ಸೃಷ್ಟಿಯನ್ನು ಬ್ರಹ್ಮದೇವನು ಉತ್ಪತ್ತಿ ಮಾಡಿದನು, ಭಗವಾನ ಶ್ರೀವಿಷ್ಣು ಅದರ ಪಾಲನೆಯನ್ನು ಮಾಡುತ್ತಿದ್ದಾನೆ ಮತ್ತು ಭಗವಾನ ಶಿವನು ಲಯಗೊಳಿಸುವವನಾಗಿದ್ದಾನೆ. ಸೃಷ್ಟಿಯ ಮೇಲೆ ಸಂಕಟಗಳು ಬಂದೆರಗಿದಾಗಲೆಲ್ಲ, ದೇವರು, ದೇವತೆಗಳು, ಋಷಿಗಳು, ಮುನಿಗಳು, ಭಕ್ತರು ಭಗವಾನ ವಿಷ್ಣುವಿನ ಮೊರೆ ಹೋದರು. ಭಗವಾನ ಶ್ರೀವಿಷ್ಣುವು ಭಕ್ತರ ರಕ್ಷಣೆಗಾಗಿ ಮತ್ತು ಧರ್ಮ ಸಂಸ್ಥಾಪನೆಗಾಗಿ ೯ ಅವತಾರಗಳನ್ನು ತಾಳಿದನು. ಮತ್ಸ್ಯ, ವರಾಹ, ಕೂರ್ಮ ಈ ಪ್ರಾಣಿರೂಪಗಳಲ್ಲಿ ಅವತಾರ ತಾಳಿದನು. ಅಂದರೆ ದೇವರು ಭಕ್ತರ ರಕ್ಷಣೆಗಾಗಿ ಯಾವುದೇ ರೂಪವನ್ನು ಧರಿಸಬಲ್ಲನು. ನರಸಿಂಹ ರೂಪದಲ್ಲಿಯೂ ದೇವರು ಇದನ್ನೇ ತೋರಿಸಿಕೊಟ್ಟಿದ್ದಾನೆ. ದೇವರು ನಮ್ಮ ರಕ್ಷಣೆ ಮಾಡಬೇಕಿದ್ದರೆ, ನಾವು ದೇವರ ಭಕ್ತರಾಗುವುದು ಆವಶ್ಯಕವಿರುತ್ತದೆ. ಹಿರಣ್ಯಕಶ್ಯಪನು ಭಕ್ತ ಪ್ರಹ್ಲಾದನನ್ನು ಅಂತ್ಯಗೊಳಿಸಲು ಅನೇಕ ಪ್ರಯತ್ನಗಳನ್ನು ಮಾಡಿದನು; ಆದರೂ ಅವನಿಗೆ ಭಕ್ತ ಪ್ರಹ್ಲಾದನನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ದೇವರು ಯುಗಾನುಯುಗಗಳಿಂದ ಭಕ್ತರ ರಕ್ಷಣೆ ಮಾಡುತ್ತಾ ಬಂದಿದ್ದಾನೆ. ಮಾಡುತ್ತಿದ್ದಾನೆ ಮತ್ತು ಮುಂದೆಯೂ ಮಾಡುವವನಿದ್ದಾನೆ.
