ಕೋವಿಡ್ – ೧೯, ಚುನಾವಣೆ ಮತ್ತು ಕುಂಭಮೇಳ !

ಜಗತ್ತಿನಲ್ಲಿ ಕಳೆದ ಒಂದುಕಾಲು ವರ್ಷದಿಂದ ‘ಕೊರೋನಾ ವಿಷಾಣು ತಾಂಡವವಾಡುತ್ತಿದೆ.  ಪ್ರಾರಂಭದ ೪ ತಿಂಗಳು ಕೊರೊನಾ ಕೇವಲ ಯುರೋಪಿಯನ್ ದೇಶಗಳು, ಕೆಲವು ಮುಸಲ್ಮಾನ ರಾಷ್ಟ್ರಗಳು ಮತ್ತು ಚೀನಾದಲ್ಲಿ ಮಾತ್ರ ಇತ್ತು. ಮಾರ್ಚ್ ೨೦೨೦ ರಿಂದ ಅದು ಸಂಪೂರ್ಣ ಭಾರತದಲ್ಲಿ ಕೈ-ಕಾಲುಗಳನ್ನು ಚಾಚಲು ಪ್ರಾರಂಭಿಸಿತು. ಮಧ್ಯಂತರದ ಕಾಲದಲ್ಲಿ ಸಂಪೂರ್ಣ ದೇಶದಲ್ಲಿ ಅನೇಕ ತಿಂಗಳು ಸಂಚಾರಸಾರಿಗೆ ನಿರ್ಬಂಧವಿತ್ತು. ಪರಿಸ್ಥಿತಿ ಸುಧಾರಿಸಿದ ಬಳಿಕ ಅಕ್ಟೋಬರ್ ೨೦೨೦ ರ ಬಳಿಕ ಈ ಸಂಚಾರಸಾರಿಗೆ ನಿರ್ಬಂಧವನ್ನು ಶಿಥಿಲಗೊಳಿಸಲಾಯಿತು. ತದನಂತರದ ಎರಡನೇಯ ಅಲೆ ಅತ್ಯಂತ ತೀವ್ರ ಸ್ವರೂಪದಲ್ಲಿ ಕಂಡು ಬಂದಿದ್ದು, ಅದು ವಯಸ್ಕರರನ್ನು ಮಾತ್ರವಲ್ಲ, ಚಿಕ್ಕ ಮಕ್ಕಳು ಮತ್ತು ಯುವಕರ ಮೇಲೆಯೂ ಆಕ್ರಮಣವನ್ನು ಮಾಡಿ ಜೀವ ತೆಗೆಯುತ್ತಿದೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಸರಕಾರಿ ಆಸ್ಪತ್ರೆಗಳಲ್ಲಿನ ಭ್ರಷ್ಟ ಕಾರುಬಾರು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಸುಲಿಗೆಯಿಂದ ಕೊರೊನಾದ ಎರಡನೇಯ ಅಲೆಯು ಅತ್ಯಧಿಕ ತೊಂದರೆದಾಯಕವಾಗಿದೆ !

ತ್ರಿಕಾಲ ಜ್ಞಾನಿಗಳಾದ ಅನೇಕ ಸಂತರು ಅನೇಕ ವರ್ಷಗಳಿಂದ ಮುಂಬರುವ ಕೆಲವು ವರ್ಷಗಳಲ್ಲಿ ಸಂಪೂರ್ಣ ಜಗತ್ತಿನಲ್ಲಿ ಭಯಾನಕ ಆಪತ್ಕಾಲೀನ ಪರಿಸ್ಥಿತಿ ಎದುರಾಗಲಿದ್ದು, ಆ ಸಮಯದಲ್ಲಿ ನಿಮ್ಮ ಹಣ, ನಿಮ್ಮ ಸಂಪತ್ತು ಯಾವುದೂ ನಿಮ್ಮನ್ನು ರಕ್ಷಿಸಲಾರದು ಎಂದು ಹೇಳಿದ್ದರು. ಈಗ ಎಲ್ಲರೂ ಅದನ್ನು ಅನುಭವಿಸುತ್ತಿದ್ದಾರೆ. ಕೊರೋನಾ ರೋಗಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ (ಕಾಟ್), ಆಕ್ಸಿಜನ್, ಔಷಧಿ, ಮಾತ್ರೆ, ಇಂಜೆಕ್ಶನ್, ಇತರ ಸಾಧನ ಮುಂತಾದವುಗಳ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಖಾಸಗಿ ಆಸ್ಪತ್ರೆಗಳು ಪ್ರತಿಯೊಂದು ವಿಷಯಕ್ಕೆ ವಿಪರೀತ ದರವನ್ನು ಹೇರುತ್ತಿದ್ದು, ಅವು ಜನರ ಸುಲಿಗೆಯನ್ನು ಮಾಡುತ್ತಿವೆ.

