ಜಾತ್ಯತೀತ ಪ್ರಜಾಪ್ರಭುತ್ವದ ಕುಚೇಷ್ಟೆ !

ಬಂಗಾಳದ ಕೂಚಬಿಹಾರದಲ್ಲಿ ಚುನಾವಣೆಯ ನಿಮಿತ್ತದಿಂದ ಇತ್ತೀಚೆಗಷ್ಟೇ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು “ಯಾವ ರೀತಿ ಮಮತಾ ಬ್ಯಾನರ್ಜಿಯವರು ‘ಬಂಗಾಳಿ ಮುಸಲ್ಮಾನರು ಕೇವಲ ತೃಣಮೂಲ ಕಾಂಗ್ರೆಸ್‌ಗೆ ಒಗ್ಗಟ್ಟಿನಿಂದ ಮತ ನೀಡುವಂತೆ ಕರೆ ನೀಡಿದ್ದಾರೆಯೋ, ಅದೇ ರೀತಿ ನಾವು ‘ಹಿಂದೂಗಳು ಭಾಜಪಕ್ಕೆ ಮತವನ್ನು ನೀಡಬೇಕು, ಎಂದು ಕರೆ ನೀಡಿದ್ದರೆ, ಈಗಾಗಲೇ ಚುನಾವಣೆ ಆಯೋಗವು ನಮಗೆ ಅನೇಕ ನೋಟಿಸ್‌ಗಳನ್ನು ಕಳುಹಿಸಿರುತ್ತಿತ್ತು. ಭಾರತಾದ್ಯಂತ ಪ್ರಸಾರ ಮಾಧ್ಯಮಗಳು ನಮ್ಮ ವಿರುದ್ಧ ಸಂಪಾದಕೀಯಗಳ ಮೇಲೆ ಸಂಪಾದಕೀಯಗಳನ್ನು ಬರೆಯುತ್ತಿದ್ದವು ! ಎಂದು ಹೇಳಿದರು. ಪ್ರಧಾನಮಂತ್ರಿಗಳ ಈ ಸೂಕ್ಷ್ಮ ಹೇಳಿಕೆಯಲ್ಲಿ ಅನೇಕ ವಿಷಯಗಳು ಅಡಕವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಜಾತ್ಯತೀತವಾದಿ ಅಥವಾ ಮುಸಲ್ಮಾನಪ್ರೇಮಿ ?

