ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಿಂದ ಹೆಚ್ಚು ಪ್ರಮಾಣದಲ್ಲಿ ಮತ್ತು ಅವರ ಬಲ ಚರಣದ ಹೆಬ್ಬೆರೆಳಿನಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ಅಧ್ಯಾತ್ಮಶಾಸ್ತ್ರದ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

 ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ಸಂತರ ಚರಣಗಳಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುತ್ತದೆ. ಡಾ. ಆಠವಲೆಯವರು ‘ಪರಾತ್ಪರ ಗುರು ಪದವಿಯ ಸಂತರಾಗಿರುವುದರಿಂದ ಅವರಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವಿದೆ. ಅವರ ಬಲಕಾಲು ಮತ್ತು ಎಡ ಕಾಲಿನ ಬೆರಳುಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನವನ್ನು ಮಾಡಲು ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಥರ್ಮೋ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣವನ್ನು ಉಪಯೋಗಿಸಲಾಯಿತು. ೧೯.೫.೨೦೧೮ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಈ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ಸ್ವರೂಪ, ಮಾಡಿದ ಅಳತೆಗಳ ನೋಂದಣಿ ಮತ್ತು ಅವುಗಳ ವಿವರಣೆಯನ್ನು ಮುಂದೆ ನೀಡಲಾಗಿದೆ.

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಸೌ. ಮಧುರಾ ಕರ್ವೆ

ಈ ಪರೀಕ್ಷಣೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಬಲಗಾಲಿನ ಮತ್ತು ಎಡಗಾಲಿನ ಬೆರಳುಗಳ ಉಗುರುಗಳ (ಟಿಪ್ಪಣಿ) ‘ಯು.ಎ.ಎಸ್. ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು. ಈ ನಿರೀಕ್ಷಣೆಯ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

ಟಿಪ್ಪಣಿ – ಬೆರಳುಗಳ ಉಗುರುಗಳು ಬೆರಳುಗಳ ಭಾಗವಾಗಿರುವುದರಿಂದ ಬೆರಳುಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳು ಉಗುರುಗಳಿಂದಲೂ ಪ್ರಕ್ಷೇಪಿತವಾಗುತ್ತವೆ. ಆದುದರಿಂದ ಈ ಪರೀಕ್ಷಣೆಯಲ್ಲಿ ಕಾಲುಗಳ ಬೆರಳುಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನ ಮಾಡಲು ಅವರ ಉಗುರುಗಳನ್ನು ಬಳಸಲಾಯಿತು.

೧ ಅ. ನಕಾರಾತ್ಮಕ ಊರ್ಜೆಗಳ ಸಂದರ್ಭದಲ್ಲಿನ ನಿರೀಕ್ಷಣೆಯ ವಿಶ್ಲೇಷಣೆ – ಪರಾತ್ಪರ ಗುರು ಡಾ. ಆಠವಲೆಯವರ ಬಲಗಾಲಿನ ಮತ್ತು ಎಡಗಾಲಿನ ಬೆರಳುಗಳ ಉಗುರುಗಳಲ್ಲಿ ‘ಇನ್ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳು ಇರಲಿಲ್ಲ.

೧ ಆ. ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿನ ನಿರೀಕ್ಷಣೆಗಳ ವಿಶ್ಲೇಷಣೆ – ಪರಾತ್ಪರ ಗುರು ಡಾ. ಆಠವಲೆಯವರ ಬಲಗಾಲಿನ ಮತ್ತು ಎಡಗಾಲಿನ ಬೆರಳುಗಳ ಉಗುರುಗಳಿಂದ ಸಕಾರಾತ್ಮಕ ಊರ್ಜೆಯು (ಚೈತನ್ಯ) ಪ್ರಕ್ಷೇಪಿಸುವುದು.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ಪರಾತ್ಪರ ಗುರು ಡಾ. ಆಠವಲೆಯವರ ಎಡಗಾಲಿನ ಬೆರಳುಗಳ ಉಗುರುಗಳ ತುಲನೆಯಲ್ಲಿ ಬಲಗಾಲಿನ ಬೆರಳುಗಳ ಉಗುರುಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳು ಸ್ವಲ್ಪ ಹೆಚ್ಚಿದ್ದವು.

೨. ಅವರ ಎರಡೂ ಕಾಲುಗಳ ಬೆರಳುಗಳ ಉಗುರುಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳು ಹೆಬ್ಬೆರೆಳಿನಿಂದ ಕಿರುಬೆರಳಿನವರೆಗೆ ಇಳಿಕೆಯ ಕ್ರಮದಲ್ಲಿದ್ದವು.

