ಹಿಂದೂದ್ವೇಷದ ಅಪಾಯಕಾರಿ ವಿಷಾಣು

ಹೆಚ್ಚುತ್ತಿರುವ ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ನಡೆಯುತ್ತಿದ್ದ ಕುಂಭಮೇಳವನ್ನು ಮುಕ್ತಾಯಗೊಳಿಸಲಾಗಿದೆಯೆಂದು ನಿರಂಜನಿ ಆಖಾಡಾ ಘೋಷಿಸಿದೆ. ಇದಕ್ಕೆ ಸ್ಪಂದಿಸಿದ ಅನೇಕ ಆಖಾಡಾದವರು ಕುಂಭಮೇಳದಿಂದ ನಿರ್ಗಮಿಸಲು ನಿರ್ಣಯಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ‘ಆಚಾರ್ಯ ಮಹಾಮಂಡಲೇಶ್ವರ ಪೂಜ್ಯ ಸ್ವಾಮಿ ಅವಧೇಶಾನಂದ ಗಿರಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಎಲ್ಲ ಸಂತರ ಆರೋಗ್ಯದ ವಿಷಯದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಎಲ್ಲ ಸಂತರೂ ಆಡಳಿತದ ಜೊತೆಗೆ ಎಲ್ಲ ರೀತಿಯಿಂದಲೂ ಸಹಕರಿಸುತ್ತಿದ್ದಾರೆ. ಈ ವಿಷಯದಲ್ಲಿ ನಾನು ಸಂತ ಸಮಾಜಕ್ಕೆ ಆಭಾರಿಯಾಗಿದ್ದೇನೆ. ಅದರೊಂದಿಗೆ ನಾನು “ಎರಡು ಶಾಹೀಸ್ನಾನಗಳು ಮುಗಿದಿವೆ. ಕೊರೋನಾದ ಬಿಕ್ಕಟ್ಟಿನ ಕಾರಣದಿಂದ ಉಳಿದಿರುವ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕು. ಇದರಿಂದ ಸಂಕಟದೊಂದಿಗೆ ಹೋರಾಡಲು ಬಲ ಸಿಗುತ್ತದೆ ಎಂದು ಕೋರಿರುವುದಾಗಿ ಟ್ವೀಟ್ ಮಾಡಿದ್ದಾರೆ.ಇಂದಿನ ತನಕ ದೇಶದ ಯಾವುದೇ ಪ್ರಧಾನಮಂತ್ರಿಯವರು ಸಂತ ಸಮಾಜದೊಂದಿಗೆ ಇಷ್ಟು ನಮ್ರತೆಯಿಂದ ಮಾತನಾಡಿರುವುದನ್ನು ಈ ಮೊದಲು ದೇಶದ ಜನ ಕೇಳಿರಲಿಕ್ಕಿಲ್ಲ. ಅನೇಕ ಜನರು ಕುಂಭಕ್ಷೇತ್ರದಿಂದ ನಿರ್ಗಮಿಸಲು ಪ್ರಾರಂಭಿಸಿದ್ದಾರೆ. ಸಂತರ ಈ ನಿರ್ಣಯದಿಂದ ಕುಂಭಮೇಳವನ್ನು ಟೀಕಿಸುತ್ತಿದ್ದವರಿಗೆ ಈಗ ಹಿಂದೂ ಧರ್ಮವನ್ನು ಟೀಕಿಸಲು ಅವಕಾಶ ಇಲ್ಲದಂತಾಗಿದೆ. ಆದಾಗ್ಯೂ ಇಂತಹರಿಗೆ ಹಿಂದೂ ಧರ್ಮವನ್ನು ಟೀಕಿಸಲು ಯಾವುದೇ ಕಾರಣ ಬೇಕಿರುತ್ತದೆ; ಏಕೆಂದರೆ ಅವರನ್ನು ಹಿಂದೂ ದ್ವೇಷದ ಅಪಾಯಕಾರಿ ವಿಷಾಣುವಿನ ಸಾಂಕ್ರಾಮಿಕತೆ ಆವರಿಸಿರುತ್ತದೆ.ಒಂದು ವಿಷಯವನ್ನು ಜಗ್ಗಿ-ಹಿಗ್ಗಿಸಿ ಅದನ್ನು ಹಿಂದೂ ಧರ್ಮಕ್ಕೆ ಜೋಡಿಸಿ ಅದರ ತೇಜೋವಧೆ ಮಾಡುತ್ತಿರುತ್ತಾರೆ. ಇಂತಹ ಗುಂಪಿನ ಅಜ್ಞಾನಿಗಳು ಹಿಂದೂಗಳ ಪ್ರಾಚೀನ ಕುಂಭಮೇಳವನ್ನು ಮರ್ಕಜ್ ದೊಂದಿಗೆ ಹೋಲಿಸಿ ತಮ್ಮ ಬೌದ್ಧಿಕ ದಿವಾಳಿತನ ತೋರಿಸಿದರು.

ಮರ್ಕಜ್‌ನವರ ದುಷ್ಕೃತ್ಯಗಳೆಡೆಗೆ ನಿರ್ಲಕ್ಷ್ಯವೇಕೆ ?

ಮೂಲದಲ್ಲಿ ಮರ್ಕಜ್ ಮತ್ತು ಕುಂಭಮೇಳ ಇವುಗಳನ್ನು ಹೋಲಿಸಲು ಸಾಧ್ಯವೇ ಇಲ್ಲ. ಇವೆರಡೂ ಕಾರ್ಯಕ್ರಮಗಳ ಆಯೋಜನೆಯ ಉದ್ದೇಶದಿಂದ ಹಿಡಿದು ಅದನ್ನು ಪ್ರತ್ಯಕ್ಷ ಕೃತಿಯವರೆಗೂ ಹೆಜ್ಜೆಹೆಜ್ಜೆಗೂ ವ್ಯತ್ಯಾಸಗಳು ಕಂಡು ಬರುತ್ತವೆ. ಹಿಂದಿನ ವರ್ಷ ಮರ್ಕಜ್ ಘಟನೆ ನಡೆದಾಗ ‘ಮರ್ಕಜ್ ಈ ಪದವನ್ನು ಭಾರತೀಯರು ಪ್ರಥಮ ಬಾರಿಗೆ ಕೇಳಿದರು. ಆಗ ಅದರ ಗಂಭೀರ ಕೃತ್ಯಗಳು, ಅವರ ವಿಕೃತ ಮಾನಸಿಕತೆ ಜಗತ್ತಿನೆದುರು ಬಯಲಾಯಿತು. ಎಲ್ಲಕ್ಕಿಂತ ಮೊದಲು ಮರ್ಕಜ ಕಾರ್ಯಕ್ರಮಕ್ಕೆ ಪೊಲೀಸರಿಂದ ಅನುಮತಿಯನ್ನೇ ಪಡೆದುಕೊಂಡಿರಲಿಲ್ಲ. ಇಲ್ಲಿಯೇ ಅವರ ಕಾನೂನುವಿರೋಧಿ ಮಾನಸಿಕತೆ ಕಂಡು ಬರುತ್ತದೆ. ಕುಂಭಮೇಳ ಮಾತ್ರ ಸರಕಾರದ ಅನುಮತಿ ಮತ್ತು ಮುಂದಾಳತ್ವದಲ್ಲಿ ಜರುಗಿತು. ಮರ್ಕಜ ಕಾರ್ಯಕ್ರಮದಲ್ಲಿ ಅನೇಕ ಜನರಿಗೆ ಕೊರೋನಾ ಆಗಿರುವುದು ಗಮನಕ್ಕೆ ಬಂದ ಬಳಿಕವೂ ಎಲ್ಲವನ್ನೂ ಮುಚ್ಚಿಟ್ಟ ಕಾರಣ ಕೊರೋನಾ ಮತ್ತಷ್ಟು ಹೆಚ್ಚು ಹರಡಿತು. ತದ್ವಿರುದ್ಧ ಕುಂಭಮೇಳದಲ್ಲಿ ಕೊರೋನಾ ‘ನೆಗೆಟಿವ್ ರಿಪೋರ್ಟ್ ಬಂದಿದ್ದರೂ ಕುಂಭನಗರವನ್ನು ಪ್ರವೇಶಿಸಲು ಅನುಮತಿ ನೀಡುತ್ತಿರಲಿಲ್ಲ. ಉತ್ತರಾಖಂಡದ ಗಡಿಯಲ್ಲಿ, ವಿಮಾನ ನಿಲ್ದಾಣದಲ್ಲಿ ಹಾಗೂ ರೈಲ್ವೆ ನಿಲ್ದಾಣದಲ್ಲಿ ಕೊರೋನಾ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿತ್ತು. ಸಾಧು-ಸಂತರೂ ತಾವಾಗಿ ಬಂದು ಕೊರೋನಾ ಪರೀಕ್ಷೆಯನ್ನು ಮಾಡಿಸಿಕೊಂಡರು ಮತ್ತು ತಮ್ಮ ಅನುಯಾಯಿಗಳಿಗೂ ಪರೀಕ್ಷೆ ಮಾಡಿಕೊಳ್ಳಲು ತಿಳಿಸಿದರು. ಹರಿದ್ವಾರದ ಕುಂಭಮೇಳದ ಸಾಧುಗಳಲ್ಲಿ ಕೊರೋನಾ ವಿಷಯದಲ್ಲಿ ಅತ್ಯಾಶ್ಚರ್ಯಕರ ರೀತಿಯಲ್ಲಿ ಜಾಗೃತಿಯು ಕಂಡುಬಂದಿತು. ಅನೇಕ ಆಖಾಡಗಳಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ವಿತರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕರೆ ನೀಡುವುದು. ಯಾರಲ್ಲಾದರೂ ಕೊರೋನಾ ಲಕ್ಷಣಗಳು ಕಂಡು ಬಂದೊಡನೆ ಅವರನ್ನು ಪ್ರತ್ಯೇಕಿಸುವುದು ಇವೇ ಮುಂತಾದ ಜಾಗರೂಕತೆ, ಸಾಮಾಜಿಕ ಜಾಗೃತಿ ಮತ್ತು ಪಾರದರ್ಶಕತೆಯನ್ನು ಕುಂಭಮೇಳದಲ್ಲಿ ಕಾಯ್ದುಕೊಳ್ಳಲಾಯಿತು. ಇವುಗಳಲ್ಲಿಯ ಯಾವ ವಿಷಯಗಳನ್ನು ಮರ್ಕಜನಲ್ಲಿ ಕೈಕೊಳ್ಳಲಾಗಿತ್ತೇ ಎಂದು ಮರ್ಕಜನ ಬೆಂಬಲಿಗರು ಮತ್ತು ಕುಂಭಮೇಳವನ್ನು ಟೀಕಿಸುವವರು ಉತ್ತರಿಸಬೇಕು. ಮರ್ಕಜನಲ್ಲಿ ಕೊರೋನಾ ಪಸರಿಸಿರುವುದು ಬಹಿರಂಗವಾದಾಗ ಒಳಗೆ ಹೋಗಲು ಸರಕಾರವು ಎಷ್ಟು ಪ್ರಯತ್ನಗಳನ್ನು ಮಾಡಬೇಕಾಯಿತು ಮತ್ತು ಎಷ್ಟು ಪೊಲೀಸರನ್ನು ಕರೆಸಬೇಕಾಯಿತು ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ ಕೊರೋನಾ ಹೆಚ್ಚುತ್ತಿರುವ ಗಾಂಭೀರ್ಯವನ್ನು ಅರಿತು ಕುಂಭಮೇಳದ ಸಾಧುಸಂತರು ತಾವಾಗಿಯೇ ಕುಂಭಮೇಳವನ್ನು ಮುಕ್ತಾಯಗೊಳಿಸಿರುವುದಾಗಿ ಘೋಷಿಸಿದರು ಎನ್ನುವುದು ವಿಶೇಷವಾಗಿದೆ. ಮನುಷ್ಯತ್ವಕ್ಕೆ ಮಸಿ ಬಳಿಯುವ ಮರ್ಕಜನವರ ಹೀನಕೃತ್ಯವನ್ನು ಇಡೀ ಜಗತ್ತೇ ಕಣ್ಣಾರೆ ಕಂಡಿತು. ಕೊರೋನಾ ರೋಗಿಗಳ ಪರೀಕ್ಷೆಗಾಗಿ ಹೋದ ಆರೋಗ್ಯ ಕಾರ್ಯಕರ್ತರ ಮೇಲೆಯೂ ಕೆಲವು