ಸಮಾಜದಲ್ಲಿನ ತಥಾಕಥಿತ ಸಂತರೊಂದಿಗೆ ನಾಮಜಪ ಮಾಡಿದ ಮೇಲೆ ಸಾಧಕರ ಮೇಲಾಗಿರುವ ಪರಿಣಾಮ

ಅಧ್ಯಾತ್ಮಶಾಸ್ತ್ರದ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

 ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಪ್ರಸ್ತುತ ಕಾಲದಲ್ಲಿ ‘ಸಮಾಜ ದಲ್ಲಿನ ಹೆಚ್ಚು-ಕಡಿಮೆ ಪ್ರತಿಯೊಬ್ಬರಿಗೂ ಕೆಟ್ಟ ಶಕ್ತಿಗಳ ತೊಂದರೆ ಇದೆ. ಕೆಟ್ಟ ಶಕ್ತಿಗಳಿಂದ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ ಹಾಗೂ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ದುರ್ದೈವದಿಂದ ಬಹುತೇಕ ಜನರಿಗೆ ಕೆಟ್ಟ ಶಕ್ತಿಗಳ ತೊಂದರೆಗಳ ಬಗ್ಗೆ ಅಜ್ಞಾನವೇ ಇದೆ. ಸಮಾಜದಲ್ಲಿರುವ ತಥಾಕಥಿತ ಸಂತರು ಜನರ ಮಾಯೆಯಲ್ಲಿನ ಅಡಚಣೆಗಳನ್ನು ನಿವಾರಿಸುತ್ತಾರೆ. ಈ ಕಾರಣದಿಂದ ಜನರು ಅವರ ಬಳಿ ಪುನಃ ಪುನಃ ಹೋಗುತ್ತಾರೆ. ಮಾಯೆಯ ಅಡಚಣೆಗಳು ಎಂದಿಗೂ ಮುಗಿಯದ ಅಡಚಣೆಗಳಾಗಿವೆ. ಹಾಗೆಯೇ ತಾತ್ಕಾಲಿಕ ಉಪಾಯಗಳ ಪರಿಣಾಮ ಬಹಳ ದಿನಗಳವರೆಗೆ ಉಳಿಯುವುದಿಲ್ಲ. ಆದುದರಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ನಾಮಜಪ ಸಾಧನೆಯನ್ನು ಮಾಡುವುದೇ ಪ್ರಭಾವಿ ಉಪಾಯವಾಗಿದೆ. ಕೆಲವು ತಥಾಕಥಿತ ಸಂತರಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಇರುವುದರಿಂದ ಅವರಲ್ಲಿರುವ ಕೆಟ್ಟ ಶಕ್ತಿಗಳು ಇಂತಹ ಅವಕಾಶಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತವೆ. ಕೆಟ್ಟ ಶಕ್ತಿಗಳು ಸಂತರ ಮನಸ್ಸು ಮತ್ತು ಬುದ್ಧಿಯ ಮೇಲೆ ಕಪ್ಪು ಆವರಣವನ್ನು ತಂದು, ಅವರ ಮಾಧ್ಯಮದಿಂದ ಜನರಿಗೆ ತಪ್ಪು ಮಾರ್ಗದರ್ಶನ ಮಾಡುತ್ತವೆ. ಇದರಿಂದ ಜನರಿಗೆ ಲಾಭವಾಗುವುದರ ಬದಲು ಆಧ್ಯಾತ್ಮಿಕ ದೃಷ್ಟಿಯಿಂದ ಹಾನಿಯೇ ಆಗುತ್ತದೆ.