ಕೇವಲ ಕೊರೊನಾ ಇದೆಯೆಂದು ಕಂಡು ಬಂದರೆ ಎದೆಯ ಎಚ್.ಆರ್. ಪಿ.ಸಿ.ಆರ್. ಮತ್ತು ರಕ್ತದ ವಿವಿಧ ಪರೀಕ್ಷೆಗಳನ್ನು ಮಾಡುವುದು ಕಡ್ಡಾಯವಾಗಿದೆ. ಕೇಂದ್ರೀಯ ಆರೋಗ್ಯ ತಂಡದವರು ಮಹಾರಾಷ್ಟ್ರಕ್ಕೆ ಬಂದಾಗ ‘ಇಂತಹ  ಪರೀಕ್ಷೆಗಳ ಆವಶ್ಯಕತೆಯಿಲ್ಲ ಇಂತಹ ಪರೀಕ್ಷೆಗಳನ್ನು ಏಕೆ ಮಾಡಲು ಹೇಳುತ್ತೀರಿ ? ಎಂದು ಕೇಳಿ ವೈದ್ಯರ ಕಿವಿ ಹಿಂಡಿದರು. ಖಾಸಗಿ ಆಸ್ಪತ್ರೆ ಅಥವಾ ಪರೀಕ್ಷಾಕೇಂದ್ರಗಳು  (ಲ್ಯಾಬೋರೆಟರಿಗಳು) ಕೇವಲ ಈ ಎರಡು ಪರೀಕ್ಷೆಗಳಿಗೆ ೬ ಸಾವಿರದ ೫೦೦ ರೂಪಾಯಿಗಳಿಂದರಿಂದ ೧೦ ಸಾವಿರದವರೆಗೆ ಹಣ ವಸೂಲು ಮಾಡುತ್ತವೆ. ವಾಸ್ತವದಲ್ಲಿ ‘ಆರ್.ಟಿ.ಪಿ.ಸಿ.ಆರ್ ಈ ಪರೀಕ್ಷೆಯಿಂದಲೇ ರೋಗಿಗೆ ಎಷ್ಟು ಪ್ರಮಾಣದಲ್ಲಿ ಕೊರೋನಾ ಹರಡಿದೆ ಎನ್ನುವುದು ತಿಳಿಯುತ್ತದೆ. ಕೊರೋನಾ ಪುಪ್ಫುಸಕ್ಕೆ ಅಥವಾ ಶರೀರದ ಇತರ ಭಾಗಗಳಿಗೆ ಹರಡಿದೆಯೇ ಎಂದು ಕಂಡು ಹಿಡಿಯಲು ಮಾತ್ರ ‘ಎಚ್‌ಆರ್‌ಸಿಟಿ ಮತ್ತು ರಕ್ತದ ೫ ನಮೂನೆಗಳ ಪರೀಕ್ಷೆ ಮಾಡಲು ಹೇಳಬೇಕು ಎಂದು ಕೇಂದ್ರ ಆರೋಗ್ಯ ತಂಡವು ಸ್ಪಷ್ಟಪಡಿಸಿದೆ. ಆದರೂ ರೋಗಿಗಳು ಅನುಭವಿಸುತ್ತಿರುವ ತೊಂದರೆಗಳ ಪ್ರಮಾಣವೇನು ಕಡಿಮೆಯಾಗಿಲ್ಲ. ಅನೇಕ ಬಾರಿ ನಾವು ಸರಕಾರಿ ಆಸ್ಪತ್ರೆಗಳಲ್ಲಿ ಇಂಜೆಕ್ಷನ್, ಔಷಧಿಗಳು ಮತ್ತು ಮಾತ್ರೆಗಳು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಸುದ್ದಿಗಳನ್ನು ಓದುತ್ತಿದ್ದೇವೆ. ಈ ಎಲ್ಲ ಪರಿಸ್ಥಿತಿಯಲ್ಲಿ ಮೃತರ ಸಂಖ್ಯೆ  ಹೆಚ್ಚುತ್ತಿದ್ದು, ಮೃತದೇಹಕ್ಕೆ ಅಗ್ನಿ ಸಂಸ್ಕಾರಕ್ಕೆ ಸಹ ಸರತಿ ಸಾಲಿನಲ್ಲಿ ದಾರಿ ಕಾಯುವ ಪರಿಸ್ಥಿತಿ ಎದುರಾಗಿದೆ.

