ಸಾಧಕರೇ, ಸಾಧನೆಯ ದೊಡ್ಡ ಅಡಚಣೆಯಾಗಿರುವ ನಕಾರಾತ್ಮಕತೆಯನ್ನು  ದೂರಗೊಳಿಸಿರಿ ಮತ್ತು ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ಪ್ರಾಪ್ತಮಾಡಿಕೊಳ್ಳಿರಿ !

ಶ್ರೀ. ಅಶೋಕ ಲಿಮಕರ್

ನಕಾರಾತ್ಮಕ ವಿಚಾರಗಳನ್ನು ಮಾಡುವ ವ್ಯಕ್ತಿಗೆ ವ್ಯವಹಾರದ ಸುಖವೂ ಸಿಗುವುದಿಲ್ಲ ಮತ್ತು ಅವನಿಗೆ ಸಾಧನೆಯಲ್ಲಿ ಆನಂದವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಲೇಖನದಲ್ಲಿ ನಕಾರಾತ್ಮಕತೆಯ ಕಾರಣಗಳು, ನಕಾರಾತ್ಮಕತೆಯಿಂದಾಗುವ ದುಷ್ಪರಿಣಾಮಗಳು, ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯ ಇತ್ಯಾದಿಗಳನ್ನು ಕೊಡಲಾಗಿದೆ.

ಈ ಲೇಖನವನ್ನು ಓದಿ ನಕಾರಾತ್ಮಕ ವಿಚಾರಗಳನ್ನು ಮಾಡುವ ವ್ಯಕ್ತಿಗಳಿಗೆ ಸಕಾರಾತ್ಮಕವಾಗಿರುವುದರ ಮಹತ್ವ ತಿಳಿಯುವುದು ಮತ್ತು ಅದಕ್ಕಾಗಿ ಪ್ರಯತ್ನಿಸಲು ಪ್ರೇರಣೆ ಸಿಗುವುದು.    

(ಭಾಗ ೩)

೬. ಸಕಾರಾತ್ಮಕ ವಿಚಾರಗಳನ್ನು ಮಾಡುವುದರಿಂದಾಗುವ ಲಾಭಗಳು

೬ ಅ. ಜೀವನವನ್ನು ಆನಂದದಿಂದ ಜೀವಿಸಲು ಸಾಧ್ಯವಾಗುವುದು : ಈ ಜಗತ್ತು ಎಷ್ಟು ಸುಂದರವಾಗಿದೆ ! ದೇವರು ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲಿ ವಿಭಿನ್ನ ಗುಣವೈಶಿಷ್ಟ್ಯಗಳನ್ನು ನಿರ್ಮಿಸಿ ಅವುಗಳ ಸಹವಾಸದಲ್ಲಿರುವ ಅವಕಾಶವನ್ನು ನಮಗೆ ನೀಡಿದ್ದಾನೆ. ಮನುಷ್ಯನನ್ನು ಹೊರತುಪಡಿಸಿ ಎಲ್ಲ ಸಜೀವ-ನಿರ್ಜೀವ ವಸ್ತುಗಳು, ಪ್ರಾಣಿ ಮತ್ತು ವನಸ್ಪತಿಗಳು ತಮ್ಮ ಜೀವನದ ಬಗ್ಗೆ ಯಾವುದೇ ರೀತಿಯ ದುಃಖವನ್ನು ವ್ಯಕ್ತಪಡಿಸದೇ ಆನಂದದಿಂದ ಉಪಭೋಗಿಸುತ್ತಿರುತ್ತವೆ, ಹಾಗೆಯೇ ಪ್ರಾರಬ್ಧಕ್ಕನುಸಾರ ಕೃತಿಗಳನ್ನು ಮಾಡುತ್ತಿರುತ್ತವೆ. ಹಾಗಾದರೆ ಮನುಷ್ಯನು ಮಾತ್ರ ಈ ನಿಯಮಗಳಿಗೆ ಏಕೆ ಅಪವಾದವಾಗಿರಬೇಕು ? ದೇವರು ಈ ಸೃಷ್ಟಿಯನ್ನು ನನ್ನ ಒಳಿತಿಗಾಗಿಯೇ ನಿರ್ಮಿಸಿದ್ದಾನೆ, ಎಂಬ ಸಕಾರಾತ್ಮಕ ವಿಚಾರವನ್ನು ಮಾಡಿದರೆ ಅವನಿಗೂ ಜೀವನವನ್ನು ಆನಂದದಿಂದ ಜೀವಿಸಲು ಸಾಧ್ಯವಾಗುವುದು.