ಓ ಪಾಲನಹಾರೆ ನಿರ್ಗುಣ ಔರ ನ್ಯಾರೆ |
ತುಮರೆ ಬಿನ ಹಮರಾ ಕೌನೊ ನಾಹಿ |
ಹಮರಿ ಉಲಝನ, ಸುಲಝಾವೋ ಭಗವನ |
ತುಮರೆ ಬಿನ ಹಮರಾ ಕೌನೋ ನಾಹಿ ||
ಇಂತಹ ಆರ್ತತೆಯು ಪ್ರಾಣವು ಕಂಠಕ್ಕೆ ಬಂದಾಗ ದೇವರ ಮೇಲೆ ಶ್ರದ್ಧೆಯಿಲ್ಲದಿರುವ ವ್ಯಕ್ತಿಯಲ್ಲಿಯೂ ಬರುತ್ತಿರುತ್ತದೆ; ಆದರೆ ಕೇವಲ ಇಂತಹ ಆರ್ತತೆಯಿಂದ ಮಾತ್ರ ಭಗವಂತನು ಸಹಾಯಕ್ಕೆ ಧಾವಿಸಿ ಬರುವುದಿಲ್ಲ. ಅವನು ಸಾಧಕರ, ಭಕ್ತರ ರಕ್ಷಣೆಗಾಗಿ ಧಾವಿಸಿ ಬರುತ್ತಾನೆ. ಆಯುಷ್ಯವಿಡೀ ದೇವರಿಗಾಗಿ ತನು, ಮನ ಮತ್ತು ಧನವನ್ನು ತ್ಯಾಗ ಮಾಡದಿರುವವರು ಪ್ರಾಣ ಕಂಠಕ್ಕೆ ಬಂದಾಗ ದೇವರಿಗೆ ಮೊರೆ ಹೋದರೆ, ದೇವರಾದರೂ ಅವರನ್ನು ಏಕೆ ರಕ್ಷಿಸಬೇಕು ?, ಎನ್ನುವ ಪ್ರಶ್ನೆಯೇಳುತ್ತದೆ. ಹೀಗಿದ್ದರೂ ದೇವರು ದಯಾಳುವಾಗಿದ್ದಾನೆ. ಯಾರು ಭವಿಷ್ಯದಲ್ಲಿ ಸಾಧನೆಯಲ್ಲಿ ಮಾಡಬಲ್ಲರೋ, ಅವರನ್ನೇ ದೇವರು ರಕ್ಷಿಸುತ್ತಾರೆ. ಮಹಾಭಾರತದ ಯುದ್ಧದಲ್ಲಿ ಪಕ್ಷಿಯು ತನ್ನ ರಕ್ಷಣೆಗಾಗಿ ಮರಿಗಳೊಂದಿಗೆ ಭಗವಾನ ಶ್ರೀಕೃಷ್ಣನಲ್ಲಿ ಮೊರೆಯಿಟ್ಟ ಕಥೆ ನಿಮಗೆಲ್ಲ ತಿಳಿದೇ ಇದೆ. ಭಾವವಿದ್ದರೆ, ದೇವರು ಮನುಷ್ಯನನ್ನು ಮಾತ್ರವಲ್ಲ ಪ್ರಾಣಿಗಳನ್ನೂ ರಕ್ಷಿಸುತ್ತಾನೆ. ಇದು ಗಜೇಂದ್ರಮೋಕ್ಷದ ಪ್ರಕರಣದಿಂದ ನಮಗೆ ಅಧಿಕ ಸ್ಪಷ್ಟವಾಗುತ್ತ ಸರೋವರದಲ್ಲಿದ್ದ ಮೊಸಳೆಯು ಗಜೇಂದ್ರನ ಕಾಲನ್ನು ಹಿಡಿದಾಗ ಅದರಿಂದ ಬಿಡಿಸಿಕೊಳ್ಳಲು ಆರ್ತತೆಯಿಂದ ಮೊರೆಯಿಡುವ ಗಜೇಂದ್ರನು ಕಮಲದಳವನ್ನು ಭಗವಾನ ವಿಷ್ಣುವಿಗೆ ಅರ್ಪಿಸಿದಾಗ ತಕ್ಷಣವೇ ಭಗವಂತನು ಅವನನ್ನು ರಕ್ಷಿಸಿದನು. ಇಂತಹ ಭಗವಂತನು ನಮ್ಮ ರಕ್ಷಣೆಯನ್ನು ಮಾಡಿಯೇ ಮಾಡುತ್ತಾನೆ. ದೇವರಂತೆಯೇ ಗುರುಗಳು, ಸಂತರು ಇವರೂ ತಮ್ಮ ಭಕ್ತರ, ಶಿಷ್ಯರ, ಸಾಧಕರ ರಕ್ಷಣೆಯನ್ನು ಮಾಡುತ್ತಿರುತ್ತಾರೆ. ಈ ಘಟನೆಯಿಂದ ಭಕ್ತರ ಶ್ರದ್ಧೆ ಅಧಿಕ ದೃಢವಾಗುತ್ತಿರುತ್ತದೆ. ಗುರುಗಳು, ಸಂತರು ದೇವರ ಸಗುಣ ರೂಪವಿರುವುದರಿಂದ ಅವರು ದೇವರ ಕಾರ್ಯವನ್ನೇ ಮಾಡುತ್ತಿರುತ್ತಾರೆ. ಅವರ ಕೃಪೆಯನ್ನು ಸಂಪಾದಿಸಲು ಭಾವವಿರುವುದು ಆವಶ್ಯಕ ವಿದೆ. ಇಂದು ಭಾರತದಲ್ಲಿರುವ ಬಹುಸಂಖ್ಯಾತ ಹಿಂದೂಗಳು ಆಸ್ತಿಕರಾಗಿದ್ದಾರೆ. ಏನಾದರೂ ದೇವರ ಕಾರ್ಯವನ್ನು ಮಾಡುತ್ತ ಇರುತ್ತಾರೆ. ಆದರೆ ಪ್ರತಿದಿನ ತನು, ಮನ ಮತ್ತು ಧನವನ್ನು ಈಶ್ವರನಿಗಾಗಿ ಅರ್ಪಿಸುತ್ತಿರಬೇಕು. ಅಂದರೆ ಸಾಧನೆಯನ್ನು ಮಾಡುತ್ತಿರಬೇಕು. ಹೀಗೆ ಮಾಡುವ ಹಿಂದೂಗಳು ಸಂಖ್ಯೆ ಬೆರಳೆಣಿಕೆಯಷ್ಟಿರುತ್ತದೆ. ಆದುದರಿಂದ ಸಾಧನೆಯನ್ನು ಮಾಡದಿರುವ ಹಿಂದೂಗಳ ಮೇಲೆ ದೇವರ ಕೃಪೆಯಾಗುವುದಿಲ್ಲ ಅನೇಕ ಹಿಂದೂಗಳು ಸಕಾಮವೆಂದರೆ ಧನ, ಮನೆ, ನೌಕರಿ, ವಿವಾಹ, ಸಂತಾನ ಇತ್ಯಾದಿಗಳ ಪ್ರಾಪ್ತಿಗಾಗಿ ದೇವರ ಯಾವುದಾದರೂ ಕಾರ್ಯವನ್ನು ಮಾಡುತ್ತಿರುತ್ತಾರೆ. ಇದರಿಂದ ದೇವರು ಅವರಿಗೆ ಆಯಾ ಸ್ತರದಲ್ಲಿ ಸಹಾಯ ಮಾಡುತ್ತಿರುತ್ತಾನೆ. ಭಗವದ್ಗೀತೆಯಲ್ಲಿ ಭಗವಾನ ಶ್ರೀಕೃಷ್ಣನು ‘ನನ್ನ ನಿಷ್ಕಾಮ ಭಕ್ತನ ಎಲ್ಲ ಅಪೇಕ್ಷೆಗಳನ್ನು ನಾನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದ್ದಾನೆ. ಇಂತಹ ನಿಷ್ಕಾಮ ಭಕ್ತಿಯನ್ನು ಮಾಡುವ ಭಕ್ತರ ಬೆನ್ನಿಗೆ ದೇವರು ಸದಾ ಇರುತ್ತಾನೆ.
ದೇವರಿಗೆ ಯಾವಾಗ ಶರಣಾಗುವಿರಿ ?