೨. ಕೊರೊನಾ ಸಾಂಕ್ರಾಮಿಕ ಹೆಚ್ಚುತ್ತಿರುವಾಗಲೇ ಚುನಾವಣೆಗಳನ್ನು ನಡೆಸಿದ್ದರಿಂದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು

ಕೊರೊನಾದ ಎರಡನೇಯ ಅಲೆಯಿಂದ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಮನುಷ್ಯ ಹಾನಿಯಾಗುತ್ತಿದೆ. ‘ಜಗತ್ತಿನಲ್ಲಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಬಿರುದು ಹಚ್ಚಿಕೊಂಡು ಮೆರೆಯುವ ಭಾರತದಲ್ಲಿ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ಈ ೫ ರಾಜ್ಯಗಳ ಚುನಾವಣೆಗಳನ್ನು ಘೋಷಿಸಲಾಯಿತು. ತದನಂತರ ಪ್ರಚಾರದ ಹಾವಳಿ ಪ್ರಾರಂಭವಾಯಿತು.  ಇದರಲ್ಲಿ ಬಹಳಷ್ಟು ಜನರು ಕೊರೋನಾದ ಸಾಮಾನ್ಯ ನಿಯಮಗಳನ್ನೂ ಪಾಲಿಸಲಿಲ್ಲ. ಮದುವೆಗಳ ಸಮಾರಂಭಗಳಲ್ಲಿ ಅಥವಾ ಅಂತ್ಯವಿಧಿಯ ಸ್ಥಳದಲ್ಲಿ  ೫೦ ಕ್ಕಿಂತ ಅಧಿಕ ಜನರು ಸೇರಿದಾಗ ಸರಕಾರವು ದಂಡ ವಿಧಿಸುತ್ತಿತ್ತು. ಆದರೆ ಇನ್ನೊಂದೆಡೆ ರಾಜಕೀಯ ಪಕ್ಷಗಳು ನಡೆಸುವ ಸಭೆಗಳಲ್ಲಿ ಲಕ್ಷಾಂತರ ಜನರು ಒಂದೆಡೆ ಸೇರಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದವು.

೩. ಚುನಾವಣೆಯ ಬಳಿಕ ಕೊರೊನಾ ರೋಗಿಗಳ ಸಂಖ್ಯೆಯಲ್ಲಿ ನೂರಾರು ಪಟ್ಟುಗಳಲ್ಲಿ ವೃದ್ಧಿಯಾಗುವುದು

ಮಾರ್ಚ್ ೨೦೨೧ ರಲ್ಲಿ ಬಂಗಾಳದಲ್ಲಿ ೮ ಸಾವಿರಗಳಷ್ಟು ಕೊರೊನಾ ಪೀಡಿತ ರೋಗಿಗಳಿದ್ದರು. ಏಪ್ರಿಲ್ ತಿಂಗಳಲ್ಲಿ ಅದು ೪೨ ಸಾವಿರದವರೆಗೆ ತಲುಪಿತು. ರೋಗಿಗಳ ಸಂಖ್ಯೆ ಶೇ. ೪೨೦ ಪಟ್ಟುಗಳಷ್ಟು ಹೆಚ್ಚಾಯಿತು. ತಮಿಳುನಾಡಿನಲ್ಲಿ ಮಾರ್ಚ್ ನಲ್ಲಿ ೨೫ ಸಾವಿರದಷ್ಟು ರೋಗಿಗಳ ಸಂಖ್ಯೆಯಿತ್ತು. ಅದು ಏಪ್ರಿಲ್‌ನಲ್ಲಿ ೬೫ ಸಾವಿರಕ್ಕೆ ತಲುಪಿತು ಅಂದರೆ ಕೊರೋನಾ ಶೇ. ೧೫೯ ರಷ್ಟು ಹೆಚ್ಚಳವಾಯಿತು. ಮಾರ್ಚ್‌ನಲ್ಲಿ ಅಸ್ಸಾಂನಲ್ಲಿ ರೋಗಿಗಳ ಸಂಖ್ಯೆ ೫೩೭ ಇತ್ತು, ಅದು ಏಪ್ರಿಲ್  ಮಧ್ಯದಲ್ಲಿ ೩ ಸಾವಿರ ೩೯೮ ಕ್ಕೆ ಜಿಗಿಯಿತು. ಅಂದರೆ ರೋಗಿಗಳ ಸಂಖ್ಯೆ ಶೇ. ೫೩೨ ರಷ್ಟು ಹೆಚ್ಚಳವಾಯಿತು. ಕೇರಳದಲ್ಲಿ ಮಾರ್ಚ್ ನಲ್ಲಿ ೩೦ ಸಾವಿರದಷ್ಟಿದ್ದ ರೋಗಿಗಳ ಸಂಖ್ಯೆಯು ಎಪ್ರಿಲ್ ತಿಂಗಳಲ್ಲಿ ೬೫ ಸಾವಿರಕ್ಕೆ ತಲುಪಿತು. ಅಂದರೆ ಶೇ. ೧೩೦ ರಷ್ಟು ರೋಗಿಗಳು ಹೆಚ್ಚಾದರು. ಪುದುಚೇರಿಯಲ್ಲಿ ಒಂದು ತಿಂಗಳಿನಲ್ಲಿ ರೋಗಿಗಳ ಸಂಖ್ಯೆಯಲ್ಲಿ ಶೇ. ೧೬೫ ರಷ್ಟು ಹೆಚ್ಚಳವಾಯಿತು. ಇದರ ಒಂದೇ ಒಂದು ಕಾರಣವೆಂದರೆ, ಪ್ರತಿಯೊಂದು ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲುವ ಹಠ ತೊಟ್ಟರು. ಇದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರಿದರು. ಜನರು ತಮ್ಮಲ್ಲಿ ನಿರ್ದಿಷ್ಟ ಅಂತರವನ್ನು ಕಾಯ್ದುಕೊಳ್ಳಲಿಲ್ಲ, ಅಲ್ಲದೇ ಮಾಸ್ಕ್ ಕೂಡ ಹಾಕಿಕೊಳ್ಳಲಿಲ್ಲ. ಇದೇ ರೋಗಿಗಳ ಸಂಖ್ಯೆಯಲ್ಲಿ ಅತ್ಯಧಿಕ ಹೆಚ್ಚಳಕ್ಕೆ ಕಾರಣವಾಯಿತು.

೪. ದೇಶದಲ್ಲಿ ಕೊರೊನಾ ಹರಡುತ್ತಿರುವಾಗ ರಾಜಕೀಯ ಪಕ್ಷಗಳು ಚುನಾವಣೆಯ ಕಾರಣದಿಂದ ಕೊರೊನಾ ನಿಯಮಗಳನ್ನು ಗಾಳಿಗೆ ತೂರುವುದು

ಯಾವ ಮುಖಂಡರು (ನೇತಾರರು) ಕೊರೊನಾ ಹೆಚ್ಚಳವಾಗಬಾರದೆಂದು ಜನರಿಗೆ ಹೇಳುತ್ತಿದ್ದರೋ, ಅವರಿಗೇ ಚುನಾವಣೆಯ ಕಾಲದಲ್ಲಿ ಈ ಎಲ್ಲ ವಿಷಯಗಳು ಮರೆತು ಹೋದವು. ರಾಜಕೀಯ ಪಕ್ಷಗಳು ಅಧಿಕಾರ ಪಡೆಯಲು ಪ್ರಯತ್ನಿಸುತ್ತಿವೆ; ಆದರೆ ಅದರ ದುಷ್ಪರಿಣಾಮವನ್ನು ಜನತೆಯು ಅನುಭವಿಸಬೇಕಾಗುತ್ತಿದೆ. ಈ ಚುನಾವಣೆಯ ಕಾರಣದಿಂದ ಕೊರೊನಾ ಹೆಚ್ಚಾಗಿದೆ ಎಂದು ಪ್ರಚಾರ ಮಾಧ್ಯಮಗಳು ಹೇಳಿದಾಗ, ಓರ್ವ ಕೇಂದ್ರೀಯ ಸಚಿವರು ‘ದೇಶದಲ್ಲಿರುವ ರೋಗಿಗಳ ಸಂಖ್ಯೆಯ ಶೇ. ೪೦ ರಷ್ಟು ರೋಗಿಗಳು ಕೇವಲ ಮಹಾರಾಷ್ಟ್ರದಲ್ಲಿದ್ದಾರೆ. ಅಲ್ಲಿ ಚುನಾವಣೆ ಎಲ್ಲಿತ್ತು ? ಎಂದು ಪ್ರಶ್ನೆ ಕೇಳಿದರು. ಒಬ್ಬ ಸಚಿವರಾಗಿ ಹೀಗೆ ಮಾತನಾಡುವುದು ಅಯೋಗ್ಯವಾಗಿದೆ. ಕೊರೋನಾ ಹೆಚ್ಚಾಗಬಾರದೆಂದು ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿತ್ತು ಎಂಬುದರ ಬಗ್ಗೆ ಸಚಿವರು ಮಾತನಾಡಬೇಕಾಗಿತ್ತು. ಚುನಾವಣೆಯ ಪ್ರಚಾರದ ಕಾಲದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಲಿಲ್ಲ, ಅಲ್ಲದೇ ಜನರೂ ಮಾಸ್ಕ ಧರಿಸಲಿಲ್ಲ. ಇದರಿಂದ ಕೊರೋನಾ ಹೆಚ್ಚಾಯಿತು. ಈ ವಿಷಯದಲ್ಲಿ ಸಚಿವರು ಮಾತನಾಡಬೇಕಾಗಿತ್ತು. ಈ ಕಠಿಣ ಪ್ರಸಂಗದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಬೇಜವಾಬ್ದಾರಿಯಿಂದ ನಡೆದುಕೊಂಡವು. ಆದರೆ  ತಮ್ಮ ತಪ್ಪುಗಳನ್ನು ಸ್ವೀಕರಿಸಲು ಯಾವುದೇ ಪಕ್ಷ ಸಿದ್ಧವಿಲ್ಲ. ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಮದ್ರಾಸ ಉಚ್ಚ ನ್ಯಾಯಾಲಯವು ಕೇಂದ್ರೀಯ ಚುನಾವಣೆ ಆಯೋಗಕ್ಕೆ ಛೀಮಾರಿ ಹಾಕಿತು. ಉಚ್ಚ ನ್ಯಾಯಾಲಯವು ದೇಶದಲ್ಲಿ ಬಂದಿರುವ ಕೊರೊನಾದ ಎರಡನೇ ಅಲೆಗೆ ನೀವೇ ಜವಾಬ್ದಾರರಾಗಿದ್ದೀರಿ. ನಿಮ್ಮ ಅಧಿಕಾರಿಗಳ ವಿರುದ್ಧ ಕೊಲೆಯ ಆರೋಪವನ್ನು ದಾಖಲಿಸಬೇಕು. ‘ರಾಜಕೀಯ ಪಕ್ಷ ಗಳಿಗೆ ಪ್ರಚಾರ ಸಭೆಯನ್ನು ನಡೆಸಲು  ಹೇಗೆ ಅನುಮತಿ ನೀಡಿದಿರಿ ?, ‘ಈ ಚುನಾವಣೆ ಪ್ರಚಾರ ಸಭೆ ಪ್ರಾರಂಭವಾದಾಗ ನೀವು ಯಾವ ಗ್ರಹದ ಮೇಲೆ ಇದ್ದೀರಿ ?, ಎಂದೂ  ಪ್ರಶ್ನಿಸಿತು.