ಒಂದು ರಾಜ್ಯದ ಓರ್ವ ತಥಾಕಥಿತ ಸಂತರು ರಾಮನಾಥಿಯ (ಗೋವಾ) ಸನಾತನ ಆಶ್ರಮಕ್ಕೆ ಭೇಟಿ ನೀಡಿದ್ದರು. ಅವರು ಸನಾತನದ ಆಶ್ರಮದಲ್ಲಿ ನಾಮದ ಒಂದು ಪ್ರಕಾರವನ್ನು ಪ್ರಸ್ತುತ ಪಡಿಸಿದರು. ಅದರಲ್ಲಿ ಆ ಸಂತರು ತಾಳವನ್ನು ಬಾರಿಸುತ್ತ ‘ಶ್ರೀರಾಮ ಜಯ ರಾಮ ಜಯ ಜಯ ರಾಮ | ಈ ನಾಮಜಪವನ್ನು ಮಾಡಿದರು ಮತ್ತು ಸಾಧಕರು ಅವರ ಹಿಂದಿನಿಂದ ಆ ನಾಮಜಪವನ್ನು ಹೇಳುತ್ತಿದ್ದರು. ‘ಆ ಸಂತರೊಂದಿಗೆ ನಾಮಜಪ ಮಾಡಿದುದರಿಂದ ಸಾಧಕರ ಮೇಲೆ ಏನು ಪರಿಣಾಮವಾಗುತ್ತದೆ ?, ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ  ಮಾಡಲು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ಈ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಯ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪ್ರಯೋಗದಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ) ಇರುವ ಇಬ್ಬರು ಸಾಧಕರು ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಇಬ್ಬರು ಸಾಧಕರು, ಹೀಗೆ ಒಟ್ಟು ನಾಲ್ಕು ಜನ ಸಾಧಕರು ಭಾಗವಹಿಸಿದ್ದರು. ಈ ಪ್ರಯೋಗದಲ್ಲಿ ನಾಲ್ಕೂ ಜನ ಸಾಧಕರು ಸಂತರೊಂದಿಗೆ ೩೦ ನಿಮಿಷಗಳ ಕಾಲ ನಾಮಜಪ ಮಾಡಿದರು. ಪ್ರಯೋಗದ ಮೊದಲು ಮತ್ತು ಪ್ರಯೋಗದ ನಂತರ ಅವರೆಲ್ಲರ ‘ಯು.ಎ.ಎಸ್. ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು. ಈ ಪ್ರಯೋಗದಿಂದ ಅವರೆಲ್ಲರ ಮೇಲೆ ಆಗಿರುವ ನಾಮಜಪದ ಪರಿಣಾಮವನ್ನು ಮುಂದೆ ನೀಡಲಾಗಿದೆ.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳ ನಿರೀಕ್ಷಣೆಗಳ ವಿಶ್ಲೇಷಣೆ – ಈ ಪ್ರಯೋಗದಿಂದ ಸಂತರ ಮತ್ತು ಸಾಧಕರ ಮೇಲೆ ಬಹಳ ನಕಾರಾತ್ಮಕ ಪರಿಣಾಮವಾಗಿರುವುದು ಕಂಡುಬಂದಿತು : ಅದು ಮುಂದೆ ನೀಡಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

ಟಿಪ್ಪಣಿ : ‘ಔರಾ ಸ್ಕ್ಯಾನರ್ ೪೦ ಅಂಶದ ಕೋನವನ್ನು ಮಾಡಿತು. ‘ಔರಾ ಸ್ಕ್ಯಾನರ್ ೧೮೦ ಅಂಶದ ಕೋನವನ್ನು ಮಾಡಿದರೆ ಮಾತ್ರ ಪ್ರಭಾವಲಯವನ್ನು ಅಳೆಯಲು ಸಾಧ್ಯವಾಗುತ್ತದೆ.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

. ಪ್ರಯೋಗದ ಬಳಿಕ ಸಂತರಲ್ಲಿದ್ದ ‘ಇನ್‌ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ನಕಾರಾತ್ಮಕ ಊರ್ಜೆಗಳಲ್ಲಿ ಬಹಳಷ್ಟು ಹೆಚ್ಚಳವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಯಿತು.

೨. ಪ್ರಯೋಗದ ಬಳಿಕ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಇಬ್ಬರೂ ಸಾಧಕರಲ್ಲಿನ ‘ಇನ್‌ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ನಕಾರಾತ್ಮಕ ಊರ್ಜೆಗಳಲ್ಲಿ ಬಹಳ ಹೆಚ್ಚಳವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಯಿತು.

೩. ಪ್ರಯೋಗದ ನಂತರ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಇಬ್ಬರೂ ಸಾಧಕಿಯರಲ್ಲಿನ ‘ಇನ್‌ಫ್ರಾರೆಡ್ ಈ ನಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆಯು ತುಂಬಾ ಕಡಿಮೆ ಆಯಿತು. –  ಸೌ. ಮಧುರಾ ಕರ್ವೆ

