಗರಾ ಕ್ಷೇತ್ರದಲ್ಲಿ ಭಾರತೀಯ ವಾಯುಸೇನೆಯ ದೊಡ್ಡ ಬಿಡಾರವಿದ್ದು ಭಾರತಕ್ಕೆ ಈ ಕ್ಷೇತ್ರದಲ್ಲಿ ತನ್ನ ವರ್ಚಸ್ಸನ್ನು ಕಾಪಾಡಿಕೊಳ್ಳಲು ಕೋಟ್ಯವಧಿ ರೂಪಾಯಿ ಗಳನ್ನು ಎಣಿಸಬೇಕಾಗುತ್ತಿದೆ. ಕಾಂಗ್ರೆಸ್‌ಗೆ ಸಿಗುತ್ತಿದ್ದ ಬಂಗಾಲಿ ಮುಸಲ್ಮಾನರ ಮತಗಳು ಈಗ ಸಂಪೂರ್ಣವಾಗಿ ತೃಣಮೂಲದ ಜೋಳಿಗೆಯಲ್ಲಿ ಹೋಗಿವೆ, ಎಂದು ಮೇ ೨ ರ ಫಲಿತಾಂಶದಿಂದ ಸ್ಪಷ್ಟವಾಗಿದೆ. ಆದರೂ ಭಾರತದ ಮತಾಂಧರು ಮತ್ತು ವಿದೇಶಿ ಶಕ್ತಿಗಳು ಬಂಗಾಲದ ರಾಜಕೀಯ ಪರಿಸ್ಥಿತಿಯ ದುರ್ಲಾಭ ಪಡೆದು ಏನನ್ನಾದರೂ ಮಾಡಬಹುದು, ಎಂಬುದನ್ನು ನಿರಾಕರಿಸಲಾಗದು.

ಈ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರಕ್ಕೆ ಭಾರತವಿರೋಧಿ ರಾಜಕೀಯ ಪರಿಸ್ಥಿತಿಯನ್ನು ಅನುಸರಿಸುವುದು ಆವಶ್ಯಕವಾಗಿದೆ. ಒಂದು ವೇಳೆ ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ ಮುಂತಾದವರ ಆಡಳಿತದ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಅನೇಕ ಬಾರಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲಾಗಿತ್ತು. ಹೀಗಿರುವಾಗ ಮೋದಿ ಸರಕಾರವೂ ಬಂಗಾಲದ ಸಂದರ್ಭದಲ್ಲಿಯೂ ಅದೇ ರೀತಿ ವಿಚಾರ ಮಾಡಬೇಕು, ಎಂಬ ಬೇಡಿಕೆಯೂ ಜನತೆಯಿಂದ ಬರುತ್ತಿದೆ. ಧಗಧಗಿಸುತ್ತಿರುವ ಬಂಗಾಲದ ಒಟ್ಟಾರೆ ಪರಿಸ್ಥಿತಿಯನ್ನು ನೋಡಿದರೆ ಮತ್ತು ಭವಿಷ್ಯದಲ್ಲಿನ ಸಂಭಾವ್ಯ ಅಪಾಯಗಳು ಇವುಗಳ ಕಡೆಗೆ ಗಮನವಿಟ್ಟು ಕೇಂದ್ರವು ಸಕಾಲದಲ್ಲಿ ಯೋಗ್ಯ ಹೆಜ್ಜೆಯನ್ನಿಡುವುದು ಆವಶ್ಯಕವಾಗಿದೆ, ಎಂಬುದೇ ಸತ್ಯ.