೫. ಕೊರೊನಾ ನಿಯಮಗಳನ್ನು ಉಲ್ಲಂಘಿಸಿದವರಿಗೆ ಚುನಾವಣಾ ಆಯೋಗವು ಯಾವುದೇ ದಂಡವನ್ನು ವಿಧಿಸದಿರುವುದು

‘ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕು, ಅಲ್ಲದೇ ಸಾಧುಸಂತರು ವೈಯಕ್ತಿಕವಾಗಿ ಹರಿದ್ವಾರದಲ್ಲಿ ವಾಸ್ತವ್ಯವಿರದೇ ತಮ್ಮ ಊರುಗಳಿಗೆ ಮರಳಬೇಕು ಎಂದು ಪ್ರಧಾನಮಂತ್ರಿಗಳು ಮನವಿ ಮಾಡಿದ್ದರು. ಇದೇ ರೀತಿಯ ಮನವಿಯನ್ನು ಆಯೋಗವು ೫ ರಾಜ್ಯಗಳಿಗೆ ಮಾಡಿದ್ದರೆ ಮತ್ತು ಎಲ್ಲ ಸಭೆಗಳನ್ನು ‘ಆನ್‌ಲೈನ್ ತೆಗೆದುಕೊಳ್ಳುವಂತೆ ಹೇಳಿದ್ದರೆ ಅದು ಸೂಕ್ತವಾಗುತ್ತಿತ್ತು. ಚುನಾವಣಾ ಆಯೋಗವು ವಿವಿಧ ಸೂಚನೆಗಳನ್ನು ನೀಡುತ್ತಿರುತ್ತದೆ. ಆದರೆ ಅದರ ಪಾಲನೆಯಾಗುವುದಿಲ್ಲ. ಈ ಪ್ರಸಂಗದಲ್ಲಿ ಚುನಾವಣಾ ಆಯೋಗವು ಕೊರೊನಾ ನಿಯಮ ಉಲ್ಲಂಘಿಸಿದ ಬಗ್ಗೆ ಯಾರನ್ನೂ ದಂಡಿಸಲಿಲ್ಲ.