ಸೌ. ಮಧುರಾ ಕರ್ವೆ

೨. ನಿಷ್ಕರ್ಷ

ಈ ಪ್ರಯೋಗದಿಂದ ಸಂತರು ಮತ್ತು ಸಾಧಕರ ಮೇಲೆ ಬಹಳಷ್ಟು ನಕಾರಾತ್ಮಕ ಪರಿಣಾಮವಾಗಿರುವುದು ಕಂಡು ಬಂದಿತು.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಈ ಪ್ರಯೋಗದ ನಂತರ ಸಂತರಲ್ಲಿದ್ದ ನಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಗುವುದು : ಈ ಪ್ರಯೋಗದಲ್ಲಿ ಭಾಗವಹಿಸಿದ ತಥಾಕಥಿತ ಸಂತರು ದೇವಿ ಉಪಾಸಕರಾಗಿದ್ದಾರೆ. ಅವರಲ್ಲಿ ಅಲ್ಪಸ್ವಲ್ಪ ಸಾಧನೆ ಇದೆ. ಅವರಿಗೆ ತೀವ್ರ ಆಧ್ಯಾತ್ಮಿಕ ತೊಂದರೆ ಇದೆ. ಅವರಲ್ಲಿ ‘ಇನ್‌ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ನಕಾರಾತ್ಮಕ ಊರ್ಜೆಗಳು ಬಹಳಷ್ಟು ಪ್ರಮಾಣದಲ್ಲಿ ಕಂಡು ಬಂದವು. (‘ಇನ್‌ಫ್ರಾರೆಡ್ ಈ ನಕಾರಾತ್ಮಕ ಊರ್ಜೆಯು ವ್ಯಕ್ತಿಯ ಸುತ್ತಲಿನ ತೊಂದರೆದಾಯಕ ಆವರಣವನ್ನು ತೋರಿಸುತ್ತದೆ ಮತ್ತು ‘ಅಲ್ಟ್ರಾವೈಲೆಟ್ ಈ ನಕಾರಾತ್ಮಕ ಊರ್ಜೆಯು ವ್ಯಕ್ತಿಯ ದೇಹದಲ್ಲಿ ಕೆಟ್ಟ ಶಕ್ತಿಗಳು ಸಂಗ್ರಹಿಸಿದ ತೊಂದರೆದಾಯಕ ಶಕ್ತಿಯನ್ನು ತೋರಿಸುತ್ತದೆ). ಅವರಲ್ಲಿ ಅಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯೂ ಕಂಡು ಬಂದಿತು. ನಿಜ ಹೇಳಬೇಕೆಂದರೆ ಈ ಪ್ರಯೋಗದಲ್ಲಿ ದೇವರ ನಾಮದಿಂದ ಚೈತನ್ಯ ದೊರಕಿ ಎಲ್ಲರಿಗೂ ಆಧ್ಯಾತ್ಮಿಕ ಲಾಭವಾಗಬೇಕಾಗಿತ್ತು; ಆದರೆ ಹಾಗೆ ಆಗಲಿಲ್ಲ. ಇದರ ವಿರುದ್ಧ ಎಲ್ಲರ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ನಕಾರಾತ್ಮಕ ಪರಿಣಾಮವಾಗಿರುವುದು ಕಂಡು ಬಂದಿತು. ಇದರ ಕಾರಣವೆಂದರೆ ಈ ಪ್ರಯೋಗದಲ್ಲಿ ತಥಾಕಥಿತ ಸಂತರಿಂದ ಬಹಳ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿತಗೊಂಡವು. ಅವರಿಗೆ ತೊಂದರೆಗಳನ್ನು ಕೊಡುವ ಕೆಟ್ಟ ಶಕ್ತಿಗಳು ಈ ಅವಕಾಶವನ್ನು ದುರುಪಯೋಗಿಸಿಕೊಂಡು ಎಲ್ಲರ ಮೇಲೆಯೂ ತೊಂದರೆದಾಯಕ ಶಕ್ತಿಯನ್ನು ಪ್ರಕ್ಷೇಪಿಸಿದವು.

೩ ಆ. ಪ್ರಯೋಗದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಗುವುದು : ಈ ಸಾಧಕರಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಇದೆ. ಪ್ರಯೋಗದ ಸಮಯದಲ್ಲಿ ಕೆಟ್ಟ ಶಕ್ತಿಗಳು ಹರಡಿದ ತೊಂದರೆದಾಯಕ ಶಕ್ತಿಯನ್ನು ಗ್ರಹಿಸಲು ಸಾಧಕರ ತೊಂದರೆದಾಯಕ ಶಕ್ತಿಗಳ ಸ್ಥಾನಗಳು ಕಾರ್ಯನಿರತವಾದವು ಮತ್ತು ಅವು ಆ ತೊಂದರೆದಾಯಕ ಶಕ್ತಿಯನ್ನು ಗ್ರಹಿಸಿದವು. ಇದರಿಂದ ಪ್ರಯೋಗದ ಬಳಿಕ ಸಾಧಕರಲ್ಲಿನ ನಕಾರಾತ್ಮಕ ಊರ್ಜೆಗಳಲ್ಲಿ ಬಹಳ ಹೆಚ್ಚಳವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಗಿರುವುದು ಕಂಡು ಬಂದಿತು.

೩ ಇ. ಪ್ರಯೋಗದ ಬಳಿಕ ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕಿಯರಲ್ಲಿನ  ಸಕಾರಾತ್ಮಕ ಊರ್ಜೆ ಬಹಳಷ್ಟು ಕಡಿಮೆಯಾಗುವುದು : ಈ ಇಬ್ಬರೂ ಸಾಧಕಿಯರಿಗೆ ಆಧ್ಯಾತ್ಮಿಕ ತೊಂದರೆ ಇಲ್ಲ. ಅವರ ಸುತ್ತಲೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ತೊಂದರೆದಾಯಕ ಆವರಣ ಇತ್ತು. ಪ್ರಯೋಗದ ಸಮಯದಲ್ಲಿ ಕೆಟ್ಟ ಶಕ್ತಿಗಳು ಹರಡಿರುವ ತೊಂದರೆದಾಯಕ ಶಕ್ತಿಯಿಂದ ಸಾಧಕಿಯರ ಸುತ್ತಲಿನ ತೊಂದರೆದಾಯಕ ಆವರಣದಲ್ಲಿ ಹೆಚ್ಚಳವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಬಹಳಷ್ಟು ಕಡಿಮೆಯಾಯಿತು.  – ಸೌ. ಮಧುರಾ ಧನಂಜಯ ಕರ್ವೆ,

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೮.೧೨.೨೦೨೦)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು