೧. ಸಂತರ ಸಾಧನೆಯ ಕಠಿಣತೆ
೧ ಅ. ಸಾಮಾನ್ಯವಾಗಿ ಎಲ್ಲ ಸಂತರಿಗೆ ಸಾಧನೆಯನ್ನು ಮಾಡುವಾಗ ಅನೇಕ ತೊಂದರೆಗಳನ್ನು ಭೋಗಿಸಬೇಕಾಗುತ್ತದೆ. ಮೃತ್ಯುವಿನ ನಂತರ ಅವರ ಕೀರ್ತಿ ಆಗುತ್ತದೆ, ಅಂದರೆ ಅದು ನಿವೃತ್ತಿಯ ನಂತರ ದೊರಕಿದ ‘ಪ್ರಾವಿಡಂಟ್ ಫಂಡ್’ ಆಗಿದೆ ! : ಭಕ್ತಿ ಹೆಚ್ಚಾದ ನಂತರ ನಮ್ಮನ್ನು ಅದರಿಂದ ದೂರ ಮಾಡಲು ದೇವರು ನಮ್ಮನ್ನು ಶ್ರೀಮಂತಿಕೆಯಲ್ಲಿ ಮುಳುಗಿಸುತ್ತಾನೆ, ಇಲ್ಲದಿದ್ದರೆ ಬಡತನದಲ್ಲಿ ಮುಳುಗಿಸುತ್ತಾನೆ, ಕೆಲವೊಮ್ಮೆ ಸಂಕಟ ಮತ್ತು ದುಃಖಗಳ ಆಳವಾದ ನದಿಯಲ್ಲಿ ಮುಳುಗಿಸುತ್ತಾನೆ. ಯಾರು ದೇವರ ಮಾರ್ಗವನ್ನು ಹಿಡಿಯುವರೋ, ಅವರನ್ನು ದೇವರು ಸಂಸಾರದ ಸುಖದಲ್ಲಿ ಸಿಲುಕಲು ಬಿಡುವುದಿಲ್ಲ. ಅನೇಕ ಸಂತರಿಗೆ ಕಠಿಣ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮಾವನ ಒತ್ತಾಯದಿಂದ ಸಂತ ಮೀರಾಬಾಯಿಗೆ ವಿಷ ಕುಡಿಯಬೇಕಾಯಿತು. ಕಟ್ಟಡದ ಕೆಲಸವನ್ನು ಮಾಡುವಾಗ ಸಂತ ಚೊಖೋಬಾರ ಮೇಲೆ ಗೋಡೆ ಕುಸಿದು ಅವರು ಅದರ ಕೆಳಗೆ ಸಿಕ್ಕು ಸಾಯಬೇಕಾಯಿತು. ಸಂತ ತುಕಾರಾಮ ಮಹಾರಾಜರಿಗೆ ಬಡತನವನ್ನು ನೀಡಿ ಬದುಕುವುದನ್ನು ಕಠಿಣ ಮಾಡಿದನು. ಸಂತ ಭಕ್ತ ಕುಂಬಾರನು ಪಾಂಡುರಂಗನ ಭಜನೆಯಲ್ಲಿ ಮಗ್ನನಾಗಿರುವಾಗ ಅವನ ಮಗು ಅವನ ಕಾಲುಗಳ ಕೆಳಗೆ ಆವೆಮಣ್ಣಿನಲ್ಲಿ ಸಿಕ್ಕಿ ಮರಣ ಹೊಂದಿತು. ಮುಂದೆ ದೇವರಿಗೆ ನೀಡಿದ ವಚನವನ್ನು ಪಾಲಿಸಲಿಲ್ಲವೆಂದು; ಸಂತ ಭಕ್ತ ಕುಂಬಾರನು ಕೊಡಲಿಯಿಂದ ತನ್ನ ಕೈಗಳನ್ನು ಕತ್ತರಿಸಿ ಹಾಕಿದನು. ಸಂತ ಜ್ಞಾನೇಶ್ವರ ಮತ್ತು ಅವರ ೩ ಮಂದಿ ಸಂತರಾದ ಸೋದರರಿಗೆ ತುಂಬಾ ಕಷ್ಟಗಳನ್ನು ಸಹಿಸಬೇಕಾಯಿತು. ಅವರ ತಾಯಿ-ತಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಸಮರ್ಥ ರಾಮದಾಸ ಸ್ವಾಮಿಯವರು ಲಂಗೋಟಿಯನ್ನು ಧರಿಸಿ ಮದುವೆ ಮಂಟಪದಿಂದ ಓಡಿಹೋದರು, ಆದರೆ ಈ ಎಲ್ಲ ಸಂತರ ಕೀರ್ತಿ ಅವರ ಮೃತ್ಯುವಿನ ನಂತರ ಆಯಿತು. ಕೀರ್ತಿ ದುಬಾರಿಯಾಗಿದೆ. ಕೀರ್ತಿಯು ವೇತನ ನಂತರ ಸಿಗುವ ‘ಪ್ರಾವಿಡೆಂಟ್ ಫಂಡ್’ ಆಗಿದೆ. ಅದು ಮೃತ್ಯುವಿನ ನಂತರ ಸಿಗುತ್ತದೆ. ಜೀವಂತವಿರುವಾಗ ತುಂಬಾ ಕಷ್ಟಗಳನ್ನು ಭೋಗಿಸಬೇಕಾಗುತ್ತದೆ.’