೬. ಗಂಗಾಜಲದಲ್ಲಿ ಅಸಾಧ್ಯ ರೋಗಗಳನ್ನು ನಾಶ ಮಾಡುವ ಸಾಮರ್ಥ್ಯವಿರುವಾಗ ಹಿಂದೂದ್ವೇಷಿಗಳು ಕುಂಭಮೇಳವನ್ನು ಟೀಕಿಸುವುದು

ಇತ್ತೀಚೆಗಷ್ಟೇ ಸಾವಿರಾರು ವರ್ಷಗಳ ಪರಂಪರೆಯಿರುವ ಕುಂಭಮೇಳ ಹರಿದ್ವಾರದಲ್ಲಿ ಮುಕ್ತಾಯಗೊಂಡಿತು. ಗಂಗೆಯ ಪವಿತ್ರ ಸ್ನಾನ ಮಾಡಲು ದೇಶ-ವಿದೇಶಗಳಿಂದ ಲಕ್ಷಾಂತರ ಸಂತರು, ಮಹಂತರು, ವಿವಿಧ ಆಖಾಡಗಳ ಪ್ರಮುಖರು ಮತ್ತು ಭಕ್ತರು ಹರಿದ್ವಾರದಲ್ಲಿ ಸೇರುತ್ತಾರೆ. ಕುಂಭಮೇಳದಲ್ಲಿ ಗಂಗಾಸ್ನಾನ ಮಾಡುವುದರ ಹಿಂದೆ ಸಾವಿರಾರು ವರ್ಷಗಳ ಪರಂಪರೆ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ಈ ಗಂಗಾಸ್ನಾನದ ಅನುಭೂತಿಯನ್ನು ದೇಶ-ವಿದೇಶಗಳಲ್ಲಿನ ಅನೇಕ ಭಕ್ತರು ಪಡೆದಿದ್ದಾರೆ. ಚರ್ಮರೋಗ ಮತ್ತು ಬಹಳ ಹಳೆಯ ಗುಣಮುಖವಾಗದ ರೋಗಗಳಿದ್ದ ಭಕ್ತರು ಗಂಗಾಸ್ನಾನದಿಂದ ಗುಣಮುಖರಾಗಿದ್ದಾರೆ. ಇದು ಲಕ್ಷಾವಧಿ ಜನರ ಅನುಭವವಾಗಿದೆ. ಕಳೆದ ಒಂದೂಕಾಲು ವರ್ಷಗಳಿಂದ ದೇಶಾದ್ಯಂತ ಕೊರೊನಾ ತಾಂಡವವಾಡುತ್ತಿದೆ. ಹೀಗಿರುವಾಗ ಗಂಗೆಯ ದಡದಲ್ಲಿರುವ ಜನರಲ್ಲಿ ಕೊರೊನಾದ ಪ್ರಮಾಣ ಕೇವಲ ಶೇ. ೫ ರಷ್ಟು, ಅಂದರೆ ನಗಣ್ಯವೆನೆಸುವಷ್ಟು ಕಂಡು ಬಂದಿತು. ಇದನ್ನು ಕಡೆಗಣಿಸಿ ಹಿಂದೂದ್ವೇಷಿಗಳು ಮತ್ತು ಹಿಂದೂಗಳ ವೈಭವಶಾಲಿ ಪರಂಪರೆಯನ್ನು ಒಪ್ಪಿಕೊಳ್ಳದ ಪ್ರಚಾರ ಮಾಧ್ಯಮಗಳೂ ಹಿಂದೂದ್ವೇಷದ ಕೋಪವನ್ನು ಶಮನಗೊಳಿಸಿಕೊಂಡರು. ಇಷ್ಟೇ ಅಲ್ಲ ಅವರು ಕುಂಭಮೇಳದ ತುಲನೆಯನ್ನು ಮತಾಂಧರ ಮರ್ಕಜ್‌ನೊಂದಿಗೆ ಮಾಡಿದರು. ಮರ್ಕಜ್‌ನವರು ಮಹಿಳಾ ಡಾಕ್ಟರ ಮತ್ತು ದಾದಿಯರೊಂದಿಗೆ ಅಯೋಗ್ಯವಾಗಿ ವರ್ತಿಸಿದ್ದರು. ಅಲ್ಲದೇ ಅವರು ಅನೇಕ ಸ್ಥಳಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಮತ್ತು ಪೊಲೀಸರ ಮೇಲೆ ಕಲ್ಲು ಎಸೆದಿದ್ದರು; ಆದರೆ ಮತಾಂಧರನ್ನು ಓಲೈಸುವ ಮಾಧ್ಯಮಗಳು ಎಲ್ಲ ವಿಷಯಗಳನ್ನು ತಕ್ಷಣವೇ ಮರೆತವು.