. ಅವರ ಎರಡೂ  ಕಾಲುಗಳ ಬೆರಳುಗಳ ಉಗುರುಗಳ ಪೈಕಿ ಹೆಬ್ಬೆರಳಿನ ಮತ್ತು ಅದರಲ್ಲಿಯೂ ಬಲ ಹೆಬ್ಬೆರಳಿನ ಉಗುರಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಉಳಿದವುಗಿಂತ ಹೆಚ್ಚಿತ್ತು.

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಪರಾತ್ಪರ ಗುರು ಡಾ. ಆಠವಲೆಯವರ ಎಡಗಾಲಿನ ಬೆರಳುಗಳ ಉಗುರುಗಳ ತುಲನೆಯಲ್ಲಿ ಅವರ ಬಲಗಾಲಿನ ಬೆರಳುಗಳ ಉಗುರುಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳು ಹೆಚ್ಚಿರುವುದರ ಕಾರಣ : ಮನುಷ್ಯನ ಶರೀರದ ಬಲ ಭಾಗದಲ್ಲಿ  ಸೂರ್ಯನಾಡಿಯ (ಪಿಂಗಲಾನಾಡಿಯ) ಮತ್ತು ಎಡ ಭಾಗದಲ್ಲಿ ಚಂದ್ರ ನಾಡಿಯ (ಇಡಾ ನಾಡಿಯ) ಪ್ರಭಾವವಿರುತ್ತದೆ. ಸೂರ್ಯನಾಡಿಯು ಅಗ್ನಿತತ್ತ್ವದ ಮತ್ತು ಚಂದ್ರನಾಡಿಯು ಆಪತತ್ತ್ವದ ನಿದರ್ಶಕವಾಗಿದೆ. ಸೂರ್ಯನಾಡಿಯು ತೇಜಸ್ವಿ ಮತ್ತು ಚಂದ್ರನಾಡಿಯು ಶೀತಲವಾಗಿರುತ್ತದೆ. ಸೂರ್ಯನಾಡಿಯು ತೇಜಸ್ವಿಯಾಗಿರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಎಡಗಾಲಿಗಿಂತ ಬಲಗಾಲಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಶಕ್ತಿ ಇದೆ. ಆದುದರಿಂದ ಅವರ ಎಡಗಾಲಿನ ಬೆರಳುಗಳ ಉಗುರುಗಳ ತುಲನೆಯಲ್ಲಿ ಬಲಗಾಲಿನ ಬೆರಳುಗಳ ಉಗುರುಗಳಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳು ಹೆಚ್ಚಿರುವುದು ಪರೀಕ್ಷಣೆಯಲ್ಲಿ ಕಂಡು ಬಂದಿತು.

೨ ಆ. ಪರಾತ್ಪರ ಗುರು ಡಾ. ಆಠವಲೆಯವರ ಎರಡೂ ಕಾಲುಗಳ  ಇತರ ಬೆರಳುಗಳ ಉಗುರುಗಳ ತುಲನೆಯಲ್ಲಿ ಹೆಬ್ಬೆರಳಿನ ಉಗುರುಗಳ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಹೆಚ್ಚಿರುವುದರ ಕಾರಣ : ಮನುಷ್ಯನ ಕೈಕಾಲುಗಳ ಬೆರಳುಗಳು ಪಂಚತತ್ತ್ವಗಳ ಪ್ರತಿನಿಧಿಗಳಾಗಿವೆ. ಹೆಬ್ಬೆರಳು – ಆಕಾಶತತ್ತ್ವದ, ತರ್ಜನಿ – ವಾಯುತತ್ತ್ವದ, ಮಧ್ಯಮಾ – ಅಗ್ನಿತತ್ತ್ವದ, ಅನಾಮಿಕಾ – ಆಪತತ್ತ್ವದ ಮತ್ತು ಕಿರುಬೆರಳು – ಪೃಥ್ವಿತತ್ತ್ವದ ಪ್ರತಿನಿಧಿತ್ವವನ್ನು ಮಾಡುತ್ತವೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳು ಅನುಕ್ರಮವಾಗಿ ಹೆಚ್ಚೆಚ್ಚು ಸೂಕ್ಷ್ಮವಾಗಿರುವುದರಿಂದ ಅವು ಹೆಚ್ಚೆಚ್ಚು ಪ್ರಭಾವಿ (ಬಲಶಾಲಿ) ಆಗಿವೆ. ಆದುದರಿಂದ ಐದೂ ಬೆರಳುಗಳ ಪೈಕಿ ಹೆಬ್ಬೆರಳಿನಿಂದ ಅತ್ಯಧಿಕ ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿಸುತ್ತದೆ. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಎರಡೂ ಕಾಲುಗಳ ಹೆಬ್ಬೆರಳುಗಳ ಉಗುರುಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳು ಇತರ ಬೆರಳುಗಳ ಉಗುರುಗಳ ತುಲನೆಯಲ್ಲಿ ಹೆಚ್ಚಿರುವುದು ಪರೀಕ್ಷಣೆಯಿಂದ ಕಂಡು ಬಂದಿತು.

