ಕರ್ನಾಟಕದ ಓರ್ವ ಸಂತರು ಹೇಳಿದ ಮಾರ್ಗದರ್ಶಕ ಅಂಶಗಳು

೧. ಸಾಧನೆಯ ವಿಷಯದ ಅಂಶಗಳು

ಅ. ನಮಗೆ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವ ಅವಶ್ಯಕತೆ ಇಲ್ಲ. ಭಾವಪೂರ್ಣ ಗುರುಸೇವೆಯನ್ನು ಮಾಡಿದರೆ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿದ ಫಲವು ಪ್ರಾಪ್ತಿಯಾಗಬಲ್ಲದು.

. ಯಾವ ಶಿಷ್ಯನು ಗುರುಗಳ ಸೇವೆಯನ್ನು ಮಾಡುತ್ತಾನೋ, ಅವನ ಜನ್ಮವು ಸಾರ್ಥಕವಾಗುತ್ತದೆ. ಇಂತಹ ಸಾಧಕನು ಎಲ್ಲಿದ್ದರೂ, ಗುರುಗಳು ಅವನ ರಕ್ಷಣೆ ಮಾಡುತ್ತಾರೆ.

ಇ. ಧ್ಯಾನದ ಉಚ್ಚ ಅವಸ್ಥೆಯಲ್ಲಿ ನನ್ನ ಶ್ವಾಸೋಚ್ಛ್ವಾಸವು ಮೂಗಿನ ಮೂಲಕ ಹೊರಗಿನಿಂದಲ್ಲ, ಒಳಗಿನಿಂದ ಆಗುತ್ತಿರುತ್ತದೆ.

ಈ. ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಜಗನ್ಮಾತೆ ಇವರು ಜಗತ್ತಿನ ರಕ್ಷಣೆಯನ್ನು ಮಾಡುತ್ತಾರೆ. ‘ಜನರು ಧರ್ಮದ ಮಾರ್ಗದಿಂದ ಸಾಗಬೇಕು (ಧರ್ಮಪಾಲನೆ ಮಾಡಬೇಕು), ಅದಕ್ಕಾಗಿ ಶ್ರೀವಿಷ್ಣುವು ಮಾರ್ಗದರ್ಶನ ಮಾಡುತ್ತಿದ್ದು ಅವನು ಜನರ ಪಾಲನೆ-ಪೋಷಣೆ ಮಾಡುತ್ತಾನೆ. ಈ ಕಾರ್ಯದಲ್ಲಿ ಶ್ರೀಗುರುಗಳು ಮತ್ತು ಜಗನ್ಮಾತೆ ಇವರು ತತ್ಪರರಾಗಿದ್ದಾರೆ.

ಉ. ಸಂಪೂರ್ಣ ವಿಶ್ವವು ಶಿವಮಯವಾಗಿದೆ.

. ಕೆಲವರ ಮನಸ್ಸಿನಲ್ಲಿ ಅಂತರ್ಯಾಮಿ ಆತ್ಮದೊಂದಿಗೆ ಅನುಸಂಧಾನವನ್ನು ಸಾಧಿಸಲು ಆವಶ್ಯಕವಿರುವ ಸೆಳೆತವು ಕಡಿಮೆಯಿರುತ್ತದೆ.

ಎ. ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳು ಅನುಕ್ರಮವಾಗಿ ಬ್ರಹ್ಮ, ವಿಷ್ಣು ಮತ್ತು ಶಿವ ಇವರ ಕಾರ್ಯವಾಗಿದೆ.

. ಗುರುಗಳಲ್ಲಿ ಭೇದವಿರುವುದಿಲ್ಲ. ಶಿಷ್ಯ-ಶಿಷ್ಯರಲ್ಲಿ ಭೇದವಿರುತ್ತದೆ. ಈ ಭೇದವು ಯಾವಾಗ ಹೊರಟು ಹೋಗುವುದೋ, ಆಗ ‘ಹಿಂದೂ ರಾಷ್ಟ್ರ ಬರುವುದು.

ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಪ್ರಣಾಮಗಳು !

– ಓರ್ವ ಸಂತರು, ಕರ್ನಾಟಕ (ಡಿಸೆಂಬರ ೨೦೧೯)

೨. ಮುಂಬರುವ ಕಾಲದ ಬಗ್ಗೆ ಹೇಳಿದ ಅಂಶಗಳು

. ಸಜ್ಜನರು ಮತ್ತು ಸಾಧನೆ ಮಾಡುವ ಜನರೇ ಜೀವಂತವಾಗಿರುವರು.

ಆ. ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಎಲ್ಲರೂ ಒಂದಾಗಿ ಕೈಜೋಡಿಸಿ ಸಹಾಯ ಮಾಡುವರು. ಮುಂಬರುವ ಕಾಲದಲ್ಲಿ ಕೇವಲ ಧಾರ್ಮಿಕ ವ್ಯಕ್ತಿಗಳೇ ಜೀವಂತವಾಗಿರುವರು. ಈ ಧಾರ್ಮಿಕ ವ್ಯಕ್ತಿಗಳ ರಕ್ಷಣೆಯನ್ನು ಭಗವಂತನೇ ಮಾಡುವನಿದ್ದಾನೆ.