೭. ಗಂಗಾಜಲದಲ್ಲಿ ಕೊರೋನಾ ವಿಷಾಣುಗಳನ್ನು ನಾಶಗೊಳಿಸುವ ಸಾಮರ್ಥ್ಯವಿರುವುದು ಸಂಶೋಧನೆಯಿಂದ ಸಿದ್ಧವಾಗುವುದು

ಬನಾರಸ ಹಿಂದೂ ವಿಶ್ವವಿದ್ಯಾಲಯದ ಡಾಕ್ಟರರು ಇತ್ತೀಚೆಗಷ್ಟೇ ಕೈಗೊಂಡ ಸಂಶೋಧನೆಯಲ್ಲಿ ‘ಗಂಗೆಯ ನೀರಿನಲ್ಲಿ ‘ಬ್ಯಾಕ್ಟೇರಿಯಾ ಫಾಜ್ ಹೆಸರಿನ ಬ್ಯಾಕ್ಟೀರಿಯಾವಿದ್ದು, ಈ ವಿಷಾಣು ಕೊರೋನಾ ವಿಷಾಣುವನ್ನು ನಿಷ್ಕ್ರಿಯಗೊಳಿಸುತ್ತದೆ ಎನ್ನುವುದು ಸಾಬೀತಾಗಿದೆ. ಈ ಕುರಿತು ಸಂಶೋಧನಾ ಪ್ರಬಂಧವನ್ನು ಅಂತರರಾಷ್ಟ್ರೀಯ ಮಟ್ಟದ ‘ಇಂಟರನ್ಯಾಶನಲ್ ಜರ್ನಲ್ ಆಫ್ ಮೈಕ್ರೋ ಬಯಾಲಜಿಯಲ್ಲಿ ಪ್ರಕಟಗೊಂಡಿದೆ. ಈ ಸಂಶೋಧನೆಯನ್ನು ಜಗತ್ತಿನಾದ್ಯಂತದ ವಿಜ್ಞಾನಿಗಳು ಮತ್ತು ಡಾಕ್ಟರರು ಪ್ರಶಂಸಿಸಿದ್ದಾರೆ ಗಂಗೋತ್ರಿಯ ಗಂಗಾಜಲದಿಂದ ಸಿದ್ಧಪಡಿಸಲಾದ ‘ನೇಜಲ್ ಸ್ಪ್ರೇ ಕೊರೋನಾದ ಮೇಲೆ ಪ್ರಭಾವಿಯಾಗಿದೆ. ‘ಐ.ಸಿ.ಎಮ್.ಆರ್, ಅಂದರೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅನುಮತಿ ದೊರೆತ ಬಳಿಕ ಅದನ್ನು ಜನತೆಯ ಉಪಯೋಗಕ್ಕೆ ಮಾರುಕಟ್ಟೆಯಲ್ಲಿ  ತರಲಾಗುವುದು. ಇದರ ಮೌಲ್ಯ ಕೇವಲ ೨೦ ರಿಂದ ೩೫ ರೂಪಾಯಿ ಇರುವುದರಿಂದ ಅದು ಬಡವರಿಗೆ ಅನುಕೂಲವಾಗಲಿದೆ. ‘ಗಂಗಾಜಲವು ಕೋವಿಡ್-೧೯ ಮೇಲೆ ರಾಮಬಾಣ ಉಪಾಯವಾಗಿದೆಯೇ ? ಎನ್ನುವ ವಿಷಯದ ಮೇಲೆ ಇತ್ತೀಚೆಗಷ್ಟೇ ‘ಆನ್‌ಲೈನ್ ಸಂವಾದವು ನಡೆಯಿತು. ಅದರಲ್ಲಿ ‘ಗಂಗಾ ನದಿಯನ್ನು ರಕ್ಷಿಸಿರಿ ಎಂಬ ದೊಡ್ಡ ಕಾರ್ಯವನ್ನು ಮಾಡುತ್ತಿರುವ ಉತ್ತರಪ್ರದೇಶದ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅರುಣಕುಮಾರ ಗುಪ್ತಾ ಭಾಗವಹಿಸಿದ್ದರು. ಅಲ್ಲದೇ ಋಷಿಮುನಿಗಳು ಕೂಡ ಗಂಗಾನದಿಯ ಮಹತ್ವವನ್ನು ಧರ್ಮಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

೮. ಸಾಧು, ಸಂತರು ಮತ್ತು ಮಹಂತರು ಒಳ್ಳೆಯ ತಿಳುವಳಿಕೆಯನ್ನು ತೋರಿಸಿ ‘ಎಲ್ಲಕ್ಕಿಂತ ಮೊದಲು ರಾಷ್ಟ್ರ ಎನ್ನುವುದನ್ನು ತೋರಿಸಿಕೊಟ್ಟರು