ಮರ್ಕಜನವರು ಉಗುಳುವುದು, ಕೆಲವರು ಬಹಿರಂಗವಾಗಿ ಮಲಮೂತ್ರವನ್ನು ವಿಸರ್ಜಿಸುವಂತಹ ವಿಕೃತಿ, ಇನ್ನು ಕೆಲವರಿಂದ ವೈದ್ಯಕೀಯ ಕಾರ್ಯಕರ್ತರು ಮತ್ತು ಪೊಲೀಸರ ಮೇಲೆ ಹಲ್ಲೆ, ಇಷ್ಟೇ ಅಲ್ಲ ಅನೇಕ ಜನರು ಮಹಿಳಾ ಸಿಬ್ಬಂದಿಯವರೊಂದಿಗೆ ಅಸಭ್ಯವಾಗಿ ವರ್ತಿಸಿದರು. ಇಂತಹ ಕೃತ್ಯಗಳು ಕುಂಭಮೇಳದಲ್ಲಿ ಆಗಿಯೇ ಇಲ್ಲ. ಇದನ್ನು ಕುಂಭಮೇಳವನ್ನು ಟೀಕಿಸುವವರು ಗಮನಿಸಬೇಕು. ಈ ಕಾರಣದಿಂದಲೇ ಉತ್ತರಾಖಂಡದ ಮುಖ್ಯಮಂತ್ರಿ ತೀರಥಸಿಂಹ ರಾವತ ಕೂಡ ಕುಂಭಮೇಳ ಮತ್ತು ಮರ್ಕಜಗಳ ಹೋಲಿಕೆ ಸಾಧ್ಯವಿಲ್ಲವೆಂದು ಹೇಳಿದರು.

ಕುಂಭಮೇಳ ಮತ್ತು ಮರ್ಕಜಗಳನ್ನು ಹೋಲಿಸಲಿಕ್ಕಿದ್ದರೆ, ಮೇಲಿನ ಅಂಶಗಳ ಮೇಲೆ ಮಾಡಬೇಕು. ಇಲ್ಲಿ ಗಮನದಲ್ಲಿಡ ಬೇಕಾದ ವಿಷಯವೆಂದರೆ, ಯಾವ ಜನರು ಆ ಸಮಯದಲ್ಲಿ ಮರ್ಕಜ ಸಮರ್ಥಿಸಿದ್ದರೋ, ಅವರೇ ಇಂದು ಕುಂಭಮೇಳವನ್ನು ಟೀಕಿಸುತ್ತಿದ್ದಾರೆ. ಈಗ ಇದೇ ಜನರು ರಂಜಾನ ಹಿನ್ನೆಲೆಯಲ್ಲಿ ಇಂತಹ ಹೇಳಿಕೆ ನೀಡುವರೇ ? ಅಥವಾ ಎಂದಿನಂತೆ ಬಿಲದೊಳಗೆ ಹೋಗಿ ಕುಳಿತುಕೊಳ್ಳುವರೇ ? ಎನ್ನುವುದೇ ನೈಜ ಪ್ರಶ್ನೆಯಾಗಿದೆ. ಕುಂಭ ಮೇಳದ ಇನ್ನೂ ಎರಡು ಪವಿತ್ರಸ್ನಾನಗಳು ಬಾಕಿ ಇವೆ. ಅದನ್ನು ಕೆಲವೇ ಜನರ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಆಚರಿಸಬಹುದು ಮತ್ತು ಕುಂಭಮೇಳ ಮುಕ್ತಾಯಗೊಳ್ಳಬಹುದು. ಹಿಂದೂ ಧರ್ಮದ ಸಾಧು ಸಂತರು ತೋರಿಸಿರುವ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣದ ಬಗ್ಗೆ ಹಿಂದೂದ್ವೇಷಿಗಳು ಏನಾದರೂ ಹೇಳುವರೇ ?