ಭಾರತೀಯ ರಾಜಕಾರಣದಲ್ಲಿ ಸರ್ವೋಚ್ಚ ಹುದ್ದೆಯಲ್ಲಿ ವಿರಾಜಮಾನರಾಗಿರುವ ಮೋದಿಯವರ ಹೇಳಿಕೆಯಿಂದ ಜಾತ್ಯ ತೀತವಾದದ ಹೆಸರಿನಲ್ಲಿ ಹಿಂದೂದ್ವೇಷದ ಹೊಟ್ಟೆಕಿಚ್ಚು ಪಡುತ್ತಿರುವ ಗುಂಪು ಯಾವ ರೀತಿ ಪ್ರತಿಯೊಂದು ಹಂತದಲ್ಲಿ ಹಿಂದೂಗಳನ್ನು ‘ಗುರಿ ಮಾಡಲು ಪ್ರಯತ್ನನಿರತವಿರುತ್ತದೆ ಎಂದು ಗಮನಕ್ಕೆ ಬರುತ್ತದೆ. ‘ರಾಜಕೀಯ ಮಟ್ಟದಲ್ಲಿ ಮುಸಲ್ಮಾನರ ಏಕೀಕರಣವು ಚುನಾವಣಾ ಆಯೋಗದಂತಹ ಒಂದು ‘ಪಕ್ಷಾತೀತ ಸರಕಾರಿ ಸಂಸ್ಥೆಗೆ ಸರಿಯೆನಿಸುತ್ತದೆ ಎಂದು ತಮ್ಮ ಹೇಳಿಕೆಯಿಂದ ಪ್ರಧಾನ ಮಂತ್ರಿಗಳು ತಿಳಿಸಲು ಇಚ್ಛಿಸಿದ್ದರು. ಇನ್ನೊಂದೆಡೆ ಹಿಂದೂಗಳ ರಾಜಕೀಯ ಸಂಘಟನೆಗಳು ಮಾತ್ರ ಆಯೋಗಕ್ಕೆ ಇಷ್ಟವಾಗುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಆದರೆ, ಪ್ರಜಾಪ್ರಭುತ್ವದ ನಾಲ್ಕನೇಯ ಆಧಾರಸ್ತಂಭವಾಗಿರುವ ಪತ್ರಿಕಾ ವರದಿಗಾರಿಕೆಯ ವಿಚಾರವನ್ನು ಮಾಡಿದರೆ, ಅದು ಯಾವಾಗಲೂ ಹಿಂದೂಗಳ ವಿರುದ್ಧ ಗಂಟಲು ಹರಿದುಕೊಳ್ಳುವಲ್ಲಿ ಉದಾ: ಹಿಂದೂಗಳ ಹಬ್ಬಗಳನ್ನು ‘ಅಂಧಶ್ರದ್ಧೆಯ  ಭಾಗವೆಂದು ಹೇಳುವುದರಲ್ಲಿ ಅಥವಾ ಹಿಂದೂ ಸಮಾಜವು ಹಿಂಸಾತ್ಮಕ ಸಮಾಜವೆಂದು ನಿರಾಧಾರ ಆರೋಪವನ್ನು ಮಾಡುವುದರಲ್ಲಿ ಒಂದಕ್ಕಿಂತ ಒಂದು  ಪ್ರಸಾರ ಮಾಧ್ಯಮಗಳು ಪೈಪೋಟಿಯಲ್ಲಿರುತ್ತವೆ.

ಮಮತಾರ ಹೊಟ್ಟೆಶೂಲೆ !

ಎಡದಿಂದ: ಮಮತಾ ಬ್ಯಾನರ್ಜಿ, ಅಸದುದ್ದೀನ್ ಓವೈಸಿ

ಪ್ರಧಾನಮಂತ್ರಿಗಳ ಹೇಳಿಕೆಯನ್ನು ಸೂಕ್ಷ್ಮವಾಗಿ ವಿಚಾರ ಮಾಡಿದಾಗ, ಒಂದು ಅತಿ ಭಯಾನಕ ವಾಸ್ತವ ಕಣ್ಣೆದುರಿಗೆ ಬರುತ್ತದೆ. ಜಾತ್ಯತೀತ  ಭಾರತದ ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಯು ಒಂದು ಧರ್ಮದ ಅನುಯಾಯಿಗಳನ್ನು ತಮ್ಮ ಪಕ್ಷಕ್ಕೆ ಮತವನ್ನು ನೀಡಲು ಬಹಿರಂಗವಾಗಿ ಕರೆ ನೀಡುವುದು ಅತ್ಯಂತ ಗಂಭೀರ ವಿಷಯವಾಗಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಮುಸಲ್ಮಾನರ ಮತಗಳು ವಿಭಜನೆಗೊಳ್ಳುವ ವಿಚಾರ ಕಾಡುತ್ತಿದೆ. ಬಂಗಾಳದಲ್ಲಿ ಸರಿಸುಮಾರು ಶೇ. ೩೦ ರಷ್ಟು ಮುಸಲ್ಮಾನ ಜನಸಂಖ್ಯೆಯಿದೆ. ಅವರು ಕಳೆದೊಂದು ದಶಕದಲ್ಲಿ ತೃಣಮೂಲ ಕಾಂಗ್ರೆಸ್ಸಿಗೆ ಒಗ್ಗಟ್ಟಿನ ಮತವಾಗಿ ಉಳಿದಿದ್ದರು. ಆದರೆ ಈಗ, ಅದರಲ್ಲಿಯೂ ತೃಣಮೂಲ ಕಾಂಗ್ರೆಸ್ಸಗೆ ದಕ್ಷಿಣ ಬಂಗಾಳದ ಹೂಗ್ಲಿ, ಉತ್ತರ ಮತ್ತು ದಕ್ಷಿಣ ೨೪ ಪರಗಣಾ ಹಾಗೂ ಹಾವ್ಡಾ ಈ ೪ ಮುಸಲ್ಮಾನ ಬಹುಸಂಖ್ಯಾತರಿರುವ ಜಿಲ್ಲೆಗಳ ಚಿಂತೆ ಕಾಡುತ್ತಿದೆ. ರಾಜ್ಯದ ಮುಸಲ್ಮಾನರ ಒಟ್ಟು ಜನಸಂಖ್ಯೆಯಲ್ಲಿ  ಶೇ. ೨೪ ರಷ್ಟು ಮುಸಲ್ಮಾನರು ಈ ೪ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು, ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಒಂದು ತೃತೀಯಾಂಶ ಎಂದರೆ ೯೮ ಮತ ಕ್ಷೇತ್ರಗಳಿವೆ. ವರ್ಷ ೨೦೧೯ ರ ಲೋಕಸಭಾ ಚುನಾವಣೆಯ ವಿಚಾರವನ್ನು ಮಾಡಿದರೆ ಇಲ್ಲಿಯ ೧೪ ಮತಕ್ಷೇತ್ರಗಳಲ್ಲಿ ೧೧ ಮತಕ್ಷೇತ್ರಗಳಿಂದ ತೃಣಮೂಲ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಚುನಾಯಿತರಾಗಿ ಸಂಸತ್ತು ತಲುಪಿದರು. ಈಗ ಮಾತ್ರ ಹೂಗ್ಲಿ ಜಿಲ್ಲೆಯ ಫುರಫುರಾ ಶರೀಫದಲ್ಲಿರುವ ಸುಪ್ರಸಿದ್ಧ ದರ್ಗಾ ಬಂಗಾಳಿ ಮುಸಲ್ಮಾನರ ಶ್ರದ್ಧೆಯ ಕೇಂದ್ರವಾಗಿದೆ. ಅಬ್ಬಾಸ ಸಿದ್ಧಿಕಿ ಪೀರಜಾದೆ ಇವರು ದರ್ಗಾದ ಪ್ರಮುಖರಲ್ಲಿ ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿದ್ದು ಈಗ ರಾಜಕಾರಣದಲ್ಲಿ ತಮ್ಮ ಶಕ್ತಿಯನ್ನು ಪಣಕ್ಕೊಡ್ಡಿದ್ದಾರೆ. ‘ಈ ದರ್ಗಾದಿಂದ ಹೊರಬೀಳುವ ಅಧಿಕೃತ ಸಂದೇಶವು ವಿಧಾನಸಭೆಯ ೯೮ ಕ್ಷೇತ್ರಗಳಲ್ಲಿ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ತಮಾಷೆಯೆಂದರೆ ಪೀರಜಾದೆ ಇವರು ಸ್ಥಾಪಿಸಿರುವ ಹೊಸ ರಾಜಕೀಯ ಪಕ್ಷವು (ಇನ್ನೂ ಹೆಸರಿಡ ಬೇಕಾಗಿದೆ) ಕಾಂಗ್ರೆಸ್ ಮತ್ತು ಸಾಮ್ಯವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಭಾಗ್ಯನಗರದ ಕಟ್ಟಾ ಮುಸಲ್ಮಾನ ಸಮರ್ಥಕರಾದ ಅಸದುದ್ದೀನ ಓವೈಸಿ ಇವರೂ ಚುನಾವಣೆಯಲ್ಲಿ ಧುಮುಕಿರುವುದರಿಂದ ಮಮತಾರ ತೃಣಮೂಲ ಕಾಂಗ್ರೆಸ್ಸು ಒತ್ತಡದಲ್ಲಿದೆ.  ಮುಸಲ್ಮಾನ ಮತಗಳು ವಿಭಜನೆಗೊಳ್ಳುವ ಸ್ಪಷ್ಟ ಚಿಹ್ನೆಗಳು ಕಂಡು ಬರುತ್ತಿರುವುದರಿಂದ ಮುತ್ಸದ್ದಿಯೆಂದು ಗುರುತಿಸಲ್ಪಡುವ ಮಮತಾ ಗಲಿಬಿಲಿಗೊಂಡಿದ್ದಾರೆಂದು ಕಂಡು ಬರುತ್ತಿದೆ. ಇದರಿಂದಲೇ ಅವರು ಬಂಗಾಳದ ಮುಸಲ್ಮಾನರಿಗೆ ನೇರವಾಗಿ ತೃಣಮೂಲ ಕಾಂಗ್ರೆಸ್ಸಿಗೆ ಒಗ್ಗಟ್ಟಿನಿಂದ ಮತ ನೀಡಬೇಕೆಂದು ಭಿಕ್ಷೆ ಬೇಡುತ್ತಿದ್ದಾರೆ.