ಇ. ಎರಡು ಮಹಡಿಗಳಿಗಿಂತ ಹೆಚ್ಚು ಮಹಡಿಗಳಿರುವ ಕಟ್ಟಡಗಳು ಕುಸಿಯುವುವು.

ಈ. ಧರ್ಮಸ್ಥಾಪನೆಗಾಗಿ ಲಕ್ಷಾಂತರ ಜನರು ಇಂದಿಗೂ ಇದ್ದಾರೆ. ೩೩ ಕೋಟಿ ದೇವತೆಗಳ ಪೈಕಿ ಲಕ್ಷಾಂತರ ದೇವತೆಗಳು ಈ ಮೊದಲೇ ಸಾಧಕರ ಮತ್ತು ಸಂತರ ರೂಪದಲ್ಲಿ ಪೃಥ್ವಿಯ ಮೇಲಿದ್ದಾರೆ.

ಉ. ಸಂಪೂರ್ಣ ಜಗತ್ತಿನಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ವ್ಯಕ್ತಿಗಳ ಅಗತ್ಯವಿದೆ. ಅಲ್ಪ ಅವಧಿಯಲ್ಲಿಯೇ ಈ ಕುರಿತಾದ ಚಿತ್ರಣವು ನಮ್ಮ ಕಣ್ಣೆದುರು ಬರುವುದು.

. ಋಷಿಮುನಿಗಳು, ಯೋಗಿಗಳು ಮತ್ತು ಸಿದ್ಧಪುರುಷರು ಈ ಕಾರ್ಯಕ್ಕಾಗಿ ಅಜ್ಞಾತ ರೂಪದಲ್ಲಿ ಸಜ್ಜಾಗಿದ್ದಾರೆ. ಇದೆಲ್ಲವೂ ಭಗವಂತನ ಲೀಲೆಯಾಗಿದೆ. ಹಿಮಾಲಯದಲ್ಲಿನ ಯೋಗಿಗಳು ಕೇರಳ ಮತ್ತು ತಮಿಳುನಾಡಿನಲ್ಲಿ ಬಂದು ನೆಲೆಸಿದ್ದಾರೆ. ಶ್ರೇಷ್ಠರಾದ ಯೋಗಿಗಳು ವಿದ್ಯೆಯನ್ನು ಕಲಿಸಲು ಬರುವರು.

ಎ. ಭವಿಷ್ಯದಲ್ಲಿ ವಿಮಾನಪ್ರಯಾಣದ ಸೌಲಭ್ಯವಿರುವುದಿಲ್ಲ.

. ರಾಮನಾಥಿ ಆಶ್ರಮದಲ್ಲಿ ನಡೆಯುತ್ತಿರುವುದನ್ನು ದೇವ-ದೇವತೆಗಳು ನೋಡುತ್ತಿದ್ದಾರೆ. (‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧಕರು ಮತ್ತು ಸಂತರು ಕಾರ್ಯನಿರತರಾಗಿದ್ದಾರೆ. – ಸಂಕಲನಕಾರರು)

ಓ. ಯಾವಾಗ ಗುರುಗಳಿಗೆ ಕೋಪ ಬರುತ್ತದೋ, ಆಗ ಪ್ರಕೃತಿ ಮಾತೆಯು ತಾಂಡವವಾಡುತ್ತಾಳೆ ಮತ್ತು ಪೃಥ್ವಿಯ ಮೇಲಿನ ಲಯದ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಾಳೆ.

. ಭಾರತದಲ್ಲಿ ಹಿಂದೂ ರಾಷ್ಟ್ರ ಬರಲಿದೆ. ಈಗ ಹಿಂದೂ ಸಂಘಟನೆಗಾಗಿ ಪ್ರಯತ್ನಿಸುವುದು ಅಗತ್ಯವಿದೆ.

೩. ಕೊರೊನಾ ಕುರಿತು ಹೇಳಿದ ಅಂಶಗಳು

‘ಸದ್ಯ ‘ಕೊರೋನಾ ವಿಷಾಣುಗಳ ಹಾವಳಿಯಿಂದ ಜಗತ್ತಿನಾದ್ಯಂತ ಹಾಹಾಕಾರವಾಗಿದೆ, ಅದರಿಂದ ಜನರು ಭಗವಂತನಿಗೆ ಶರಣಾಗತರಾಗುವರು. ಭಗವಂತನ ಮೇಲೆ ಯಾರಿಗೆ ನಂಬಿಕೆ ಇರುತ್ತದೋ, ಆ ಜನರು ಧರ್ಮಾಚರಣೆ ಮಾಡಲು ಉದ್ಯುಕ್ತರಾಗುವರು. ಯಾರಿಗೆ ಭಗವಂತನ ಮೇಲೆ ನಂಬಿಕೆ ಇರುವುದಿಲ್ಲವೋ, ಅಂತಹವರಿಗೆ ಕಾಲವು ಕಠಿಣವಾಗಿರಲಿದೆ.

– ಓರ್ವ ಸಂತರು, ಕರ್ನಾಟಕ (೧೧.೪.೨೦೨೦)