ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸುತ್ತಿರುವ ಬಿಳಿ ಬಣ್ಣದ ಅಂಗಿಯ ಬಣ್ಣವು ಬದಲಾಗಿ, ಕೆಲವು ಜಾಗಗಳಲ್ಲಿ ಗುಲಾಬಿಯಾಗುವುದು

೩೧.೧೨.೨೦೦೯ ಈ ದಿನ ಪ.ಪೂ. ಡಾಕ್ಟರರು ಉಪಯೋಗಿಸುತ್ತಿರುವ ಬಿಳಿ ಬಣ್ಣದ ಒಂದು ಅಂಗಿಯ ತೋಳುಗಳ, ಹೊಟ್ಟೆ ಮತ್ತು ಎದೆಯ ಭಾಗ ಗುಲಾಬಿಯಾಗಿರುವುದು ಕಂಡುಬಂದಿತು. ಅನೇಕ ದಿನಗಳವರೆಗೆ ಉಪಯೋಗಿಸಿದ ಬಟ್ಟೆಗಳ ಬಣ್ಣ ಕಾಲಾಂತರದಲ್ಲಿ ಮಸುಕಾಗುತ್ತವೆ ಎಂಬುದನ್ನು ನೋಡಿದ್ದೇವೆ; ಆದರೆ ಬಿಳಿ ಬಟ್ಟೆಗಳ ಮೂಲ ಬಣ್ಣ ಹೋಗಿ ಆ ಜಾಗದಲ್ಲಿ ಬೇರೆ ಬಣ್ಣ ಬಂದಿರುವುದನ್ನು ಈ ಮೊದಲು ಎಂದಿಗೂ ನೋಡಿರಲಿಲ್ಲ. ಬಣ್ಣ ಬದಲಾಗುವುದೆಂದರೆ ದೈವೀತತ್ತ್ವ ಪ್ರಕಟವಾಗುವುದು ಮತ್ತು ಬಣ್ಣ ಪ್ರಕಾಶಮಾನವಾಗಿ ಹೊಳೆಯುವುದೆಂದರೆ ದೈವಿತತ್ತ್ವವು ಸಮಷ್ಟಿಯ ಕಾರ್ಯಕ್ಕಾಗಿ ಕಾರ್ಯನಿರತವಾಗುವುದರ ಲಕ್ಷಣವಾಗಿದೆ. ಸಮಷ್ಟಿ ಕಲ್ಯಾಣವೇ ಪರಾತ್ಪರ ಗುರು ಡಾ. ಆಠವಲೆಯವರಂತಹ ಉಚ್ಚ ಕೋಟಿಯ ಸಂತರ ಕಾರ್ಯವಾಗಿರುವುದರಿಂದ ಅವರ ದೇಹ, ಅವರು ಉಪಯೋಗಿಸುತ್ತಿರುವ ವಸ್ತುಗಳ ಮಾಧ್ಯಮದಿಂದ ಸಮಷ್ಟಿಗೆ ಆವಶ್ಯಕವಿರುವ ತತ್ತ್ವವು ಕಾರ್ಯನಿರತವಾಗುತ್ತದೆ.

ಸಾಧಕರ ಹಾಗೂ ಪ.ಪೂ. ಡಾಕ್ಟರರ ಬಟ್ಟೆಗಳಿಗೆ ಗುಲಾಬಿ ಬಣ್ಣ ಬರುವ ಪ್ರಕ್ರಿಯೆಯಲ್ಲಿ ಕಂಡುಬಂದಿರುವ ಕೆಲವು ವೈಶಿಷ್ಟ್ಯಪೂರ್ಣ ಅಂಶಗಳು