೬ ಆ. ನಾನು ಸ್ವತಃ ನಿರಾಶನಾಗುವುದಿಲ್ಲ. ನಾನು ಇತರರನ್ನು ನಿರಾಶೆ ಮಾಡುವುದಿಲ್ಲ ಮತ್ತು ನಾನು ನಕಾರಾತ್ಮಕ ವಿಚಾರಗಳನ್ನೂ ಮಾಡುವುದಿಲ್ಲ, ಎಂದು ನಿಶ್ಚಯಿಸಿ ಕೃತಿಗಳನ್ನು ಮಾಡಿದರೆ ಜೊತೆಗಿದ್ದವರಿಗೂ ನಿರಾಶೆಯಾಗುವುದಿಲ್ಲ.

೬ ಇ. ಇತರರಿಗೆ ಸಹಾಯ ಮಾಡಲು ಸಾಧ್ಯವಾಗಿ ಅವರೊಂದಿಗೆ ಹೆಚ್ಚು ಆತ್ಮೀಯತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ.

೬ ಈ. ಸಕಾರಾತ್ಮಕತೆಯಿಂದ ಕುಟುಂಬದಲ್ಲಿ ಆನಂದಮಯ ವಾತಾವರಣ ಉಂಟಾಗಿ ಎಲ್ಲರ ಮನಸ್ಸುಗಳು ಪರಸ್ಪರರರೊಂದಿಗೆ ಜೋಡಿಸಲ್ಪಡುತ್ತವೆ. ಪರಸ್ಪರರೊಂದಿಗಿರುವ ಕೊಡು-ಕೊಳ್ಳುವ ಲೆಕ್ಕಾಚಾರವನ್ನು ತೀರಿಸುವಾಗ ಜೀವನದಲ್ಲಿನ ನಿಜವಾದ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ.

೬ ಉ. ಜಗತ್ತಿನ ಪ್ರತಿಯೊಂದು ವಿಷಯವನ್ನು ಸಕಾರಾತ್ಮಕತೆಯಿಂದ ನೋಡಲು ಸಾಧ್ಯವಾಗುವುದು : ಮನಸ್ಸಿನ ಸ್ಥಿತಿ ಹೇಗೆ  ಇರುತ್ತದೆಯೋ, ಹಾಗೆ ಮನಸ್ಸಿನಲ್ಲಿ ವಿಚಾರಗಳು ಬರುತ್ತವೆ ಮತ್ತು ಆ ವಿಚಾರಗಳಿಗನುಸಾರ ಕೃತಿಗಳೂ ಆಗುತ್ತವೆ. ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ವಿಚಾರಗಳಿದ್ದರೆ, ನಮಗೆ ಜಗತ್ತಿನಲ್ಲಿನ ಪ್ರತಿಯೊಂದು ವಿಷಯವನ್ನು ಸಕಾರಾತ್ಮಕತೆಯಿಂದ ನೋಡಲು ಸಾಧ್ಯವಾಗುತ್ತದೆ. ಇದರಿಂದ ಜೀವನದಲ್ಲಿನ ಪ್ರತಿಯೊಂದು ಕ್ಷಣವನ್ನು ಆನಂದದಿಂದ ಜೀವಿಸಲು ಸಾಧ್ಯವಾಗುತ್ತದೆ.

೬ ಊ. ಪ್ರಾರಬ್ಧವನ್ನು ಆನಂದದಿಂದ ಭೋಗಿಸಲು ಸಾಧ್ಯವಾಗುವುದು :  ನಾವು ನಮ್ಮ ಪ್ರಾರಬ್ಧಕ್ಕನುಸಾರ ಭೋಗವನ್ನು ಭೋಗಿಸುತ್ತಿರುತ್ತೇವೆ. ದುಃಖದ ಸಮಯದಲ್ಲಿ ನಾವು ನಮ್ಮ ಕರ್ಮದ ಫಲ, ಅಂದರೆ ದುಃಖವನ್ನು ಭೋಗಿಸಿ ತೀರಿಸುತ್ತಿದ್ದೇವೆ, ಎಂಬ ಸಕಾರಾತ್ಮಕ ದೃಷ್ಟಿಕೋನವನ್ನಿಟ್ಟುಕೊಂಡರೆ ಆ ಪ್ರಾರಬ್ಧವನ್ನು ಭೋಗಿಸುವುದು ಸುಖಕರವಾಗುತ್ತದೆ. ಆ ಸಮಯದಲ್ಲಿ ಚಿಂತೆಗೊಳಗಾದೇ ಅದನ್ನು ಭೋಗಿಸುವಾಗಲೂ ಆನಂದದಿಂದಿರಲು ಸಾಧ್ಯವಾಗುತ್ತದೆ.