ಮೇಲಿನ ವಿವೇಚನೆಯಿಂದ ಪರಾತ್ಪರ ಗುರು ಡಾ. ಆಠವಲೆಯವರ ಬಲಗಾಲಿನಿಂದ ಮತ್ತು ಅದರಲ್ಲಿಯೂ ಅವರ ಬಲಗಾಲದ ಹೆಬ್ಬೆರಳಿನಿಂದ ಅತ್ಯಧಿಕ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ (ಚೈತನ್ಯ) ಪ್ರಕ್ಷೇಪಿತವಾಗುತ್ತದೆ, ಎಂಬುದು ಗಮನಕ್ಕೆ ಬರುತ್ತದೆ.

೨ ಇ. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದುದರಿಂದಾಗುವ ಆಧ್ಯಾತ್ಮಿಕ ಲಾಭ : ಹಿಂದೂ ಧರ್ಮದಲ್ಲಿ ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವುದಕ್ಕೆ ಅಸಾಧಾರಣ ಮಹತ್ವವಿದೆ. ಯಾವಾಗ ವ್ಯಕ್ತಿಯು ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುತ್ತಾನೆಯೋ, ಆಗ ಅವನಿಗೆ ಸಂತರ ಚರಣಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಕೃತಿಗೆ ಅಧ್ಯಾತ್ಮಶಾಸ್ತ್ರೀಯ ಆಧಾರವಿದೆ, ಎಂಬುದು ಗಮನಕ್ಕೆ ಬರುತ್ತದೆ.

೨ ಈ. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

೨ ಈ. ೧. ಸಂತರ ಚರಣಗಳ ಮೇಲೆ ತಲೆಯ ಯಾವ ಭಾಗವನ್ನು ಇಡಬೇಕು ? : ‘ಬ್ರಹ್ಮರಂಧ್ರದಿಂದ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ, ಆದರೆ ಬ್ರಹ್ಮರಂಧ್ರವನ್ನು ಸಂತರ ಚರಣಗಳ ಮೇಲಿಡಲು ಬರುವುದಿಲ್ಲ, ಆದುದರಿಂದ ಹಣೆಯ ಭಾಗ ಮುಗಿದು ಎಲ್ಲಿ ತಲೆಯ ಭಾಗ ಪ್ರಾರಂಭವಾಗುತ್ತದೆಯೋ, ಆ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು. ಇದರಿಂದ ಸಂತರ ಚರಣಗಳಿಂದ ಹೊರ ಬೀಳುವ ಚೈತನ್ಯವನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ.

೨ ಈ ೨. ಸಂತರ ಚರಣಗಳ ಮೇಲೆ ತಲೆಯನ್ನಿಡುವ ಯೋಗ್ಯ ಸ್ಥಾನ ಯಾವುದು ? : ಸಂತರ ಚರಣಗಳ ಹೆಬ್ಬೆರಳುಗಳಿಂದ ಎಲ್ಲಕ್ಕಿಂತ ಹೆಚ್ಚು ಚೈತನ್ಯ ಹೊರಬೀಳುತ್ತಿರುತ್ತದೆ. ಆದುದರಿಂದ ತಲೆಯನ್ನು ಚರಣಗಳ ಮಧ್ಯಭಾಗದಲ್ಲಿಡದೇ ಹೆಬ್ಬೆರೆಳುಗಳ ಮೇಲಿಡಬೇಕು. ತಲೆಯನ್ನಿಡಲು ಎರಡೂ ಕಾಲುಗಳ ಹೆಬ್ಬೆರಳುಗಳು ಲಭ್ಯವಿಲ್ಲದಿದ್ದರೆ, ಬಲಚರಣದ ಹೆಬ್ಬೆರಳಿನ ಮೇಲೆ ತಲೆಯನ್ನಿಡಬೇಕು.’

(ಆಧಾರ – ಸನಾತನದ ಕಿರುಗ್ರಂಥ ‘ನಮಸ್ಕಾರಗಳ ಯೋಗ್ಯ ಪದ್ಧತಿ’)

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೫.೨೦೧೮)

ವಿ-ಅಂಚೆ : [email protected]

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ: ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.