೧. ತೀವ್ರ ತೊಂದರೆಯಿರುವ ಸಾಧಕರ ಬಟ್ಟೆಗಳಿಗೆ ಬಂದಿರುವ ತಿಳಿಗುಲಾಬಿ ಬಣ್ಣವು ಚೈತನ್ಯಮಯ ಸ್ಥಳದಲ್ಲಿಟ್ಟಾಗ ನಾಶವಾಗುವುದು ತೀವ್ರ ತೊಂದರೆಯಿರುವ ಸಾಧಕರ ಬಟ್ಟೆಗಳಿಗೆ ಗುಲಾಬಿ ಬಣ್ಣ ಬರಲು ಪ್ರಾರಂಭವಾದ ನಂತರ ಆ ಬಟ್ಟೆಗಳಿಗೆ ವಿಭೂತಿಯನ್ನು ಹಚ್ಚಿ ಅಥವಾ ಅವುಗಳಿಗೆ ಶ್ರೀಕೃಷ್ಣನ ಚಿತ್ರವನ್ನು ಕಟ್ಟಿ ಅಥವಾ ಚೈತನ್ಯಮಯ ಸ್ಥಳದಲ್ಲಿಟ್ಟ ನಂತರ, ೮ ದಿನಗಳಲ್ಲಿ ಗುಲಾಬಿ ಬಣ್ಣದ ಮಾಯಾವಿತನ ನಾಶವಾಗಿದ್ದರಿಂದ, ಆ ಬಣ್ಣವು ಕ್ರಮೇಣ ಸಂಪೂರ್ಣ ಹೋಗುವುದು ಕಂಡುಬಂದಿತು.

. ತೊಂದರೆಯಿಲ್ಲದ, ಒಳ್ಳೆಯ ಶಕ್ತಿಯ ಸ್ಪಂದನಗಳಿರುವ ಸಾಧಕರ ಗುಲಾಬಿ ಬಣ್ಣ ಬಂದಿರುವ ಬಟ್ಟೆಗಳನ್ನು ಚೈತನ್ಯಮಯ ಜಾಗದಲ್ಲಿಟ್ಟಾಗ ಅವುಗಳ ಗುಲಾಬಿ ಬಣ್ಣ ಹೆಚ್ಚಾಗುವುದು ಕಂಡುಬಂದಿತು. ತೊಂದರೆಯಿಲ್ಲದ, ಹಾಗೆಯೇ ಒಳ್ಳೆಯ ಶಕ್ತಿಯ ಸ್ಪಂದನಗಳೂ ಇಲ್ಲದಿರುವ ಸಾಧಕರ ಬಟ್ಟೆಗಳ ಗುಲಾಬಿ ಬಣ್ಣವು ಚೈತನ್ಯಮಯ ಕ್ಷೇತ್ರದಲ್ಲಿಟ್ಟರೆ ತೀರ ಅಲ್ಪ ಪ್ರಮಾಣದಲ್ಲಿ ಹೆಚ್ಚು-ಕಡಿಮೆಯಾಗುವುದು

೩. ತೊಂದರೆಯಿಲ್ಲದ, ಒಳ್ಳೆಯ ಶಕ್ತಿಯ ಸ್ಪಂದನಗಳಿಲ್ಲದಿರುವ ಸಾಧಕರ ಗುಲಾಬಿ ಬಣ್ಣ ಬಂದಿರುವ ಬಟ್ಟೆಗಳನ್ನು ಚೈತನ್ಯಮಯ ಜಾಗದಲ್ಲಿಟ್ಟಾಗ ಅವುಗಳ ತಿಳಿಗುಲಾಬಿ ಬಣ್ಣದಲ್ಲಿ ತೀರ ಅಲ್ಪ ಪ್ರಮಾಣದಲ್ಲಿ ಹೆಚ್ಚು-ಕಡಿಮೆ ಆಗುವುದು ಕಂಡುಬಂದಿತು. ತೊಂದರೆಯಿಲ್ಲದ, ಹಾಗೆಯೇ ದೇಹದಲ್ಲಿ ಒಳ್ಳೆಯ ಶಕ್ತಿ ಇಲ್ಲದ ಸಾಧಕರ ಬಟ್ಟೆಗಳ ಬಗ್ಗೆ ಮಾತ್ರ ಚೈತನ್ಯದ ಸ್ಥಳದಲ್ಲಿ ಈ ಬಟ್ಟೆಗಳನ್ನಿಟ್ಟಾಗ, ಅವುಗಳ ತಿಳಿಗುಲಾಬಿ ಬಣ್ಣದಲ್ಲಿ ತೀರ ಅಲ್ಪ ಪ್ರಮಾಣದಲ್ಲಿ ಹೆಚ್ಚು-ಕಡಿಮೆ ಆಗುವುದು ಕಂಡುಬಂದಿತು.

೪. ಪ.ಪೂ. ಡಾಕ್ಟರರ ಬಟ್ಟೆಗಳಿಗೆ ಬಂದಿರುವ ಗುಲಾಬಿ ಬಣ್ಣದ ವೈಶಿಷ್ಟ್ಯಗಳು

ಅ. ‘ಈ ಬಣ್ಣದಲ್ಲಿನ ಹೊಳಪು, ಹಾಗೆಯೇ ಪಾರದರ್ಶಕದ ಪ್ರಮಾಣವೂ ಹೆಚ್ಚಿರುತ್ತದೆ.