೧ ಆ. ಎಲ್ಲ ಸಂತರಿಗೆ ಸಮಾಜದ ವಿರೋಧವನ್ನು ಸಹಿಸಬೇಕಾಗುತ್ತದೆ ಮತ್ತು ನಂತರ ಅದೇ ಸಮಾಜವು ಅವರ ಛಾಯಾಚಿತ್ರಗಳನ್ನಿಟ್ಟು ಪೂಜಿಸುತ್ತದೆ ! : ‘ಎಲ್ಲ ಸಂತರಿಗೆ ಸಮಾಜದ ವಿರೋಧವನ್ನು ಸಹಿಸಬೇಕಾಯಿತು. ಇದರಿಂದ ಅವರಿಗೆ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು; ತುಂಬಾ ಕಷ್ಟಗಳನ್ನು ಸಹಿಸಬೇಕಾಯಿತು; ಆದರೆ ನಂತರ ಅದೇ ಸಮಾಜವು ಅವರನ್ನು ತಲೆಯ ಮೇಲೆ ಇಟ್ಟುಕೊಂಡಿತು ಮತ್ತು ಛಾಯಾಚಿತ್ರಗಳನ್ನಿಟ್ಟು ಅವರ ಪೂಜೆಯನ್ನು ಮಾಡತೊಡಗಿತು.’
೪. ನಿಜವಾದ ಜ್ಞಾನಿಯು ದೇವರ ಭಕ್ತಿ ಮತ್ತು ನಾಮಸ್ಮರಣೆಯಲ್ಲಿ ಮಗ್ನನಾಗಿರುತ್ತಾನೆ, ಅವನಿಗೆ ‘ಪ್ರತಿದಿನ ಎಷ್ಟು ಜೀವಗಳು ಜನ್ಮ ಪಡೆದವು ಮತ್ತು ಎಷ್ಟು ಜೀವಗಳು ಮೃತ್ಯು ಹೊಂದಿದ’, ಇದರ ಬಗ್ಗೆ ದುಃಖವಾಗುವುದಿಲ್ಲ
‘ಮನೆಯವರು ಸುಖವಾಗಿರಬೇಕು, ಅವರಿಗೆ ಏನೂ ಕಡಿಮೆ ಬೀಳಬಾರದು, ಅವರಿಗೆ ಬಹಳಷ್ಟು ಸುಖ ಸಿಗಬೇಕೆಂದು ಕುಟುಂಬ ಪ್ರಮುಖನು ಬಹಳ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಆಗ ಕುಟುಂಬವು ಸುಖವಾಗಿರುತ್ತದೆ. ಹಾಗೆಯೇ ಸಮಾಜವು ಸುಖವಾಗಿರಬೇಕೆಂದು ಸಾಧು ಸಂತರು ಅನೇಕ ಕಷ್ಟಗಳನ್ನು ಭೋಗಿಸಿ ತಪಶ್ಚರ್ಯವನ್ನು ಮಾಡುತ್ತಾರೆ. ಪುಣ್ಯವನ್ನು ಸಂಪಾದಿಸುತ್ತಾರೆ ಮತ್ತು ಅದನ್ನು ಸಮಾಜದಲ್ಲಿ ಹಂಚುತ್ತಾರೆ. ಅವರ ಆಶೀರ್ವಾದದ ಬಲದಿಂದ ನೀಡುತ್ತಾರೆಂದು ಊರೂರುಗಳ ಮತ್ತು ದೇಶದಲ್ಲಿನ ಪ್ರಜೆಗಳು ಸುಖವಾಗಿರುತ್ತಾರೆ. ಸಾಧುಸಂತರು ತಪಶ್ಚರ್ಯ ಮಾಡಿ ಪುಣ್ಯವನ್ನು ಸಂಗ್ರಹಿಸುತ್ತಾರೆ, ಆದುದರಿಂದು ಪಂಚಮಹಾ ಭೂತಗಳು ಸಂತುಷ್ಟವಾಗಿರುತ್ತವೆ. ಅವು ಹಣ್ಣು, ಹೂವು ಮತ್ತು ಬಹಳಷ್ಟು ಗಿಡಮರಗಳನ್ನು ನೀಡುತ್ತವೆ. ಇದೆಲ್ಲವೂ ಪುಣ್ಯವಿದ್ದರೆ ಮಾತ್ರ ಸಿಗುತ್ತವೆ. ಇಲ್ಲದಿದ್ದರೆ ಅತಿವೃಷ್ಟಿ, ಅನಾವೃಷ್ಟಿ ಬರುತ್ತದೆ, ಆಗ, ‘ಪೃಥ್ವಿಯ ಮೇಲೆ ತುಂಬಾ ಪಾಪವಾಗಿದೆ ಎಂದು ತಿಳಿಯಬೇಕು. ಸಾಧು ಸಂತರು ಪುಣ್ಯವನ್ನು ಸಂಗ್ರಹಿಸುತ್ತಾರೆ ಮತ್ತು ಅದನ್ನು ಹಂಚುತ್ತಾರೆ, ತಾವು ಮಾತ್ರ ಭೀಕರ ಅರಣ್ಯದಲ್ಲಿ ತೊಂದರೆಗಳನ್ನು ಭೋಗಿಸುತ್ತಾರೆ. ಆ ಸಾಧುಸಂತರು ಸುಖ-ದುಃಖದ ಆಚೆಗೆ ಹೋಗಿರುತ್ತಾರೆ. ನಿಜವಾದ ಸಾಧುಗಳಿಗೆ ಜನ್ಮ-ಮೃತ್ಯುವಿನ ಬಗ್ಗೆ ಏನೂ ಅನಿಸುವುದಿಲ್ಲ. ‘ಪ್ರತಿದಿನ ಎಷ್ಟು ಜನರು ಜನ್ಮಕ್ಕೆ ಬರುತ್ತಾರೆ ಮತ್ತು ಎಷ್ಟು ಜನರು ಸಾಯುತ್ತಾರೆ ?’, ಇದರಲ್ಲಿ ಸಾಧುಸಂತರು ಸಿಕ್ಕಿಕೊಳ್ಳುವುದಿಲ್ಲ. ಅವರು ನಿಜವಾದ ಶಾಶ್ವತ ಸುಖವನ್ನು ಅನುಭವಿಸುತ್ತಿರುತ್ತಾರೆ. ಸಂತರಿಗೆ ಯಾರು ಜನ್ಮಕ್ಕೆ ಬಂದರೂ ಅದರ ಆನಂದವಾಗುವುದಿಲ್ಲ ಮತ್ತು ಯಾರು ಮರಣ ಹೊಂದಿದರೂ ಅದರ ದುಃಖವಾಗುವುದಿಲ್ಲ. ಇದೆಲ್ಲವೂ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿವೆ. ಈ ಚಕ್ರವನ್ನು ಈಶ್ವರನು ನಿರ್ಮಿಸಿದ್ದಾನೆ. ಅದು ಎಂದಿಗೂ ನಿಲ್ಲುವುದಿಲ್ಲ. ನಿಜವಾದ ಜ್ಞಾನಿಯು ದೇವರ ಭಕ್ತಿ ಮತ್ತು ನಾಮಸ್ಮರಣೆಯಲ್ಲಿ ಮಗ್ನನಾಗಿರು ತ್ತಾನೆ. ಅವರಿಗೆ ಸಂಸಾರದಿಂದ ವೈರಾಗ್ಯ ಪ್ರಾಪ್ತವಾಗಿರುತ್ತದೆ.’