ಜನರು ಜೀವ ವಿಮೆಯಲ್ಲಿ ಹಣ ಹೂಡಿಕೆ ಮಾಡಬೇಕೆಂದು, ಅನೇಕ ಜೀವವಿಮಾ ಕಂಪನಿಗಳು ಭವಿಷ್ಯದಲ್ಲಿ ಸಂಕಟ ಬಂದರೆ ವಿಮೆಯ ಹಣ ಉಪಯೋಗಕ್ಕೆ ಬರುತ್ತದೆಯೆಂದು ಹೇಳುತ್ತಿರುತ್ತಾರೆ. ಇದರಿಂದ ದೇಶದಲ್ಲಿಯಷ್ಟೇ ಅಲ್ಲ, ಜಗತ್ತಿನಾದ್ಯಂತ ಜನರು ವಿಮೆಯನ್ನು ಮಾಡುತ್ತಿರುತ್ತಾರೆ. ವಿಮೆಯ ಹಣ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಜನರಲ್ಲಿ ಇರುತ್ತದೆ. ಅಂತಹ ವಿಶ್ವಾಸವನ್ನು ದೇವರ ಮೇಲೆ, ಗುರುಗಳ ಮೇಲಿಡಲು ನಿಷ್ಕಾಮ ಭಕ್ತಿಯನ್ನು ಹೆಚ್ಚಿಸಬೇಕು. ಸದ್ಯದ ಕೊರೋನಾದ ಸಂಕಟದ ಸಮಯದಲ್ಲಿ ಉದ್ಭವಿಸಿರುವ ದೇಶದ ನಾಗರಿಕರ ಸ್ಥಿತಿಯನ್ನು ನೋಡಿದರೆ ಜನರು ದೇವರಿಗೆ ಮೊರೆ ಹೋಗುವ ಪರಿಸ್ಥಿತಿ ಉದ್ಭವಿಸಿದೆ. ಕೊರೋನಾದಿಂದ ನಾಗರಿಕರು ಹೆದರಿದ್ದಾರೆ. ಕಳೆದ ವರ್ಷ ನಾಗರಿಕರಿಗೆ ಕೊರೋನಾದಿಂದ ಅಷ್ಟು ತೊಂದರೆಯ ಅನುಭವವಾಗಲಿಲ್ಲ. ಆದರೆ ಈ ವರ್ಷ ಅದು ಅತ್ಯಧಿಕ ಕರಾಳರೂಪದೊಂದಿಗೆ ಕಂಡು ಬಂದಿದೆ. ಈ ಸಂದರ್ಭದಲ್ಲಿ ರಾಜಕಾರಣಿಗಳು, ಅಧಿಕಾರಿವರ್ಗದವರು, ಡಾಕ್ಟರರಿಂದ ಜನರ ಪ್ರಾಣ ರಕ್ಷಣೆಯಾಗುವ ಸ್ಥಿತಿಯೂ ಉಳಿದಿಲ್ಲ. ಇಷ್ಟೇ ಅಲ್ಲ, ಮಾನವನ ತಪ್ಪುಗಳಿಂದ ಘಟಿಸುವ ಘಟನೆಗಳಿಂದಲೂ ಜನರು ಮರಣ ಹೊಂದುತ್ತಿದ್ದಾರೆ. ಇಂತಹ ಆಪತ್ಕಾಲದಲ್ಲಿ ಜನರಲ್ಲಿ ಎಷ್ಟೇ ಹಣವಿದ್ದರೂ, ಅದು ಉಪಯೋಗಕ್ಕೆ ಬರುವುದಿಲ್ಲವೆನ್ನುವುದು ಅಧಿಕ ಸ್ಪಷ್ಟವಾಗಿದೆ. ಇಂತಹ ಕಾಲ ಬರಲಿದೆಯೆಂದು ದಾರ್ಶನಿಕರು, ಸಂತರು ಮತ್ತು ಗುರುಗಳು ಕಳೆದ ಕೆಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ.
ಪಾಂಡವರಾಗಿ !
ಮಹಾಭಾರತದಲ್ಲಿ ಯುದ್ಧ ನಿಶ್ಚಿತವಾಗಿತ್ತು. ಅದನ್ನು ಭಗವಾನ ಶ್ರೀಕೃಷ್ಣನು ತಡೆಯಬಹುದಾಗಿತ್ತು; ಆದರೆ ಅದು ಘಟಿಸುವುದು ಈಶ್ವರನ ಇಚ್ಛೆಯಾಗಿತ್ತು. ಆದ್ದರಿಂದ ಅದು ಘಟಿಸಿತು ಮತ್ತು ಅದರಲ್ಲಿ ಭಯಂಕರ ವಿನಾಶವಾಯಿತು. ಶ್ರೀಕೃಷ್ಣನು ಯುದ್ಧವನ್ನು ತಡೆಯದೇ ಇದ್ದುದರಿಂದ ಅದರಲ್ಲಿಯೇ ಕೌರವರ ನಾಶವಾಯಿತು. ಈ ಯುದ್ಧದಲ್ಲಿ ಅವನು ತನ್ನ ಭಕ್ತರಾಗಿದ್ದ ಪಾಂಡವರ ರಕ್ಷಣೆಯನ್ನು ಮಾಡಿದರು. ಸದ್ಯದ ಆಪತ್ಕಾಲವು ಈಶ್ವರೇಚ್ಛೆಯಾಗಿದೆ. ಮುಂಬರುವ ಸತ್ಯಯುಗಕ್ಕಾಗಿ ಆಪತ್ಕಾಲ ಬರುವುದು ಆವಶ್ಯಕವೇ ಆಗಿತ್ತು. ಅದರಲ್ಲಿ ವಿನಾಶವೂ ನಿಶ್ಚಿತವಾಗಿದ್ದು, ಇದು ಈಶ್ವರನ ಇಚ್ಛೆಯೇ ಆಗಿದೆ. ಈ ವಿನಾಶದಲ್ಲಿ ನಮ್ಮ ರಕ್ಷಣೆಯಾಗಲು ನಾವು ಪಾಂಡವರಾಗಲೇಬೇಕಾಗಿದೆ. ಸದ್ಯದ ಆಪತ್ಕಾಲಕ್ಕಿಂತ ಅಧಿಕ ತೀವ್ರ ಆಪತ್ಕಾಲ ಮುಂದೆ ಬರಲಿದೆ. ಇದರಲ್ಲಿ ಮೂರನೇ ಮಹಾಯುದ್ಧ, ಭೂಕಂಪ, ನೆರೆಹಾವಳಿ, ಸಾಂಕ್ರಾಮಿಕ ರೋಗಗಳು, ಆಹಾರಧಾನ್ಯಗಳ ಕೊರತೆ ಇತ್ಯಾದಿ ಸಂಕಟಗಳು ಎದುರಾಗಲಿವೆಯೆಂದು ದಾರ್ಶನಿಕರು, ಸಂತರು, ಗುರುಗಳು ಹೇಳುತ್ತಿದ್ದಾರೆ. ಈಗಿನ ಸ್ಥಿತಿಯಲ್ಲಿಯೇ ರಾಜಕಾರಣಿಗಳು ಜನತೆಯನ್ನು ರಕ್ಷಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಿರುವಾಗ ಮುಂದಿನ ತೀವ್ರ ಆಪತ್ಕಾಲದಲ್ಲಿ ಅವರು ಜನರ ರಕ್ಷಣೆ ಮಾಡಬಲ್ಲರು ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ದೇಶದಲ್ಲಿ ಅರಾಜಕತೆಯು ಸೃಷ್ಟಿಯಾಗಬಹುದು. ಅದೇ ಸಮಯದಲ್ಲಿ ಗಲಭೆ, ಹಿಂಸಾಚಾರ ಭುಗಿಲೆದ್ದರೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗಬಹುದು. ಆ ಸಮಯದಲ್ಲಿ ಪಾಂಡವರಂತೆ ಭಗವಂತ, ಗುರುಗಳ ಬಗ್ಗೆ ದಾಸ್ಯ ಭಕ್ತಿಯಿದ್ದರೆ, ಅದರಲ್ಲಿ ಆರ್ತತೆ ಮೂಡಿಸಲು, ಭಗವಂತ, ಗುರುಗಳು ಪಾಂಡವರಂತೆ ನಮ್ಮ ಪಾಲನಕರ್ತರಾಗಿ ರಕ್ಷಣೆಯನ್ನು ಮಾಡಬಲ್ಲರು. ಆ ಆರ್ತತೆಯನ್ನು ನಿರ್ಮಾಣ ಮಾಡಲು ಪ್ರಯತ್ನಿಸಿರಿ. ಇಂದಿನ ಕಾಲದಲ್ಲಿ ಪಾಂಡವರಾಗೋಣ.