. ಪ.ಪೂ. ಡಾಕ್ಟರರ ದೇಹದಲ್ಲಿ ಪರಿಪೂರ್ಣ ಚೈತನ್ಯವಿರುವುದರಿಂದ ಅವರು ಉಪಯೋಗಿಸಿದ ಬಟ್ಟೆಗಳಿಗೆ ಎಲ್ಲ ಕಡೆಗೆ ಒಂದೇ ರೀತಿಯ ತಿಳಿಗುಲಾಬಿ ಬಣ್ಣ ಬರುತ್ತದೆ.

ಇ. ಈ ಬಣ್ಣದಿಂದ ದಿವ್ಯ ಗಂಧದ ಮತ್ತು ತಂಪು ಲಹರಿಗಳ ಪ್ರಕ್ಷೇಪಣೆಯೂ ಆಗುತ್ತದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಮನುಕುಲಕ್ಕೆ ಸೂಕ್ಷ್ಮ ಸಂಬಂಧಿಸಿದ ವಿಷಯಗಳನ್ನು ದೃಶ್ಯಸ್ವರೂಪದಲ್ಲಿ ಪರಿಚಯ ಮಾಡಿಕೊಡುವ, ಅದ್ವಿತೀಯ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ, ಆಪತ್ಕಾಲದ ಬಗ್ಗೆ ಜನರಿಗೆ ಜಾಗೃತಗೊಳಿಸುವ, ಜೀವನದಲ್ಲಿನ ಪ್ರತಿಯೊಂದು ವಿಷಯದ ಆಧ್ಯಾತ್ಮೀಕರಣ ಮಾಡಲು ಕಲಿಸುವ ಏಕೈಕ ದಾರ್ಶನಿಕ ಸಂತರಾದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ವಂದನೆಗಳು.

ತಜ್ಞರು, ಅಧ್ಯಯನಕಾರರು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !

‘ಸಂತರು ಉಪಯೋಗಿಸಿರುವ ವಸ್ತುಗಳಲ್ಲಿನ ಬುದ್ಧಿಅಗಮ್ಯ ಬದಲಾವಣೆಯ ಕುರಿತು ಸಂಶೋಧನೆ ಮಾಡಿ ಅವುಗಳ ಕಾರ್ಯಕಾರಣಭಾವವನ್ನು ಹುಡುಕಿ ತೆಗೆಯಲು ಸಾಧಕರು ಪ್ರಯತ್ನಿಸುತ್ತಿದ್ದಾರೆ ಅದಕ್ಕಾಗಿ-

೧. ಪರಾತ್ಪರ ಗುರು ಡಾ. ಆಠವಲೆಯವರ ಬಂಡಿಯ (ಅಂಗಿಯ) ಮೇಲೆ ತಿಳಿಗುಲಾಬಿ ಬಣ್ಣ ಬರುವುದರ ಹಿಂದಿನ ಕಾರಣ ಏನು ?

. ಪರಾತ್ಪರ ಗುರು ಡಾ. ಆಠವಲೆಯವರು ಸ್ನಾನಕ್ಕಾಗಿ ಉಪಯೋಗಿಸುತ್ತಿರುವ ಮಗ್ ಮೇಲೆ ತಿಳಿಗುಲಾಬಿ ಬಣ್ಣ ಬಂದಿರುವುದರ ಹಿಂದಿನ ಕಾರಣ ಏನು ?

ಇದರ ಬಗ್ಗೆ ತಜ್ಞರು, ಅಧ್ಯಯನಕಾರರು, ಈ ವಿಷಯದ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರ ಸಹಾಯವು ನಮಗೆ ಲಭಿಸಿದರೆ ನಾವು ಕೃತಜ್ಞರಾಗಿರುವೆವು

– ವ್ಯವಸ್ಥಾಪಕರು, ಸನಾತನ ಆಶ್ರಮ, ರಾಮನಾಥಿ, ಗೋವಾ.

ಸಂಪರ್ಕ : ಶ್ರೀ. ರೂಪೇಶ ರೇಡಕರ,

ವಿ-ಅಂಚೆ : mav.research2014@[email protected]