ಹಿಂದೂದ್ವೇಷಿ ವಿಷಾಣುವಿನ ವಿರುದ್ಧ ಪ್ರತ್ಯಾಸ್ತ್ರ !

ಕುಂಭಮೇಳವನ್ನು ನೋಡಿದ ಬಳಿಕ ಗಂಟಲು ಹರಿದುಕೊಳ್ಳುವವರು, ಮರ್ಕಜನವರು ಮಾಡಿರುವ ಮೇಲೆ ವಿವರಿಸಿರುವ ಕೃತ್ಯಗಳ ಬಗ್ಗೆ ಏಕೆ ಬಾಯಿ ಮುಚ್ಚಿಕೊಂಡಿದ್ದರು ? ಅವರನ್ನೇಕೆ ಟೀಕಿಸಲಿಲ್ಲ ? ಅವರನ್ನು ‘ಕೊರೋನಾ ಬಾಂಬ್ ಎಂದು ಹೇಳುವ ಧೈರ್ಯವನ್ನು ಏಕೆ ತೋರಿಸಲಿಲ್ಲ ?ಕುಂಭಮೇಳದ ಬಗ್ಗೆ ಅವರಿಗೆ ಮಾತನಾಡು ವುದೇ ಇದ್ದರೆ, ಅವರು ಕುಂಭಮೇಳದ ಭಕ್ತರ ಹಿತದ ದೃಷ್ಟಿಯಿಂದ ಪ್ರತ್ಯಕ್ಷ ಕಾರ್ಯವನ್ನು ಮಾಡುತ್ತಿದ್ದರು. ಕೊನೆಯ ಪಕ್ಷ ಏನಾದರೂ ಸಲಹೆಗಳನ್ನು ಸೂಚಿಸಬೇಕಾಗಿತ್ತು; ಆದರೆ ಕಣ್ಣಿಗೆ ಹಿಂದೂದ್ವೇಷದ ಕನ್ನಡಕವನ್ನು ಹಾಕಿದಾಗ ಯಾರ ಹಿತವೂ ಕಾಣಿಸುವುದಿಲ್ಲ. ಬದಲಾಗಿ ನಾಲ್ಕು ಸಾಲಿನ ಅಸ್ಪಷ್ಟ ಅರ್ಥಹೀನ ಟ್ವೀಟ್‌ಗಳನ್ನು ಮಾಡಿ ಹಿಂದೂದ್ವೇಷದ ಅಪಾಯಕಾರಿ ವಿಷಾಣುವನ್ನು ಹರಡುವಲ್ಲಿ ಅವರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಇಂತಹ ಹಿಂದೂದ್ವೇಷಿ ವಿಷಾಣುಗಳನ್ನು ದೂರ ಮಾಡಲು ಹಿಂದೂಗಳು ಸಂಘಟನೆಯ ಬಲದ ಲಸಿಕೆ ಪಡೆದುಕೊಳ್ಳಬೇಕಾಗಿದೆ. ಈ ಲಸಿಕೆ ಒಮ್ಮೆ ತೆಗೆದುಕೊಂಡರೆ ಹಿಂದೂಗಳಲ್ಲಿರುವ ಪ್ರತಿರೋಧಶಕ್ತಿ ಒಗ್ಗಟ್ಟಿನ ಬಲ ಹೆಚ್ಚಾಗುವುದು. ತದನಂತರ ಇಂತಹ ಅಪಾಯಕಾರಿ ವಿಷಾಣುವಿನ ಹಲ್ಲೆ ಮಾಡಲು ಯಾರೂ ಯಾರೂ ಧೈರ್ಯ ತೋರಿಸಲಾರರು.