೫. ಸಾಧುಸಂತರನ್ನು ಕೇವಲ ಜ್ಞಾನಿಗಳೇ ಗುರುತಿಸಬಹುದು
‘ಸಾಧುಸಂತರು ನಡೆದಾಡುವ, ಮಾತನಾಡುವ ದೇವರಾಗಿರುತ್ತಾರೆ; ಆದರೆ ಅವರು ಅಡಗಿರುತ್ತಾರೆ. ಅವರು ತಮ್ಮ ದೊಡ್ಡತನವನ್ನು ಸಮಾಜಕ್ಕೆ ತೋರಿಸುವುದಿಲ್ಲ. ಅವರು ತುಂಬಾ ಸರಳ ಮತ್ತು ಸಾಮಾನ್ಯರಾಗಿರುತ್ತಾರೆ. ಅವರು ಕೇಸರಿ ಅಥವಾ ದುಬಾರಿ ಬಟ್ಟೆಗಳನ್ನು ಧರಿಸದೇ ಸಾದಾ ಬಟ್ಟೆಗಳನ್ನು ಧರಿಸಿ ಸಮಾಜದಲ್ಲಿ ತಿರುಗಾಡುತ್ತಾರೆ. ಸಮಾಜದಲ್ಲಿ ಒಮ್ಮತದಿಂದ ಇರುತ್ತಾರೆ; ಆದರೆ ನಮಗೆ ಅವರನ್ನು ಗುರುತಿಸಲು ಆಗುವುದಿಲ್ಲ. ಅವರನ್ನು ಕೇವಲ ಜ್ಞಾನಿಗಳೇ ಗುರುತಿಸಬಹುದು.’
೬. ಸಂತರ ವರ್ತನೆ
೬ ಅ. ‘ಬಂದಿತು ಆನಂದದ ದೀಪಾವಳಿ | ಈ ದಾರಿ ದ್ವಾರಕೆ ಯದ್ದು ||’, ಎಂದು ಸಂತರು ಹೇಳುತ್ತಾರೆ. ಅದು ಸುಳ್ಳಾಗಿದೆಯೇ ? ಸಂತರಿಗೆ ದೂರದೃಷ್ಟಿ ಇರುತ್ತದೆ.’
೬ ಆ. ‘ನಾನು ಜಾತಿಪಂಗಡಗಳ ಮೇಲೆ ಪ್ರೇಮವನ್ನು ಮಾಡುವುದಿಲ್ಲ, ನಾನು ಜೀವಾತ್ಮಾವನ್ನು ಪ್ರೀತಿಸುತ್ತೇನೆ. ನಾನು ಶ್ರೀಮಂತರನ್ನು ಎಷ್ಟು ಪ್ರೀತಿಸುತ್ತೇನೆಯೋ, ಅಷ್ಟೇ ಪ್ರೀತಿಯನ್ನು ಭಿಕ್ಷುಕನಿಗೂ ಕೊಡುತ್ತೇನೆ. ನಾನು ಭೇದಭಾವ ಮಾಡುವುದಿಲ್ಲ.’
೬ ಇ. ‘ಪುಣ್ಯವನ್ನು ಹಂಚಬೇಕೇ ? ಯಾವ ಬಾವಿಗೆ ಸತತವಾಗಿ ಝರಿಗಳ ನೀರು ಹರಿಯುತ್ತಿರುತ್ತದೆಯೋ, ಯಾವ ನದಿಗೆ ಯಾವಾಗಲೂ ಝರಿಗಳ ನೀರು ಹರಿಯುತ್ತಿರುತ್ತದೆಯೋ, ಆ ಬಾವಿ ಅಥವಾ ಆ ನದಿ ಎಂದಿಗೂ ಒಣಗುವುದಿಲ್ಲ. ಯಾವಾಗ ಸಮಾಜದಲ್ಲಿ ಸಂಕಟಗಳು ಬರುತ್ತವೆಯೋ, ಆಗ ಸಾಧುಸಂತರು ಆಶೀರ್ವಾದ ಕೊಡಬೇಕಾಗುತ್ತದೆ.’ (ಮುಂದುವರಿಯುವುದು)
– ಪೂ. ಸಖಾರಾಮ ರಾಮಜಿ ಬಾಂದ್ರೆ (ವಯಸ್ಸು ೭೦ ವರ್ಷ), ಕಾತಳವಾಡಿ, ತಾ. ಚಿಪಳೂಣ, ರತ್ನಾಗಿರಿ ಜಿಲ್ಲೆ. (ಪೂ. ಸಖಾರಾಮ ಬಾಂದ್ರೆ ಮಹಾರಾಜರ ಈ ಬರವಣಿಗೆಯು ೨೦೦೫ ರಿಂದ ೨೦೨೦ ರ ಕಾಲವಧಿಯಲ್ಲಿನದ್ದಾಗಿದೆ.)