‘ಇಂತಹ ಆಪತ್ಕಾಲದಲ್ಲಿ ಜೀವಂತವಾಗಿರಲು ಭಗವಂತನ ಭಕ್ತರಾಗಿ ಮತ್ತು ಸಾಧನೆಯನ್ನು ಹೆಚ್ಚಿಸಿ. ಬೇರಾರೂ ಅಲ್ಲ ಕೇವಲ ಭಗವಂತನೇ ಕಾಪಾಡುವನು ! – (ಪರಾತ್ಪರ ಗುರು) ಡಾ. ಆಠವಲೆ |
ಬೆಂಗಳೂರಿನ ಸ್ಮಶಾನದ ಹೊರಗೆ ‘ಹೌಸ್ ಫುಲ್ ಫಲಕ !
ಭಾರತದಲ್ಲಿ ಇಂತಹ ಪರಿಸ್ಥಿತಿ ಬರಬಹುದು ಎಂಬುದು ಯಾರೂ ನಿರೀಕ್ಷಿಸಿರಲಿಲ್ಲ; ಆದರೆ ಆಪತ್ಕಾಲ ಬರುತ್ತದೆ, ಎಂದು ದ್ರಷ್ಟಾರರು, ಸಂತರು ಮೊದಲಾದವರು ಹೇಳುತ್ತಿದ್ದರು, ಅದು ಅಂತಹ ಘಟನೆಗಳಲ್ಲಿ ಕಂಡುಬರುತ್ತದೆ !
ಕೊರೊನಾ ಸೋಂಕಿನಿಂದ ನಗರದಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಸಾಯುತ್ತಿದ್ದಾರೆ. ಅವರ ಶವಸಂಸ್ಕಾರ ಮಾಡಲು ಸ್ಮಶಾನದಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿದೆ. ಚಾಮರಾಜಪೇಟೆಯ ಸ್ಮಶಾನಭೂಮಿಯ ಹೊರಗಂತೂ ‘ಹೌಸ್ ಫುಲ್ ಎಂಬ ಫಲಕ ಹಾಕಲಾಗಿದೆ. ಸ್ಮಶಾನಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಸ್ಥಳಾವಕಾಶವಿಲ್ಲದ ಕಾರಣ ಈ ಫಲಕವನ್ನು ಹಾಕಲಾಗಿದೆ. ಸ್ಮಶಾನಭೂಮಿಯಲ್ಲಿ ೨೦ ಶವಗಳ ಅಂತ್ಯಕ್ರಿಯೆ ಮಾಡುವ ವ್ಯವಸ್ಥೆ ಇದೆ. ಆದ್ದರಿಂದ ಶವ ಸಂಸ್ಕಾರಕ್ಕಾಗಿ ಹೊಸ ಮೃತದೇಹಗಳನ್ನು ತೆಗೆದುಕೊಳ್ಳಲು ನಿರಾಕರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಈ ರೀತಿಯ ೧೩ ಸ್ಮಶಾನ ಭೂಮಿಗಳಿವೆ ಅಲ್ಲಿ ವಿದ್ಯುತ್ ಶವಗಾರಗಳಿವೆ; ಆದರೆ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಜನರು ಅಂತ್ಯಕ್ರಿಯೆಗಾಗಿ ಬಹಳ ಸಮಯ ಕಾಯಬೇಕಾಗುತ್ತದೆ.
ಸೂರತ್‌ನಲ್ಲಿ ಮರಣ ಪ್ರಮಾಣಪತ್ರಕ್ಕಾಗಿ ಸಾಲು
ಕೊರೊನಾದಿಂದ ಸಾವನ್ನಪ್ಪಿದವರ ಮರಣ ಪ್ರಮಾಣಪತ್ರವನ್ನು ಪಡೆಯಲು ಸೂರತ್‌ನ ಜನರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಪಡೆಯಲು ಸರಕಾರಿ ಕಚೇರಿಗಳ ಹೊರಗೆ ದೊಡ್ಡ ಸರತಿಯ ಸಾಲುಗಳು ಇದೆ. ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚು ಇದೆ.
ಕೊರೊನಾ ಮಹಾಮಾರಿಯ ಸ್ಥಿತಿಯು ಗಂಭೀರವಾಗುತ್ತಿರುವಾಗ ಆಸ್ಪತ್ರೆಗಳು, ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳಂತಹ ಸ್ಥಳಗಳಲ್ಲಿ ಅನುಭವಿಸಿದ ಕಹಿ ಅನುಭವಗಳನ್ನು ತಿಳಿಸಿರಿ ! ತಮಗೂ ಇಂತಹ ವಿಧದ ಕಹಿ ಅನುಭವಗಳು ಬಂದಿದ್ದರೆ ಆರೋಗ್ಯ ಸಹಾಯ ಸಮಿತಿಗೆ ಮುಂದಿನ ವಿಳಾಸಕ್ಕೆ ತಕ್ಷಣ ತಿಳಿಸಿರಿ. ಸಮಾಜದ ಪ್ರಬೋಧನೆಗಾಗಿ ಇಂತಹ ಅನುಭವಗಳನ್ನು ಕೂಡಲೇ ಲಿಖಿತಸ್ವರೂಪದಲ್ಲಿ ತಿಳಿಸುವುದು ಕಾಲಾನುಸಾರ ಸಮಷ್ಟಿ ಸಾಧನೆಯೇ ಆಗಿದೆ, ಎಂಬುದನ್ನು ಗಮನದಲ್ಲಿರಿಸಿ ಸಾಧಕರು, ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳು ಮತ್ತು ಜಾಹೀರಾತುದಾರರು ತಮಗೆ ಅಥವಾ ಪರಿಚಿತರಿಗೆ ಬಂದಿರುವ ಕಟು ಅಥವಾ ಒಳ್ಳೆಯ ಅನುಭವಗಳನ್ನು ಕೂಡಲೇ ಕಳುಹಿಸಿರಿ. ಆರೋಗ್ಯ ಸಹಾಯ ಸಮಿತಿ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಆರೋಗ್ಯ ಸಹಾಯ ಸಮಿತಿ, ‘ಮಧುಸ್ಮೃತಿ, ಸತ್ಯನಾರಾಯಣ ದೇವಸ್ಥಾನದ ಹತ್ತಿರ, ಫೋಂಡಾ, ಗೋವಾ – 403401. ಸಂಪರ್ಕ ಸಂಖ್ಯೆ : 7058885610 ವಿ-ಅಂಚೆ ವಿಳಾಸ : [email protected] |