ಅಪಾಯದ ಕರೆಗಂಟೆ

 ನಿಜ ಹೇಳಬೇಕೆಂದರೆ ಇದು ಅಪಾಯದ ಕರೆಗಂಟೆಯಾಗಿದೆ. ಚುನಾವಣೆಯೆಂದ ಬಳಿಕ ಕಪ್ಪು ಹಣದ  ಉಪಯೋಗವಾಗುತ್ತಿರುತ್ತದೆ. ಈ ದಯನೀಯ ಪರಿಸ್ಥಿತಿ ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಇಲ್ಲಿಯವರೆಗೆ ಅನೇಕ ರಾಜಕೀಯ ಪಕ್ಷಗಳು ಮತದಾರರನ್ನು ಮರುಳು ಮಾಡಿ ತಮ್ಮೆಡೆಗೆ ಸೆಳೆಯಲು ಯಾವುದಾದರೊಂದು ಪ್ರಚಾರಸಭೆಯ ವ್ಯಾಸಪೀಠದಿಂದ ಅಥವಾ ಪತ್ರಿಕಾಗೋಷ್ಟಿಯಲ್ಲಿ ಅನಧಿಕೃತವಾಗಿ ಹಣವನ್ನು ನೀಡಿ, ಸರಾಯಿ- ಊಟ ನೀಡಿ ತಮ್ಮೆಡೆಗೆ ಸೆಳೆದುಕೊಳ್ಳುತ್ತಿದ್ದರು. ಆದರೆ ಈಗ ಮಾತ್ರ ರಾಜಕೀಯ ಪಕ್ಷಗಳು ತಮ್ಮ ಅಧಿಕೃತ  ಘೋಷಣೆಯೆಂದು ಮುಸಲ್ಮಾನರನ್ನು ಓಲೈಸುತ್ತಾ, ನೇರವಾಗಿ ಅವರಿಂದ ಮತಗಳನ್ನು ಬೇಡುತ್ತಿದ್ದಾರೆ. ಮುಸಲ್ಮಾನರ ಓಲೈಕೆಯು ರಾಷ್ಟ್ರದ್ರೋಹದ ತುತ್ತತುದಿಯನ್ನು ತಲುಪಿದೆಯೆಂದು ಹೇಳುವುದರಲ್ಲಿ  ತಪ್ಪೇನಿದೆ? ಒಂದು ಸ್ಥಳದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಸಲ್ಮಾನರನ್ನು ಸಂಬೋಧಿಸುವಾಗ ಬ್ಯಾನರ್ಜಿಯವರು ‘ನಿಮಗೆ ‘ಎನ್.ಆರ್.ಸಿ (ರಾಷ್ಟ್ರೀಯ ಪೌರತ್ವ ನೊಂದಣಿ ಪ್ರಕ್ರಿಯೆ) ಜಾರಿಯಾಗಬಾರದು ಎಂದೆನಿಸಿದರೆ ನಮಗೆ ಮತ ನೀಡಿರಿ ಎಂದು ಹೇಳಿದರು. ಕೇವಲ ಭಾರತಿಯ ಮುಸಲ್ಮಾನರದ್ದಷ್ಟೇ ಅಲ್ಲ, ಸಂಪೂರ್ಣ ಭಾರತದ ಹಿತವನ್ನು ಒಳಗೊಂಡಿರುವ ‘ಎನ್.ಆರ್.ಸಿಯನ್ನು ಈ ರೀತಿ ವಿರೋಧಿಸುವುದು ರಾಷ್ಟ್ರದ್ರೋಹವೇ ಆಗಿದೆ.