೭. ಮನಸ್ಸಿನ ಸಕಾರಾತ್ಮಕ ಸ್ಥಿತಿಯಿಂದ ಹೇಗೆ ಲಾಭ ಆಗುತ್ತದೆ ?, ಎಂದು ಹೇಳುವ ಒಂದು ಚಿಕ್ಕ ಪ್ರಸಂಗ ಸೈನ್ಯದಳದಿಂದ ನಿವೃತ್ತರಾದ ಓರ್ವ ಯೋಗಿ ವೈದ್ಯರು

ಮೊಣಕಾಲು ನೋವಿನ ತೊಂದರೆಯಿರುವ ೧೦ ಸಹಚರರನ್ನು ಆಯ್ಕೆ ಮಾಡಿದರು. ಆ ವೈದ್ಯರು ಅವರಿಗೆ ಸೈನ್ಯದಳದ ಶಸ್ತ್ರಚಿಕಿತ್ಸಾಗೃಹದಲ್ಲಿ (ಆಪರೇಶನ್ ಥೀಯೆಟರ್‌ನಲ್ಲಿ) ಮೊಣಕಾಲಿನ ಮೇಲೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡುತ್ತೇನೆ ಎಂದು ಹೇಳಿದರು. ವೈದ್ಯರು ಸಹಚರರಿಗೆ, ಈ ಶಸ್ತ್ರಚಿಕಿತ್ಸೆಯನ್ನು ನಿಮಗೆ ಗಣಕಯಂತ್ರದ ಪರದೆಯ ಮೇಲೆ ನೋಡಲು ಸಾಧ್ಯವಾಗುವುದು, ಎಂದು ಹೇಳಿದರು. ವೈದ್ಯರು ಆಯೋಜನೆ ಮಾಡಿ ಎಲ್ಲ ಸಹಚರರಿಗೆ ಶಸ್ತ್ರಚಿಕಿತ್ಸೆಯನ್ನು ತೋರಿಸಿದರು. ಅವರಿಗೆ ಔಷಧೋಪಚಾರಗಳನ್ನು ಮುಂದುವರಿಸಲು ಹೇಳಿ, ಒಂದು ತಿಂಗಳ ನಂತರ ತಿಳಿಸಲು ಹೇಳಿದರು. ಎಲ್ಲರೂ ಶಸ್ತ್ರಚಿಕಿತ್ಸೆಯು ಚೆನ್ನಾಗಿ ಆಗಿರುವುದರಿಂದ ಮೊಣಕಾಲಿನ ನೋವು ಕಡಿಮೆಯಾಯಿತು ಎಂದು ಹೇಳಿದರು. ಪ್ರತ್ಯಕ್ಷದಲ್ಲಿ ಆ ಯೋಗಿ ವೈದ್ಯರು ಅವರ ಮೊಣಕಾಲ ಮೇಲೆ ಶಸ್ತ್ರಚಿಕಿತ್ಸೆಯನ್ನು (ಆಪರೇಶನ್) ಮಾಡಿರಲೇ ಇಲ್ಲ. ಅವರು ಬೇರೆ ಒಂದು ಶಸ್ತ್ರಚಿಕಿತ್ಸೆಯ ಧ್ವನಿಚಿತ್ರಮುದ್ರಿಕೆಯನ್ನು ಅವರಿಗೆ ತೋರಿಸಿದ್ದರು. ಆ ರೋಗಿಗಳ ಮನಸ್ಸಿನಲ್ಲಿನ ನನ್ನ ಮೊಣಕಾಲಿನ ಶಸ್ತ್ರಚಿಕಿತ್ಸೆಯಾಗಿದೆ, ಎಂಬ ಸಕಾರಾತ್ಮಕ ವಿಚಾರದ ಪರಿಣಾಮದಿಂದ ಅವರ ಮೊಣಕಾಲಿನ ನೋವು ಗುಣಮಮುಖವಾಗಿದ್ದವು.