ದೇಶದಲ್ಲಿ ಕೊರೋನಾದ ಸಾಂಕ್ರಾಮಿಕ ಹೆಚ್ಚುತ್ತಿರುವುದನ್ನು ನೋಡಿ ಕೇಂದ್ರ ಸರಕಾರ ಮತ್ತು ಉತ್ತರಪ್ರದೇಶ ಸರಕಾರಗಳು ಕುಂಭಮೇಳವನ್ನು ಸ್ಥಗಿತಗೊಳಿಸುವ ಬಗ್ಗೆ ಸಂತ-ಮಹಂತರಿಗೆ ವಿನಂತಿಸಿದರು. ಅದಕ್ಕೆ ಎಲ್ಲ ಸಾಧು-ಸಂತರು ಮತ್ತು ಮಹಂತರು ಸಕಾರಾತ್ಮಕವಾಗಿ ಸ್ಪಂದಿಸಿ ಕುಂಭಮೇಳವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದರು. ತದನಂತರ ಎಲ್ಲ ಸಂತರು, ಮಹಂತರು ಮತ್ತು ಭಕ್ತರು ಕೂಡಲೇ ತಮ್ಮ ತಮ್ಮ ರಾಜ್ಯಗಳಿಗೆ ಮರಳಲು ಪ್ರಾರಂಭಿಸಿದರು. ವಾಸ್ತವದಲ್ಲಿ ಇನ್ನೂ ಎರಡು ದೊಡ್ಡ ಪವಿತ್ರ ಸ್ನಾನಗಳು ಬಾಕಿ ಇದ್ದವು. ಇಂತಹ ತಿಳುವಳಿಕೆ ಅಥವಾ ವಿಶ್ವ ಕಲ್ಯಾಣಕ್ಕಾಗಿ ತ್ಯಾಗ ಮಾಡುವ ಸಂಸ್ಕೃತಿಯು ಕೇವಲ ಹಿಂದೂ ಧರ್ಮದಲ್ಲಿಯೇ ಇದೆ. ಇದನ್ನು ಹಿಂದೂದ್ವೇಷಿಗಳು ಮತ್ತು ಟೀಕಾಕಾರರು ಗಮನದಲ್ಲಿಟ್ಟುಕೊಳ್ಳಬೇಕು. ಕುಂಭಮೇಳದ ನಿಯೋಜನೆಯನ್ನು ಅನೇಕ ವರ್ಷಗಳ ಮೊದಲೇ ಮಾಡಿರುತ್ತಾರೆ. ಭಾರತದ ೪ ಸ್ಥಳಗಳಲ್ಲಿ ೧೨ ವರ್ಷಗಳಿಗೊಮ್ಮೆ ಕುಂಭಮೇಳ ಬರುತ್ತದೆ.

ಉತ್ತರಪ್ರದೇಶದಲ್ಲಿ ಪಂಚಾಯತಿ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳನ್ನು ರದ್ದುಗೊಳಿಸಬೇಕು ಅಥವಾ ಮುಂದೂಡಬೇಕು ಎಂದು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿದೆ. ಈ ವಿಷಯದಲ್ಲಿ ನ್ಯಾಯಾಲಯವು ಇತ್ತೀಚೆಗಷ್ಟೇ ರಾಜ್ಯ ಸರಕಾರಕ್ಕೆ ಕಾರಣ ಕೇಳಿ ನೊಟೀಸು ಕಳುಹಿಸಿದೆ. ಕುಂಭಮೇಳದ ವಿಷಯದಲ್ಲಿ ನ್ಯಾಯಾಲಯದ ಇಂತಹ ಯಾವುದೇ ಆದೇಶವಿಲ್ಲದಿರುವಾಗಲೂ ಹಿಂದೂ ಧರ್ಮದ ಗೌರವಾನ್ವಿತ ಸಾಧು ಸಂತರು ಸರಕಾರದ ವಿನಂತಿಗೆ ಗೌರವವನ್ನು ಕೊಟ್ಟು ಕುಂಭಮೇಳವನ್ನು  ಸ್ಥಗಿತಗೊಳಿಸುವುದಾಗಿ ಘೋಷಿಸಿದರು. ಈ ಪ್ರಸಂಗದಿಂದ ರಾಜಕಾರಣಿಗಳು ಮತ್ತು ಧರ್ಮಾಚಾರ್ಯರಲ್ಲಿರುವ ವ್ಯತ್ಯಾಸವು ಕಂಡು ಬರುತ್ತದೆ.

ಶ್ರೀ ಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ (೨೩.೪.೨೦೨೧)