ಮುಸಲ್ಮಾನರ ಓಲೈಕೆ !

ಅಬ್ಬಾಸ ಸಿದ್ಧಿಕಿ ಪೀರಜಾದೆ

ಫುರಫುರಾ ಶರೀಫ ಇಲ್ಲಿನ ೩೩ ವರ್ಷದ ಅಬ್ಬಾಸ ಸಿದ್ಧಿಕಿ ಪೀರಜಾದೆ ಇವರ  ವಿಚಾರವನ್ನು ಮಾಡಿದರೆ, ಅವರು ದಕ್ಷಿಣ ಬಂಗಾಳದಲ್ಲಿ ನಿರಂತರವಾಗಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ಮುಸಲ್ಮಾನ ಜನರನ್ನು ತಮ್ಮ ಸಭೆಗೆ ದೊಡ್ಡ ಪ್ರಮಾಣದಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿರುವ ಪೀರಜಾದೆ ‘ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್‌ನಂತಹ  ತಥಾಕಥೀತ ‘ಜಾತ್ಯತೀತ ರಾಜಕೀಯ ಪಕ್ಷಗಳು  ಮುಸಲ್ಮಾನ ಸಮುದಾಯವನ್ನು ಕೇವಲ ಮತ ಸೆಳೆಯಲು ಮಾತ್ರ ಉಪಯೋಗಿಸಿದ್ದಾರೆ. ಇದರಿಂದ ನಮ್ಮ ಸಮಾಜವು ಎಲ್ಲ ಸೌಲಭ್ಯಗಳಿಂದ ಯಾವಾಗಲೂ ವಂಚಿತವಾಗಿದೆ ಎಂದು ಹೇಳುತ್ತಿದ್ದಾರೆ. ‘ಪ್ರಾಮಾಣಿಕ ಮುಸಲ್ಮಾನ ಸಹೋದರರೇ ಎಂದು ಸಂಬೋಧಿಸಿ ಇಲ್ಲಿಯ ಮುಸಲ್ಮಾನರನ್ನು ಓಲೈಸುತ್ತ ಪೀರಜಾದೆ ಇವರು ಒಂದು ರೀತಿಯಲ್ಲಿ ಮತಾಂಧ ಶಕ್ತಿಯನ್ನು  ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಇದೆಲ್ಲದರಿಂದ ಬಂಗಾಳದ ರಾಜಕೀಯವು ರಣಾಂಗಣದಲ್ಲಿ ಎಷ್ಟು ಕೆಳಮಟ್ಟದ ಸ್ತರವನ್ನು ತಲುಪಿದೆ ಎನ್ನುವುದು ಅನುಭವಕ್ಕೆ ಬಂದಿದೆ. ಇದು ಪ್ರಜಾಪ್ರಭುತ್ವದ ತಮಾಷೆಯೇ ಆಗಿದ್ದು, ಜನತೆಗಾಗಿ ಪ್ರಾಮಾಣಿಕ ಕೆಲಸದಿಂದಲ್ಲ, ಧರ್ಮವನ್ನು ಆಧರಿಸಿ ಮತವನ್ನು ಬೇಡಿ ಅಧಿಕಾರವನ್ನು ಪಡೆಯುವ ಪ್ರಯತ್ನಗಳಾಗುತ್ತಿರುವುದು ಪೂರ್ಣವಾಗಿ ನಿಷೇಧಾರ್ಹವೇ ಆಗಿದೆ ಎನ್ನುವುದನ್ನು ಗಮನಿಸಬೇಕಾಗಿದೆ.