೮. ಸಕಾರಾತ್ಮಕ ದೃಷ್ಟಿಕೋನವನ್ನು ಹೇಗಿಡಬೇಕು ?,

ಈ ಕುರಿತಾದ ಒಂದು ಉದಾಹರಣೆ ಓರ್ವ ಸಾಧಕನು, ‘ನನ್ನಲ್ಲಿ ಭಾವವಿಲ್ಲ, ಎಂದು ಹೇಳಿದನು. ಅದಕ್ಕೆ ಇನ್ನೊರ್ವ ಸಾಧಕನು ಅವನಿಗೆ, ಭಾವವಿಲ್ಲ ಎಂದು ಹೇಳಿದರೆ, ಪ್ರಯತ್ನ ಮತ್ತು ಪ್ರಗತಿಯು ನಿಲ್ಲುತ್ತದೆ. ‘ನನ್ನಲ್ಲಿ ಭಾವ ಕಡಿಮೆಯಿದೆ. ಅದನ್ನು ಹೆಚ್ಚಿಸಲು ಏನು ಪ್ರಯತ್ನ ಮಾಡಲಿ ? ಎಂದು ಕೇಳಿದರೆ, ಅದು ಸಕಾರಾತ್ಮಕವಾಯಿತು. ಭಾವವನ್ನು ಹೆಚ್ಚಿಸಲು ಪ್ರಯತ್ನಗಳಿಗೆ ದಿಶೆ ದೊರಕಿ ಕೃತಿಗಳು ಪ್ರಾರಂಭವಾಗುತ್ತವೆ. ‘ಭಾವವಿದ್ದಲ್ಲಿ ದೇವರು ಎಂಬುದನ್ನು ನಮಗೆ ಅನುಭವಿಸುವುದಿದೆ. ಆ ಸ್ಥಿತಿಗೆ ಹೋಗಲು ನಕಾರಾತ್ಮಕತೆಯಲ್ಲ, ಸಕಾರಾತ್ಮಕತೆಯೇ ಸಹಾಯ ಮಾಡುತ್ತದೆ, ಎಂದು ಹೇಳಿದನು.

೯. ನಕಾರಾತ್ಮಕ ವಿಚಾರಗಳನ್ನು ದೂರಗೊಳಿಸಲು ಮಾಡಬೇಕಾದ ಪ್ರಾರ್ಥನೆ !

ಹೇ ಗುರುದೇವರೇ, ನನ್ನ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರಗಳಿಂದ ನಾನು ಸಾಧನೆಯಿಂದ ದೂರ ಹೋಗುತ್ತಿದ್ದೇನೆ. ನಾನು ನನ್ನ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರಗಳನ್ನು ದೂರಗೊಳಿಸಲು ಅಸಮರ್ಥನಾಗಿದ್ದೇನೆ. ನೀವೇ ನನ್ನ ಮೇಲೆ ದಯೆ ತೋರಿಸಿ. ನನ್ನ ಮನಸ್ಸಿನಲ್ಲಿನ ನಕಾರಾತ್ಮಕ ವಿಚಾರಗಳನ್ನು ದೂರ ಮಾಡಿರಿ, ನೀವೇ ನನ್ನನ್ನು ಇದರಿಂದ ಪಾರು ಮಾಡಿರಿ, ಇದೇ ತಮ್ಮ ಚರಣಗಳಲ್ಲಿ ಶರಣಾಗತಭಾವದಿಂದ ಪುನಃ ಪುನಃ ಪ್ರಾರ್ಥನೆ.

೧೦. ಪ್ರಯತ್ನದ ಕೊನೆಯಲ್ಲಿ ಪರಮೇಶ್ವರ, ಈ ಉಕ್ತಿಗನುಸಾರ ಪ್ರಯತ್ನಗಳ ಸಹಾಯ ಹಸ್ತವನ್ನು ಹಿಡಿದರೆ ಅದರಿಂದ ಸಾಧನೆಯಾಗುವುದು !

