ದೃಷ್ಟಿಯನ್ನು ತೆಗೆಯುವ ಮತ್ತು ದೃಷ್ಟಿಯನ್ನು ತೆಗೆಸಿಕೊಳ್ಳುವ ಸಾಧಕರು ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ ಮತ್ತು ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ !

ಸದ್ಗುರು (ಡಾ.) ಮುಕುಲ ಗಾಡಗೀಳ

೧. ಯಾವ ಸಾಧಕನ ದೃಷ್ಟಿಯನ್ನು ತೆಗೆಯುವುದಿದೆಯೋ, ಅವನು ಮಾಡಬೇಕಾದ ಪ್ರಾರ್ಥನೆ ಮತ್ತು ನಾಮಜಪ

೧ ಅ. ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ : ‘ಹೇ ಭಗವಂತಾ, ನೀನು ನಮ್ಮಿಂದ ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯವನ್ನು ಮಾಡಿಸಿಕೊಳ್ಳುತ್ತಿರುವೆ. ಈ ಕಾರ್ಯವು ಆದಷ್ಟು ಬೇಗನೆ ಪೂರ್ಣವಾಗಲು ನನ್ನನ್ನು ಮತ್ತು ಇತರ ಎಲ್ಲ ಸಾಧಕರನ್ನು ರೋಗಮುಕ್ತರನ್ನಾಗಿ ಮಾಡಿ ನಮಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ನೀಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !

೧ ಆ. ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ : ಶ್ರೀ ವಿಷ್ಣವೇ ನಮಃ |

೨. ಯಾವ ಸಾಧಕನು ದೃಷ್ಟಿಯನ್ನು ತೆಗೆಯುವವನಿದ್ದಾನೆಯೋ, ಅವನು ಮಾಡಬೇಕಾದ ಪ್ರಾರ್ಥನೆ ಮತ್ತು ನಾಮಜಪ

೨ ಅ. ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ : ‘ಹೇ ಭಗವಂತಾ, ಈ ಸಾಧಕನ ದೃಷ್ಟಿಯನ್ನು ನನಗೆ ಭಾವಪೂರ್ಣವಾಗಿ, ಪರಿಪೂರ್ಣವಾಗಿ ಮತ್ತು ಶರಣಾಗತ ಭಾವದಿಂದ ತೆಗೆಯಲು ಸಾಧ್ಯವಾಗಲಿ. ಈ ದೃಷ್ಟಿಯನ್ನು ತೆಗೆದು ನನಗೆ ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಅಳಿಲು ಸೇವೆಯನ್ನು ಮಾಡಲು ಸಾಧ್ಯವಾಗಲಿ. ದೃಷ್ಟಿಯನ್ನು ತೆಗೆಯುವಾಗ ನೀನೇ ನನ್ನ ರಕ್ಷಣೆಯನ್ನು ಮಾಡು. ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !

೨ ಆ. ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ : ಶ್ರೀ ವಿಷ್ಣವೇ ನಮಃ |

– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೩.೨೦೨೧)