ಪ್ರಯತ್ನದ ಕೊನೆಯಲ್ಲಿ ಪರಮೇಶ್ವರ ಎಂದು ಹೇಳಲಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಪ್ರಯತ್ನಗಳ ಸಹಾಯ ಪಡೆದು ಪ್ರಯತ್ನಪೂರ್ವಕವಾಗಿ ಒಂದೊಂದೇ ಹೆಜ್ಜೆಯನ್ನು ಇಟ್ಟು ಮುಂದೆ ಹೋದರೆ ದೇವರು ಖಂಡಿತವಾಗಿಯೂ ಸಹಾಯಕ್ಕೆ ಧಾವಿಸಿ ಬರುತ್ತಾನೆ. ಇಂತಹ ಸಮಯದಲ್ಲಿ ದೇವರು ಯಾರ ಮಾಧ್ಯಮದಿಂದ ಯಾವ ರೂಪವನ್ನು ತೆಗೆದುಕೊಂಡು ಬಂದಿದ್ದಾನೆ ಮತ್ತು ಇಂತಹ ಒಂದು ವಿಷಯವನ್ನು ನನಗೇ ಏಕೆ ಹೇಳುತ್ತಿದ್ದಾನೆ ?, ಎಂಬ ವಿಚಾರಗಳನ್ನು ಮಾಡದೇ ಹೇಳಿದಂತೆ ಕೃತಿಗಳನ್ನು ಮಾಡಿದರೆ ಅದರಿಂದ ಉತ್ತಮ ಪರಿಣಾಮವಾಗಲಿದೆ, ಎಂಬ ಭಾವವನ್ನಿಟ್ಟುಕೊಂಡು ಪ್ರಯತ್ನಿಸಿದರೆ ಅದರಿಂದ ಸಾಧನೆಯಾಗುತ್ತದೆ.

೧೧. ಗುರುದೇವರ ಸ್ಮರಣೆಯಿಂದಲೇ ನಮ್ಮ ನಕಾರಾತ್ಮಕ ವಿಚಾರಗಳು ದೂರವಾಗುವವು, ಎಂಬ ಶ್ರದ್ಧೆಯನ್ನಿಟ್ಟು ಪ್ರಯತ್ನಿಸಬೇಕು !

ಪರಾತ್ಪರ ಗುರುದೇವರು ಪ್ರೀತಿಮಯವಾಗಿದ್ದಾರೆ ಮತ್ತು ದಯಾಳುವಾಗಿದ್ದಾರೆ. ಅವರು ನನ್ನ ಸಾಧನೆಯಲ್ಲಿನ ಅಡಚಣೆ ಗಳನ್ನು ದೂರಗೊಳಿಸಲು ಸಮರ್ಥರಾಗಿದ್ದಾರೆ. ನಮ್ಮ ಪ್ರಾರ್ಥನೆಯಿಂದ ಗುರುದೇವರಿಗೆ ನಮ್ಮ ಮೇಲೆ ಕರುಣೆ ಬಂದು ಅವರು ನಮ್ಮಲ್ಲಿನ ನಕಾರಾತ್ಮಕತೆಯನ್ನು ದೂರ ಮಾಡಲು ಸಂಕಲ್ಪ ಮಾಡುವರು. ನಿಜ ನೋಡಿದರೆ, ಗುರುದೇವರ ಸ್ಮರಣೆಯಿಂದಲೇ ನಮ್ಮ ನಕಾರಾತ್ಮಕ ವಿಚಾರಗಳು ದೂರವಾಗುತ್ತವೆ, ನಮ್ಮ ಮನಸ್ಸು ಮತ್ತು ಬುದ್ಧಿ ಶುದ್ಧವಾಗುತ್ತವೆ ಮತ್ತು ನಮ್ಮ ಭಕ್ತಿ ಶುದ್ಧವಾಗಿ ಸಾಧನೆಯಲ್ಲಿ ಪ್ರಗತಿಯಾಗುತ್ತದೆ. ಇವೆಲ್ಲವೂ ಶೀಘ್ರವಾಗಿ ಆಗಲು ಮೇಲೆ ಹೇಳಿದಂತೆ ಪುನಃ ಪುನಃ ಪ್ರಾರ್ಥನೆಯನ್ನು ಮಾಡೋಣ ಮತ್ತು ಪರಾತ್ಪರ ಗುರುದೇವರ ಕುರಿತು ಶ್ರದ್ಧೆಯನ್ನು ಹೆಚ್ಚಿಸೋಣ.

– ಶ್ರೀ. ಅಶೋಕ ಲಿಮಕರ್, ಸನಾತನ ಆಶ್ರಮ, ದೇವದ, ಪನವೇಲ. (೩೦.೭.೨೦೧೭)

(ಮುಕ್ತಾಯ)